Bhagyalakshmi Serial: ಅಪ್ಪನನ್ನು ನೆನೆದು ಮತ್ತೆ ಪ್ರಜ್ಞೆ ತಪ್ಪಿದ ತನ್ವಿ: ಭಾಗ್ಯಗೆ ಏನಂದ್ರು ಡಾಕ್ಟರ್..!

Bhagyalakshmi Kannada Serial: ಪ್ರಸ್ತುತ ಭಾಗ್ಯಲಕ್ಷ್ಮಿ ಧಾರವಾಹಿಯಲ್ಲಿ ಕಾವ್ಯ ಎಷ್ಟೇ ಪ್ರಯತ್ನಿಸಿದರೂ ತಾಂಡವ್‌-ಶ್ರೇಷ್ಠ ಎಂಗೇಜ್‌ಮೆಂಟ್‌ ನಡೆದೆ ಹೋದರೇ, ಇತ್ತ ತನವಿ ಅಪ್ಪನನ್ನು ನೆನೆದು ಮತ್ತೆ ಪ್ರಜ್ಞೆ ತಪ್ಪುತ್ತಾಳೆ. ಇಷ್ಟೆಲ್ಲಾ ಆದ ಮೇಲೂ ತಾಂಡವ್‌ ಮಗಳ ಆಘಾತದ ವಿಚಾರ್‌ ತಿಳಿಯುತ್ತಾ? ಇಲ್ಲಿದೆ ಕಂಪ್ಲೀಟ್‌ ಸ್ಟೋರಿ.  

Written by - Zee Kannada News Desk | Last Updated : Jan 13, 2024, 10:27 AM IST
  • ಶ್ರೇಷ್ಠ ತಂದೆ ಶ್ರೀವರ ಆರೋಗ್ಯದ ದೃಷ್ಟಿಯಿಂದ ಏನೂ ಹೇಳದೆ ಸುಮ್ಮನಾಗುವ ಕಾವ್ಯಾ, ತಾಂಡವ್‌ ರೂಮ್‌ನಲ್ಲಿ ಬಿಟ್ಟು ಬಂದಿದ್ದ ಫೋನನ್ನು ಅವನಿಗೆ ಕೊಡುತ್ತಾಳೆ
  • ಬಳಿಕ ತಾಂಡವ್‌, ಮಹೇಶ್‌, ಸುಂದರಿ ಮೂವರನ್ನೂ ಕೂರಿಸಿ ಶ್ರೀವರ ಹಾಗೂ ಯಶೋಧಾ ಗಿಫ್ಟ್‌ ನೀಡುತ್ತಾರೆ.
  • ತನ್ವಿಯನ್ನು ಪರೀಕ್ಷಿಸುವ ಡಾಕ್ಟರ್‌, ಆಕೆಗೆ ದೇಹದ ಮೇಲೆ ಆಗಿರುವ ಗಾಯಕ್ಕಿಂತ ಮನಸ್ಸಿಗೆ ಆಗಿರುವ ಆಘಾತದಿಂದ ಹೀಗೆ ವರ್ತಿಸುತ್ತಿದ್ಧಾಳೆ.
Bhagyalakshmi Serial: ಅಪ್ಪನನ್ನು ನೆನೆದು ಮತ್ತೆ ಪ್ರಜ್ಞೆ ತಪ್ಪಿದ ತನ್ವಿ: ಭಾಗ್ಯಗೆ ಏನಂದ್ರು ಡಾಕ್ಟರ್..! title=

Tanvi Fainted Again In Hospital: ಕಾವ್ಯ ಎಷ್ಟೇ ಪ್ರಯತ್ನ ಪಟ್ಟರೂ ಕೊನೆಗೂ ತಾಂಡವ್‌-ಶ್ರೇಷ್ಠಾ ಎಂಗೇಜ್‌ಮೆಂಟ್‌ ನಡೆದೇಹೋಯ್ತು. ಕಾವ್ಯಾ ಏನೇ ಮಾಡಿದರೂ ಗೆಳತಿಯ ನಿಶ್ಚಿತಾರ್ಥ ನಿಲ್ಲಿಸಲು ಸಾಧ್ಯವಾಗಲಿಲ್ಲ. ಶ್ರೇಷ್ಠ ತಂದೆ ಶ್ರೀವರ ಆರೋಗ್ಯದ ದೃಷ್ಟಿಯಿಂದ ಏನೂ ಹೇಳದೆ ಸುಮ್ಮನಾಗುವ ಕಾವ್ಯಾ, ತಾಂಡವ್‌ ರೂಮ್‌ನಲ್ಲಿ ಬಿಟ್ಟು ಬಂದಿದ್ದ ಫೋನನ್ನು ಅವನಿಗೆ ಕೊಡುತ್ತಾಳೆ. ಕಾವ್ಯಾ, ತಾಂಡವ್‌ ಬಳಿ ಏನೂ ಹೇಳಬಾರದು ಎಂಬ ಕಾರಣಕ್ಕೆ ಮಹೇಶ ಹಾಗೂ ಸುಂದರಿ ಪ್ರತಿ ಬಾರಿಯೂ ಅಡ್ಡಿಯಾಗುತ್ತಿರುತ್ತಾರೆ. ಹುಡುಗಿ ಮನೆ ಕಡೆಯಿಂದ ಹುಡುಗನ ಮನೆಯವರಿಗೆ ಗಿಫ್ಟ್‌ ನೀಡುವ ಸಂಪ್ರದಾಯ ಇದೆ ಎಂದು ತಿಳಿದ ನಂತರ ಮಹೇಶ ಹಾಗೂ ಸುಂದರಿ ಬಹಳ ಎಕ್ಸೈಟ್‌ ಆಗುತ್ತಾರೆ. 

ಬಳಿಕ ತಾಂಡವ್‌, ಮಹೇಶ್‌, ಸುಂದರಿ ಮೂವರನ್ನೂ ಕೂರಿಸಿ ಶ್ರೀವರ ಹಾಗೂ ಯಶೋಧಾ ಗಿಫ್ಟ್‌ ನೀಡುತ್ತಾರೆ. ಅದು ಕೈಗೆ ಸಿಗುತ್ತಿದ್ದಂತೆ ಇಬ್ಬರೂ ಯಾವತ್ತಿಗೂ ಯಾವ ಗಿಫ್ಟ್‌ ಕಂಡೇ ಇಲ್ಲದವರಂತೆ  ಬಾಕ್ಸ್‌ ಓಪನ್‌ ಮಾಡಿ ನೋಡುತ್ತಾರೆ. ಅಲ್ಲಿರುವ ಗಿಫ್ಟ್‌ಗಳನ್ನು ನೋಡಿ ಎಕ್ಸೈಟ್‌ ಆಗುತ್ತಾರೆ. ಇವರಿಬ್ಬರ ವರ್ತನೆ ನೋಡಿ ಶ್ರೇಷ್ಠಾ ಮನೆಯವರು ಮುಜುಗರಕ್ಕೆ ಒಳಗಾಗುತ್ತಾರೆ. ಇನ್ನು ತಾಂಡವ್‌ ಇಲ್ಲೇ ಇದ್ದರೆ ಇವರು ನನ್ನ ಮರ್ಯಾದೆ ಕಳೆಯುತ್ತಾರೆ ಎಂದು ಅಂದುಕೊಂಡು, ನನಗೆ ನಾಳೆ ಆಫೀಸ್‌ನಲ್ಲಿ ಕೆಲಸ ಇದೆ ಎಂದು ಹೇಳಿ ಅಲ್ಲಿಂದ ಹೊರಡುತ್ತಾನೆ.

ಇದನ್ನೂ ಓದಿ: Bhagyalakshmi Serial: ಒಲ್ಲದ ಮನಸ್ಸಿನಲ್ಲೇ ಶ್ರೇಷ್ಠಗೆ ಉಂಗುರ ತೊಡೆಸಿದ ತಾಂಡವ್: ಅಣ್ಣ ಬದಲಾಗಿದ್ದಾನೆಂದ ವೈಷ್ಣವ್!

ಇತ್ತ ಆಸ್ಪತ್ರೆಯಲ್ಲಿ ತನ್ವಿಗೆ ಪ್ರಜ್ಞೆ ಬರುವುದಕ್ಕಾಗಿಯೇ ಭಾಗ್ಯಾ, ಕುಸುಮಾ ಹಾಗೂ ಮನೆಯವರು  ಕಾಯುತ್ತಿದ್ದಾರೆ. ಆಗ ತನ್ವಿ ಎಚ್ಚರ ಆಗುತ್ತಿದ್ದಂತೆ ನಾನು ಎಲ್ಲಿದ್ದೇನೆ? ನನಗೆ ಏನಾಗಿದೆ? ಎಂದು ನೂರಾರು ಪ್ರಶ್ನೆ ಕೇಳುತ್ತಿದ್ದಾಗ, ತನಗೆ ಆಕ್ಸಿಡೆಂಟ್‌ ಆಗಿರುವುದು ಗೊತ್ತಾಗಿ ತನ್ವಿ ಗಾಬರಿ ಆಗುತ್ತಾಳೆ. ಆ ದಿನ ಅಪ್ಪನ ಬಳಿ ಹೋದಾಗ ಏನೆಲ್ಲಾ ಆಯ್ತು ಹೇಳು ಎಂದು ಕುಸುಮಾ, ಮೊಮ್ಮಗಳನ್ನು ಕೇಳಿದಾಗ, ಆ ವೇಳೆ ತನ್ವಿ ಎಲ್ಲವನ್ನೂ ನೆನಪಿಸಿಕೊಳ್ಳುತ್ತಾಳೆ. ತಾಂಡವ್‌ ಬಳಿ ಹೋಗಿ ದುಡ್ಡು ಕೇಳಿದ್ದು, ಶ್ರೇಷ್ಠಾ ಜೊತೆಯಲ್ಲಿ ಇದ್ದದ್ದು, ತಾನು ಅಳುತ್ತಾ ರಸ್ತೆಯಲ್ಲಿ ಬರುತ್ತಿದ್ದ ದೃಶ್ಯ ತನ್ವಿ ಕಣ್ಣ ಮುಂದೆ ಬರುತ್ತದೆ.ಆ ದಿನ ನಡೆದ ಘಟನೆಯನ್ನು ನೆನಪಿಸಿಕೊಂಡು ತನ್ವಿ ಅಪ್ಪನನ್ನು ಕನವರಿಸುತ್ತಲೇ ಮತ್ತೆ ಪ್ರಜ್ಞೆ ತಪ್ಪುತ್ತಾಳೆ. ಭಾಗ್ಯ ತನ್ವಿ ಪರಿಸ್ಥಿತಿ ನೋಡಿ ಗಾಬರಿ ಆಗುತ್ತಾಳೆ. 

ಆ ಸಂದರ್ಭದಲ್ಲಿ ತನ್ವಿಯನ್ನು ಪರೀಕ್ಷಿಸುವ ಡಾಕ್ಟರ್‌, ಆಕೆಗೆ ದೇಹದ ಮೇಲೆ ಆಗಿರುವ ಗಾಯಕ್ಕಿಂತ ಮನಸ್ಸಿಗೆ ಆಗಿರುವ ಆಘಾತದಿಂದ ಹೀಗೆ ವರ್ತಿಸುತ್ತಿದ್ಧಾಳೆ. ಅವಳನ್ನು ಅವಳ ಪಾಡಿಗೆ ಬಿಡಿ ಎನ್ನುತ್ತಾರೆ. ಮೊಮ್ಮಗಳ ಪರಿಸ್ಥಿತಿ ನೋಡುವ ಸುನಂದಾ, ಮತ್ತೆ ಅಳಿಯ ಹಾದಿ ತಪ್ಪಿದ್ದಾನೆ ಎಂದು ಕೋಪಗೊಳ್ಳುತ್ತಾಳೆ. ಇಷ್ಟೆಲ್ಲಾ ಆದರೂ ಕುಸುಮಾಗೆ ಮಾತ್ರ ಮಗನ ಬಗ್ಗೆ ಇನ್ನೂ ನಂಬಿಕೆಯಿದ್ದು, ಆದರೆ ಸ್ಕೂಲ್‌ನಲ್ಲಿ ಗಲಾಟೆ ಆದಾಗ ತಾಂಡವ್‌, ಗುಂಡಣ್ಣನ್ನು ಕೂಡಾ ನೋಡಲು ಬಾರದ ವಿಚಾರ ತಿಳಿದ ಕುಸುಮಾ ಕೋಪಗೊಳ್ಳುತ್ತಾಳೆ. ಇಷ್ಟೆಲ್ಲಾ ನಡೆದಿದೆ ಎಂದರೆ ಇನ್ಮುಂದೆ ನಾನು ಆತನನ್ನು ನಂಬುವುದಿಲ್ಲ ಎನ್ನುತ್ತಾಳೆ. ಮಗಳಿಗೆ ಅಪಘಾತ ಆಗಿರುವ ವಿಚಾರ ತಾಂಡವ್‌ಗೆ ತಿಳಿಯುವುದಾ?  ಅನ್ನೋದನ್ನ ಶೀಘ್ರದಲ್ಲೇ ತಿಳಿಯಲಿದೆ.
 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News