Happy Birthday Yash : ರಾಕಿಂಗ್ ಸ್ಟಾರ್ ಜನ್ಮದಿನದ ಸಂಭ್ರಮ

ರಾಕಿಂಗ್ ಸ್ಟಾರ್ ಯಶ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮ..

Written by - Zee Kannada News Desk | Last Updated : Jan 8, 2021, 11:59 AM IST
  • ರಾಕಿಂಗ್ ಸ್ಟಾರ್ ಗೆ ಹುಟ್ಟುಹಬ್ಬದ ಸಂಭ್ರಮ
  • 35ನೇ ಜನ್ಮದಿನ ಆಚರಿಸಿಕೊಳ್ಳುತ್ತಿರುವ ಯಶ್
  • ನೆಚ್ಚಿನ ನಟನಿಗೆ ಹರಿದು ಬರುತ್ತಿದೆ ಅಭಿನಂದನೆಗಳ ಮಹಾಪೂರ
Happy Birthday Yash : ರಾಕಿಂಗ್ ಸ್ಟಾರ್ ಜನ್ಮದಿನದ ಸಂಭ್ರಮ title=
35ನೇ ಜನ್ಮದಿನ ಆಚರಿಸಿಕೊಳ್ಳುತ್ತಿರುವ ಯಶ್ (Photoe Radhika pandith instagram)

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮ (Happy Birthday Yash). ಯಶ್ ಇಂದು ತಮ್ಮ 35ನೇ ಜನ್ಮದಿನವನ್ನು ಆಚರಿಸುತ್ತಿದ್ದಾರೆ. ಕರೋನಾ ಹಿನ್ನೆಲೆಯಲ್ಲಿ ಈ ವರ್ಷ ಅದ್ದೂರಿಯಾಗಿ ಆಚರಣೆನಡೆಸುತ್ತಿಲ್ಲ. ಯಶ್ ಗೆ ಅಭಿಮಾನಿಗಳು, ಸ್ನೇಹಿತರು, ಚಿತ್ರೋದ್ಯಮದ ಗಣ್ಯರಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.

ಯಶ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದ ದಿನ ಬಂದೇ ಬಿಟ್ಟಿದೆ. ಜನವರಿ 8 ರಾಕಿಭಾಯ್ ಜನ್ಮದಿನ. ಕರೋನಾ (Coronavirus) ಕಾರಣದಿಂದ ಈ ಬಾರಿ ಎಂದಿನಂತೆ ಅದ್ದೂರಿ ಆಚರಣೆ ನಡೆಯುತ್ತಿಲ್ಲ. ಆದರೂ ಯಶ್ (Yash) ಅಭಿಮಾನಿಗಳ ಸಂಭ್ರಮಕ್ಕೂ ಕೊರತೆಯಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ತಮ್ಮನೆಚ್ಚಿನ ನಾಯಕನಿಗೆ ಶುಭ ಹಾರೈಸುತ್ತಿದ್ದಾರೆ.  

ಇದನ್ನೂ ಓದಿ : WATCH: ಬಹುನಿರೀಕ್ಷಿತ KGF Chapter 2 Teaser ಬಿಡುಗಡೆ

ಇನ್ನು ಯಶ್ ಪತ್ನಿ ರಾಧಿಕಾ ಪಂಡಿತ್ (Radhika Pandith) ಕೂಡಾ ಕೇಕ್ ಕತ್ತರಿಸುವ ಫೋಟೋಶೇರ್ ಮಾಡಿದ್ದಾರೆ. ಅಲ್ಲದೆ ನೀವುಇಷ್ಟು ಪರ್ಫೆಕ್ಟ್ ಹೇಗೆ ಎಂದು ಕೆಲವೊಮ್ಮೆ  ನನಗೆ ಆಶ್ಚರ್ಯವಾಗುತ್ತದೆ. ನೀವು ನಿಮ್ಮ ಪಾಲಿನ ಕೇಕನ್ನೂ ನನಗೆ ನೀಡುತ್ತೀರಿ ಅದಕ್ಕೆನೀವು ಪರ್ಫೆಕ್ಟ್ ಅನ್ನುವುದು ನಂತರ ಗೊತ್ತಾಗುತ್ತದೆ .ಹ್ಯಾಪಿ ಬರ್ತ್ ಡೇ ಬಸ್ಟಿ ಎಂದು  ಬರೆದು ಕೊಂಡಿದ್ದಾರೆ.

 

ಇನ್ನು ಬಾಲಿವುಡ್ ನಟ ಹೃತಿಕ್ ರೋಶನ್ (Hrithik Roshan) ಕೂಡಾ ಯಶ್ ಜನ್ಮದಿನಕ್ಕೆ ಶುಭ ಕೋರಿದ್ದಾರೆ. ನಿನ್ನೆಯಷ್ಟೇ ಬಿಡುಗಡೆಯಾದ ಕೆಜಿಎಫ್ 2 (KGF 2) ಟ್ರೇಲರ್ ಅನ್ನು ಶೇರ್ ಮಾಡಿರುವ ಹೃತಿಕ್  ವ್ಹಾಟ್ ಎ ಗ್ರೇಟ್ ಟ್ರೇಲರ್ ಎಂದು ಹೇಳಿದ್ದಾರೆ. ಕೆಜಿಎಫ್ 2 ನ ಇಡೀ ಚಿತ್ರ ತಂಡವನ್ನು ಅಭಿನಂದಿಸಿದ್ದಾರೆ. ಅಲ್ಲದೆ Happy Birthday To Yash ಎಂದು ಶುಭ  ಕೋರಿದ್ದಾರೆ.

 

ಇದನ್ನೂ ಓದಿ : ಯಶ್ ಹುಟ್ಟುಹಬ್ಬಕ್ಕೆ ಪುತ್ರಿ 'ಐರಾ' ಕ್ಯೂಟ್ ವಿಶ್

ಪ್ರತಿ  ಬಾರಿ ಯಶ್ ಹುಟ್ಟುಹಬ್ಬದಂದು ಯಶ್ ಮನೆ ಮುಂದೆ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು (Fans) ಸೇರುತ್ತಾರೆ. ಈ ಹಿನ್ನೆಲೆಯಲ್ಲಿ ಈ ಬಾರಿ ಜನ ಸೇರದಂತೆ ಯಶ್ ತನ್ನಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದರು. ಕರೋನಾ ಹಿನ್ನೆಲೆಯಲ್ಲಿ ನೀವು ಎಲ್ಲಿದ್ದೀರೋ ಅಲ್ಲಂದಲೇ ಶುಭ ಹಾರೈಸಿ, ಸೋಶಿಯಲ್ ಮಿಡೀಯಾ ಮೂಲಕ ವಿಶ್ ತಿಳಿಸಿ ಎಂದು ಹೇಳಿದ್ದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News