Bollywood : ಬಾಲಿವುಡ್‌ನಲ್ಲಿ 'ನೋ ಎಂಟ್ರಿ', 'ಅಪ್ನಾ ಸಪ್ನಾ ಮನಿ ಮನಿ' ಮತ್ತು ಕನ್ನಡದ 'ಶ್ರೀಮತಿ' ಸಿನಿಮಾ ಸೇರಿದಂತೆ ಒಂದಷ್ಟು ಸಿನಿಮಾಗಳಲ್ಲಿ ನಟಿಸಿದ ಸೆಲೀನಾ ಮದುವೆ ನಂತರ ಸಿನಿಮಾಗಳಿಂದ ದೂರ ಉಳಿದಿದ್ದಾರೆ. ಪೀಟರ್ ಹ್ಯಾಗ್ ಎಂಬ ಉದ್ಯಮಿಯನ್ನು ಮದುವೆಯಾದ ಸೆಲೀನಾ ಜೇಟ್ಲಿ ವಿದೇಶದಲ್ಲಿ ಸೆಟ್ಲ್ ಆಗಿದ್ದಾರೆ.
ಇನ್ನು ಇತ್ತೀಚೆಗೆ ನಟಿ ಸೋಷಿಯಲ್ ಮಿಡಿಯಾದಲ್ಲಿ ಅಭಿಮಾನಿಗಳ ಜೊತೆ ಚಾಟ್ ನಡೆಸಿದ್ದರು. ಈ ಅವರ ಅಭಿಮಾನಿಯೊಬ್ಬರು ಕುತೂಹಲಕಾರಿ ಪ್ರಶ್ನೆ ಕೇಳಿದ್ದಾರೆ. ಅದಕ್ಕೆ ಉತ್ತರ ನೀಡುತ್ತಲೇ ನಟಿ ತಮಗಿರುವ ಅಪರೂಪದ ಸಮಸ್ಯೆ ಬಗ್ಗೆ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ-ಸಮುದ್ರದಲ್ಲಿ ಮಿಂದೆದ್ದ ಕಣ್ಸನ್ನೆ ಬೆಡಗಿ ಪ್ರಿಯಾ..! ಹಾಟ್ ಫೋಟೋಸ್ ವೈರಲ್
ಸೆಲೀನಾ ಹಾಗೂ ಪೀಟರ್ ದಂಪತಿಗೆ 2012ರಲ್ಲಿ ಅವಳಿ ಮಕ್ಕಳು ಜನಿಸಿದ್ದರು. 2017ರಲ್ಲಿ ಮತ್ತೊಮ್ಮೆ ಸೆಲೀನಾ ಗರ್ಭ ಧರಿಸಿದ್ದರು. ಆಗಲೂ ಅವರಿಗೆ ಅವಳಿ ಮಕ್ಕಳೇ ಜನಿಸಿದ್ದರು. ಹೀಗೆ ಪ್ರತಿಬಾರಿ ಅವಳಿಮಕ್ಕಳು ಜನಿಸುವುದು ನಿಜಕ್ಕೂ ವಿರಳ. ಸದ್ಯದ ಜೀವನ ಶೈಲಿಯಿಂದ ಎಷ್ಟೋ ಜನ ಮಕ್ಕಳಿಲ್ಲದೇ ಸಂಕಷ್ಟದಲ್ಲಿದ್ದಾರೆ. ಹೀಗಿರುವಾಗ ಇವರಿಗೆ 2 ಬಾರಿಯೂ ಅವಳಿ ಮಕ್ಕಳು ಜನಿಸಿರುವುದು ಆಶ್ಚರ್ಯ ಎನ್ನಿಸುವಂತಿದೆ.
ಹೀಗೆ ಅವರಿಗೆ ಚಾಟ್‌ನಲ್ಲಿ ಅವರ ಅಭಿಮಾನಿಯೊಬ್ಬರು "ನಿಮಗೆ ಸ್ವಾಭಾವಿಕವಾಗಿಯೇ ಅವಳಿ ಮಕ್ಕಳು ಜನಿಸಿದ್ದಾ..? ಇಲ್ಲ ಯಾವುದಾದರೂ ಚಿಕಿತ್ಸೆ ಪಡೆಕೊಂಡಿದ್ದೀರಾ..? ಎಂದು ಪ್ರಶ್ನಿಸಿದ್ದಾರೆ. ಈ ಪ್ರಶ್ನೆ ಕೇಳಲು ಕಾರಣ ಅವರಿಗೆ 2 ಬಾರಿಯೂ ಅವಳಿ ಮಕ್ಕಳು ಜನಿಸಿದ್ದು ಎಂದಿದ್ದಾರೆ. ಇದಕ್ಕೆ ನಟಿ ಉತ್ತರಿಸುತ್ತಾ.."ನನಗೆ ರೇರ್ ಜೆನಿಟಿಕ್ ಡಿಸಾರ್ಡರ್ ಸಮಸ್ಯೆ ಇದೆ, ಇದರಿಂದ ಗರ್ಭವತಿಯಾದ ಪ್ರತಿ ಬಾರಿ ನನಗೆ ಟ್ವೀನ್ಸ್ ಮಕ್ಕಳು ಜನಿಸಿದ್ದಾರೆ.
ಇನ್ನು ಅವರ ಈ ಮಾತುಗಳನ್ನು ಕೇಳಿ ನೆಟ್ಟಿಗರು ಕಾಮೆಂಟ್‌ಗಳ ಸುರಿಮಳೆಯನ್ನೇ ಸುರಿಸಿದ್ದಾರೆ. "ಇದೇನು ಶಾಪವಲ್ಲ, ದೇವರು ನಿಮಗೆ ಕೊಟ್ಟಿರುವ ವರ" ಎಂದೆಲ್ಲಾ ಕಾಮೆಂಟ್ ಮಾಡುತ್ತಿದ್ದಾರೆ.
ಇದನ್ನೂ ಓದಿ-ದೃಶ್ಯಕ್ಕಾಗಿ ಆಮಿರ್ ಖಾನ್ ಜೊತೆ 47 ಬಾರಿ ಲಿಪ್ ಕಿಸ್ ಮಾಡಿದ್ದ ಕರಿಷ್ಮಾ ಕಪೂರ್..ಏನದು ಸನ್ನಿವೇಶ?
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.