ಮಹಾಮಾರಿ ಕರೋನಾದಿಂದಾಗಿ ಇಡೀ ಜಗತ್ತೇ ತತ್ತರಿಸಿದೆ, COVID-19 ನಿಂದ ಪಾರಾಗಲು ಸಾರ್ವಜನಿಕರು ಮಾಸ್ಕ್ ಅನ್ನು ಅಸ್ತ್ರವಾಗಿ ಬಳಸಿಕೊಂಡಿದ್ದಾರೆ. ಅಲ್ಲದೆ ವಿಶ್ವ ಆರೋಗ್ಯ ಸಂಸ್ಥೆ (World Health Organization) ವ್ಯಾಯಾಮ, ಯೋಗ, ವಾಕಿಂಗ್ ಮಾಡುವೆ ವೇಳೆ ಮಾಸ್ಕ್ ಧರಿಸುವುದು ಕಡ್ಡಾಯ ಎಂದು ಬಹಿರಂಗವಾಗಿ ಸಲಹೆ ನೀಡಿತು. ಏಕೆಂದರೆ ಇದು ಉಸಿರಾಟದ ತೊಂದರೆಗಳಿಗೆ ಕಾರಣವಾಗಬಹುದು ಮತ್ತು ಸೂಕ್ಷ್ಮಜೀವಿಗಳ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಜೊತೆಗೆ ಜನರು ಸಾಮಾಜಿಕ ಅಂತರವನ್ನು ಕಟ್ಟುನಿಟ್ಟಾಗಿ ಕಾಯ್ದುಕೊಳ್ಳಬೇಕು ಎಂದು ಒತ್ತಾಯಿಸಿದರು. ಆದರೆ ಈಗ ಮತ್ತೊಂದು ವರದಿ ವ್ಯಾಯಾಮ, ಯೋಗ, ವಾಕಿಂಗ್ ಮಾಡುವೆ ವೇಳೆ ಮಾಸ್ಕ್ ಧರಿಸುವುದು ಎಷ್ಟು ಸೇಫ್? ಎನ್ನುವುದರ ಮೇಲೆ ಬೆಳಕು ಚೆಲ್ಲಿದೆ.
ವ್ಯಾಯಾಮ ಮಾಡುವಾಗ ಮಾಸ್ಕ್ ಧರಿಸಿದರೆ ಹನಿಗಳ ರೂಪದಲ್ಲಿ ವೈರಸ್ ಹರಡುವುದನ್ನು ತಡೆಗಟ್ಟುವ ಬಗ್ಗೆ ಯಾವುದೇ ಮಹತ್ವದ ಪುರಾವೆಗಳನ್ನು ನೀಡುವ ಕುರಿತು ಯಾವುದೇ ಅಧ್ಯಯನಗಳು ನಡೆದಿಲ್ಲ. ಆದರೆ ತಜ್ಞರು ಮಾಸ್ಕ್ ಬಳಸಿದ ನಂತರ ಅದನ್ನ ಎಲ್ಲಂದರಿಲಿ ಬಿಸಾಕಬೇಡಿ ಎಂದು ಸಲಹೆ ನೀಡುತ್ತಿದ್ದಾರೆ, ಮಾಸ್ಕ್ ಧರಿಸಿ ಜಿಮ್ ಮಾಡಿದರೆ ಉಸಿರಾಟದಲ್ಲಿ ಅಡಚಣೆಯನ್ನು ಉಂಟುಮಾಡಬಹುದು, ಇದರಿಂದಾಗಿ ತಲೆತಿರುಗುವಿಕೆ ಮತ್ತು ಡಿಹೈಡ್ರೇಷನ್ ಉಂಟಾಗುತ್ತದೆ ಎಂದು ಹೇಳಿದ್ದಾರೆ. ಇನ್ನೂ ಕೆಲವು ತಜ್ಞರು ವ್ಯಾಯಾಮ ಮಾಡುವಾಗ ಮುನ್ನೆಚ್ಚರಿಕಾ ಕ್ರಮವಾಗಿ ಮಾಸ್ಕ್ ಧರಿಸಲೇಬೇಕು ಎಂದು ಶಿಫಾರಸು ಮಾಡಿದ್ದಾರೆ.
ಸರ್ಕಾರದ ಮಹತ್ವದ ನಿರ್ಧಾರ: ಕೇವಲ 4 ರೂಪಾಯಿಗೆ ಸಿಗಲಿದೆ ಟ್ರಿಪಲ್ ಲೇಯರ್ ಮಾಸ್ಕ್
ಐಸಿಎಂಆರ್ನ (ICMR) ಮಹಾನಿರ್ದೇಶಕ ಡಾ. ಬಲರಾಮ್ ಬಹರ್ಗಾವಾ ಅವರು ಹೇಳುವ ಪ್ರಕಾರ, ವ್ಯಾಯಾಮ ಮಾಡುವಾಗ ಮಾಸ್ಕ್ ಧರಿಸಲು ಸಲಹೆ ನೀಡಲಾಗಿದೆ. ಇದರಿಂದ ಮಾನವನ ದೇಹದಲ್ಲಿನ ರಕ್ತದಲ್ಲಿರುವ ಆಮ್ಲಜನಕದ ಮಟ್ಟಕ್ಕೆ ಯಾವುದೇ ವ್ಯತಿರಿಕ್ತ ಪರಿಣಾಮ ಬೀರುವುದಿಲ್ಲ. "ಮಾಸ್ಕ್ ಅನ್ನು ಕರೋನಾ ವಿರುದ್ಧ ಹೋರಾಡಲು ರಕ್ಷಣಾತ್ಮಕ ಕವಚವಾಗಿ ಬಳಸಲಾಗುತ್ತಿದೆ. ಈ ಕುರಿತಂತೆ ನಾವುಗಳು ನಡೆಸಿದ ಅಧ್ಯಯನದಿಂದ ತಿಳಿದು ಬಂದಿರುವುದು ಏನೆಂದೆರೆ, ವ್ಯಾಯಾಮ, ಯೋಗ, ವಾಕಿಂಗ್ ಅಲ್ಲದೆ ಸಾರ್ವಜನಿಕ ವಲಯದಲ್ಲಿ ಓಡಾಡುವಾಗ ಮಾಸ್ಕ್ (Mask) ಧರಿಸಲೇಬೇಕು, ಇದು ರಕ್ತದಲ್ಲಿರುವ ಆಮ್ಲಜನಕದ ಮಟ್ಟವನ್ನು ಬದಲಾಯಿಸುವುದಿಲ್ಲ, ಜಿಮ್/ವಾಕಿಂಗ್ ಮಾಡುವ ಸಂಧರ್ಭದಲ್ಲಿ ಮಾಸ್ಕ್ ಹಾಕಿಕೊಳ್ಳಬೇಕು. ಇದರಿಂದ ಆರೋಗ್ಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.
ಮಾಸ್ಕ್ ಧರಿಸಿ ವ್ಯಾಯಾಮ ಮಾಡುವ ಮುನ್ನ ಇರಲಿ ಈ ಎಚ್ಚರಿಕೆ!
ಮಾಸ್ಕ್ ಧರಿಸಿ ವಾಕಿಂಗ್, ಯೋಗ ಅಥವಾ ಸ್ಲೋ ಸೈಕ್ಲಿಂಗ್ ರೀತಿಯ ವ್ಯಾಯಾಮ ಮಾಡುವ ವೇಳೆ ಸರಿಯಾದ ಬೆಳಕು ಮತ್ತು ಗಾಳಿ ಬರುವ ಸ್ಥಳಗಳನ್ನ ಆಯ್ಕೆ ಮಾಡಿಕೊಳ್ಳಬೇಕು. ಇದರಿಂದ ದೇಹದ ಉಷ್ಣತೆಯು ನಿಯಂತ್ರಿಸಲ್ಪಡುತ್ತದೆ ಮತ್ತು ಉಸಿರಾಡಲು ಸಾಕಷ್ಟು ಗಾಳಿ ಸಿಗುತ್ತದೆ.
ಯಾವ ರೀತಿಯ ಮಾಸ್ಕ್ ಧರಿಸಬೇಕು?
ವ್ಯಾಯಾಮ ಮಾಡುವಾಗ ಧರಿಸಬೇಕಾದ ಮಾಸ್ಕ್ ದಪ್ಪವಾಗಿರಬಾರದು ಮತ್ತು ತ್ವರಿತವಾಗಿ ಒಣಗಬಲ್ಲ ಪಾಲಿಯೆಸ್ಟರ್ನಂತಹ ವಸ್ತುಗಳಿಂದ ತಯಾರಿಸಿರುವಂತಹದು ಆಗಿರಬೇಕು. ಉಸಿರು ಗಟ್ಟಿಸುವ ಅಥವಾ ತುಂಬಾ ದಪ್ಪ ಬಟ್ಟೆಯಿಂದ ತಯಾರಿಸಿದ ಮಾಸ್ಕ್ ಬಳಕೆ ಮಾಡಬೇಡಿ. ಈ ರೀತಿಯ ಮಾಸ್ಕ್ ಬಳಕೆ ಮಾಡುವುದರಿಂದ ತೀವ್ರ ಉಸಿರಾಟ ತೊಂದೆರೆ ಆಗುವ ಸಾಧ್ಯತೆ ಹೆಚ್ಚಿರುತ್ತದೆ.
ಈ ದೇಶದಲ್ಲಿ ಮಾಸ್ಕ್ ಧರಿಸದೇ ಇರುವವರಿಗೆ ಸಿಗಲಿದೆ ಕಠಿಣ ಶಿಕ್ಷೆ
ದೇಹ ದಂಡಿಸುವ ವ್ಯಾಯಾಮ ಮಾಡುವಾಗ...
ಮಾಸ್ಕ್ ಧರಿಸಿ ಟ್ರೇಡ್ ಮಿಲ್ ಮೇಲೆ ಓಡುವಾಗ, ಪುಶ್ ಅಪ್ಸ್ ಮಾಡುವಾಗ ಈ ರೀತಿಯ ದೇಹ ದಂಡಿಸುವ ಯಾವುದೇ ವ್ಯಾಯಾಮ ಮಾಡುವಾಗ ಬಹಳ ಎಚ್ಚರವಿರಬೇಕು. ಈ ರೀತಿಯ ವ್ಯಾಯಾಮ ಮಾಡುವ ವೇಳೆ ಮಾಸ್ಕ್ ಧರಿಸಿದ್ದರೆ ಉಸಿರು ಕಟ್ಟಿದಂತಾಗುತ್ತದೆ. ಜೊತೆಗೆ ತಲೆತಿರುಗುವಿಕೆ, ಆಯಾಸ ಮತ್ತು ಹೈಪರ್ವೆಂಟಿಲೇಷನ್ ಹೀಗೆ ಮುಂತಾದ ಸಮಸ್ಯೆಗಳನ್ನ ಎದುರಿಸಬೇಕಾಗುತ್ತದೆ.
ದೀರ್ಘಕಾಲದ ಕಾಯಿಲೆಗಳಿಂದ ಬಳಲುತ್ತಿರುವವರು:-
ಅಸ್ತಮಾ, ಹೃದಯ ಸಂಬಂಧಿತ ಕಾಯಿಲೆಗಳಿಂದ ಬಳಲುತ್ತಿರುವವರು ಅಥವಾ ಶ್ವಾಸಕೋಶದ ಕಾಯಿಲೆಗಳಿಂದ ಬಳಲುತ್ತಿರುವವರು ವ್ಯಾಯಾಮದ ಸಮಯದಲ್ಲಿ ಮಾಸ್ಕ್ ಧರಿಸುವುದನ್ನು ತಡೆಯಬೇಕು. ಏಕೆಂದರೆ ಅದು ಅವರ ರೋಗದ ಲಕ್ಷಣಗಳ ಉಲ್ಬಣಕ್ಕೆ ಕಾರಣವಾಗಬಹುದು ಎಂದು ಹಲವು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.