“ಜೈಲಲ್ಲಿ ಇದ್ರು ಪರ್ವಾಗಿಲ್ಲಾ.. ನನ್ಗೆ ಕಾಲ್‌ ಮಾಡು”- ಸಲ್ಮಾನ್‌ ಖಾನ್ ಹತ್ಯೆಗೆ ಸ್ಕೆಚ್‌ ಹಾಕಿದ ಬಿಷ್ಣೋಯ್ ಜೊತೆ ಸಲ್ಲು ಮಾಜಿ ಲವರ್ ಚಾಟ್! ವೈರಲ್ ಆಯ್ತು ಸ್ಕ್ರೀನ್‌ ಶಾಟ್

Somy direct message to Lawrence: ಸಲ್ಮಾನ್ ಖಾನ್ ಅವರ ಮಾಜಿ ಗೆಳತಿ, ನಟಿ ಮತ್ತು ಮಹಿಳಾ ಹಕ್ಕುಗಳ ಕಾರ್ಯಕರ್ತೆ ಸೋಮಿ ಅಲಿ, ಇನ್‌ಸ್ಟಾಗ್ರಾಂ ಮುಖಾಂತರ, ಲಾರೆನ್ಸ್ ಬಿಷ್ಣೋಯ್ ಅವರಿಗೆ ಸಂದೇಶ ಕಳುಹಿಸಿದ್ದು, ಜೈಲ್ಲಿದ್ದರೂ ಪರ್ವಾಗಿಲ್ಲ ಜೂಮ್ ಕಾಲ್‌ ಮಾಡಿ" ಎಂದು ಆಹ್ವಾನಿಸಿದ್ದಾರೆ.  

Written by - Bhavishya Shetty | Last Updated : Oct 17, 2024, 02:07 PM IST
    • ದೇವಸ್ಥಾನಕ್ಕೆ ಬಂದು ಕ್ಷಮೆ ಕೇಳಬೇಕೆಂದು ಲಾರೆನ್ಸ್‌ ಬಿಷ್ಣೋಯ್‌ ಬಣ ಆಗ್ರಹಿಸಿತ್ತು
    • ಮಾಜಿ ಪ್ರೇಯಸಿ ಲಾರೆನ್ಸ್ ಬಿಷ್ಣೋಯ್‌ಗೆ ಕಳುಹಿಸಿರುವ ಮೆಸೇಜ್‌ ವೈರಲ್‌ ಆಗಿದೆ.
    • ಸಲ್ಮಾನ್ ಖಾನ್ ಅವರ ಮಾಜಿ ಗೆಳತಿ, ನಟಿ ಮತ್ತು ಮಹಿಳಾ ಹಕ್ಕುಗಳ ಕಾರ್ಯಕರ್ತೆ ಸೋಮಿ ಅಲಿ
“ಜೈಲಲ್ಲಿ ಇದ್ರು ಪರ್ವಾಗಿಲ್ಲಾ.. ನನ್ಗೆ ಕಾಲ್‌ ಮಾಡು”- ಸಲ್ಮಾನ್‌ ಖಾನ್ ಹತ್ಯೆಗೆ ಸ್ಕೆಚ್‌ ಹಾಕಿದ ಬಿಷ್ಣೋಯ್ ಜೊತೆ ಸಲ್ಲು ಮಾಜಿ ಲವರ್ ಚಾಟ್! ವೈರಲ್ ಆಯ್ತು ಸ್ಕ್ರೀನ್‌ ಶಾಟ್ title=
File Photo

Somy direct message to Lawrence: ಎನ್‌ಸಿಪಿ ನಾಯಕ ಮತ್ತು ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದಿಕಿ ಹತ್ಯೆಯ ನಂತರ ಸಲ್ಮಾನ್ ಖಾನ್ ಅವರನ್ನೂ ಸಹ ಟಾರ್ಗೆಟ್‌ ಮಾಡಿದ್ದೇವೆ, ಆತ ಬದುಕಬೇಕೆಂದರೆ ದೇವಸ್ಥಾನಕ್ಕೆ ಬಂದು ಕ್ಷಮೆ ಕೇಳಬೇಕೆಂದು ಲಾರೆನ್ಸ್‌ ಬಿಷ್ಣೋಯ್‌ ಬಣ ಆಗ್ರಹಿಸಿತ್ತು. ಈ ಬೆನ್ನಲ್ಲೇ ಸಲ್ಲು ಮಾಜಿ ಪ್ರೇಯಸಿ ಲಾರೆನ್ಸ್ ಬಿಷ್ಣೋಯ್‌ಗೆ ಕಳುಹಿಸಿರುವ ಮೆಸೇಜ್‌ ವೈರಲ್‌ ಆಗಿದೆ.

ಇದನ್ನೂ ಓದಿ: "ಸಲ್ಮಾನ್ ಖಾನ್ ಬದುಕಬೇಕೆಂದರೆ ಇರೋದು ಒಂದೇ ದಾರಿ... ಆತ ಪಬ್ಲಿಕ್‌ನಲ್ಲಿ ಹೀಗೆ ಮಾಡಬೇಕು"- ಬಿಷ್ಣೋಯ್ ಗ್ಯಾಂಗ್‌ನಿಂದ ಸಂಚಲನಕಾರಿ ಹೇಳಿಕೆ

ಸಲ್ಮಾನ್ ಖಾನ್ ಅವರ ಮಾಜಿ ಗೆಳತಿ, ನಟಿ ಮತ್ತು ಮಹಿಳಾ ಹಕ್ಕುಗಳ ಕಾರ್ಯಕರ್ತೆ ಸೋಮಿ ಅಲಿ, ಇನ್‌ಸ್ಟಾಗ್ರಾಂ ಮುಖಾಂತರ, ಲಾರೆನ್ಸ್ ಬಿಷ್ಣೋಯ್ ಅವರಿಗೆ ಸಂದೇಶ ಕಳುಹಿಸಿದ್ದು, ಜೈಲ್ಲಿದ್ದರೂ ಪರ್ವಾಗಿಲ್ಲ ಜೂಮ್ ಕಾಲ್‌ ಮಾಡಿ" ಎಂದು ಆಹ್ವಾನಿಸಿದ್ದಾರೆ.

ಸೋಮಿ ತನ್ನ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಲಾರೆನ್ಸ್ ಫೋಟೋ ಶೇರ್‌ ಮಾಡಿಕೊಂಡಿದ್ದಾರೆ. ಆ ಫೋಟೋ ಜೊತೆ ಶೀರ್ಷಿಕೆಯನ್ನೂ ಬರೆದಿದ್ದು, “ಇದು ಲಾರೆನ್ಸ್ ಬಿಷ್ಣೋಯ್‌ಗೆ ನೇರ ಸಂದೇಶ: ನಮಸ್ತೆ, ಲಾರೆನ್ಸ್ ಭಾಯ್, ನೀವು ಜೈಲಿನಿಂದಲೂ ಜೂಮ್ ಕರೆಗಳನ್ನು ಮಾಡುತ್ತಿದ್ದೀರಿ ಎಂದು ನಾನು ಕೇಳಿದ್ದೇನೆ ಮತ್ತು ನೋಡಿದ್ದೇನೆ. ಹಾಗಾಗಿ ನನಗೂ ನಿಮ್ಮೊಂದಿಗೆ ಸ್ವಲ್ಪ ಮಾತನಾಡುವುದಕ್ಕಿದೆ. ಇದು ಹೇಗೆ ಸಾಧ್ಯ ಎಂದು ದಯವಿಟ್ಟು ಹೇಳಿ? ಇಡೀ ಪ್ರಪಂಚದಲ್ಲಿ ನಮ್ಮ ನೆಚ್ಚಿನ ಸ್ಥಳವೆಂದರೆ ರಾಜಸ್ಥಾನ. ನಾವು ಪೂಜೆಗಾಗಿ ನಿಮ್ಮ ದೇವಸ್ಥಾನಕ್ಕೆ ಬರಲು ಬಯಸುತ್ತೇವೆ. ಆದರೆ ಅದಕ್ಕೂ ಮೊದಲು ನಿಮಗೆ ಜೂಮ್ ಕಾಲ್‌ ಮಾಡಬೇಕಿದೆ. ಪೂಜೆಯ ನಂತರ ಸ್ವಲ್ಪ ಚರ್ಚೆ ಮಾಡುವುದಿದೆ. ಆ ನಂತರ ನಿಮಗೆ ಈ ಕರೆ ಪ್ರಯೋಜನಕಾರಿಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ದಯವಿಟ್ಟು ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ. ಅದು ನಿಮಗೆ ಉಪಕಾರವಾಗುತ್ತದೆ. ಧನ್ಯವಾದಗಳು" ಎಂದು ಬರೆದುಕೊಂಡಿದ್ದಾರೆ.

ಈ ಹಿಂದೆ ಈ ರೀತಿ ಇತ್ತು ರಿಕ್ವೆಸ್ಟ್...
1999ರಲ್ಲಿ ಸಲ್ಮಾನ್ ಜೊತೆಗಿನ ಸಂಬಂಧ ಮುರಿದುಕೊಂಡ ಸೋಮಿ, ಮುಂಬೈನಿಂದ ಅಮೆರಿಕಕ್ಕೆ ತೆರಳಿ ಅಂದಿನಿಂದ ಅಲ್ಲೇ ಉಳಿದುಕೊಂಡಿದ್ದಾರೆ. ಆದರೆ ಮೇ ತಿಂಗಳಲ್ಲಿ ಹಿಂದೂಸ್ತಾನ್ ಟೈಮ್ಸ್‌ಗೆ ನೀಡಿದ ಸಂದರ್ಶನದಲ್ಲಿ ಸೋಮಿ, ಸಲ್ಮಾನ್‌ ಖಾನ್‌ ಪರವಾಗಿ ಲಾರೆನ್ಸ್‌ ಬಿಷ್ಣೋಯ್‌ ಬಳಿ ಕ್ಷಮೆ ಕೇಳಿದ್ದರು. "ನೀವು ಯಾರನ್ನಾದರೂ ಕೊಲ್ಲಲು ಪ್ರಯತ್ನಿಸುತ್ತಿದ್ದರೆ ಅಥವಾ ಅವರ ಮೇಲೆ ಗುಂಡು ಹಾರಿಸಿದರೆ ನೀವು ನಿಮ್ಮ ಮಿತಿಯನ್ನು ಮೀರಿದಂತೆ. ನಾನು ಇಂತಹದನ್ನು ಬೆಂಬಲಿಸುವುದಿಲ್ಲ, ಆದರೆ ಈ ಘಟನೆ ನಡೆದಿದೆ. ಹಲವು ವರ್ಷಗಳ ಹಿಂದೆ 1998ರಲ್ಲಿ ಸಲ್ಮಾನ್ ತುಂಬಾ ಚಿಕ್ಕವನಾಗಿದ್ದನು. ನಾನು ಬಿಷ್ಣೋಯ್ ಬುಡಕಟ್ಟಿನ ಮುಖ್ಯಸ್ಥನಿಗೆ ಅದನ್ನು ಮರೆತುಬಿಡಿ, ಕ್ಷಮಿಸಿ ಎಂದು ವಿನಂತಿಸಿದ್ದೆ" ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬಾಬಾ ಸಿದ್ಧಿಕ್ಕಿ ಹತ್ಯೆಗೈದು, ಈಗ ಸಲ್ಮಾನ್‌ ಖಾನ್ ಟಾರ್ಗೆಟ್‌ ಮಾಡುತ್ತಿರುವ ಲಾರೆನ್ಸ್‌ ಬಿಷ್ಣೋಯ್‌ ಯಾರು? ಪೊಲೀಸ್‌ ಮಗ ರೌಡಿಯಾಗಿ ಬದಲಾಗಲು ಕಾರಣ?

ಮಾತು ಮುಂದುವರೆಸಿದ ಸೋಮಿ, “ಯಾರೊಬ್ಬರ ಪ್ರಾಣ ತೆಗೆಯುವುದು ಸ್ವೀಕಾರಾರ್ಹವಲ್ಲ, ಅದು ಸಲ್ಮಾನ್ ಆಗಿರಲಿ ಅಥವಾ ಸಾಮಾನ್ಯ ವ್ಯಕ್ತಿಯಾಗಿರಲಿ. ನ್ಯಾಯ ಬೇಕಾದರೆ ನ್ಯಾಯಾಲಯದ ಮೊರೆ ಹೋಗಬೇಕು. ನನಗೆ ಅಮೆರಿಕದಂತೆಯೇ ಭಾರತದ ನ್ಯಾಯಾಂಗ ವ್ಯವಸ್ಥೆ ಮತ್ತು ವಕೀಲರ ಮೇಲೆ ಸಂಪೂರ್ಣ ನಂಬಿಕೆ ಇದೆ. ಸಲ್ಮಾನ್ ಖಾನ್‌ಗೆ ಹಾನಿ ಮಾಡುವುದರಿಂದ ಕೃಷ್ಣಮೃಗವನ್ನು ಮರಳಿ ತಂದಂತಾಗುವುದಿಲ್ಲ ಎಂದು ನಾನು ಬಿಷ್ಣೋಯ್ ಸಮುದಾಯಕ್ಕೆ ಮನವಿ ಮಾಡಲು ಬಯಸುತ್ತೇನೆ. ಇದುವರೆಗೆ ಏನಾಯಿತು ಅದನ್ನು ಬದಲಾಯಿಸಲಾಗುವುದಿಲ್ಲ; ಆಗಿದ್ದು ಆಗಿಹೋಗಿದೆ ”ಎಂದು ಹೇಳಿದ್ದರು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News