Health Tips: ಡಯಾಬಿಟಿಸ್ ರೋಗಿಗಳಿಗೆ ವರದಾನಕ್ಕೆ ಸಮಾನ ಈ ಹಣ್ಣು, ವಿಟಮಿನ್ ಗಳ ಪವರ್ ಹೌಸ್ ಎನ್ನಲಾಗುತ್ತದೆ

Diabetes: ನಿಮ್ಮ ಮಧುಮೇಹ ಸಮಸ್ಯೆಯನ್ನು ಸುಲಭವಾಗಿ ನಿಯಂತ್ರಿಸಬಲ್ಲ ಇಂತಹ ಹಣ್ಣಿನ ಬಗ್ಗೆ ನಾವು ನಿಮಗೆ ಹೇಳುತ್ತಿದ್ದೇವೆ. ಈ ಹಣ್ಣು ಆರೋಗ್ಯದ ಸಂಪತ್ತು. ಇದರಿಂದ ಆಗುವ ಪ್ರಯೋಜನಗಳನ್ನು ತಿಳಿಯೋಣ.  

Written by - Nitin Tabib | Last Updated : Aug 14, 2022, 04:51 PM IST
  • ಬಿಡುವಿಲ್ಲದ ಜೀವನಶೈಲಿಯ ಕಾರಣ ಮಧುಮೇಹವು ಒಂದು ಸಾಮಾನ್ಯ ಕಾಯಿಲೆಯಾಗಿ ಮಾರ್ಪಟ್ಟಿದೆ.
  • ಇಂದು ನಿಧಾನವಾಗಿ ಎಲ್ಲಾ ವಯೋಮಾನದವರೂ ಇದರ ಹಿಡಿತಕ್ಕೆ ಸಿಳುಕಿಕೊಳ್ಳುತ್ತಿದ್ದಾರೆ.
  • ಮಧುಮೇಹವನ್ನು ನಿಯಂತ್ರಿಸಲು ಜೀವನಶೈಲಿಯನ್ನು ಸಂಪೂರ್ಣವಾಗಿ ಬದಲಾಯಿಸಿಕೊಳ್ಳಬೇಕು.
Health Tips: ಡಯಾಬಿಟಿಸ್ ರೋಗಿಗಳಿಗೆ ವರದಾನಕ್ಕೆ ಸಮಾನ ಈ ಹಣ್ಣು, ವಿಟಮಿನ್ ಗಳ ಪವರ್ ಹೌಸ್ ಎನ್ನಲಾಗುತ್ತದೆ title=
Health Tips

Diabetes Diet: ಬಿಡುವಿಲ್ಲದ ಜೀವನಶೈಲಿಯ ಕಾರಣ ಮಧುಮೇಹವು ಒಂದು ಸಾಮಾನ್ಯ ಕಾಯಿಲೆಯಾಗಿ ಮಾರ್ಪಟ್ಟಿದೆ. ಇಂದು ನಿಧಾನವಾಗಿ ಎಲ್ಲಾ ವಯೋಮಾನದವರೂ ಇದರ ಹಿಡಿತಕ್ಕೆ ಸಿಳುಕಿಕೊಳ್ಳುತ್ತಿದ್ದಾರೆ. ಮಧುಮೇಹವನ್ನು ನಿಯಂತ್ರಿಸಲು ಜೀವನಶೈಲಿಯನ್ನು ಸಂಪೂರ್ಣವಾಗಿ ಬದಲಾಯಿಸಿಕೊಳ್ಳಬೇಕು. ಒಬ್ಬರು ಆಹಾರ ಪದ್ಧತಿಯನ್ನು ಸುಧಾರಿಸಿಕೊಳ್ಳಬೇಕು. ಮಾನಸಿಕ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಬೇಕು, ಆದರೆ ಕಿವಿಯಂತಹ ಒಂದು ಹಣ್ಣು, ನಿಮ್ಮ ಈ ಕಾಯಿಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪ್ರಯೋಜನಕಾರಿ ಎಂದು ಸಾಬೀತಾಗುತ್ತದೆ ಎಂಬ ಸಂಗತಿ ನಿಮಗೆ ತಿಳಿದಿದೆಯಾ?
 
ಕಿವಿಯಲ್ಲಿ ವಿಟಮಿನ್-ಸಿ ಹೇರಳ ಪ್ರಮಾಣದಲ್ಲಿ ದೊರೆಯುತ್ತದೆ ಎಂದು ಹಲವು ಅಧ್ಯಯನಗಳಲ್ಲಿ ಕಂಡು ಬಂದಿದೆ. ಕಿತ್ತಳೆ ಮತ್ತು ನಿಂಬೆಹಣ್ಣಿನಲ್ಲಿ ಕಂಡುಬರುವ ಎರಡು ಪಟ್ಟು ಹೆಚ್ಚು ವಿಟಮಿನ್ ಸಿ ಈ ಹಣ್ಣಿನಲ್ಲಿ ಕಂಡುಬರುತ್ತದೆ. ನಿತ್ಯ ಕೇವಲ ಒಂದು ಹಣ್ಣಿನ ಸೇವೆಯು 117 ಪ್ರತಿಶತ ವಿಟಮಿನ್ ಸಿ ಮತ್ತು 21 ಪ್ರತಿಶತ ಆಹಾರದ ಫೈಬರ್ ಅನ್ನು ಒದಗಿಸುತ್ತದೆ. ಇದಲ್ಲದೇ ಈ ಹಣ್ಣನ್ನು ತಿನ್ನುವುದರಿಂದ ದೇಹಕ್ಕೆ ಅನೇಕ ರೀತಿಯ ಪೋಷಕಾಂಶಗಳು ದೊರೆಯುತ್ತವೆ. ಇದರಿಂದ ಆಗುವ ಪ್ರಯೋಜನಗಳನ್ನು ತಿಳಿದುಕೊಳ್ಳೋಣ ಬನ್ನಿ, 
 
ಕಿವಿ ತಿನ್ನಿ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ
ವಿಟಮಿನ್-ಸಿ ಹೇರಳ ಪ್ರಮಾಣದಲ್ಲಿ ಕಂಡುಬರುವ ಹಣ್ಣುಗಳಲ್ಲಿ ಕಿವಿ ಕೂಡ ಒಂದಾಗಿದೆ. ಇದಲ್ಲದೇ ಕಿವಿಯಲ್ಲಿ ಆ್ಯಂಟಿ ಆಕ್ಸಿಡೆಂಟ್‌ಗಳೂ ಕೂಡ ಕಂಡುಬರುತ್ತವೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ, ಇದು ಅನೇಕ ರೋಗಗಳ ವಿರುದ್ಧ ಹೋರಾಡಲು ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. ಪ್ರತಿನಿತ್ಯ ಇದನ್ನು ತಿನ್ನುವುದರಿಂದ ಅಸ್ತಮಾದಂತಹ ಕಾಯಿಲೆಗಳಲ್ಲಿ ಸಾಕಷ್ಟು ಪರಿಹಾರ ಸಿಗುತ್ತದೆ.
 
ಕಿವಿ ಹೃದಯಕ್ಕೆ ಪ್ರಯೋಜನಕಾರಿ
ಕಿವಿಯಲ್ಲಿ ವಿಟಮಿನ್ ಇ ಮತ್ತು ಪೊಟ್ಯಾಸಿಯಮ್ ಕೂಡ ಹೇರಳ ಪ್ರಮಾಣದಲ್ಲಿ ಕಂಡುಬರುತ್ತದೆ. ಇದು ಅಪಧಮನಿಗಳನ್ನು ಆರೋಗ್ಯಕರವಾಗಿರಿಸುತ್ತದೆ ಮತ್ತು ನಿಮ್ಮ ಹೃದಯ ಆರೋಗ್ಯವನ್ನು ಕಾಪಾಡುತ್ತದೆ. ಇದಲ್ಲದೆ, ವಿಟಮಿನ್ ಇ ಚರ್ಮಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಇದನ್ನು ಪ್ರತಿದಿನ ತಿನ್ನುವುದರಿಂದ ಹಲವಾರು ಪ್ರಯೋಜನಗಳನ್ನು ಪಡೆಯಬಹುದು.

ಇದನ್ನೂ ಓದಿ-Health Tips: ಹಾಗಲಕಾಯಿ ಸೇವನೆಯಿಂದ ದುಪ್ಪಟ್ಟ ಆರೋಗ್ಯ ಲಾಭ
 
ಕಿವಿಯು ಮಧುಮೇಹವನ್ನು ನಿಯಂತ್ರಿಸುತ್ತದೆ
ಮಧುಮೇಹ ರೋಗಿಗಳಿಗೆ ಕಿವಿ ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಆರೋಗ್ಯ ತಜ್ಞರ ಪ್ರಕಾರ, ಈ ಹಣ್ಣಿನಲ್ಲಿ ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಇದೆ, ಇದರಿಂದಾಗಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಇದು ನಿಯಂತ್ರಿಸುತ್ತದೆ. ಕಿವಿ ತಿನ್ನುವ ಮೂಲಕ, ಸಿರೊಟೋನಿನ್ ಅನ್ನು ಹೆಚ್ಚಿಸುವ ರಾಸಾಯನಿಕಗಳನ್ನು ಸಕ್ರಿಯಗೊಳಿಸಲಾಗುತ್ತದೆ, ಇದು ರಾತ್ರಿಯ ಉತ್ತಮ ನಿದ್ರೆಗೆ ಕಾರಣವಾಗುತ್ತದೆ. ಮಧುಮೇಹ ರೋಗಿಗಳು ಪ್ರತಿದಿನ ಕಿವಿಯನ್ನು ಸೇವಿಸಬೇಕು.

ಇದನ್ನೂ ಓದಿ-Kidney ಯಲ್ಲಿ ಸಮಸ್ಯೆ ಇದ್ದರೆ ಶರೀರ ಈ ವಿಚಿತ್ರ ಸಂಕೇತಗಳನ್ನು ನೀಡುತ್ತದೆ, ನಿರ್ಲಕ್ಷಿಸಬೇಡಿ
 
ಕಿವಿ ಆರೋಗ್ಯದ ಆಗರವಾಗಿದೆ
ಇದಲ್ಲದೆ, ಕಿವಿಯನ್ನು ಆರೋಗ್ಯದ ನಿಧಿ ಎಂದು ಪರಿಗಣಿಸಲಾಗುತ್ತದೆ. ಈ ಹಣ್ಣಿನಲ್ಲಿ ಅನೇಕ ರೀತಿಯ ಪೋಷಕಾಂಶಗಳು ಕಂಡುಬರುತ್ತವೆ. ಲುಟೀನ್, ಝೀಕ್ಸಾಂಥಿನ್, ಫೈಟೊಕೆಮಿಕಲ್ಸ್ ಗಳು ಇದರಲ್ಲಿವೆ. ದೇಹದಲ್ಲಿ ಕಬ್ಬಿಣದ ಹೀರಿಕೊಳ್ಳುವಿಕೆಯನ್ನು ಹೆಚ್ಚಿಸಲು ಅವು ಸಹಾಯ ಮಾಡುತ್ತವೆ. ರಕ್ತಹೀನತೆಯ ಸಮಸ್ಯೆಯಿಂದ ಬಳಲುತ್ತಿರುವ ಜನರು ಇದರ ಪ್ರಯೋಜನವನ್ನು ಪಡೆಯಬಹುದು. ಪ್ರತಿದಿನ ಒಂದು ಕಿವಿ ತಿನ್ನುವುದರಿಂದ ಹಲವಾರು ಪ್ರಯೋಜನಗಳನ್ನು ಪಡೆಯಬಹುದು. ಇದು ಕಣ್ಣುಗಳ ಆರೋಗ್ಯಕ್ಕೆ ತುಂಬಾ ಮುಖ್ಯವಾದ ಹಣ್ಣು ಎಂದು ಪರಿಗಣಿಸಲಾಗಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News