ಅಂಬರೀಶ್ ಅಂತ್ಯಕ್ರಿಯೆಗೆ ಬಾರದ ರಮ್ಯಾ; ಕಾರಣ ಏನು ಗೊತ್ತಾ...?

ಅಂಬರೀಶ್ ಸಾವನ್ನಪ್ಪಿದ ದಿನ ರಮ್ಯಾ ಟ್ವೀಟ್ ಮಾಡಿದ್ದೇನೋ ಹೌದು. ಆದರೆ, ಆನಂತರ ಅವರು 'ಅಂಬಿ' ಅಂಕಲ್ ಅಂತಿಮ ದರ್ಶನಕ್ಕಾಗಿ ಮಂಡ್ಯಗೂ ಬರಲಿಲ್ಲ, ಬೆಂಗಳೂರಿಗೂ ಬರಲಿಲ್ಲ. ರಮ್ಯಾ ವರ್ತನೆಗೆ ಅಂಬರೀಶ್ ಅಭಿಮಾನಿಗಳು ಕೆಂಡಾಮಂಡಲಗೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ರಮ್ಯಾ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ.

Yashaswini V Yashaswini V | Updated: Nov 27, 2018 , 08:01 AM IST
ಅಂಬರೀಶ್ ಅಂತ್ಯಕ್ರಿಯೆಗೆ ಬಾರದ ರಮ್ಯಾ; ಕಾರಣ ಏನು ಗೊತ್ತಾ...?
Pic: Facebook

ಬೆಂಗಳೂರು: ಹಿರಿಯ ನಟ, ಮಾಜಿ ಕೇಂದ್ರ ಹಾಗೂ ರಾಜ್ಯ ಸಚಿವ ಅಂಬರೀಷ್ ಅವರ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವದೊಂದಿಗೆ ಸೋಮವಾರ ಕಂಠೀರವ ಸ್ಟುಡಿಯೋದಲ್ಲಿ ನೆರವೇರಿಸಲಾಯಿತು. ಚಿತ್ರರಂಗದ ಗಣ್ಯರು, ರಾಜಕೀಯ ನಾಯಕರು ಹಾಗೂ ಸಾವಿರಾರು ಅಭಿಮಾನಿಗಳು ಅಗಲಿದ ನಾಯಕನಿಗೆ ಕಣ್ಣೀರ ವಿದಾಯ ಹೇಳಿದರು. ದೇಶಾದ್ಯಂತ ಅಂಬಿ ಸ್ನೇಹಿತರೆಲ್ಲರೂ ಅಂತಿಮ ದರ್ಶನ ಪಡೆದರು. ಸ್ವೀಡನ್ನಲ್ಲಿ ಚಿತ್ರೀಕರಣದಲ್ಲಿದ್ದ ದರ್ಶನ್ ಕೂಡ ಶೂಟಿಂಗ್ ನಿಲ್ಲಿಸಿ ಓಡೋಡಿ ಬಂದರು. ಆದರೆ ಎಲ್ಲಾ ಅದ್ಯಾಕೋ ಮಾಜಿ ಸಂಸದೆ ರಮ್ಯಾ ಮಾತ್ರ ಎಲ್ಲಿಯೂ ಕಾಣಲೇ ಇಲ್ಲ...

ಅಂಬರೀಶ್ ಸಾವನ್ನಪ್ಪಿದ ದಿನ ರಾತ್ರಿ ರಮ್ಯಾ, ಅಂಬರೀಷ್ ಅಂಕಲ್ ಅವರ ಸಾವು ಅಪಾರವಾದ ನೋವುಂಟು ಮಾಡಿದೆ. ಅವರ ಆತ್ಮಕ್ಕೆ ಆ ದೇವರು ಶಾಂತಿ ಕೊಡಲಿ ಹಾಗೂ ಅವರ ಕುಟುಂಬಕ್ಕೆ ಈ ದುಃಖವನ್ನು ಭರಿಸುವ ಶಕ್ತಿ ಕೊಡಲಿ. ಅವರನ್ನು ನಾನು ಎಂದೆಂದಿಗೂ ಪ್ರೀತಿಯಿಂದ ನೆನೆಯುತ್ತೇನೆ ಎಂದು ಟ್ವೀಟ್ ಮಾಡಿದ್ದೇನೋ ಹೌದು. ಆದರೆ, ಆನಂತರ ಅವರು 'ಅಂಬಿ' ಅಂಕಲ್ ಅಂತಿಮ ದರ್ಶನಕ್ಕಾಗಿ ಮಂಡ್ಯಗೂ ಬರಲಿಲ್ಲ, ಬೆಂಗಳೂರಿಗೂ ಬರಲಿಲ್ಲ. ರಮ್ಯಾ ವರ್ತನೆಗೆ ಅಂಬರೀಶ್ ಅಭಿಮಾನಿಗಳು ಕೆಂಡಾಮಂಡಲಗೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ರಮ್ಯಾ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ.

ಅಂಬರೀಶ್ ಅಂತ್ಯಕ್ರಿಯೆಗೆ ರಮ್ಯಾ ಬಾರದಿರಲು ಕಾರಣ ಏನು ಗೊತ್ತಾ...?
ಮಾಜಿ ಸಂಸದೆ ನಟಿ ರಮ್ಯಾ ಅಪರೂಪದ ಖಾಯಿಲೆಗೆ ತುತ್ತಾಗಿದ್ದು, ಅನಾರೋಗ್ಯದಿಂದ ಬಳಲುತ್ತಿದ್ದಾರೆ.  ಹೌದು, ಹತ್ತು ಲಕ್ಷ ಮಂದಿ ಮಹಿಳೆಯರ ಪೈಕಿ ಒಬ್ಬರಲ್ಲಿ ಕಾಣಿಸಿಕೊಳ್ಳುವ ಸಮಸ್ಯೆಯಿಂದ ಬಳಲುತ್ತಿದ್ದಾರಂತೆ ಮಾಜಿ ಸಂಸದೆ.

ರಮ್ಯಾ ಆಸ್ಟಿಯೋಕ್ಲ್ಯಾಟೋಮಾ(Osteoclastoma) ಎಂಬ ಖಾಯಿಲೆಯಿಂದ ಬಳಲುತ್ತಿದ್ದು, ಕೊಂಚ ನಿರ್ಲಕ್ಷ್ಯ ವಹಿಸಿದ್ರು ಮಾರಕ ಖಾಯಿಲೆ ಕ್ಯಾನ್ಸರ್ ಗೆ ತುತ್ತಾಗುತ್ತಿದ್ರಂತೆ ರಮ್ಯಾ. Osteoclastoma ಎಂಬುದು ಮೂಳೆಗಳಿಗೆ ಸಂಬಂಧಿಸಿದ ಖಾಯಿಲೆಯಾಗಿದ್ದು, ರಮ್ಯಾ ಕಾಲಿನ ಎಲುಬುಗಳ ನಡುವೆ ಈ ಸಮಸ್ಯೆ ಉಂಟಾಗಿದೆ ಎನ್ನಲಾಗಿದೆ.

ಅದಕ್ಕಾಗಿ ಚಿಕಿತ್ಸೆ ಪಡೆದು ಕಳೆದ ಅಕ್ಟೊಬರ್ ನಿಂದ ರಮ್ಯಾ ವಿಶ್ರಾಂತಿ ಪಡೆಯುತ್ತಿದ್ದಾರೆ ಎನ್ನಲಾಗಿದೆ. ತಮ್ಮ ಸಮಸ್ಯೆ ಕುರಿತು ಇನ್ಸ್ಟಾಗ್ರಾಂ ನಲ್ಲಿ ಬರೆದುಕೊಂಡಿರುವ ರಮ್ಯಾ, ದೇಹದಲ್ಲಿ ಯಾವುದೇ ರೀತಿಯ ವ್ಯತ್ಯಾಸ ಕಂಡು ಬಂದರೂ ತಡಮಾಡದೆ ವೈದ್ಯರನ್ನು ಸಂಪರ್ಕಿಸಿ. 

ನಿರ್ಲಕ್ಷ ಮಾಡಿದರೆ ಸೂಕ್ತ ಬೆಲೆ ತೆರಬೇಕಾಗುತ್ತೆ, ನಿರ್ಲಕ್ಷ್ಯ ಮಾಡಿ ನಾನು ಈಗ ಪಾಠ ಕಲಿತಿದ್ದೇನೆ ಎಂದು ಇನ್ಸ್ಟಾಗ್ರಾಂ ನಲ್ಲಿ ಕಾಲಿನ ಚಿತ್ರ ಹಾಕಿ(ಅ.19) ರಮ್ಯಾ ಬರೆದುಕೊಂಡಿದ್ದಾರೆ.

ಬಹುಶಃ ತಮ್ಮ ಅನಾರೋಗ್ಯದಿಂದಾಗಿಯೇ ರಮ್ಯಾ ಅವರು ಅಂಬರೀಶ್ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲು ಸಾಧ್ಯವಾಗಲಿಲ್ಲವೇನೋ... ಅಂಬರೀಶ್ ಅಂತ್ಯಕ್ರಿಯೆಯಲ್ಲಿ ಭಾಗಿಯಾಗದಿರಲು ಇರುವ ನಿಜವಾದ ಕಾರಣವೇನು ಎಂಬ ಪ್ರಶ್ನೆಗೆ ರಮ್ಯಾ ಅವರೇ ಉತ್ತರಿಸಬೇಕಿದೆ.