ಭಾರತದಲ್ಲಿ ಅತೀ ಹೆಚ್ಚು ಬಳಕೆಯಾಗುವ ಆಹಾರ ಧಾನ್ಯವೆಂದರೆ ಅದು ಅಕ್ಕಿ. ಇದರಿಂದ ತಯಾರಿಸಿದ ಇತರ ಆಹಾರಗಳು ದೇಶದ ಪ್ರತಿಯೊಂದು ಭಾಗದಲ್ಲೂ ತುಂಬಾ ಇಷ್ಟವಾಗುತ್ತವೆ. ಪ್ರತಿ ಮನೆಯಲ್ಲಿ ಪ್ರತಿ ದಿನ ಅಕ್ಕಿಯಿಂದ ಅನ್ನ ತಯಾರಿಸಲಾಗುತ್ತದೆ. ಆದರೆ ಅಕ್ಕಿಯಿಂದ ಅನ್ನ ಮಾಡುವ ವಿಧಾನವು ತುಂಬಾ ತಪ್ಪಾಗಿದೆ. ಹೀಗೆ ಮಾಡುವುದರಿಂದ ಕ್ಯಾನ್ಸರ್ ಮತ್ತು ಹೃದ್ರೋಗದ ಅಪಾಯವಿದೆ. ಹೇಗೆ ಇಲ್ಲಿದೆ ನೋಡಿ...
ಅನ್ನ(Rice Cooking) ಮಾಡುವ ಸರಿಯಾದ ವಿಧಾನವು ಸುಮಾರು 4 ವರ್ಷಗಳ ಹಿಂದೆ ಬಂದ ಸಂಶೋಧನೆಯಿಂದ ಬಹಿರಂಗಪಡಿಸಲಾಗಿದೆ. ಅನ್ನವನ್ನ ಸರಿಯಾದ ರೀತಿಯಲ್ಲಿ ಮಾಡುವ ಮೂಲಕ ಕ್ಯಾನ್ಸರ್ ಮತ್ತು ಹೃದ್ರೋಗಗಳ ಅಪಾಯವನ್ನು ತಪ್ಪಿಸಿ ಕೊಳ್ಳಬಹುದು ಎಂದು ಸಂಶೋಧನೆ ಹೇಳಿದೆ.
ಇದನ್ನೂ ಓದಿ : Adulteration in Jaggery : ಬೆಲ್ಲದಲ್ಲಿ ರಾಸಾಯನಿಕ ಬೆರೆಸಿರುವುದು ಕಂಡುಹಿಡಿಯುವುದು ಹೇಗೆ ಗೊತ್ತಾ?
ಅನ್ನ ಮಾಡಲು ಸರಿಯಾದ ಮಾರ್ಗ ಯಾವುದು?
ನಾಲ್ಕು ವರ್ಷಗಳ ಹಿಂದೆ ಅಂದರೆ 2017 ರಲ್ಲಿ, ಇಂಗ್ಲೆಂಡಿನ ಕ್ವೀನ್ಸ್ ವಿಶ್ವವಿದ್ಯಾಲಯದ ಬೆಲ್‌ಫಾಸ್ಟ್‌ನ ಸಂಶೋಧಕರು ಅನ್ನ(Rice) ಮಾಡುವ ಸರಿಯಾದ ಮಾರ್ಗದ ಬಗ್ಗೆ ಮಾತನಾಡಿದ್ದರು. ಅವರ ಪ್ರಕಾರ, ಅನ್ನ ಮಾಡುವ ಮೊದಲು, ಅಕ್ಕಿಯನ್ನು ರಾತ್ರಿಯಿಡೀ ಅಥವಾ ಕನಿಷ್ಠ 3-4 ಗಂಟೆಗಳ ಕಾಲ ನೀರಿನಲ್ಲಿ ನೆನೆಸಬೇಕು. ಅದರ ನಂತರ ಅಕ್ಕಿಯನ್ನು ಬೇಯಿಸಬೇಕು. ಈ ಕಾರಣದಿಂದಾಗಿ, ಕ್ಯಾನ್ಸರ್ ಮತ್ತು ಹೃದಯ ರೋಗಗಳಿಗೆ ಕಾರಣವಾಗುವ ಜೀವಾಣುಗಳು ಶೇ. 80 ರಷ್ಟು ಕಡಿಮೆಯಾಗುತ್ತವೆ.
ಅಕ್ಕಿಯಲ್ಲಿ ಕ್ಯಾನ್ಸರ್ ಮತ್ತು ಹೃದ್ರೋಗ(Cancer and Heart Problems)ದ ಅಪಾಯವಾಗುವ ಅಂಶಗಳು ಹೇಗೆ ಬರುತ್ತವೆ ಸಂಶೋಧಕರ ಪ್ರಕಾರ, ಕೈಗಾರಿಕಾ ವಿಷ ಮತ್ತು ಕೀಟನಾಶಕಗಳು ಮಣ್ಣಿನಲ್ಲಿ ಇರುವುದರಿಂದ ಅಕ್ಕಿಯನ್ನು ಕಲುಷಿತಗೊಳಿಸುತ್ತದೆ. ಇದರಿಂದಾಗಿ ಲಕ್ಷಾಂತರ ಜನರ ಆರೋಗ್ಯಕ್ಕೆ ಹಾನಿಯಾಗಬಹುದು. ಈ ಅಂಶಗಳು ಅಕ್ಕಿಯಲ್ಲಿ ಆರ್ಸೆನಿಕ್ ಎಂಬ ವಿಷದ ಅಧಿಕಕ್ಕೆ ಕಾರಣವಾಗುತ್ತವೆ, ಇದು ಹೃದ್ರೋಗ ಮತ್ತು ಕ್ಯಾನ್ಸರ್ ಅಪಾಯವನ್ನು ಉಂಟುಮಾಡಬಹುದು.
ಇದನ್ನೂ ಓದಿ : Iron Deficiency: ಶರೀರದಲ್ಲಿನ ಕಬ್ಬಿಣಾಂಶದ ಕೊರತೆಯನ್ನು ತಕ್ಷಣ ದೂರ ಮಾಡುತ್ತವೆ ಈ ವಸ್ತುಗಳು, ನಿತ್ಯ ಈ ಕೆಲಸ ಮಾಡಿ
ಅನ್ನ ಮಾಡುವ ಈ 3 ವಿಧಾನಗಳ ಮೇಲೆ ಪ್ರಯೋಗ
2017 ರಲ್ಲಿ ANI ಪ್ರಕಟಿಸಿದ ವರದಿಯ ಪ್ರಕಾರ, ವಿಶ್ವವಿದ್ಯಾನಿಲಯದ ಸಂಶೋಧಕರು ಅಕ್ಕಿಯನ್ನು ತಯಾರಿಸುವ ಮೂರು ವಿಧಾನಗಳನ್ನು ಅಧ್ಯಯನ ಮಾಡಿದ್ದಾರೆ, ಅದರಲ್ಲಿ ಅಕ್ಕಿ(Rice)ಯನ್ನು ರಾತ್ರಿಯಿಡೀ ಅಥವಾ 3-4 ಗಂಟೆಗಳ ಕಾಲ ನೀರಿನಲ್ಲಿ ನೆನೆಸುವ ವಿಧಾನವು ಅತ್ಯಂತ ಪ್ರಯೋಜನಕಾರಿ ಎಂದು ಕಂಡುಬಂದಿದೆ. ಸಂಶೋಧಕರು ಮೊದಲ ವಿಧಾನದಲ್ಲಿ ಒಂದು ಭಾಗದಷ್ಟು ಅನ್ನವನ್ನು ಮೂರನೇ ಎರಡರಷ್ಟು ನೀರಿನಲ್ಲಿ ಬೇಯಿಸಿದರು. ಎರಡನೆಯ ವಿಧಾನದಲ್ಲಿ, ಐದು ಭಾಗ ನೀರು ಮತ್ತು ಒಂದು ಭಾಗ ಅಕ್ಕಿಯನ್ನು ಬೇಯಿಸಲಾಗುತ್ತದೆ ಮತ್ತು ಅಕ್ಕಿ ಬೇಯಿಸಿದ ನಂತರ ಉಳಿದ ನೀರನ್ನು ತೆಗೆಯಲಾಗುತ್ತದೆ. ಈ ಎರಡನೇ ಭಾಗದಲ್ಲಿ, ಹಾನಿಕಾರಕ ಆರ್ಸೆನಿಕ್ ಪ್ರಮಾಣವನ್ನು ಅರ್ಧದಷ್ಟು ಕಡಿಮೆ ಮಾಡಲಾಗಿದೆ. ಅದೇ ಸಮಯದಲ್ಲಿ, ಮೂರನೇ ಭಾಗದಲ್ಲಿ, ಅಕ್ಕಿಯನ್ನು ರಾತ್ರಿಯಿಡೀ ನೆನೆಸಲಾಯಿತು. ಇದರಲ್ಲಿ ಹಾನಿಕಾರಕ ಅಂಶ ಶೇ.80 ರಷ್ಟು ಕಡಿಮೆಯಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.