VIDEO: ಬಿಡುಗಡೆಯಾಗಿದೆ 'ಸ್ಟ್ರೀಟ್ ಡ್ಯಾನ್ಸರ್ 3ಡಿ' ಚಿತ್ರದ ನಾಲ್ಕನೇ ಹಾಡು

'ಸ್ಟ್ರೀಟ್ ಡ್ಯಾನ್ಸರ್ 3ಡಿ' ಚಿತ್ರದ 'ದುವಾ ಕರೋ' ಹಾಡಿನ ವಿಡಿಯೋ ಇದೀಗ ಬಿಡುಗಡೆಗೊಂಡಿದೆ. ಈ ಹಾಡಿನಲ್ಲಿ ಖ್ಯಾತ ನಟ ವರುಣ್ ಧವನ್ ಅವರ ಮೇಲೆಯೇ ಹೆಚ್ಚಿನ ಫೋಕಸ್ ನೀಡಲಾಗಿದೆ.

Last Updated : Jan 9, 2020, 07:36 PM IST
VIDEO: ಬಿಡುಗಡೆಯಾಗಿದೆ 'ಸ್ಟ್ರೀಟ್ ಡ್ಯಾನ್ಸರ್ 3ಡಿ' ಚಿತ್ರದ ನಾಲ್ಕನೇ ಹಾಡು title=

ನವದೆಹಲಿ: ಬಾಲಿವುಡ್ ಖ್ಯಾತ ನಟ ವರುಣ್ ಧವನ್, ಶೃದ್ಧಾ ಕಪೂರ್ ಹಾಗೂ ನೋರಾ ಫತೇಹಿ ಅಭಿನಯದ ಚಿತ್ರ 'ಸ್ಟ್ರೀಟ್ ಡ್ಯಾನ್ಸರ್ 3ಡಿ' ಬಿಡುಗಡೆಗೆ ಸಿದ್ಧಗೊಂಡಿದೆ. ಈಗಾಗಲೇ ಈ ಚಿತ್ರದ ಜಬರ್ದಸ್ತ್ ಟ್ರೈಲರ್ ಹಾಗೂ ಎರಡು ಹಾಡುಗಳು ಬಿಡುಗಡೆಗೊಂಡಿದ್ದು, ಅವುಗಳಿಗೆ ಅಭಿಮಾನಿಗಳಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಸದ್ಯ ಈ ಚಿತ್ರದ ನಾಲ್ಕನೇ  ಹಾಗೂ ಅತ್ಯಂತ ಇಮೋಶನಲ್ ಗೀತೆಯಾಗಿರುವ 'ದುವಾ ಕರೋ' ನ ವಿಡಿಯೋ ಬಿಡುಗಡೆಗೊಂಡಿದೆ.

ಈ ಹಿಂದೆ ಬಿಡುಗಡೆಯಾದ ಎರಡು ಹಾಡುಗಳಲ್ಲಿ ಪ್ರಭುದೇವಾ ಹಾಗೂ ನೋರಾ ಫತೇಹಿ ಅವರುಗಳ ಜಲ್ವಾ ಕಂಡುಬಂದಿತ್ತು . ಆದರೆ, ಮೂರನೇ ಹಾಡಿನಲ್ಲಿ ಇತರ ಎಲ್ಲರನ್ನೂ ಫೇಲ್ ಮಾಡುವಂತೆ ಶೃದ್ಧಾ ಕಪೂರ್ ಡಾನ್ಸ್ ಮಾಡಿರುವುದು ಕಂಡುಬಂದಿತ್ತು. ಹಾಡಿನ ಗೀತ ರಚನೆ ಕೂಡ ತುಂಬಾ ಡಿಫರೆಂಟ್ ಆಗಿದ್ದು, ಹಾಡಿನಲ್ಲಿ ವರುಣ್ ಧವನ್ ಗೆ ಶೃದ್ಧಾ ಪೈಪೋಟಿ ನೀಡುತ್ತಿರುವುದನ್ನು ತೋರಿಸಲಾಗಿತ್ತು. ಸದ್ಯ ಬಿಡುಗಡೆಯಾಗಿರುವ ಈ ಹಾಡಿನಲ್ಲಿ ಕೇವಲ ವರುಣ್ ಧವನ್ ಅವರ ಮೇಲೆ ಫೋಕಸ್ ಮಾಡಿ ಚಿತ್ರೀಕರಿಸಲಾಗಿದೆ. ಇಡೀ ಚಿತ್ರದ ಕಥೆಯನ್ನು ಈ ಹಾಡು ಬಿಂಬಿಸುವಂತೆ ತೋರಿಸಲಾಗಿದೆ. ಈ ಹಾಡಿಗೆ ಅರ್ಜಿತ್ ಸಿಂಗ್, ಬೋಹೆಮಿಯಾ ಹಾಗೂ ಸಚಿನ್-ಜಿಗರ್ ತಮ್ಮ ಧ್ವನಿ ನೀಡಿದ್ದಾರೆ. ಹಾಡಿಗೆ ಸಚಿನ್ ಜಿಗರ್ ಹಾಡಿಗೆ ಸಂಗೀತ ನಿರ್ದೇಶನ ಮಾಡಿದ್ದರೆ, ಪ್ರಿಯಾ ಸರಾಯಿಯಾ ಈ ಹಾಡನ್ನು ಬರೆದಿದ್ದಾರೆ.

'ಸ್ಟ್ರೀಟ್ ಡ್ಯಾನ್ಸರ್ 3ಡಿ' ಚಿತ್ರ ೨೦೧೩ರಲ್ಲಿ ತೆರೆಕಂಡ 'ABCD'  ಚಿತ್ರದ ಮೂರನೇ ಆವೃತ್ತಿಯಾಗಿದೆ. ಈ ಚಿತ್ರದ ಎರಡನೇ ಆವೃತ್ತಿ ೨೦೧೫ರಲ್ಲಿ ಬಿಡುಗಡೆಗೊಂಡಿತ್ತು. 'ಸ್ಟ್ರೀಟ್ ಡ್ಯಾನ್ಸರ್ 3ಡಿ' ಚಿತ್ರಕ್ಕೆ  ಹಿಂದಿನ ಎರಡು ಚಿತ್ರಗಳಿಗೆ ಕೆಲಸ ಮಾಡಿರುವ ಕಲಾವಿದರ ಜೊತೆಗೆ ಇದೀಗ ಖ್ಯಾತ ಡ್ಯಾನ್ಸರ್ ಹಾಗೂ ನಟಿ ನೋರಾ ಫತೇಹಿ ಕೂಡ ಎಂಟ್ರಿ ನೀಡಿದ್ದಾರೆ.

ಟಿ-ಸಿರೀಜ್ ಬ್ಯಾನರ್ ಅಡಿ ಮೂಡಿ ಬರುತ್ತಿರುವ ಈ ಚಿತ್ರದ ನಿರ್ದೇಶನದ ಜವಾಬ್ದಾರಿಯನ್ನು  ಖ್ಯಾತ ಕೊರಿಯೋಗ್ರಾಫರ್ ಹಾಗೂ ನಿರ್ದೇಶಕ ರೆಮೋ ಡಿಸೋಜಾ ಹೊತ್ತುಕೊಂಡಿದ್ದಾರೆ. ಈ ಚಿತ್ರ ಜನವರಿ ೨೪ಕ್ಕೆ ಬೆಳ್ಳಿ ಪರದೆಗೆ ಬರಲಿದೆ.

Trending News