ಸಿಲ್ಕ್ ಸ್ಮಿತಾ ಸಾವಿಗೆ ʻಈ ವ್ಯಕ್ತಿʼಯೇ ಕಾರಣ.. ಖ್ಯಾತ ನಟಿಯಿಂದ ಬಟಾಬಯಲಾಯ್ತು ಇಷ್ಟು ವರ್ಷ ಬಚ್ಚಿಟ್ಟ ಸತ್ಯ!!

Silk Smitha Death Reason: ಸಿಲ್ಕ್ ಸ್ಮಿತಾ ಸಾವಿನ ಸುತ್ತ ಇರುವ ಕೆಲವು ನಿಗೂಢತೆಗಳಿಗೆ ನಟಿಯೊಬ್ಬರು ಉತ್ತರ ನೀಡಿದ್ದಾರೆ.

Written by - Chetana Devarmani | Last Updated : Mar 20, 2024, 11:54 AM IST
    • ಸಿಲ್ಕ್ ಸ್ಮಿತಾ ಸಾವಿನ ರಹಸ್ಯ ಬಯಲು!
    • ಆತನನ್ನು ಕಣ್ಣುಮುಚ್ಚಿ ನಂಬಿ ಬಲಿಯಾದಳು?
    • ಸಿಲ್ಕ್‌ ಸ್ಮಿತಾ ಆತ್ಮಹತ್ಯೆಗೆ ಕಾರಣ ಆ ವ್ಯಕ್ತಿ?
ಸಿಲ್ಕ್ ಸ್ಮಿತಾ ಸಾವಿಗೆ ʻಈ ವ್ಯಕ್ತಿʼಯೇ ಕಾರಣ.. ಖ್ಯಾತ ನಟಿಯಿಂದ ಬಟಾಬಯಲಾಯ್ತು ಇಷ್ಟು ವರ್ಷ ಬಚ್ಚಿಟ್ಟ ಸತ್ಯ!! title=

Silk Smitha Suicide Reason : 70 ಮತ್ತು 80 ರ ದಶಕದ ಬಹುತೇಕ ಯುವಕರ ಕನಸಿನ ಹುಡುಗಿ, ಸಿಲ್ಕ್ ಸ್ಮಿತಾ. ರಜನಿಕಾಂತ್, ಕಮಲ್ ಹಾಸನ್ ಸೇರಿದಂತೆ ಅನೇಕ ನಟರ ಜೊತೆ ನಟಿಸಿ, ಕಣ್ಣಲ್ಲೇ ತನ್ನ ಚೆಲುವನ್ನು ತೋರಿಸಿದ ಮಾದಕ ಬೆಡಗಿ. ಸಿಲ್ಕ್ ಸ್ಮಿತಾ ಅವರ ಮೂಲ ಹೆಸರು ವಿಜಯಲಕ್ಷ್ಮಿ. ಇವರು ಮೂಲತಃ ಆಂಧ್ರಪ್ರದೇಶದವರು. ಕುಟುಂಬದಲ್ಲಿ ಕಾಡುತ್ತಿದ್ದ ಬಡತನದಿಂದ ಚಿತ್ರರಂಗ ಪ್ರವೇಶಿಸಿದ ಅವರು ವಿನು ಚಕ್ರವರ್ತಿ ನಿರ್ದೇಶನದ ಚಿತ್ರದ ಮೂಲಕ ಸಿನಿರಂಗಕ್ಕೆ ಪದಾರ್ಪಣೆ ಮಾಡಿದರು. ನಂತರ ಭಾರತೀಯ ಚಿತ್ರರಂಗವನ್ನು ಆಳಿದರು. 

ಆ ಕಾಲದಲ್ಲಿ ಸಿಲ್ಕ್ ಸ್ಮಿತಾ ಕಾಲ್ ಶೀಟ್ ಸಿಕ್ಕರೆ ಚಿತ್ರ ಯಶಸ್ವಿಯಾಗುತ್ತದೆ ಎಂಬಂಥ ಪರಿಸ್ಥಿತಿ ಇತ್ತು. ಯಾವುದೇ ಶಿಕ್ಷಣ ಇಲ್ಲದಿದ್ದರೂ, ಸಿಲ್ಕ್ ಸ್ಮಿತಾಗೆ ಎಲ್ಲ ವಿಷಯವನ್ನು ಸುಲಭವಾಗಿ ಗ್ರಹಿಸುವ ಸ್ವಾಭಾವಿಕ ಸಾಮರ್ಥ್ಯವಿತ್ತು. ಇದರಿಂದಾಗಿ ಅವರು ಸುಲಭವಾಗಿ ಅನೇಕ ಭಾಷೆಗಳಲ್ಲಿ ನಟಿಸಲು ಸಾಧ್ಯವಾಯಿತು. 

ಹಲವು ಭಾಷೆಗಳ ಚಿತ್ರಗಳಲ್ಲಿ ನಟಿಸಿರುವ ಸಿಲ್ಕ್ ಸ್ಮಿತಾ ಹೃದಯ ಸದಾ ಪ್ರೀತಿ, ವಾತ್ಸಲ್ಯಕ್ಕಾಗಿ ಹಂಬಲಿಸುತ್ತಿತ್ತು. ಸಿಲ್ಕ್ ಸ್ಮಿತಾ ಸಾವಿನ ಸುತ್ತ ಇಂದಿಗೂ ಒಂದು ಅನುಮಾನ ಎಲ್ಲರನ್ನೂ ಕಾಡುತ್ತಿದೆ. ಸಿಲ್ಕ್ ಸ್ಮಿತಾ ವೈಯಕ್ತಿಕ ಬದುಕು, ಆತ್ಮಹತ್ಯೆಗೆ ಶರಣಾದ ಕಾರಣ ಈ ಎಲ್ಲವೂ ಇಂದಿಗೂ ನಿಗೂಢ ಪ್ರಶ್ನೆಗಳಾಗಿಯೇ ಉಳಿದಿವೆ. 

ಇದನ್ನೂ ಓದಿ: ಸೌಂದರ್ಯದ ಗಣಿ ನೀತಾ ಗೆ ಟ್ರಾಫಿಕ್ ಸಿಗ್ನಲ್ ನಲ್ಲಿ ಪ್ರಪೋಸ್ ಮಾಡಿದ್ದ ಮುಖೇಶ್.. ಯಾವ ಸಿನಿಮಾಗೂ ಕಮ್ಮಿಯಿಲ್ಲ ಅಂಬಾನಿ ಪ್ರೇಮ ಕಹಾನಿ!

ಇದೀಗ ಸಿಲ್ಕ್‌ ಸ್ಮಿತಾ ಸಾವಿನ ಬಗ್ಗೆ ದಕ್ಷಿಣ ಸಿನಿರಂಗದ ಹಿರಿಯ ನಟಿ ಜಯಮಾಲಿನಿ ಮಾತನಾಡಿದ್ದಾರೆ. ಸಿಲ್ಕ್‌ ಸ್ಮಿತಾ ಸಾವಿನ ಬಗ್ಗೆ ಹಲವು ವಿಷಯಗಳನ್ನು ಬಹಿರಂಗಪಡಿಸಿದ್ದಾರೆ. ತಮ್ಮ ಜೀವನದಲ್ಲಿ ಸಿಲ್ಕ್ ಮಾಡಿದ ಒಂದು ದೊಡ್ಡ ತಪ್ಪಿನ ಬಗ್ಗೆ ಹೇಳಿದ್ದಾರೆ. 

ಸಿಲ್ಕ್ ಮಾಡಿದ ಅತಿದೊಡ್ಡ ತಪ್ಪು ಪ್ರೀತಿ. ಪ್ರೀತಿಸುವುದರಲ್ಲಿ ತಪ್ಪೇನಿಲ್ಲ. ಆದರೆ ಪೋಷಕರನ್ನು ಬಿಡಬಾರದು. ಸಿಲ್ಕ್‌ ಸ್ಮಿತಾ ತನ್ನ ತಾಯಿ ಮತ್ತು ಬಂಧುಗಳನ್ನು ತೊರೆದು ಆ ಒಬ್ಬ ವ್ಯಕ್ತಿಯನ್ನು ಮಾತ್ರ ಅವಲಂಬಿಸಿದ್ದರು. ಸಂಬಂಧಿಕರನ್ನು ಪಕ್ಕದಲ್ಲಿ ಇಡಬೇಕಿತ್ತು ಎಂದು ಜಯಮಾಲಿನಿ ಹೇಳಿದ್ದಾರೆ.
 
ಸಂದರ್ಶನವೊಂದರಲ್ಲಿ ಮಾತನಾಡಿರುವ ನಟಿ ಜಯಮಾಲಿನಿ, ಪೋಷಕರಿಂದ ದೂರ ಇದ್ದಿದ್ದೇ ಸಿಲ್ಕ್ ಸ್ಮಿತಾ ಮಾಡಿದ ಬಹು ದೊಡ್ಡ ತಪ್ಪು. ಹಣ, ಕೀರ್ತಿ ಎಲ್ಲ ಇದ್ದರೂ ಸಿಲ್ಕ್ ಸ್ಮಿತಾ ಒಂಟಿಯಾಗಿದ್ದರು. ಒಂಟಿತನ ಅವರನ್ನು ಹರಿದು ತಿನ್ನುತ್ತಿತ್ತು ಎಂದಿದ್ದಾರೆ ಜಯಮಾಲಿನಿ. 

ಸಿಲ್ಕ್ ಸ್ಮಿತಾ ಹೃದಯ ಸದಾ ಪ್ರೀತಿಯ ಹುಡುಕಾಟದಲ್ಲಿ ತೊಡಗಿತ್ತು. ಇದೇ ಕಾರಣಕ್ಕೆ ಸಿಕ್ಕ ಸಿಕ್ಕವರನ್ನ ನಂಬಿದರು. ಹೀಗೆಯೇ ತಪ್ಪು ವ್ಯಕ್ತಿಯ ಜೊತೆ ಪ್ರೀತಿಯ ಬಲೆಯಲ್ಲಿ ಸಿಲುಕಿದರು. ಆ ವ್ಯಕ್ತಿ ಸಿಲ್ಕ್ ಸ್ಮಿತಾ ಅವರನ್ನು ಬಳಸಿಕೊಂಡ, ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿ ಹೋದ. ಸಿಲ್ಕ್ ಸ್ಮಿತಾ ಮಾನಸಿಕವಾಗಿ ಕುಗ್ಗಿ ಹೋಗಿದ್ದೇ ಇದರಿಂದ. ಮಾನಸಿಕ ನೆಮ್ಮದಿ ಇಲ್ಲದೇ, ಒಂಟಿತನದ ಛಾಯೆಯಲ್ಲೇ ಕೊರಗಿದ ಸಿಲ್ಕ್ ಸ್ಮಿತಾ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಜಯಮಾಲಿನಿ ಅಭಿಪ್ರಾಯ ಪಟ್ಟಿದ್ದಾರೆ. 

ಇದನ್ನೂ ಓದಿ: Ileana D'Cruz: "ನನ್ನನ್ನು ಟೀಕಿಸಿ.. ನನ್ನ ಬಾಯ್‌ಫ್ರೆಂಡ್‌ʼನ್ನು ಟೀಕಿಸಿದರೆ ನಾನು ಸಹಿಸುವುದಿಲ್ಲ.." - ಇಲಿಯಾನಾ ಡಿ ಕ್ರೂಸ್

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News