ದಕ್ಷಿಣ ಆಫ್ರಿಕದಲ್ಲಿ ನಡೆಯುತ್ತಿದ್ದ ರೋಡೀಸ್ ಸೀಸನ್ 18 ಕೊನೆಗೊಂಡಿದೆ. ರೋಡೀಸ್ ಅತ್ಯಂತ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ಒಂದಾಗಿದೆ. ಡೇರ್‌ಡೆವಿಲ್ ಸ್ಟಂಟ್‌ಗಳಿಂದ ಯುವಜನರ ಗಮನವನ್ನು ಈ ಶೋ ಸೆಳೆದಿದೆ. ರೋಡೀಸ್ ಅಭಿಮಾನಿಗಳು ಪ್ರತಿ ವರ್ಷವೂ ಹೆಚ್ಚಾಗುತ್ತಿದ್ದಾರೆ. ಈ ವರ್ಷ ರೋಡೀಸ್ ಸೀಸನ್ 18 ಸಾಕಷ್ಟು ಸಾಹಸಮಯ ಟಾಸ್ಕ್‌ಗಳನ್ನು ಹೊಂದಿತ್ತು. ರೋಡೀಸ್ 18 'ಬಡ್ಡಿ ಪೇರ್ಸ್' ಪರಿಕಲ್ಪನೆಯನ್ನು ಹೊಂದಿದ್ದು ಅದು ಮಾಜಿ ರೋಡೀಸ್‌ನೊಂದಿಗೆ ಹೊಸ ಸ್ಪರ್ಧಿಗಳನ್ನು ಸೇರಿಸಿತು.
ಇದನ್ನೂ ಓದಿ: Vikrant Rona: ನಾಳೆ ಮತ್ತೊಂದು ಸಾಂಗ್ ರಿಲೀಸ್.. ಇಲ್ಲಿದೆ ʻಹೇ ಫಕೀರಾʼ ಗ್ಲಿಂಪ್ಸ್
ದೇಶದಾದ್ಯಂತ ಹೆಚ್ಚು ಫ್ಯಾನ್ ಫಾಲೋವಿಂಗ್ ಇರುವ ಯೂತ್ ಬೇಸ್ಡ್ ಅಡ್ವೆಂಚರ್ ರಿಯಾಲಿಟಿ ಶೋ ರೋಡೀಸ್. ಇದು ಎಂಟಿವಿಯಲ್ಲಿ ಪ್ರಸಾರವಾಗುತ್ತದೆ. ರೋಡೀಸ್ 18 ನೇ ಆವೃತ್ತಿಯ ಗ್ರ್ಯಾಂಡ್ ಫಿನಾಲೆ ನಡೆಯಿತು. ಫಿನಾಲೆಯಲ್ಲಿ ಆಶೀಶ್ ಭಾಟಿಯಾ ಹಾಗೂ ಬೆಂಗಳೂರಿನ ನಂದಿನಿ ವಿಜೇತರಾಗಿದ್ದಾರೆ.
ಇದುವರೆಗೆ ರೋಡೀಸ್ ನಲ್ಲಿ ರಣ್‌ವಿಜಯ್ ಸಿಂಗ್ ಇದ್ದರು. ರಘು ರಾಮ್, ರಾಜೀವ್ ಲಕ್ಷ್ಮಣ್ ಬಳಿಕ ‘ರೋಡೀಸ್’ನಲ್ಲಿ ಗ್ಯಾಂಗ್ ಲೀಡರ್ ಕಾನ್ಸೆಪ್ಟ್ ಶುರುವಾಯಿತು. ನೇಹಾ ಧೂಪಿಯಾ, ಪ್ರಿನ್ಸ್ ನರುಲಾ, ಕರಣ್ ಕುಂದ್ರ, ವಿಜೇಂದರ್ ಸಿಂಗ್, ನಿಖಿಲ್ ಚಿನ್ನಪ್ಪ ಮುಂತಾದವರು ಗ್ಯಾಂಗ್ ಲೀಡರ್ ಆಗಿದ್ದರು. ಇದೀಗ ‘ರೋಡೀಸ್ 18’ ಸೀಸನ್‌ನಲ್ಲಿ ಗ್ಯಾಂಗ್ ಲೀಡರ್‌ಗಳಿರಲಿಲ್ಲ. ಬದಲಾಗಿ ಎಕ್ಸ್ ರೋಡೀಸ್‌ಗಳು ಬಂದರು. ಹೀಗೆ ಪ್ರತಿ ವರ್ಷವೂ ಒಂದೊಂದು ಹೊಸ ಕಾನ್ಸೆಪ್ಟ್‌ಗಳಿಂದ ರೀಡೀಸ್ ಬರುತ್ತಿದೆ. ರೋಡೀಸ್ 18 ರಲ್ಲಿ ಸೋನು ಸೂದ್ ಹೋಸ್ಟ್ ಆಗಿದ್ದರು.
ಇದನ್ನೂ ಓದಿ: ಹಿಜಾಬ್ ಧರಿಸಿ ಈದ್ ಶುಭಾಶಯ ಹೇಳಿದ ನಟಿ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು?
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.