ರಣವೀರ್ ಸಿಂಗ್ ಬೆಡ್ ಮೇಲೆ ಪತ್ನಿ ದೀಪಿಕಾ ಜೊತೆ ಯಾರು?

ತನ್ನ ಪತ್ನಿ ದೀಪಿಕಾಳ ಈ ಭಾವಚಿತ್ರವನ್ನು ಹಂಚಿಕೊಂಡ ರಣವೀರ್ ಸಿಂಗ್ ಅದಕ್ಕೆ ಸುಂದರ ಅಡಿಬರಹ ಕೂಡ ನೀಡಿದ್ದಾರೆ.

Updated: Feb 18, 2020 , 12:43 PM IST
ರಣವೀರ್ ಸಿಂಗ್ ಬೆಡ್ ಮೇಲೆ ಪತ್ನಿ ದೀಪಿಕಾ ಜೊತೆ ಯಾರು?

ನವದೆಹಲಿ: ಇತ್ತೆಚೆಗಷ್ಟೇ ಖ್ಯಾತ ಬಾಲಿವುಡ್ ನಟ ರಣವೀರ್ ಸಿಂಗ್ ಅವರಿಗೆ ಅವರ 'ಗಲಿ ಬಾಯ್'ದಲ್ಲಿ ಅವರು ಮಾಡಿರುವ ನಟನೆಗಾಗಿ ಫಿಲ್ಮ್ ಫೇರ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಈ ಸುದ್ದಿ ಪ್ರಕಟವಾಗುತ್ತಲೇ ರಣವೀರ್ ಸಿಂಗ್ ಅವರ ಅಭಿಮಾನಿಗಳಲ್ಲಿ ಸಂತಸ ಮನೆಮಾಡಿದೆ. ಅಷ್ಟೇ ಯಾಕೆ ಅವರ ಪತ್ನಿ ಕೂಡ ರಣವೀರ್ ಅವರ ಈ ಸಾಧನೆಗೆ ಭಾರಿ ಖುಷಿ ವ್ಯಕ್ತಪಡಿಸಿದ್ದಾರೆ.

ಹೀಗಂತ ನಾವು ನಿಮಗೆ ಹೇಳುತ್ತಿಲ್ಲ. ಹೌದು, ಈ ಕುರಿತಾಗಿ ರಣವೀರ್ ಸಿಂಗ್ ಅವರೇ ಖುದ್ದು ಫೋಟೋವೊಂದನ್ನು ಹಂಚಿಕೊಂಡು ತಮ್ಮ ಪತ್ನಿ ದೀಪಿಕಾಳ ಖುಷಿಯನ್ನು ತಮ್ಮ ಅಭಿಮಾನಿಗಳಿಗೆ ತಿಳಿಯಪಡಿಸಿದ್ದಾರೆ. ಈ ಭಾವಚಿತ್ರದಲ್ಲಿ ದೀಪಿಕಾ ಫಿಲ್ಮ್ ಫೇರ್ ಪ್ರಶಸ್ತಿಯನ್ನು ಹಿಡಿದುಕೊಂಡು ಬೆಡ್ ಮೇಲೆ ಮಲಗಿರುವುದು ಕಂಡು ಬಂದಿದೆ. ಅಷ್ಟೇ ಅಲ್ಲ ಈ ಫೋಟೋಗೆ ರಣವೀರ್ ಸಿಂಗ್ ಒಂದು ಸ್ವಾರಸ್ಯಕರ ಕ್ಯಾಪ್ಶನ್ ಕೂಡ ನೀಡಿದ್ದಾರೆ.

 
 
 
 

 
 
 
 
 
 
 
 
 

When my Little lady met my Black lady 💕 🧿

A post shared by Ranveer Singh (@ranveersingh) on

ಫೋಟೋವನ್ನು ತನ್ನ ಅಭಿಮಾನಿಗಳ ಜೊತೆಗೆ ಹಂಚಿಕೊಂಡಿರುವ ರಣವೀರ್ ಸಿಂಗ್, 'When my Little lady met my Black lady.' ಎಂಬ ಅಡಿಬರಹ ಬರೆದುಕೊಂಡಿದ್ದಾರೆ. ಫಿಲ್ಮ್ ಫೇರ್ 2020ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಣವೀರ್ ಸಿಂಗ್ ಹಾಗೂ ಅಲಿಯಾ ಭಟ್ ಅಭಿನಯದ 'ಗಲಿ ಬಾಯ್' ಚಿತ್ರ ಉತ್ತಮ ಪ್ರದರ್ಶನ ತೋರಿದೆ. ಈ ಚಿತ್ರ ಬೆಸ್ಟ್ ಆಕ್ಟರ್ ಹಾಗೂ ಬೆಸ್ಟ್ ಆಕ್ಟ್ರೇಸ್ ಸೇರಿದಂತೆ ಒಟ್ಟು 13 ಪ್ರಶಸ್ತಿಗಳನ್ನು ಬಾಚಿಕೊಂಡಿದೆ.