Vikrant Rona Update : ಸುದೀಪ್ ಫ್ಯಾನ್ಸ್ ಗೆ ಸಿಹಿ ಸುದ್ದಿ : 'ವಿಕ್ರಾಂತ್ ರೋಣ' ಟ್ರೈಲರ್ ಡೇಟ್ ಫಿಕ್ಸ್!

ಗಡಂಗ ರಕ್ಕಮ್ಮ ಸಾಂಗ್ ಹಾಗೂ ಟೀಸರ್ ಮುಖಾಂತರ ಅಭಿಮಾನಿಗಳಲ್ಲಿ ಹಾಗೂ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದ್ದ ವಿಕ್ರಾಂತ್ ರೋಣ ತಂಡ ಇದೀಗ ಟ್ರೈಲರ್ ದಿನಾಂಕ ಘೋಷಿಸಿದೆ.ಹೌದು ಇದೇ ಜೂನ್ 23 ರಂದು ವಿಕ್ರಾಂತ್ ರೋಣ ಟ್ರೈಲರ್ ಬಿಡುಗಡೆ ಗೊಳ್ಳುತಿದೆ.

Written by - K Karthik Rao | Last Updated : Jun 17, 2022, 06:04 PM IST
  • ಕಿಚ್ಚ ಈ ಹೆಸರು ಕೇಳಿದ್ರೆ ಸಿನಿ ಪ್ರೇಕ್ಷಕರಲ್ಲಿ ಕಿಕ್ಕೇರುತ್ತೇ
  • ಸದ್ಯ ಸುದೀಪ್ ನಟನೆಯ ವಿಕ್ರಾಂತ್ ರೋಣ ಬಿಡುಗಡೆಗೂ ಮುನ್ನವೇ ಎಲ್ಲೆಡೆ ಸದ್ದು
  • ವಿಕ್ರಾಂತ್ ರೋಣ ತಂಡ ಇದೀಗ ಟ್ರೈಲರ್ ದಿನಾಂಕ ಘೋಷಿಸಿದೆ
Vikrant Rona Update : ಸುದೀಪ್ ಫ್ಯಾನ್ಸ್ ಗೆ ಸಿಹಿ ಸುದ್ದಿ : 'ವಿಕ್ರಾಂತ್ ರೋಣ' ಟ್ರೈಲರ್ ಡೇಟ್ ಫಿಕ್ಸ್! title=

ಬೆಂಗಳೂರು : ಕಿಚ್ಚ ಈ ಹೆಸರು ಕೇಳಿದ್ರೆ ಸಿನಿ ಪ್ರೇಕ್ಷಕರಲ್ಲಿ ಕಿಕ್ಕೇರುತ್ತೇ ಸುದೀಪ್ ನಟನೆ ಅಂದ್ರೇನೆ ಹಾಗೆ. ಸದ್ಯ ಸುದೀಪ್ ನಟನೆಯ ವಿಕ್ರಾಂತ್ ರೋಣ ಬಿಡುಗಡೆಗೂ ಮುನ್ನವೇ ಎಲ್ಲೆಡೆ ಸದ್ದು ಮಾಡುತ್ತಿದೆ. ಈಗ ಆ ಸದ್ದು ಇನ್ನೂ ಹೆಚ್ಚಾಗೊ ಮುನ್ಸೂಚನೆ ಸಿಕ್ಕಿದೆ.!

ಗಡಂಗ ರಕ್ಕಮ್ಮ ಸಾಂಗ್ ಹಾಗೂ ಟೀಸರ್ ಮುಖಾಂತರ ಅಭಿಮಾನಿಗಳಲ್ಲಿ ಹಾಗೂ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದ್ದ ವಿಕ್ರಾಂತ್ ರೋಣ ತಂಡ ಇದೀಗ ಟ್ರೈಲರ್ ದಿನಾಂಕ ಘೋಷಿಸಿದೆ. ಹೌದು ಇದೇ ಜೂನ್ 23 ರಂದು ವಿಕ್ರಾಂತ್ ರೋಣ ಟ್ರೈಲರ್ ಬಿಡುಗಡೆ ಗೊಳ್ಳುತಿದೆ.

ಇದನ್ನೂ ಓದಿ : Sai Pallavi : ನಟಿ ಸಾಯಿ ಪಲ್ಲವಿ ವಿರುದ್ಧ ದಾಖಲಾಯ್ತು ಎಫ್‌ಐಆರ್!

ವರ್ಲ್ದ್ ವೈಡ್ ಬಿಡುಗಡೆ ಗೊಳ್ಳುತ್ತಿರುವ ಈ ಸಿನಿಮಾದಲ್ಲಿ ಸುದೀಪ್ ರವರ ಪಾತ್ರದ ಬಗ್ಗೆ ಇನ್ನೂ ಸ್ಪಷ್ಟತೆ ನೀಡದ ಚಿತ್ರತಂಡ ಟ್ರೈಲರ್ ನಲ್ಲಿ ರೀವೀಲ್ ಮಾಡೋ ಚಾನ್ಸಸ್ ಇದೆ. ಜೊತೆಗೆ ಬೇರೆ ಪಾತ್ರಗಳ ಬಗ್ಗೆಯೂ ಕೂಡ  ಸುಳಿವು ನೀಡ್ಬೇಕಾಗಿದೆ. 

ಕನ್ನಡ ಸಿನಿ ಪ್ರೇಕ್ಷಕರು ಮಾತ್ರವಲ್ಲದೆ ಇಡೀ ಭಾರತೀಯ ಚಿತ್ರರಂಗವೇ ವಿಕ್ರಾಂತ್ ರೋಣ ಗಾಗಿ ಕಾಯ್ತಾಇದೆ. ಸುದೀಪ್ ಮೊದಲೇ ಸ್ನೇಹಜೀವಿ ಹಾಗಾಗಿ ಪರಭಾಷೆ ನಟ ನಟಿಯರು ಕೂಡ ಬೆಂಬಲಕೋರಿದ್ದಾರೆ‍. ಟ್ರೈಲರ್ ಅಲ್ಲಿ ಕಥೆ ಬಗ್ಗೆ ಸುಳಿವು ಕೊಡ್ತಾರ ಅನುಪ್ ಬಂಡಾರಿ ಅನ್ನೋದನ್ನ ಜೂನ್ 23 ರಂದೇ ಕಾದು ನೋಡ್ಬೇಕು.

ಇದನ್ನೂ ಓದಿ : ʼಸೋರುತಿಹುದು ಮನಿಯ ಮಾಳಿಗೆʼ ಎನ್ನುತ್ತಾ ಹವಾ ಸೃಷ್ಟಿಸೋಕೆ ಬಂದ್ರು ALL OK

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News