Rocking Star Yash : ನಟ ಯಶ್ ಬ್ಲಾಕ್‌ಬಸ್ಟರ್ ಕೆಜಿಎಫ್ ಚಾಪ್ಟರ್ 2 ರಿಲೀಸ್ ಬಳಿಕ ಪ್ಯಾನ್-ಇಂಡಿಯಾ ಸ್ಟಾರ್ ಆಗಿದ್ದಾರೆ. ಕೆಜಿಎಫ್ ಅಧ್ಯಾಯ ಒಂದು ಮತ್ತು ಕೆಜಿಎಫ್ ಅಧ್ಯಾಯ ಎರಡು ಗಲ್ಲಾಪೆಟ್ಟಿಗೆಯಲ್ಲಿ ಹಲವಾರು ದಾಖಲೆಗಳನ್ನು ಬರೆದಿವೆ. ಇತ್ತೀಚೆಗಷ್ಟೇ ರಿಷಬ್ ಶೆಟ್ಟಿ ಅಭಿನಯದ ಕಾಂತಾರ ಚಿತ್ರವೂ ಭಾರತೀಯ ಸಿನಿರಂಗದಲ್ಲಿ ಹೊಸ ಮೈಲಿಗಲ್ಲನ್ನು ಸೃಷ್ಟಿಸಿತು. ಸ್ಯಾಂಡಲ್‌ವುಡ್ ಸಿನಿಮಾಗಳು ಭರ್ಜರಿ ರೆಕಾರ್ಡ್ ಕ್ರಿಯೇಟ್ ಮಾಡುತ್ತಿದ್ದರೆ, ಇತ್ತ ಬಾಲಿವುಡ್ ಚಿತ್ರಗಳು ಬಹಿಷ್ಕಾರದ ಕರೆಗಳನ್ನು ಎದುರಿಸುತ್ತಲೇ ಇವೆ. ಅನೇಕರು ಬಾಲಿವುಡ್ ಬಗ್ಗೆ ಹೀಯಾಳಿಸಿ ಮಾತನಾಡುತ್ತಿದ್ದಾರೆ. ಈ ಬೆನ್ನಲ್ಲೇ ಯಶಸ್ಸಿನ ರುಚಿ ನೋಡಿದ ನಂತರ ಬೇರೆ ಯಾವುದೇ ಚಿತ್ರರಂಗವನ್ನು ಕೆಳಗಿಳಿಸಬೇಡಿ ಎಂದು ಯಶ್ ಕರ್ನಾಟಕದ ಜನರನ್ನು ಒತ್ತಾಯಿಸಿದ್ದಾರೆ.
ಫಿಲ್ಮ್ ಕಂಪ್ಯಾನಿಯನ್ ಅವರೊಂದಿಗಿನ ಅವರ ಇತ್ತೀಚಿನ ಸಂವಾದದಲ್ಲಿ ಮಾತನಾಡಿದ ಯಶ್, ಕನ್ನಡ ಚಿತ್ರರಂಗದ ಪ್ರತಿಯೊಬ್ಬ ನಿರ್ದೇಶಕರು ಮತ್ತು ನಟರು ಪ್ಯಾನ್-ಇಂಡಿಯಾ ಸ್ಟಾರ್ ಆಗಬೇಕೆಂದು ಬಯಸುವೆ. ಆದರೆ ಯಶಸ್ಸಿನ ಬಳಿಕ ಜನರು ಯಾರನ್ನೂ ಅಗೌರವಗೊಳಿಸಬಾರದು ಎಂದಿದ್ದಾರೆ.
ಇದನ್ನೂ ಓದಿ : Rashmika: "ಅಪ್ಪು ಸರ್ ಮಾತುಗಳು ನೆನಪಾಗ್ತಿವೆ" ಎಂದ ರಶ್ಮಿಕಾ ಮಂದಣ್ಣ
“ಕರ್ನಾಟಕದ ಜನರು ಬೇರೆ ಯಾವುದೇ ಉದ್ಯಮವನ್ನು ಕೆಳಗಿಳಿಸುವುದನ್ನು ನಾನು ಬಯಸುವುದಿಲ್ಲ, ಏಕೆಂದರೆ ಎಲ್ಲರೂ ನಮ್ಮನ್ನು ಹಾಗೆ ನಡೆಸಿಕೊಂಡಾಗ ನಾವು ಆ ಸಮಸ್ಯೆಯನ್ನು ಎದುರಿಸಿದ್ದೇವೆ. ಆ ಗೌರವ ಪಡೆಯಲು ಶ್ರಮಿಸಿದ್ದೇವೆ. ಅದರ ನಂತರ, ನಾವು ಯಾರನ್ನೂ ಕೆಟ್ಟದಾಗಿ ನಡೆಸಿಕೊಳ್ಳುವುದನ್ನು ಪ್ರಾರಂಭಿಸುವುದಿಲ್ಲ. ನಾವು ಎಲ್ಲರನ್ನೂ ಗೌರವಿಸಬೇಕು. ಬಾಲಿವುಡ್ ಅನ್ನು ಗೌರವಿಸಿ. ಈ ಉತ್ತರ ಮತ್ತು ದಕ್ಷಿಣವನ್ನು ಮರೆತುಬಿಡಿ ಎಂದು ಯಶ್ ಹೇಳಿದ್ದಾರೆ.
ಯಾರನ್ನೂ ಮೂಲೆಗುಂಪು ಮಾಡುವುದು ಒಳ್ಳೆಯದಲ್ಲ ಮತ್ತು ಅವರು ಏನೂ ಅಲ್ಲ ಎಂದು ಹೇಳುವ ಮೂಲಕ ಬಾಲಿವುಡ್ ಅನ್ನು ಕೀಳಲು ಸಾಧ್ಯವಿಲ್ಲ ಎಂದು ಅವರು ಹೇಳಿದರು. ದೇಶವಾಗಿ ನಾವು ನಮ್ಮ ನಡುವೆ ಜಗಳವಾಡುವ ಬದಲು ಉತ್ತಮ ಚಿತ್ರಗಳನ್ನು ನಿರ್ಮಿಸಿ, ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಿ, ಚಿತ್ರಮಂದಿರಗಳನ್ನು ನಿರ್ಮಿಸಿ ವಿಶ್ವದ ಇತರ ದೇಶಗಳೊಂದಿಗೆ ಸ್ಪರ್ಧಿಸಿ 'ಭಾರತ ಬಂದಿದೆ' ಅಂತ ಹೇಳಬೇಕು ಎಂದರು.
ಇದನ್ನೂ ಓದಿ : Vedha : ಶಿವಣ್ಣ ಅಭಿನಯದ 125 ನೇ ಚಿತ್ರ ವೇದ ರಿಲೀಸ್
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.