Corona Vaccine : ಅಮೆರಿಕಾದಲ್ಲಿ Pfizer ಲಸಿಕೆ ಹಾಕಿಸಿಕೊಂಡ ವೈದ್ಯ ಸಾವು ; ವಾಕ್ಸಿನ್ ನತ್ತ ನೇರ ಬೊಟ್ಟು ಮಾಡಿದ ಮೃತನ ಪತ್ನಿ

ಅಮೆರಿಕಾದಲ್ಲಿ ಡಾ.ಗ್ರೆಗರಿ ಮೈಕಲ್ ಡಿ.18ರಂದು ಫೈಜರ್ ಲಸಿಕೆಯನ್ನು ಹಾಕಿಸಿಕೊಂಡಿದ್ದರು. ಲಸಿಕೆ ಹಾಕಿಸಿಕೊಂಡ 16 ದಿನಗಳ ಬಳಿಕ ಗ್ರೆಗರಿ ಮೈಕಲ್ ಮೃತಪಟ್ಟಿದ್ದಾರೆ. 

Written by - Zee Kannada News Desk | Last Updated : Jan 8, 2021, 04:35 PM IST
  • ಅಮೆರಿಕಾದಲ್ಲಿPfizer ಲಸಿಕೆ ಹಾಕಿಸಿಕೊಂಡ ವೈದ್ಯನ ಸಾವು
  • ಲಸಿಕೆ ಹಾಕಿಸಿಕೊಂಡ 16 ದಿನಗಳ ಬಳಿಕ ಮೃತಪಟ್ಟ ವೈದ್ಯ
  • ಲಸಿಕೆ ಹಾಕಿಸಿಕೊಂಡ 3ದಿನಗಳ ಬಳಿಕ ಕಾಣಿಸಿಕೊಂಡ ಅಡ್ಡಪರಿಣಾಮ
Corona Vaccine : ಅಮೆರಿಕಾದಲ್ಲಿ Pfizer ಲಸಿಕೆ ಹಾಕಿಸಿಕೊಂಡ ವೈದ್ಯ ಸಾವು ; ವಾಕ್ಸಿನ್ ನತ್ತ ನೇರ ಬೊಟ್ಟು ಮಾಡಿದ ಮೃತನ ಪತ್ನಿ title=
ಅಮೆರಿಕಾದಲ್ಲಿPfizer ಲಸಿಕೆ ಹಾಕಿಸಿಕೊಂಡ ವೈದ್ಯನ ಸಾವು

ವಾಷಿಂಗ್ಟನ್: ಅಮೆರಿಕಾದ ಮಿಯಾಮಿ (Miami) ಎಂಬಲ್ಲಿನ ವೈದ್ಯ ಗ್ರೆಗರಿ ಮೈಕಲ್ (Gregory Michael) ಸಾವಿಗೆ  ಕರೋನಾ ಲಸಿಕೆ ಫೈಜರ್ (Pfizer) ಕಾರಣ ಎಂದು ಗ್ರೆಗರಿ ಮೈಕಲ್ ಪತ್ನಿ ಆರೋಪಿಸಿದ್ದಾರೆ. ಡಾ.ಗ್ರೆಗರಿ ಮೈಕಲ್ ಡಿ.18ರಂದು ಫೈಜರ್ ಲಸಿಕೆಯನ್ನು ಹಾಕಿಸಿಕೊಂಡಿದ್ದರು. ಲಸಿಕೆ ಹಾಕಿಸಿಕೊಂಡ 16 ದಿನಗಳ ಬಳಿಕ ಗ್ರೆಗರಿ ಮೈಕಲ್ ಮೃತಪಟ್ಟಿದ್ದಾರೆ. 

ಲಸಿಕೆ ಹಾಕಿಸಿಕೊಳ್ಳುವ ಮುನ್ನ ಆರೋಗ್ಯವಂತರಾಗಿದ್ದ ಗ್ರೆಗರಿ:
 ಲಸಿಕೆ ಹಾಕಿಸಿಕೊಳ್ಳುವ ಮುನ್ನ ಡಾ.ಗ್ರೆಗರಿ ಮೈಕಲ್ ಅವರಿಗೆ ಯಾವುದೇ ರಿತಿಯ ಆರೋಗ್ಯ ಸಮಸ್ಯೆ ಇರಲಿಲ್ಲ ಎಂದು ಗ್ರೆಗರಿ ಪತ್ನಿ ಹೈಡಿ ನೆಕಲ್ ಮೆನ್ (Heidi Neckelmann) ತಿಳಿಸಿದ್ದಾರೆ. ಆದರೆ ಲಸಿಕೆ ಹಾಕಿಸಿಕೊಂಡ ನಂತರ ಇದ್ದಕ್ಕಿದ್ದಂತೆ, ಮೈಕಲ್ ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದಿರುವುದಾಗಿ ಅವರು ತಿಳಿಸಿದ್ದಾರೆ.

ಇದನ್ನೂ ಓದಿ : ಶಾಕಿಂಗ್ ! Pfizer ಲಸಿಕೆ ಪಡೆದ ನಂತರ ಪಾರ್ಶ್ವವಾಯುವಿಗೆ ತುತ್ತಾದ ಮಹಿಳಾ ವೈದ್ಯೆ

ಲಸಿಕೆಯಿಂದಲೇ ಸಾವು ಸಂಭವಿಸಿದೆ ಎಂಬುದು ಹೈಡಿ ನೆಕಲ್ ಮೆನ್ ವಾದ : 
ತನ್ನ ಪತಿಯ ಸಾವಿಗೆ ಫೈಜರ್  (Pfizer) ಲಸಿಕೆಯೇ ಕಾರಣ ಎಂಬುದು ಹೈಡಿ ನೆಕಲ್ ಮೆನ್ ನೇರ ಆರೋಪ. ಯಾಕೆಂದರೆ ಲಸಿಕೆ (Vaccine) ಹಾಕಿಸಿಕೊಳ್ಳುವ ಮೊದಲು ಗ್ರೆಗರಿ ಮೈಕಲ್ ಅವರನ್ನು ಸಂಪೂರ್ಣ ತಪಾಸಣೆಗೆ ಒಳಪಡಿಸಲಾಗಿತ್ತು. ಅವರಿಗೆ ಯಾವ ಸಮಸ್ಯೆಯೂ ಇರಲಿಲ್ಲ. ಗ್ರೆಗರಿ ಮೈಕಲ್ ಅವರನ್ನು ಕ್ಯಾನ್ಸರ್ (Cancer) ಪರೀಕ್ಷೆಗೂ ಒಳಪಡಿಸಲಾಗಿತ್ತು. ಆದರೆ ಅವರ  ಆರೋಗ್ಯದಲ್ಲಿ ಸಣ್ಣ ಸಮಸ್ಯೆಯೂ ಕಂಡುಬಂದಿರಲಿಲ್ಲ. ಹಾಗಾಗಿ ಈ ಸಾವು ಲಸಿಕೆಯಿಂದಲೇ ಸಂಭವಿಸಿದೆ ಎಂದು ಹೈಡಿ ನೆಕಲ್ ಮೆನ್ ಆಪಾದಿಸಿದ್ದಾರೆ.

ವೈದ್ಯರ ಸಾವಿನ ಬಗ್ಗೆ ಫೈಜರ್ ಏನು ಹೇಳುತ್ತದೆ?
ಡಾ. ಗ್ರೆಗರಿ ಮೈಕಲ್ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಫೈಜರ್ ತನ್ನ ಸ್ಪಷ್ಟನೆಯನ್ನು ನೀಡಿದೆ. ಈ ಬಗ್ಗೆ ಮಾತನಾಡಿದ ಸಂಸ್ಥೆಯ ವಕ್ತಾರ, ವೈದ್ಯನ ಸಾವಿನ ಬಗ್ಗೆ ನಮಗೆ ತಿಳಿದಿದೆ. ಇದರ ಬಗ್ಗೆ ಪರೀಕ್ಷೆ ನಡೆಯುತ್ತಿದೆ. ಆದರೆ, ಗ್ರೆಗರಿ ಸಾವಿಗೆ ಫೈಜರ್ ಲಸಿಕೆ ಕಾರಣ ಎನ್ನುವುದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ.

ಇದನ್ನೂ ಓದಿ : Corona Vaccine : ಇದು ವೈದ್ಯಲೋಕದ ಅಚ್ಚರಿ, ಭಾರತೀಯರಿಗೆ ಹೆಮ್ಮೆಯ ಸಂಗತಿ.! ನಮ್ಮಲ್ಲಿ ಇನ್ನೆಷ್ಟು ವ್ಯಾಕ್ಸಿನ್ ರೆಡಿಯಾಗುತ್ತಿದೆ ಗೊತ್ತಾ..?

ಲಸಿಕೆ ಹಾಕಿಸಿಕೊಂಡ 3 ದಿನಗಳ ನಂತರ ಕಾಣಿಸಿಕೊಂಡಿತ್ತು ರಿಯಾಕ್ಷನ್ :
ಲಸಿಕೆ ಹಾಕಿಸಿಕೊಂಡ 3 ದಿನಗಳ ನಂತರ ಅಡ್ಡ ಪರಿಣಾಮ (Side Effects) ಗೋಚರಿಸಲು ಆರಂಭವಾಗಿತ್ತು. ಗ್ರೆಗರಿ ಕೈ ಮತ್ತು ಕಾಲುಗಳಲ್ಲಿ ಕೆಂಪು ಕಲೆಗಳು ಕಾಣಿಸಿಕೊಂಡಿತ್ತು. ಇದಾದ ನಂತರ ಪರೀಕ್ಷೆ ವೇಳೆ ದೇಹದ ಪ್ಲೇಟ್ ಲೆಟ್ಸ್ ಕಡಿಮೆಯಾಗಿರುವುದು ಬೆಳಕಿಗೆ ಬಂದಿದೆ. ಸಾಮಾನ್ಯವಾಗಿ ಪ್ಲೆಟ್ ಲೆಟ್ಸ್ ಕೌಂಟ್ 150000 ದಿಂದ 450000 ವರೆಗೆ ಇರುತ್ತದೆ. ಆದರೆ ಗ್ರೆಗರಿ ಮೈಕಲ್ ಪ್ಲೇಟ್ ಲೆಟ್ಸ್  ಕುಸಿಯುತ್ತಾ ಬಂದಿದೆ.

ಎಷ್ಟೇ ಪ್ರಯತ್ನ ಪಟ್ಟರೂ ಪ್ಲೆಟ್ ಲೆಟ್ ಜಾಸ್ತಿಯಾಗಲೇ ಇಲ್ಲ: 
ಡಾ.ಗ್ರೆಗರಿಯಲ್ಲಿ ಪ್ಲೇಟ್ ಲೆಟ್ಸ್  ಸಮಸ್ಯೆ ಬಿಟ್ಟರೆ  ರಕ್ತದಲ್ಲಿ (Blood) ಬೇರೆ ಯಾವುದೇ ಸಮಸ್ಯೆ ಇರಲಿಲ್ಲ. ಹಾಗಾಗಿ ಎಲ್ಲೋ ತಪ್ಪಾಗಿದೆ ಎಂದು ಭಾವಿಸಿದ ವೈದ್ಯರು ಮತ್ತೊಮ್ಮೆ ಪರೀಕ್ಷೆ ನಡೆಸಿದರು. ಆ ವೇಳೆ ಪ್ಲೇಟ್ ಲೆಟ್ಸ್ ನಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆ ಕಂಡುಬಂದಿದ್ದು,ಕೂಡಲೇ ಅವರನ್ನು ಐಸಿಯುಗೆ (ICU)ದಾಖಲಿಸಲಾಯಿತು. ನಂತರ ವೈದ್ಯರ ತಂಡ ಎಷ್ಟೇ ಪ್ರಯತ್ನ ಪಟ್ಟರೂ ಪ್ಲೆಟ್ ಲೆಟ್ನಲ್ಲಿ ಏರಿಕೆ ಆಗಲೇ ಇಲ್ಲ. ಪ್ಲೇಟ್ ಲೆಟ್ಸ್ ಕಡಿಮೆಯದ ಕಾರಣ ಮೆದುಳಿನಲ್ಲಿ ರಕ್ತಸ್ತ್ರಾವವಾಗಿ ಸ್ಟ್ರೋಕ್ ಆಗಿದೆ. ಇದಾದ ಕೆಲವೇ ನಿಮಿಷಗಳಲ್ಲಿ ಗ್ರೆಗರಿ  ಸಾವನ್ನಪ್ಪಿದ್ದಾರೆ ಎಂದು ಹೈಡಿ ನೆಕಲ್ ಮೆನ್ ವಿವರಿಸಿದ್ದಾರೆ.

ಇದನ್ನೂ ಓದಿ : COVID Vaccine ತೆಗೆದುಕೊಳ್ಳುವ ಬಗ್ಗೆ ಜನ ಏನೇಳುತ್ತಾರೆ ಗೊತ್ತಾ?

ಲಸಿಕೆಯ ಅಡ್ಡಪರಿಣಾಮದ ಬಗ್ಗೆ ಜನರಿಗೆ ತಿಳುವಳಿಕೆ ನೀಡುವ ಅಗತ್ಯವಿದೆ:
ಡಾ. ಗ್ರೆಗರಿ ಲಸಿಕೆಯ ಪರವಾಗಿದ್ದರು. ಆ ಕಾರಣದಿಂದ ಅವರು ಮೊದಲು  ಲಸಿಕೆ ಹಾಕಿಸಿಕೊಂಡರು. ಆದರೆ, ಲಸಿಕೆಯಿಂದ ಅಡ್ಡಪರಿಣಾಮಗಳಾಗುತ್ತವೆ ಎನ್ನುವುದು ಜನಸಾಮಾನ್ಯರಿಗೆ ತಿಳಿಯಬೇಕು. ಪ್ರತಿಯೊಬ್ಬರಿಗೂ ಈ ಲಸಿಕೆ ಸರಿಹೊಂದುವುದಿಲ್ಲ ಎಂಬುದು ಎಲ್ಲರಿಗೂ ತಿಳಿಯಬೇಕು ಎಂದು ಹೈಡಿ ನೆಕಲ್ ಮೆನ್ ಮನವಿ ಮಾಡಿಕೊಂಡಿದ್ದಾರೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News