Diwali Diet: ದೀಪಾವಳಿಯ ದಿನ ಈ ಆಹಾರದ ತಪ್ಪುಗಳನ್ನು ಮಾಡಬೇಡಿ, ಆರೋಗ್ಯಕ್ಕೆ ಹಾನಿಯಾದೀತು!

Diwali Diet: ನೀವು ದೀಪಾವಳಿಯಂದು ತಡರಾತ್ರಿಯ ಭೋಜನವನ್ನು ಯೋಜಿಸುತ್ತಿದ್ದರೆ, ನೀವು ಕೆಲವು ತಪ್ಪುಗಳನ್ನು ಮಾಡುವುದನ್ನು ತಪ್ಪಿಸಬೇಕು. ಇದರಿಂದ ಆರೋಗ್ಯ ಕೆಡುತ್ತದೆ.

Written by - Yashaswini V | Last Updated : Nov 4, 2021, 10:47 AM IST
  • ತಡರಾತ್ರಿ ಊಟಕ್ಕೆ ಹೋಗುವ ಮುನ್ನ ಮೊಸರು ಮತ್ತು ಬಾಳೆಹಣ್ಣು ತಿನ್ನಿ
  • ಇದು ನಿಮಗೆ ಪ್ರಯೋಜನಕಾರಿಯಾಗಲಿದೆ
  • ಈ ಎರಡೂ ವಸ್ತುಗಳು ಪ್ರಿಬಯಾಟಿಕ್ ಮತ್ತು ಪ್ರೋಬಯಾಟಿಕ್‌ಗಳ ಉತ್ತಮ ಸಂಯೋಜನೆಯಾಗಿದೆ
Diwali Diet: ದೀಪಾವಳಿಯ ದಿನ ಈ ಆಹಾರದ ತಪ್ಪುಗಳನ್ನು ಮಾಡಬೇಡಿ, ಆರೋಗ್ಯಕ್ಕೆ ಹಾನಿಯಾದೀತು! title=
Diwali Dinner Mistakes

Diwali Diet: ನೀವು ದೀಪಾವಳಿಯಂದು ತಡರಾತ್ರಿಯ ಭೋಜನವನ್ನು ಯೋಜಿಸುತ್ತಿದ್ದರೆ, ನೀವು ಕೆಲವು ತಪ್ಪುಗಳನ್ನು ಮಾಡುವುದನ್ನು ತಪ್ಪಿಸಬೇಕು. ಸೆಲೆಬ್ರಿಟಿ ಪೌಷ್ಟಿಕತಜ್ಞರಾದ ರುಜುತಾ ದಿವೇಕರ್ ಅವರು ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಹಬ್ಬದ ಸಂದರ್ಭದಲ್ಲಿ ಯಾವ ಆಹಾರದ ತಪ್ಪುಗಳು ನಿಮ್ಮ ಆರೋಗ್ಯಕ್ಕೆ ಹಾನಿ ಮಾಡುತ್ತದೆ ಎಂದು ಹೇಳಿದ್ದಾರೆ.

ಅತಿಯಾಗಿ ತಿನ್ನುವುದನ್ನು ತಪ್ಪಿಸಿ:
ಕೆಲವರು ಈ ದಿನ ತಡರಾತ್ರಿ ಭೋಜನ (Late Night Dinner) ಮಾಡಿದರೆ ದಪ್ಪಗಾಗಬಹುದು ಅಥವಾ ಜೀರ್ಣಕ್ರಿಯೆ ಕೆಡುತ್ತದೆ ಎಂದು ಭಾವಿಸಿ ಭಯಪಡುತ್ತಾರೆ. ಹೆಚ್ಚಿನವರು ದೀಪಾವಳಿಯಂದು ಏನನ್ನೂ ತಿನ್ನುವುದನ್ನು ಮತ್ತು ಕುಡಿಯುವುದನ್ನು ತಪ್ಪಿಸುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಹಬ್ಬವನ್ನು ಪೂರ್ತಿಯಾಗಿ ಸವಿಯಲು ಸಾಧ್ಯವಾಗುವುದಿಲ್ಲ. 

ಪೌಷ್ಟಿಕತಜ್ಞರಾದರುಜುತಾ ದಿವೇಕರ್ ಅವರ ಪ್ರಕಾರ, ನೀವು ತಡರಾತ್ರಿಯ ಭೋಜನಕ್ಕಾಗಿ ದಿನದ ಊಟವನ್ನು ಬಿಟ್ಟುಬಿಟ್ಟರೆ ಅಥವಾ ದಿನವಿಡೀ ದೈನಂದಿನ ಸೇವನೆಗಿಂತ ಕಡಿಮೆ ಸೇವಿಸಿದರೆ, ಅದನ್ನು ಮಾಡಬೇಡಿ. ಇದಕ್ಕೆ ಕಾರಣ ಹಗಲಿನಲ್ಲಿ ಕಡಿಮೆ ತಿಂದರೆ ಸ್ವಾಭಾವಿಕವಾಗಿ ರಾತ್ರಿ ಅಗತ್ಯಕ್ಕಿಂತ ಹೆಚ್ಚು ತಿನ್ನುತ್ತೀರಿ. ದಿನದಲ್ಲಿ ಊಟವನ್ನು ತ್ಯಜಿಸುವುದರಿಂದ ಅತಿಯಾಗಿ ತಿನ್ನುವ ಸಮಸ್ಯೆಗೆ ನೀವು ಬಲಿಯಾಗಬಹುದು.

ಇದನ್ನೂ ಓದಿ- Banana: ಖಾಲಿ ಹೊಟ್ಟೆಯಲ್ಲಿ ಬಾಳೆಹಣ್ಣು ಸೇವನೆಯಿಂದ ಆಗುವ ಪರಿಣಾಮ ತಿಳಿದಿದೆಯೇ?

ಇದಲ್ಲದೆ, ಬೆಳಿಗ್ಗೆ ಹೆಚ್ಚು ವ್ಯಾಯಾಮ ಮಾಡಿ, ರಾತ್ರಿ ಏನು ತಿಂದರೂ ತೊಂದರೆಯಾಗದು ಎಂದು ಯೋಚಿಸುತ್ತಿದ್ದರೆ ಮೊದಲು ನಿಮ್ಮ ಈ ತಪ್ಪು ಕಲ್ಪನೆಯಿಂದ ಹೊರ ಬನ್ನಿ. ಇದರಿಂದ ನಿಮಗೆ ಗ್ಯಾಸ್ಟ್ರಿಕ್ ಮತ್ತು ಉದರ ಸಂಬಂಧಿತ ಇತರ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.

ಮೊಸರು ಮತ್ತು ಬಾಳೆಹಣ್ಣು ತಿನ್ನಿರಿ:
ತಡರಾತ್ರಿ ಭೋಜನ (Dinner) ಸವಿಯುವ ಮುನ್ನ ಮೊಸರು (Curd) ಮತ್ತು ಬಾಳೆಹಣ್ಣು ತಿನ್ನಿ. ಇದು ನಿಮಗೆ ಪ್ರಯೋಜನಕಾರಿಯಾಗಲಿದೆ. ಈ ಎರಡೂ ವಸ್ತುಗಳು ಪ್ರಿಬಯಾಟಿಕ್ ಮತ್ತು ಪ್ರೋಬಯಾಟಿಕ್‌ಗಳ ಉತ್ತಮ ಸಂಯೋಜನೆಯಾಗಿದೆ. ಪೌಷ್ಟಿಕತಜ್ಞ ರುಜುತಾ ದಿವೇಕರ್ ಅವರ ಪ್ರಕಾರ, ಚಾಕೊಲೇಟ್‌ಗಳು, ಕುಕೀಗಳು ಅಥವಾ ಕೇಕ್‌ಗಳಂತಹ ತ್ವರಿತ ಸಿಹಿತಿಂಡಿಗಳನ್ನು ತಿನ್ನುವುದನ್ನು ತಪ್ಪಿಸಬೇಕು. ಈ ದಿನ ನೀವು ಕೆಲವು ವಿಶೇಷ ಆಯ್ದ ಸಿಹಿತಿಂಡಿಗಳನ್ನು ಮಾತ್ರ ತಿನ್ನುವುದು ಉತ್ತಮ.

ತಡರಾತ್ರಿಯ ಊಟಕ್ಕೆ ಒಂದು ಅಥವಾ ಎರಡು ಸ್ಟಾರ್ಟರ್‌ಗಳನ್ನು ಆರಿಸಿ. ನೀವು ಆಯ್ಕೆ ಮಾಡಲು ಹೆಚ್ಚಿನ ಭಕ್ಷ್ಯಗಳನ್ನು ಹೊಂದಿರುತ್ತೀರಿ, ಆದರೆ ಅವೆಲ್ಲವನ್ನೂ ತಿನ್ನುವ ಬದಲು, ಕೇವಲ ಒಂದು ಭಕ್ಷ್ಯವನ್ನು ಆಯ್ಕೆ ಮಾಡುವುದು ಉತ್ತಮ, ಹೆಚ್ಚೆಂದರೆ ನೀವು ಮೂರು ಪದಾರ್ಥಗಳನ್ನು ತಿನ್ನಬಹುದು. ಇದರಿಂದ ನಿಮಗೆ ಯಾವುದೇ ಹಾನಿಯಾಗುವುದಿಲ್ಲ.

ಇದನ್ನೂ ಓದಿ- Tea Benefits: ಚಳಿಗಾಲದಲ್ಲಿ ಈ ರೀತಿ ಚಹಾ ತಯಾರಿಸಿ ಸೇವಿಸಿದರೆ ಸಿಗುತ್ತೆ ಅದ್ಭುತ ಲಾಭ

ತುಪ್ಪದಿಂದ ಪಾದಗಳನ್ನು ಮಸಾಜ್ ಮಾಡಿ
ರುಜುತಾ ದಿವೇಕರ್ ಅವರ ಪ್ರಕಾರ, ತಡರಾತ್ರಿಯ ಊಟದಿಂದ ಹಿಂತಿರುಗಿದ ನಂತರ, ಪಾದಗಳನ್ನು ತುಪ್ಪದಿಂದ ಮಸಾಜ್ ಮಾಡಬೇಕು. ಇದರಿಂದ ಗ್ಯಾಸ್ ಮತ್ತು ವಾಯು ಸಮಸ್ಯೆ ನಿವಾರಣೆಯಾಗಿ ರಾತ್ರಿ ಚೆನ್ನಾಗಿ ನಿದ್ದೆ ಮಾಡಲು ಸಾಧ್ಯವಾಗುತ್ತದೆ. ಇದಲ್ಲದೆ ಒಂದು ಲೋಟ ಬೆಚ್ಚಗಿನ ನೀರನ್ನು ಕುಡಿಯುವುದು ಸಹ ಒಳ್ಳೆಯದು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News