COVID2019 ಸೋಂಕಿತ ಗರ್ಭಿಣಿ ಮಹಿಳೆಯ ಶಿಶುವಿಗೆ ಈ ವೈರಸ್ ಹರಡುವುದಿಲ್ಲ

ವಿಶ್ವಾದ್ಯಂತ ಭೀತಿ ಹುಟ್ಟಿಸಿರುವ ಕೊರೊನಾ ವೈರಸ್(COVID19) ತಾಯಿಯ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗುವನ್ನು ಪ್ರಭಾವಿತಗೊಳಿಸುವುದಿಲ್ಲ. ಈ ಕುರಿತು ಶಾಸ್ತ್ರಜ್ಯರು ಒಂದು ಅಧ್ಯಯನ ನಡೆಸಿದ್ದು, ಅಧ್ಯಯನದಲ್ಲಿ ಇದು ಸಿದ್ಧವಾಗಿದೆ.

Last Updated : Feb 14, 2020, 02:29 PM IST
COVID2019 ಸೋಂಕಿತ ಗರ್ಭಿಣಿ ಮಹಿಳೆಯ ಶಿಶುವಿಗೆ ಈ ವೈರಸ್ ಹರಡುವುದಿಲ್ಲ title=

ಬಿಜಿಂಗ್:ವಿಶ್ವಾದ್ಯಂತ ಭೀತಿ ಹುಟ್ಟಿಸಿರುವ ಕೊರೊನಾ ವೈರಸ್(COVID19) ತಾಯಿಯ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗುವನ್ನು ಪ್ರಭಾವಿತಗೊಳಿಸುವುದಿಲ್ಲ. ಈ ಕುರಿತು ಶಾಸ್ತ್ರಜ್ಯರು ಒಂದು ಅಧ್ಯಯನ ನಡೆಸಿದ್ದು, ಅಧ್ಯಯನದಲ್ಲಿ ಇದು ಸಿದ್ಧವಾಗಿದೆ. 'ದಿ ಲಾನ್ಸೆಟ್' ಹೆಸರಿನ ಪತ್ರಿಕೆಯಲ್ಲಿ ಪ್ರಕಟಗೊಂಡ ಒಂದು ಸಂಶೋಧನೆ ಪ್ರಕಾರ, ವರ್ತಮಾನದಲ್ಲಿ COVID19 ನವಜಾತ ಶಿಶುಗಳಲ್ಲಿ ಯಾವುದೇ ರೀತಿಯ ಗಂಭೀರ ಹಾಗೂ ಪ್ರತಿಕೂಲ ಪ್ರಭಾವ ಬೀರಿರುವ ಕುರಿತು ವರದಿಯಾಗಿಲ್ಲ ಹಾಗೂ ತಾಯಿಯ ಗರ್ಭದಲ್ಲಿ ಬೆಳೆಯುತ್ತಿರುವ ಮಗುವಿನ ಮೇಲು ಕೂಡ ಈ ಸೋಂಕು ಯಾವುದೇ ಪ್ರಭಾವ ಬೀರುವುದಿಲ್ಲ ಎನ್ನಲಾಗಿದೆ.

ಮತ್ತೊಂದು ಹೊಸ ಸಂಶೋಧನೆ ಪ್ರಕಾರ ಗರ್ಭವತಿ ಮಹಿಳೆಯರಲ್ಲಿ COVID-19 ಸೋಂಕಿನ ಲಕ್ಷಣಗಳು ಗರ್ಭವತಿ ಅಲ್ಲದ ಮಹಿಳೆಯರ ಸಮಾನವೇ ಇರುತ್ತವೆ. ಈ ಅಧ್ಯಯನದ ವೇಳೆ ಯಾವುದೇ ಮಹಿಳೆಗೆ ಗಂಭೀರ ನಿಮೋನಿಯಾ ಸೋಂಕಿಗೆ ಗುರಿಯಾಗಿಲ್ಲ ಹಾಗೂ ಅವರು ಸಾವನ್ನಪ್ಪಿಲ್ಲ ಎನ್ನಲಾಗಿದೆ. 36 ಗಂಟೆಗಳ ಬಳಿಕ ನವಜಾತ ಶಿಶುವೊಂದು ಕೊರೊನಾ ಸೋಂಕಿಗೆ ಗುರಿಯಾದ ವರದಿಗಳ ಬೆನ್ನಲ್ಲೇ ಈ ಸಂಶೋಧನಾ ವರದಿ ಭಾರಿ ಮಹತ್ವ ಪಡೆದುಕೊಂಡಿದೆ. ಈ ಸುದ್ದಿಯ ಪಸರಿಸಿದ ಬಳಿಕ ಕೊರೊನಾ ಸೋಂಕಿಗೆ ಗುರಿಯಾದ ಗರ್ಭವತಿ ಮಹಿಳೆಯಿಂದ ಆಕೆಯ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗುವಿಗೆ ಈ ಸೋಂಕು ಪಸರಿಸುತ್ತದೆಯೇ? ಎಂಬ ಪ್ರಶ್ನೆಗಳು ಏಳಲಾರಂಭಿಸಿವೆ.

ಈ ಕುರಿತು ಮಾಹಿತಿ ನೀಡಿರುವ ಚೀನಾದ ವುಹಾನ್ ವಿಶ್ವವಿದ್ಯಾಲಯದ ಅಡಿ ಬರುವ ಝೆಜಿಯಾಂಗ್ ಆಸ್ಪತ್ರೆಯ ಪ್ರಮುಖ ಲೇಖಕ ಯುವಾನ್ ಜೇನ್ ಝಾಂಗ್, " ಇಂತಹ ಪ್ರಕರಣಗಳ ಹಲವು ಕ್ಲಿನಿಕಲ್ ವಿವರಗಳು ಇನ್ನೂ ಬಂದಿಲ್ಲ, ಈ ಕಾರಣದಿಂದ ಗರ್ಭಾಶಯದ ಸೋಂಕು ಸಾಧ್ಯವೇ ಎಂದು ನಾವು ಕೇವಲ ಒಂದು ಪ್ರಕರಣದಿಂದ ತೀರ್ಮಾನಿಸಲು ಸಾಧ್ಯವಿಲ್ಲ. ಆದರೂ ಸಹಿತ COVID19 ಸೋಂಕಿತ ತಾಯಂದಿರರಿಗೆ ಜನಿಸುವ ಹೊಸ ಶಿಶುಗಳಿಗೆ ನಾವು ವಿಶೇಷ ಗಮನ ನೀಡಬೇಕು" ಎಂದಿದ್ದಾರೆ.

Trending News