ಬೆಂಗಳೂರು: ಕೊಡಗಿನ ಕುವರಿ, ನಟಿ ರಶ್ಮಿಕಾ ಮಂದಣ್ಣ(Rashmika Mandanna) ಅವರು ಬಣ್ಣದ ಲೋಕದಲ್ಲಿ ಸಖತ್ ಮಿಂಚುತ್ತಿದ್ದಾರೆ. ಬಾಲಿವುಡ್, ಕಾಲಿವುಡ್ ಸೇರಿದಂತೆ ವಿವಿಧ ಚಿತ್ರರಂಗಗಳಲ್ಲಿ ಅವರು ಬ್ಯುಸಿಯಾಗಿದ್ದಾರೆ. ತಮ್ಮ ಪ್ರತಿಯೊಂದು ಸಿನಿಮಾದಲ್ಲಿಯೂ ವಿಭಿನ್ನ ಪಾತ್ರಗಳ ಮೂಲಕ ರಶ್ಮಿಕಾ ಪ್ರೇಕ್ಷಕರ ಗಮನ ಸೆಳೆಯುತ್ತಿದ್ದಾರೆ. ಅದ್ಭುತ ನಟನೆಯ ಮೂಲಕ ಸಿನಿಮಾ ಪ್ರೇಮಿಗಳಿಂದ ಭೇಷ್ ಎನಿಸಿಕೊಂಡಿರುವ ರಶ್ಮಿಕಾ ನಟನೆಯ ‘ಪುಷ್ಪ’ ಸಿನಿಮಾ ಬಾಕ್ಸಾ ಆಫೀಸ್ ಧೂಳಿಪಟ ಮಾಡಿದೆ.
ಏಪ್ರಿಲ್ 5 ಅಂದರೆ ಇಂದು ರಶ್ಮಿಕಾಗೆ ಹುಟ್ಟುಹಬ್ಬ(Rashmika Mandanna Birthday)ದ ಸಂಭ್ರಮ. 26ನೇ ವಸಂತಕ್ಕೆ ಕಾಲಿಟ್ಟಿರುವ ಅವರಿಗೆ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ. ವಿಶೇಷವೆಂದರೆ ರಶ್ಮಿಕಾ ಬರ್ತ್ ಡೇ ದಿನವೇ ಅವರ ಹೊಸ ಸಿನಿಮಾವೊಂದು ಘೋಷಣೆಯಾಗಿದೆ. ಈ ಸಿನಿಮಾದಲ್ಲಿ ಅವರು ವಿಭಿನ್ನ ಗೆಟಪ್ ನಲ್ಲಿ ಕಾಣಿಸಿಕೊಳ್ಳುವ ಮೂಲಕ ಸುದ್ದಿಯಾಗಿದ್ದಾರೆ.
ಇದನ್ನೂ ಓದಿ: Kiccha Sudeep: ನಟ ಸುದೀಪ್ ನೋಡಲು ಕಲಬುರಗಿಯಿಂದ ನಡೆದುಕೊಂಡೇ ಬಂದ ಅಭಿಮಾನಿಗಳು..!
Meet our rebellious #Afreen as she unravels one of the most beautiful tales ever.
Happy birthday @iamRashmika ♥️▶️ https://t.co/oO6W2VfbZQ#declassifiessoon @dulQuer @hanurpudi @mrunal0801 @AshwiniDuttCh @Composer_Vishal #PSVinod @MrSheetalsharma @VyjayanthiFilms @SwapnaCinema pic.twitter.com/6D09fNLlsC
— Vyjayanthi Movies (@VyjayanthiFilms) April 5, 2022
ಹೌದು, ಘೋಷಣೆಯಾಗಿರುವ ಹೊಸ ಸಿನಿಮಾದಲ್ಲಿ ರಶ್ಮಿಕಾ ಹಿಜಾಬ್(Hijab) ಧರಿಸಿದ್ದು, ಕೈಯಲ್ಲಿ ಬ್ಯಾಗ್ ಹಿಡಿದುಕೊಂಡಿದ್ದಾರೆ. ಈ ಸಿನಿಮಾದಲ್ಲಿ ಅವರು ಕಾಶ್ಮೀರಿ ಮುಸ್ಲಿಂ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸಿನಿಮಾದ ಮೋಷನ್ ಪೋಸ್ಟರ್ ರಿಲೀಸ್ ಆಗಿದ್ದು, ಸಾಕಷ್ಟು ಕುತೂಹಲ ಮೂಡಿಸಿದೆ. ಹೊಸ ಸಿನಿಮಾ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ (Social Media) ವ್ಯಾಪಕ ಚರ್ಚೆಯೂ ಆಗುತ್ತಿದೆ.
ರಶ್ಮಿಕಾ ಅವರು ಬರೀ ರೊಮ್ಯಾಂಟಿಕ್ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಆದರೆ ಈಗ ಹನು ರಾಘವಪುಡಿ(Hanu Raghavapudi) ನಿರ್ದೇಶನದ ಹೊಸ ಸಿನಿಮಾದಲ್ಲಿಅವರು ವಿಭಿನ್ನ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಈ ಚಿತ್ರಕ್ಕೆ ಮಲಯಾಳಂನ ಸ್ಟಾರ್ ನಟ ದುಲ್ಖರ್ ಸಲ್ಮಾನ್(Dulquer Salmaan) ಹೀರೋ ಆಗಿದ್ದಾರೆ. ಮೋಷನ್ ಪೋಸ್ಟರ್ನಲ್ಲಿ ರಶ್ಮಿಕಾ ಕೆಂಪು ಹಿಜಾಬ್ ಧರಿಸಿದ್ದು, ಕೈಯಲ್ಲಿ ಬ್ಯಾಗ್ ಹಿಡಿದ್ದಾರೆ. ಸುಡುತ್ತಿರುವ ಕಾರುಗಳ ಮಧ್ಯೆ ಅವರು ನಡೆದು ಹೋಗುತ್ತಿದ್ದಾರೆ. ‘ನಮ್ಮ ಆಫ್ರೀನ್ ಅವರನ್ನು ಭೇಟಿ ಮಾಡಿ’ ಎನ್ನುವ ಕ್ಯಾಪ್ಶನ್ ನೀಡಲಾಗಿದೆ.
ಇದನ್ನೂ ಓದಿ: Alia Bhatt:ಫೋನ್ ಮೂಲಕ ರಣಬೀರ್ ಕಪೂರ್‌ಗೆ ಆಲಿಯಾ ಭಟ್ ಆರ್ಡರ್ ಮಾಡಿದ್ದೇನು?
ಸದ್ಯ ಕರ್ನಾಟಕ ಸೇರಿದಂತೆ ದೇಶಾದ್ಯಂತ ಹಿಜಾಬ್ ವಿವಾದ(Hijab Row)ದ ಬಗ್ಗೆ ವ್ಯಾಪಕ ಚರ್ಚೆಯಾಗುತ್ತಿದೆ. ಈ ಮಧ್ಯೆ ರಶ್ಮಿಕಾ ಅವರು ಕೆಂಪು ಹಿಜಾಬ್ ಧರಿಸಿ ಮುಸ್ಲಿಂ ಯುವತಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಚರ್ಚೆಗೆ ಕಾರಣವಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.