Exclusive: Shraddha Kapoorಗಾಗಿ ಜಯಾ ಶಾಹ್ ತರಿಸಿಕೊಂಡ ವಿಶೇಷ Drugs ಯಾವುದು ಗೊತ್ತಾ?

ಡ್ರಗ್ಸ್ ಮಾಫಿಯಾ ಜೊತೆಗೆ ಬಾಲಿವುಡ್ ಕನೆಕ್ಷನ್ ತನಿಖೆ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದ್ದು, ಹಲವು ಖ್ಯಾತನಾಮರನ್ನು ತನ್ನ ತೆಕ್ಕೆಗೆ ಸೆಳೆದುಕೊಂಡಿದೆ.  ಇತರೆ ಡ್ರಗ್ಸ್ ಗಳ ಜೊತೆಗೆ ಇದೀಗ NCB ತನಿಖೆಯಲ್ಲಿ ಬಾಲಿವುಡ್ ನ ಖ್ಯಾತನಾಮರು ನಶೆ ಮಾಡಲು  CBD ಆಯಿಲ್ ಬಳಕೆ ಮಾಡುತ್ತಿರುವುದು ಬಹಿರಂಗಗೊಂಡಿದೆ.

Last Updated : Sep 23, 2020, 10:50 AM IST
  • ಜಯಾ ಶಾಹ್ ವಿಚಾರಣೆಯಲ್ಲಿ ಗಂಭೀರ ಸಂಗತಿಗಳು ಬಹಿರಂಗ.
  • ಶ್ರದ್ದಾ ಕಪೂರ್ ಗಾಗಿ CBD ಡ್ರಗ್ಸ್ ತರಿಸಿರುವುದಾಗಿ ಒಪ್ಪಿಕೊಂಡ ಜಯಾ.
  • ಇತರೆ ಹಲವು ಖ್ಯಾತನಾಮರ ಹೆಸರನ್ನು ಬಹಿರಂಗಪಡಿಸಿದ ಜಯಾ ಶಾಹ್ .
Exclusive: Shraddha Kapoorಗಾಗಿ ಜಯಾ ಶಾಹ್ ತರಿಸಿಕೊಂಡ ವಿಶೇಷ Drugs ಯಾವುದು ಗೊತ್ತಾ? title=

ನವದೆಹಲಿ: ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ವಿಚಾರಣೆಯಲ್ಲಿ ಜಯಾ ಶಾಹ್  ಗಂಭೀರ ಹೇಳಿಕೆಯನ್ನು ನೀಡಿದ್ದಾರೆ. ವಿಚಾರನೆಯ ವೇಳೆ ಅಧಿಕಾರಿಗಳು ಜಯಾಗೆ ಅವಳ ಚಾಟ್ ತೋರಿಸಿ ಪ್ರಶ್ನೆಗಳನ್ನು ಕೇಳಿದ್ದಾರೆ. ಅಧಿಕಾರಿಗಳ ಪ್ರಶ್ನೆಗೆ ಉತ್ತರಿಸಿರುವ ಜಯಾ ಶಾಹ್, ನಟಿ ಶ್ರದ್ಧಾ ಕಪೂರ್ (Shraddha Kapoor) ಅವರಿಗೆ ತಾನು CBD ಎಣ್ಣೆಯ ವ್ಯವಸ್ಥೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ.

ಇದನ್ನು ಓದಿ- Sushant Case:ಶೀಘ್ರದಲ್ಲಿಯೇ NCB ಯಿಂದ ಖ್ಯಾತ ಬಾಲಿವುಡ್ ಚಿತ್ರ ನಿರ್ಮಾಪಕರೊಬ್ಬರ ವಿಚಾರಣೆ ಸಾಧ್ಯತೆ

ಈ CBD ಎಣ್ಣೆಯನ್ನು ಜಯಾ, ಶ್ರದ್ಧಾಗಾಗಿ ಆನ್ಲೈನ್ ನಲ್ಲಿ ತರಿಸಿರುವುದಾಗಿ ಹೇಳಿದ್ದಾಳೆ. ನಮ್ರತಾ ಶಿರೋಡ್ಕರ್ ಜೊತೆಗೆ ನಡೆಸಿರುವ ಚಾಟ್ ಕುರಿತು ಹೇಳಿಕೆ ನೀಡಿರುವ ಜಯಾ, ಚಾಟ್ ಅವಳೇ ನಡೆಸಿರುವುದಾಗಿ ಒಪ್ಪಿಕೊಂಡಿದ್ದಾಳೆ ಆದರೆ, ಆ ಚಾಟ್ ಕುರಿತು ತಮಗೆ ಹೆಚ್ಚಿನ ಸಂಗತಿಗಳು ನೆನಪಿಲ್ಲ ಎಂದಿದ್ದಾಳೆ. ಇದಲ್ಲದೆ ತಾವು ಸುಶಾಂತ್ ಸಿಂಗ್ ರಾಜ್ಪುತ್, ರಿಯಾ ಚಕ್ರವರ್ತಿ, ಚಿತ್ರ ನಿರ್ಮಾಪಕ ಮಧು ಮಾಂಟೆನಾ ವರ್ಮಾ ಹಾಗೂ ಸ್ವಂತ ಬಳಕೆಗಾಗಿ ಕೂಡ ತಾವು CBD ಆಯಿಲ್ ತರಿಸಿಕೊಂಡಿರುವುದಾಗಿ ಒಪ್ಪಿಕೊಂಡಿದ್ದಾಳೆ. ಆದರೆ, ಡ್ರಗ್ಸ್ ಗಾಗಿ ಇದುವರೆಗೆ ತಾವು ಯಾವುದೇ ಪೆಡ್ಲರ್ ಗಳ ಜೊತೆಗೆ ಸಂಪರ್ಕ ಹೊಂದಿರುವ ಸಂಗತಿಯನ್ನು ಜಯಾ ನಿರಾಕರಿಸಿದ್ದಾಳೆ. ನಶೆ ಮಾಡುವ ಈ ಸರಕುಗಳ ವ್ಯವಸ್ಥೆಯನ್ನು ತಾವು ಆನ್ಲೈನ್ ಮಾಡಿರುವುದಾಗಿ ಜಯಾ ಹೇಳಿದ್ದಾಳೆ.

ಇದನ್ನು ಓದಿ- Bollywood Drugs Case: Sara ಹಾಗೂ ಶ್ರದ್ಧಾಗೆ ಸಮನ್ಸ್ ನೀಡಲಿದೆ NCB

ಭಾರತದಲ್ಲಿ CBD ಆಯಿಲ್ ಬಳಕೆಯ ಮೇಲೆ ನಿಷೇಧವಿದೆ
ಬಾಲಿವುಡ್ ಡ್ರಗ್ಸ್ ಕನೆಕ್ಷನ್ ತನಿಖೆಯಲ್ಲಿ ನಿತ್ಯ ಹೊಸ ಹೊಸ ಸಂಗತಿಗಳು ಬಹಿರಂಗಗೊಳ್ಳುತ್ತಿವೆ. ವೀಡ್ ಹಾಗೂ ಇತರೆ ಡ್ರಗ್ಸ್ ಗಳ ಬಳಿಕ ಇದೀಗ NCB ವಿಚಾರಣೆಯಲ್ಲಿ ಖ್ಯಾತನಾಮರು ನಶೆ ಮಾಡಲು CBD ಆಯಿಲ್ ಬಳಕೆ ಮಾಡುತ್ತಿರುವ ಸಂಗತಿ ಬೆಳಕಿಗೆ ಬಂದಿದೆ. CBD ಡ್ರಗ್ಸ್ ಗೆ ಭಾರತದಲ್ಲಿ ನಿಷೇಧ ವಿಧಿಸಲಾಗಿದೆ.

Trending News