ಗಂಗೂಲಿ ಪಾತ್ರದಲ್ಲಿ ಆಯುಷ್ಮಾನ್.. ಶೀಘ್ರದಲ್ಲೇ ಸೆಟ್ಟೇರಲಿದೆ ದಾದಾ ಬಯೋಪಿಕ್.!

Sourav Ganguly Biopic: ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಅವರ ಜೀವನಚರಿತ್ರೆ ಬೆಳ್ಳಿ ಪರದೆಯ ಮೇಲೆ ಮೂಡಿ ಬರಲಿದೆ. ಈ ಚಿತ್ರದಲ್ಲಿ ಬಾಲಿವುಡ್ ನಟ ಆಯುಷ್ಮಾನ್ ಖುರಾನಾ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ. 

Written by - Chetana Devarmani | Last Updated : Sep 2, 2023, 04:01 PM IST
  • ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ
  • ಪ್ರಮುಖ ಪಾತ್ರದಲ್ಲಿ ಬಾಲಿವುಡ್ ನಟ ಆಯುಷ್ಮಾನ್ ಖುರಾನಾ
  • ಡಿಸೆಂಬರ್‌ನಲ್ಲಿ ಈ ಸಿನಿಮಾ ಸೆಟ್‌ ಏರಲಿದೆ
ಗಂಗೂಲಿ ಪಾತ್ರದಲ್ಲಿ ಆಯುಷ್ಮಾನ್.. ಶೀಘ್ರದಲ್ಲೇ ಸೆಟ್ಟೇರಲಿದೆ ದಾದಾ ಬಯೋಪಿಕ್.! title=

Sourav Ganguly : ಕೆಲವು ದಿನಗಳಿಂದ ಬಯೋಪಿಕ್ ಟ್ರೆಂಡ್ ನಡೆಯುತ್ತಿದೆ. ಕ್ರೀಡಾಪಟುಗಳು ಹಾಗೂ ಸಿನಿಮಾ ನಟರ ಜೀವನ ಚರಿತ್ರೆ ಆಧಾರಿತ ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ಹಣದ ಮಳೆ ಸುರಿಸುತ್ತಿವೆ. ಎಂ.ಎಸ್. ಧೋನಿ ಬಯೋಪಿಕ್ 'ಎಂ.ಎಸ್. ಧೋನಿ-ದಿ ಅನ್‌ಟೋಲ್ಡ್ ಸ್ಟೋರಿ' ಮತ್ತು ಅಥ್ಲೀಟ್ ಮಿಲ್ಕಾ ಸಿಂಗ್ ಅವರ ಜೀವನಾಧಾರಿತ 'ಭಾಗ್ ಮಿಲ್ಕಾ ಭಾಗ್' ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್‌ ಮಾಡಿತು. 

ಇತ್ತೀಚೆಗಷ್ಟೇ ಮತ್ತೊಬ್ಬ ಕ್ರೀಡಾಪಟುವಿನ ಜೀವನ ಚರಿತ್ರೆ ಬೆಳ್ಳಿತೆರೆ ಮೇಲೆ ಅನಾವರಣಗೊಳ್ಳಲಿದೆ. ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ ಅವರ ಜೀವನಚರಿತ್ರೆಯನ್ನು ಸಿನಿಮಾ ಮಾಡಲು ತಯಾರಿ ನಡೆಸುತ್ತಿದ್ದಾರೆ. ಬಾಲಿವುಡ್ ನಟ ಆಯುಷ್ಮಾನ್ ಖುರಾನಾ ಇದರಲ್ಲಿ ನಟಿಸಲಿದ್ದಾರೆ ಎನ್ನಲಾಗಿದೆ. ಈ ಚಿತ್ರವನ್ನು ಐಶ್ವರ್ಯಾ ರಜನಿಕಾಂತ್ ನಿರ್ದೇಶಿಸಲಿದ್ದಾರೆ. ಡಿಸೆಂಬರ್‌ನಲ್ಲಿ ಈ ಸಿನಿಮಾ ಸೆಟ್‌ ಏರಲಿದೆ. ಗಂಗೂಲಿ ಪಾತ್ರವನ್ನು ರಣಬೀರ್ ಕಪೂರ್ ನಿರ್ವಹಿಸಲಿದ್ದಾರೆ ಎಂಬ ವರದಿಗಳು ಈ ಹಿಂದೆ ಹರಿದಾಡಿದ್ದವು.

ಇದನ್ನೂ ಓದಿ: ‘ಜವಾನ್’ ಟ್ರೈಲರ್ ಬಿಡುಗಡೆ; ಸೋಶಿಯಲ್ ಮೀಡಿಯಾ ಜಗತ್ತಿಗೆ ಕಾಲಿಟ್ಟ ನಯನತಾರಾ!

ಈ ಚಿತ್ರಕ್ಕಾಗಿ ಆಯುಷ್ಮಾನ್ ಖುರಾನಾ ಎರಡು ತಿಂಗಳ ಕಾಲ ಕ್ರಿಕೆಟ್ ಕೋಚಿಂಗ್ ತೆಗೆದುಕೊಳ್ಳಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಎಡಗೈ ಬ್ಯಾಟ್ಸ್‌ಮನ್ ಆಗಿರುವ ಗಂಗೂಲಿ ಮಾದರಿಯ ಕ್ರಿಕೆಟ್ ಆಡಲು ಆಯುಷ್ಮಾನ್ ಖುರಾನಾ ಅವರು ಅಭ್ಯಾಸ ಮಾಡುತ್ತಿದ್ದಾರೆ ಎಂದು ಹೇಳಲಾಗ್ತಿದೆ. ಈ ಚಿತ್ರಕ್ಕೆ ಮೂವಿಟೀಮ್ ದಾದಾ ಅನುಮತಿ ಪಡೆದಿದ್ದಾರೆ ಎಂದು ವರದಿಯಾಗಿದೆ. ಈ ಚಿತ್ರವನ್ನು ಲವ್ ರಂಜನ್ ಮತ್ತು ಅಂಕುರ್ ಗರ್ಗ್ ನಿರ್ಮಿಸಲಿದ್ದಾರೆ.

ಗಂಗೂಲಿ ಭಾರತೀಯ ಕ್ರಿಕೆಟ್‌ನಲ್ಲಿ ಯಶಸ್ವಿ ನಾಯಕ ಎಂದು ಹೆಸರುವಾಸಿಯಾಗಿದ್ದಾರೆ. ಅವರು ನಾಯಕರಾಗಿದ್ದ ಅವಧಿಯಲ್ಲಿ ಅನೇಕ ಕ್ರಾಂತಿಕಾರಿ ಬದಲಾವಣೆಗಳನ್ನು ತಂದರು. ಅವರ ನಾಯಕತ್ವದ ಜೊತೆಗೆ, ಅವರು ತಮ್ಮ ಆಟದಿಂದ ಅಭಿಮಾನಿಗಳಲ್ಲಿ ಅಳಿಸಲಾಗದ ಛಾಪು ಮೂಡಿಸಿದರು. ಅವರ ನಾಯಕತ್ವದಲ್ಲಿ ಟೀಂ ಇಂಡಿಯಾ 2003ರ ಏಕದಿನ ವಿಶ್ವಕಪ್‌ನಲ್ಲಿ ಫೈನಲ್ ತಲುಪಿತ್ತು. ದಾದಾ ತಮ್ಮ ODI ವೃತ್ತಿಜೀವನದಲ್ಲಿ 11363 ರನ್ ಗಳಿಸಿದ್ದಾರೆ. ಭಾರತ ಸರ್ಕಾರವು ಗಂಗೂಲಿ ಅವರಿಗೆ 2004 ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿತು. ಅವರು 2019 ರಲ್ಲಿ ಬಿಸಿಸಿಐ ಅಧ್ಯಕ್ಷರಾಗಿ ಆಯ್ಕೆಯಾದರು. ಅವರು ಭಾರತೀಯ ಶಾಸ್ತ್ರೀಯ ನೃತ್ಯಗಾರ್ತಿ ಡೊನ್ನಾ ಗಂಗೂಲಿ ಅವರನ್ನು ವಿವಾಹವಾದರು. ಇಬ್ಬರಿಗೂ ಸನಾ ಎಂಬ ಮಗಳಿದ್ದಾಳೆ.

ಇದನ್ನೂ ಓದಿ: Sudeep Birthday : ಪ್ರಿಯಾ ಕೊಟ್ಟ ಬಿಗ್‌ ಸರ್‌ಪ್ರೈಸ್‌ಗೆ ಭಾವುಕರಾದ ಸುದೀಪ್‌ 

ಆಯುಷ್ಮಾನ್ ಖುರಾನಾ ಪ್ರಸ್ತುತ ಡ್ರೀಮ್ ಗರ್ಲ್ 2 ರ ಯಶಸ್ಸನ್ನು ಆನಂದಿಸುತ್ತಿದ್ದಾರೆ. ಇದರಲ್ಲಿ ಅವರ ಪೂಜಾ ಪಾತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ರಾಜ್ ಸ್ಯಾಂಡಿಲ್ಯ ನಿರ್ದೇಶನದ ಈ ಚಿತ್ರದಲ್ಲಿ ಅನನ್ಯ ಪಾಂಡೆ, ಅನು ಕಪೂರ್, ರಾಜಪಾಲ್ ಯಾದವ್, ವಿಜಯ್ ರಾಜ್, ಪರೇಶ್ ರಾವಲ್ ಮತ್ತು ಅಭಿಷೇಕ್ ಬ್ಯಾನರ್ಜಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News