ಅಯೋಧ್ಯೆ ರಾಮ ಮಂದಿರ ಉದ್ಘಾಟನೆ ದಿನವೇ ಪ್ಯಾನ್ ಇಂಡಿಯಾ ಸಿನಿಮಾ ಅನೌನ್ಸ್

Shri Ram Jai Hanuman Poster: ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳಂ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ನಿರ್ಮಾಣವಾಗಲಿರುವ "ಶ್ರೀ ರಾಮ್, ಜೈ ಹನುಮಾನ್" ಚಿತ್ರದ ಟೈಟಲ್ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. 

Written by - Yashaswini V | Last Updated : Jan 22, 2024, 12:50 PM IST
  • ಯುವ ನಿರ್ದೇಶಕ ಅವಧೂತ ಶ್ರೀ ರಾಮ್, ಜೈ ಹನುಮಾನ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.
  • ನಿರ್ಮಾಪಕ ಕೆ ಎ.ಸುರೇಶ್ ಅದ್ಧೂರಿಯಾಗಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
  • ಕನ್ನಡದಲ್ಲಿ ಈಗಾಗಲೇ ಯಶಸ್ವಿ ನಿರ್ಮಾಣ ಸಂಸ್ಥೆ ಎನಿಸಿಕೊಂಡಿರುವ ಸುರೇಶ್ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ ಈ ಪ್ಯಾನ್ ಇಂಡಿಯಾ ಸಿನಿಮಾ ಮೂಡಿ ಬರುತ್ತಿದೆ.
ಅಯೋಧ್ಯೆ ರಾಮ ಮಂದಿರ ಉದ್ಘಾಟನೆ ದಿನವೇ ಪ್ಯಾನ್ ಇಂಡಿಯಾ ಸಿನಿಮಾ ಅನೌನ್ಸ್ title=

Shri Ram Jai Hanuman Poster: ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ಉದ್ಘಾಟನೆಯ ಐತಿಹಾಸಿಕ ಕ್ಷಣದಲ್ಲಿ ಇಡೀ ದೇಶವೇ ಸಾಕ್ಷಿಯಾಗಿದೆ. ಎಲ್ಲರೂ ರಾಮ ನಾಮ ಸ್ಮರಣೆ ಮಾಡುವ ಶುಭ ಘಳಿಗೆಯಲ್ಲಿ "ಶ್ರೀ ರಾಮ್, ಜೈ ಹನುಮಾನ್" ಎಂಬ ಹೊಚ್ಚ ಹೊಸ ಪ್ಯಾನ್ ಇಂಡಿಯಾ ಸಿನಿಮಾ ಘೋಷಣೆಯಾಗಿದೆ. 

ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳಂ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ನಿರ್ಮಾಣವಾಗಲಿರುವ "ಶ್ರೀ ರಾಮ್, ಜೈ ಹನುಮಾನ್" ಚಿತ್ರದ ಟೈಟಲ್ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ರಾಮ ಮಂದಿರ ಉದ್ಘಾಟನೆಯ ಸಮಯಕ್ಕೆ (12.33) ಅನಾವರಣಗೊಂಡಿರುವುದು ಹಿಂದೂ ಧರ್ಮದ ಭಕ್ತಗಣಕ್ಕೆ ಸಂತಸದ ವಿಷಯ. "An Untold Epic of RAMAYANA" ಎಂಬ ಅಡಿಬರಹ ಈ ಚಿತ್ರಕ್ಕಿದೆ. ರಾಮಾಯಣದ ಕುರಿತು ಬಹುತೇಕರಿಗೆ ವಿಷಯ ತಿಳಿದಿದೆ. ಆದರೆ ಎಲ್ಲೂ ದಾಖಲಾಗದ ಕೆಲವು ವಿಷಯಗಳನ್ನು ಈ ಚಿತ್ರದ ಮೂಲಕ ಹೇಳಲಾಗುತ್ತಿದೆ ಎಂಬುದು ಈ ಸಿನಿಮಾದ ಮತ್ತೊಂದು ವಿಶೇಷ. 

ಇದನ್ನೂ ಓದಿ- ಸ್ಪೆಷಲ್‌ ಫೈಟ್‌ನಲ್ಲಿ ಅಜ್ಜಿ ತಾತನ ಜೊತೆಗೆ ಅಯೋಧ್ಯೆಗೆ ಹೊರಟ ಯುವರಾಜ!

ಸದ್ಯ ಹರಿಬಿಟ್ಟಿರುವ ಪೋಸ್ಟರ್ ಸಾಕಷ್ಟು ಕುತೂಹಲ ಕೆರಳಿಸಿದೆ. ಬೆಟ್ಟ, ಗುಡ್ಡ, ಬೆಂಕಿ, ನೀರು, ರಾಮ - ಹನುಮ... ಹೀಗೆ ಅನೇಕ ಸಂಗತಿಗಳು ಪೋಸ್ಟರ್ ನಲ್ಲಿ ಅಡಕವಾಗಿವೆ. ಒಂದೆಡೆ ಅಯೋಧ್ಯೆ ರಾಮ ಮಂದಿರ ಉದ್ಘಾಟನೆಯ ಖುಷಿಯಲ್ಲಿರುವ ಜನರಿಗೆ, ಈ ಪೋಸ್ಟರ್ ನೋಡುತ್ತಲೇ ಮೈ ಜುಂ ಎನಿಸುವಂತೆ ಮಾಡಿರುವುದು ಚಿತ್ರದ ಮೇಲೆ ಈಗಲೇ ಸಾಕಷ್ಟು ನಿರೀಕ್ಷೆ ಗರಿಗೆದರುವಂತೆ ಮಾಡಿದೆ.

ಇದನ್ನೂ ಓದಿ- ಅಯೋಧ್ಯೆಯಲ್ಲಿ ಸನ್‌ಗ್ಲಾಸ್‌ ಧರಿಸಿ ಕಸ ಗುಡಿಸಿದ ಕಂಗನಾ ವಿಡಿಯೋ ವೈರಲ್!

ಯುವ ನಿರ್ದೇಶಕ ಅವಧೂತ ಶ್ರೀ ರಾಮ್, ಜೈ ಹನುಮಾನ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ನಿರ್ಮಾಪಕ ಕೆ ಎ.ಸುರೇಶ್ ಅದ್ಧೂರಿಯಾಗಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಕನ್ನಡದಲ್ಲಿ ಈಗಾಗಲೇ ಯಶಸ್ವಿ ನಿರ್ಮಾಣ ಸಂಸ್ಥೆ ಎನಿಸಿಕೊಂಡಿರುವ ಸುರೇಶ್ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ ಈ ಪ್ಯಾನ್ ಇಂಡಿಯಾ ಸಿನಿಮಾ ಮೂಡಿ ಬರುತ್ತಿದ್ದು, ಕನ್ನಡ, ತಮಿಳು, ತೆಲುಗು, ಹಿಂದಿ ಹಾಗೂ ಮಲಯಾಳಂನ ಖ್ಯಾತ ನಟರು, ಕಲಾವಿದರು ಸೇರಿದಂತೆ ದೊಡ್ಡ ತಾರಾಬಳಗವೇ ಇರಲಿದೆ. 

ಬಹುಕೋಟಿ ವಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಸಿನಿಮಾಕ್ಕೆ ಸದ್ಯ ಸ್ಟೋರಿ ಬೋರ್ಡ್ ಮತ್ತು ವಿಎಫ್ಎಕ್ಸ್ ಕೆಲಸಗಳು ನಡೆಯುತ್ತಿವೆ. ಸದ್ಯದಲ್ಲೇ ಮತ್ತಷ್ಟು ವಿವರಗಳನ್ನು ಹಂಚಿಕೊಳ್ಳಲಿದೆ ಚಿತ್ರತಂಡ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=xFI-KJNrEP8

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News