Zoom call: ‘ಜೂಮ್ ಕಾಲ್’ ಮೂಲಕ ಆನ್‍ಲೈನ್ ಶಿಕ್ಷಕಿಯಾದ ರೇಣುಕಾ!

Zoom Call Kannada Movie: ಸಾಹಸಿಂಹ ಡಾ.ವಿಷ್ಣುವರ್ಧನ್, ಗೋಲ್ಡನ್ ಸ್ಟಾರ್ ಗಣೇಶ್, ಸ್ಟಾರ್ ನಟ ಮತ್ತು ನಿರ್ದೇಶಕ ರಿಷಬ್ ಶೆಟ್ಟಿ ಸೇರಿದಂತೆ ಅನೇಕ ಖ್ಯಾತ ನಟರ ಚಿತ್ರಗಳಲ್ಲಿ ನಟಿಸಿರುವ ರೇಣುಕಾ ಈಗ ಹೊಸಬರ ಚಿತ್ರದಲ್ಲಿ ನಟಿಸಿದ್ದಾರೆ.

Written by - Zee Kannada News Desk | Last Updated : Jan 16, 2023, 01:07 PM IST
  • ಟೈಟಲ್‍ನಿಂದಲೇ ಸಿನಿ ಪ್ರೇಕ್ಷಕರ ಗಮನ ಸೆಳೆಯುತ್ತಿರುವ ‘ಜೂಮ್ ಕಾಲ್’ ಸಿನಿಮಾ
  • ‘ಜೂಮ್ ಕಾಲ್’ ಕೊರೊನಾ ಲಾಕ್‍ಡೌನ್ ಸಮಯದಲ್ಲಿ ಹುಟ್ಟಿದ ಕಥೆಯಾಗಿದೆ
  • ಇಂಜಿನಿಯರ್ ವಿದ್ಯಾರ್ಥಿಗಳ ಆನ್‍ಲೈನ್ ಕ್ಲಾಸ್ ಬಗ್ಗೆ ಕಥಾಹಂದರ ಹೊಂದಿರುವ ಸಿನಿಮಾ
 Zoom call: ‘ಜೂಮ್ ಕಾಲ್’ ಮೂಲಕ ಆನ್‍ಲೈನ್ ಶಿಕ್ಷಕಿಯಾದ ರೇಣುಕಾ! title=
ಗಮನ ಸೆಳೆಯುತ್ತಿರುವ ‘ಜೂಮ್ ಕಾಲ್’ ಸಿನಿಮಾ

ಬೆಂಗಳೂರು: ಹೊಸಬರೇ ಸೇರಿಕೊಂಡು ಮಾಡುತ್ತಿರುವ "ಜೂಮ್ ಕಾಲ್" ಚಿತ್ರದಲ್ಲಿ ಆನ್‍ಲೈನ್ ಶಿಕ್ಷಕಿಯಾಗಿ ಸ್ಯಾಂಡಲ್‍ವುಡ್‍ ನಟಿ ರೇಣುಕಾ ಅಭಿನಯಿಸಿದ್ದಾರೆ.

ಸಾಹಸಿಂಹ ಡಾ.ವಿಷ್ಣುವರ್ಧನ್, ಗೋಲ್ಡನ್ ಸ್ಟಾರ್ ಗಣೇಶ್, ಸ್ಟಾರ್ ನಟ ಮತ್ತು ನಿರ್ದೇಶಕ ರಿಷಬ್ ಶೆಟ್ಟಿ ಸೇರಿದಂತೆ ಅನೇಕ ಖ್ಯಾತ ನಟರ ಚಿತ್ರಗಳಲ್ಲಿ ನಟಿಸಿರುವ ರೇಣುಕಾ ಈಗ ಹೊಸಬರ ಚಿತ್ರದಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ: Ramya: ʻಕೈʼ ಬಿಟ್ಟು ʻಕಮಲʼ ಮುಡಿಯುವ ಸುಳಿವು ಕೊಟ್ರಾ ಮೋಹಕತಾರೆ ರಮ್ಯಾ?

ಈ ಬಗ್ಗೆ ಖುಷಿ ಹಂಚಿಕೊಂಡಿರುವ ನಟಿ ರೇಣುಕಾ, ‘ನಾನು ಇಷ್ಟುದಿನ ಪ್ರತಿಯೊಂದು ಸಿನಿಮಾದಲ್ಲಿಯೂ ಸಹನಟರ ಜೊತೆ ನಟಿಸುತ್ತಿದೆ. ಆದರೆ ಈ ಚಿತ್ರದಲ್ಲಿ ಒಬ್ಬಳೇ ನಟಿಸಿದ್ದೇನೆ. ಈ ಅನುಭವ ನನಗೆ ಹೊಸದಾಗಿತ್ತು ಮತ್ತು ವಿಶೇಷವಾಗಿತ್ತು. ‘ಜೂಮ್ ಕಾಲ್’ ಪ್ರಯೋಗಾತ್ಮಕ ಚಿತ್ರವಾಗಿದ್ದು, ಇದರ ಮೇಕಿಂಗ್ ವಿಭಿನ್ನವಾಗಿದೆ. ಈ ಸಿನಿಮಾದಲ್ಲಿ ನಟಿಸಿದ್ದು ನನಗೆ ತುಂಬಾ ಖುಷಿಯಾಗಿದೆ’ ಎಂದು ಹೇಳಿದ್ದಾರೆ.

ಮಹೇಶ್ ಹೆಚ್ ಎಂ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಈ ಚಿತ್ರದ ಸಂಪೂರ್ಣ ಚಿತ್ರೀಕರಣ ಇತ್ತೀಚೆಗಷ್ಟೇ ಮುಕ್ತಾಯವಾಗಿದೆ. ಚಿತ್ರತಂಡವು ಸಿನಿಮಾದ ಪ್ರಚಾರ ಕಾರ್ಯವನ್ನು ಆರಂಭಿಸಿದೆ.

ಇದನ್ನೂ ಓದಿ: Rashmika Mandanna: ಕನ್ನಡಕ್ಕೆ ಮೊದಲ ಆದ್ಯತೆ ಕೊಟ್ರು ಟ್ರೋಲ್‌ ಆದ ರಶ್ಮಿಕಾ ಮಂದಣ್ಣ.!

ಶ್ರೀವಾರಿ ಪಿಕ್ಚರ್ಸ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಮಂಜು ಕೊಪ್ಪಳ್ ಛಾಯಾಗ್ರಹಣ ಹಾಗೂ ಸಂಕಲನ ಮತ್ತು ವಿಜಯ್ ರಾಜ್ ಅವರ ಸಂಗೀತ ನಿರ್ದೇಶನವಿದೆ. ರೇಣುಕಾ, ಲಕ್ಷ್ಮೀ ಅರಸ್, ರೂಪ ಮನಕೂರ್, ಅರ್ಜುನ್, ಮಹೇಂದ್ರ, ಪರಮ್ ಮುಂತಾದವರು ‘ಜೂಮ್ ಕಾಲ್’ನಲ್ಲಿ ಕಾಣಿಸಿಕೊಂಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News