ಈ ಪಾನೀಯ ಸೇವಿಸಿದರೆ ಕೇವಲ ಏಳು ದಿನಗಳಲ್ಲಿ ದೇಹ ತೂಕ ಕಡಿಮೆ ಮಾಡಿಕೊಳ್ಳಬಹುದು .!

Bay Leaves Water For Weight Loss: ಈ ಎಲೆಯ ನೀರನ್ನು ಕುಡಿಯುವುದರಿಂದ ದೇಹದ ತೂಕವನ್ನು ಕಡಿಮೆ ಮಾಡಿ ಕೊಳ್ಳಬಹುದು. ಸ್ಥೂಲಕಾಯತೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. 

Written by - Ranjitha R K | Last Updated : Oct 7, 2022, 08:23 AM IST
  • ಪಲಾವ್ ಎಲೆಗಳು ಪ್ರತಿ ಮನೆಯಲ್ಲೂ ಸುಲಭವಾಗಿ ಸಿಗುತ್ತವೆ
  • ಆಹಾರದ ರುಚಿ ಮತ್ತು ಘಮ ಹೆಚ್ಚಿಸುವ ಸಲುವಾಗಿ ಬಳಸಲಾಗುತ್ತದೆ.
  • ದೇಹ ತೂಕ ಕಾಪಾಡಿಕೊಳ್ಳಲು ಕೂಡಾ ಸಹಾಯ ಮಾಡುತ್ತದೆ.
ಈ ಪಾನೀಯ ಸೇವಿಸಿದರೆ ಕೇವಲ ಏಳು ದಿನಗಳಲ್ಲಿ  ದೇಹ ತೂಕ ಕಡಿಮೆ ಮಾಡಿಕೊಳ್ಳಬಹುದು .! title=
Bay Leaves Water For Weight Loss

Bay Leaves Water For Weight Loss: ಪಲಾವ್ ಎಲೆಗಳು ಪ್ರತಿ ಮನೆಯಲ್ಲೂ ಸುಲಭವಾಗಿ ಸಿಗುತ್ತವೆ. ಈ ಎಲೆಗಳನ್ನು ಆಹಾರದ ರುಚಿ ಮತ್ತು ಘಮ ಹೆಚ್ಚಿಸುವ ಸಲುವಾಗಿ ಬಳಸಲಾಗುತ್ತದೆ.  ಆದರೆ ಮಸಾಲೆ ಎಲೆ, ಆಹಾರದ ರುಚಿ ಹೆಚ್ಚಿಸುವುದು ಮಾತ್ರವಲ್ಲ,  ದೇಹ ತೂಕ ಕಾಪಾಡಿಕೊಳ್ಳಲು ಕೂಡಾ ಸಹಾಯ ಮಾಡುತ್ತದೆ.  ಸ್ಥೂಲಕಾಯತೆಯಿಂದ ತೊಂದರೆಗೊಳಗಾಗಿದ್ದು, ತೂಕ ನಷ್ಟಕ್ಕೆ ನೈಸರ್ಗಿಕ ಪರಿಹಾರವನ್ನು ಹುಡುಕುತ್ತಿದ್ದರೆ,  ಪಲಾವ್ ಎಲೆಗಳನ್ನು ಬಳಸಬಹುದು. ಈ ಎಲೆಯ ನೀರನ್ನು ಕುಡಿಯುವುದರಿಂದ ದೇಹದ ತೂಕವನ್ನು ಕಡಿಮೆ ಮಾಡಿ ಕೊಳ್ಳಬಹುದು. ಸ್ಥೂಲಕಾಯತೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. 

ತೂಕ ನಷ್ಟಕ್ಕೆ, ಪಲಾವ್ ಎಲೆಯ ನೀರನ್ನು ಈ ರೀತಿ ಸೇವಿಸಿ :
ತೂಕ ಮತ್ತು ದೇಹದ ಕೊಬ್ಬನ್ನು ಕಡಿಮೆ ಮಾಡಲು, ಒಂದು ಲೋಟ ಬಿಸಿ ನೀರಿಗೆ 12  ಪಲಾವ್ ಎಲೆಗಳನ್ನು ಹಾಕಿ, ಚೆನ್ನಾಗಿ ಕುದಿಸಿ.  ಈ ಎಲೆಗಳ ಪರಿಮಳ ಮತ್ತು ರುಚಿ ನೀರಿನಲ್ಲಿ ಸಂಪೂರ್ಣವಾಗಿ ಕರಗಿದಾಗ, ಅದನ್ನು ಫಿಲ್ಟರ್ ಮಾಡಿ. ಇದಕ್ಕೆ ಒಂದು ಚಮಚ ಜೇನುತುಪ್ಪ ಸೇರಿಸಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿ.

ಇದನ್ನೂ ಓದಿ : Papaya Seeds: ಪರಂಗಿ ಮಾತ್ರವಲ್ಲ ಅದರ ಬೀಜಗಳೂ ಕೂಡ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ

ಪಲಾವ್ ಎಲೆಯ ನೀರನ್ನು ಕುಡಿಯುವ ಪ್ರಯೋಜನಗಳು :
ಚಯಾಪಚಯವನ್ನು ಹೆಚ್ಚಿಸುತ್ತದೆ: ಪಲಾವ್ ಎಲೆಯ ನೀರನ್ನು ಸೇವಿಸುವುದರಿಂದ, ದೇಹದ ಚಯಾಪಚಯವನ್ನು ಹೆಚ್ಚಿಸುತ್ತದೆ. ಇದರ  ನೀರಿನಲ್ಲಿ ಬಹಳ ಕಡಿಮೆ ಪ್ರಮಾಣದ ಕ್ಯಾಲೋರಿಗಳು ಕಂಡುಬರುತ್ತವೆ. 

ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ : ಪಲಾವ್ ಎಲೆಗಳಲ್ಲಿರುವ ಫೈಬರ್ ಗುಣಲಕ್ಷಣಗಳು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.  ಇನ್ನು ಇದರಲ್ಲಿರುವ ಕ್ಯಾಲ್ಸಿಯಂ ದೇಹದ ಕೊಬ್ಬನ್ನು ಕರಗಿಸುವಲ್ಲಿ ಸಹಾಯ ಮಾಡುತ್ತದೆ. 

ಇದನ್ನೂ ಓದಿ : ಡಯಾಬಿಟೀಸ್ ರೋಗಿಗಳಿಗೆ ಬೆಸ್ಟ್ ಔಷಧಿ ಈ ಹಣ್ಣು .! ಸಂಪೂರ್ಣ ನಿಯಂತ್ರಣಕ್ಕೆ ತರುವುದು ಬ್ಲಡ್ ಶುಗರ್

 

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ತಜ್ಞರನ್ನು ಸಂಪರ್ಕಿಸಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News