Timmayya and Timmayya Review: ತಾತ-ಮೊಮ್ಮಗನ ಪಾತ್ರದಲ್ಲಿ ದಿಗಂತ್ ಆಂಡ್ ಅನಂತ್ ನಾಗ್ ಫುಲ್ ಮಿಂಚಿಂಗ್..

Timmayya and Timmayya Review: ಹಿರಿಯ ತಿಮ್ಮಯ್ಯ ಪಾತ್ರದಲ್ಲಿ ಅನಂತ್ ನಾಗ್ ನಟಿಸಿದ್ದರೆ, ವಿನ್ಸಿ ತಿಮ್ಮಯ್ಯನಾಗಿ ದಿಗಂತ್ ನಟಿಸಿದ್ದಾರೆ ಮತ್ತು  ಜ್ಯೋತ್ಸನಾ ಪಾತ್ರದಲ್ಲಿ ಐಂದ್ರಿತಾ ನಟಿಸಿದ್ದಾರೆ. ಶುಭ್ರ ಅಯ್ಯಪ್ಪ ಅವರು ವಿನ್ಸಿಯ ಹುಡುಗಿ ಸೌಮ್ಯ ಪಾತ್ರದಲ್ಲಿ ನಟಿಸಿದ್ದಾರೆ. 

Written by - YASHODHA POOJARI | Edited by - Yashaswini V | Last Updated : Dec 2, 2022, 12:30 PM IST
  • ಅನಂತ್ ನಾಗ್ ಮತ್ತು ದಿಗಂತ್ ಅವರ ಕಾಂಬಿನೇಷನ್ ತಿಮ್ಮಯ್ಯ & ತಿಮ್ಮಯ್ಯ ಸಿನಿಮಾದಲ್ಲಿ ಬಹುದೊಡ್ಡ ಆಕರ್ಷಣೆಯಾಗಿದೆ.
  • ಈಗಿನ ಜನರೇಷನ್ ತಿಳಿದುಕೊಳ್ಳಲೇಬೇಕಾದ ಸಂಬಂಧಗಳ ಬಗ್ಗೆ ಒಳ್ಳೆಯ ಸಂದೇಶವಿದೆ.
  • ಇಲ್ಲಿ ಮುಖ್ಯವಾಗಿ ಸಾಕಷ್ಟು ಹಾಸ್ಯ ಮತ್ತು ಬಲವಾದ ಭಾವನೆಗಳಿವೆ
Timmayya and Timmayya Review: ತಾತ-ಮೊಮ್ಮಗನ ಪಾತ್ರದಲ್ಲಿ ದಿಗಂತ್ ಆಂಡ್ ಅನಂತ್ ನಾಗ್ ಫುಲ್ ಮಿಂಚಿಂಗ್.. title=
Timmayya and Timmayya film Review

Timmayya and Timmayya Review: ಕನ್ನಡದಲ್ಲಿ ಸಾಲು ಸಾಲು ಒಳ್ಳೊಳ್ಳೆ ಸಿನಿಮಾಗಳು ರಿಲೀಸ್ ಆಗಿ ಸಿಕ್ಕಾಪಟ್ಟೆ ಸುದ್ದಿಯಾಗುತ್ತಿದೆ. ಇದೀಗ ಈ ವಾರ ರಿಲೀಸ್ ಆಗಿರೋ "ತಿಮ್ಮಯ್ಯ ಆಂಡ್ ತಿಮ್ಮಯ್ಯ" ಸಿನಿಮಾ ಜನಮನ ಗೆದ್ದಿದೆ. ನಮ್ಮ ನಿಮ್ಮೆಲ್ಲರ ಭಾವನೆಗಳಿಗೆ ಈ ಸಿನಿಮಾ ತುಂಬಾ ಹತ್ತಿರವೆನಿಸುತ್ತೆ. ತಾತಮೊಮ್ಮಗನ ಪಾತ್ರದಲ್ಲಿ ಅನಂತ್ ನಾಗ್ ಮತ್ತು ದಿಗಂತ್ ಕಮಲ್ ಮಾಡಿದ್ದಾರೆ. 

ಹಿರಿಯ ತಿಮ್ಮಯ್ಯ ಪಾತ್ರದಲ್ಲಿ ಅನಂತ್ ನಾಗ್ ನಟಿಸಿದ್ದರೆ, ವಿನ್ಸಿ ತಿಮ್ಮಯ್ಯನಾಗಿ ದಿಗಂತ್ ನಟಿಸಿದ್ದಾರೆ ಮತ್ತು  ಜ್ಯೋತ್ಸನಾ ಪಾತ್ರದಲ್ಲಿ ಐಂದ್ರಿತಾ ನಟಿಸಿದ್ದಾರೆ. ಶುಭ್ರ ಅಯ್ಯಪ್ಪ ಅವರು ವಿನ್ಸಿಯ ಹುಡುಗಿ ಸೌಮ್ಯ ಪಾತ್ರದಲ್ಲಿ ನಟಿಸಿದ್ದಾರೆ. ವಿನ್ಸಿ ತನ್ನ ಪೂರ್ವಜರ ಆಸ್ತಿಯನ್ನು ಮಾರಾಟ ಮಾಡಲು ಬಯಸುತ್ತಾನೆ.  ಆಗ ಸಿನಿಮಾದಲ್ಲಿ ಒಂದೊಂದೆ ಟ್ವಿಸ್ಟ್ ಆಂಡ್ ಟರ್ನ್ ಶುರುವಾಗುತ್ತೆ. ವಿನ್ಸಿ ತನ್ನ ಅಜ್ಜನನ್ನು ಮೊದಲ ಬಾರಿಗೆ ಭೇಟಿಯಾಗುತ್ತಾನೆ. ಆಮೇಲೆ  ಇಬ್ಬರ ಪ್ರಯಾಣದಲ್ಲಿ ನಗು, ಅಳು, ಕೋಪ, ಜಗಳ, ಸಂಬಂಧಗಳ ಮಹತ್ವ ಎಲ್ಲವೂ ನಿಮ್ಮನ್ನ ಬೇರೆಯದ್ದೇ ಲೋಕಕ್ಕೆ ಕರ್ಕೊಂಡ್ ಹೋಗುತ್ತೆ. 

ಇದನ್ನೂ ಓದಿ- ಯುವರಾಜ್ ಕುಮಾರ್'ಗೆ ಹೀರೋಯಿನ್ ಆಗಲಿದ್ದಾರೆಯೇ ರಿಯಲ್ ಸ್ಟಾರ್ ಪುತ್ರಿ ಐಶ್ವರ್ಯ...?

ಇಲ್ಲಿ ಮುಖ್ಯವಾಗಿ ಸಾಕಷ್ಟು ಹಾಸ್ಯ ಮತ್ತು ಬಲವಾದ ಭಾವನೆಗಳಿವೆ.  ಈಗಿನ ಜನರೇಷನ್ ತಿಳಿದುಕೊಳ್ಳಲೇಬೇಕಾದ ಸಂಬಂಧಗಳ ಬಗ್ಗೆ ಒಳ್ಳೆಯ ಸಂದೇಶವಿದೆ. ಮುಖ್ಯವಾಗಿ ಅನಂತ್ ನಾಗ್ ಮತ್ತು ದಿಗಂತ್ ಅವರ ಕಾಂಬಿನೇಷನ್ ತಿಮ್ಮಯ್ಯ & ತಿಮ್ಮಯ್ಯ ಸಿನಿಮಾದಲ್ಲಿ ಬಹುದೊಡ್ಡ ಆಕರ್ಷಣೆಯಾಗಿದೆ. ಚಿತ್ರದಲ್ಲಿನ ಒಂದು ಬೈಕ್ ಕೂಡ ಹಳೆಯ ಕಥೆಯೊಂದನ್ನು ಹೊಂದಿದೆ. 

ಇದನ್ನೂ ಓದಿ- ಇನ್ಮುಂದೆ ನಿರ್ದೇಶಕರ ದಿನವಾಗಿ ಪುಟ್ಟಣ್ಣ ಕಣಗಾಲ್ ಜಯಂತಿ ಆಚರಣೆ

ಬಾಲಕೃಷ್ಣ ತೋಟ ಅವರ ಛಾಯಾಗ್ರಹಣ ಮತ್ತು ಅನೂಪ್ ಸೀಳಿನ್ ಅವರ ಸಂಗೀತದೊಂದಿಗೆ, ರಾಜೇಶ್ ಶರ್ಮಾ ಅವರು ತಿಮ್ಮಯ್ಯ & ತಿಮ್ಮಯ್ಯ ಸಿನಿಮಾವನ್ನು ನಿರ್ಮಿಸಿದ್ದಾರೆ. ಸೋ ಈ ಕೂಡಲೇ ಸಿನಿಮಾನೇ ಥೀಯೇಟರ್ ಗೆ ಹೋಗಿ ನೋಡಿ ಎಂಜಾಯ್ ಮಾಡಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News