Ghee In Winter: ಚಳಿಗಾಲದಲ್ಲಿ ಒಂದು ಚಮಚ ದೇಸಿ ತುಪ್ಪ ಆರೋಗ್ಯಕ್ಕೆ ವರದಾನವೇ ಇದ್ದಂತೆ

Winter Health Tips: ಚಳಿಗಾಲದಲ್ಲಿ ತುಪ್ಪವನ್ನು ಆಹಾರದಲ್ಲಿ ಸೇರಿಸುವುದರಿಂದ ದೇಹವು ಹಲವು ಪ್ರಯೋಜನಗಳನ್ನು ಪಡೆಯುತ್ತದೆ. ತುಪ್ಪವು ಅನೇಕ ರೀತಿಯ ವೈರಲ್ ಸೋಂಕುಗಳನ್ನು ದೂರವಿಡುತ್ತದೆ. ಅದರ ಪ್ರಯೋಜನಗಳನ್ನು ತಿಳಿದುಕೊಳ್ಳೋಣ ಬನ್ನಿ,  

Written by - Nitin Tabib | Last Updated : Nov 19, 2022, 07:09 PM IST
  • ಸಾಮಾನ್ಯವಾಗಿ ತುಪ್ಪದ ಬಗ್ಗೆ ‘ತುಪ್ಪ ತಿಂದರೆ ದಪ್ಪಗಾಗುತ್ತೀರಿ’ ಎಂಬ ಪರಿಕಲ್ಪನೆಯನ್ನು ನೀವೆಲ್ಲರೂ ಕೇಳಿರಲೇಬೇಕು
  • ಆದರೆ, ಬೆಳಗ್ಗೆ ಮತ್ತು ಸಂಜೆ ಒಂದು ಚಮಚ ತುಪ್ಪವನ್ನು ಸೇವಿಸಿದರೆ ದೇಹಕ್ಕೆ ಒಳ್ಳೆಯದು ಎಂಬುದು ಮಾತ್ರ ಸತ್ಯ.
Ghee In Winter: ಚಳಿಗಾಲದಲ್ಲಿ ಒಂದು ಚಮಚ ದೇಸಿ ತುಪ್ಪ ಆರೋಗ್ಯಕ್ಕೆ ವರದಾನವೇ ಇದ್ದಂತೆ title=
Ghee Benefits In Winter

Ghee In Winter: ಸಾಮಾನ್ಯವಾಗಿ ತುಪ್ಪದ ಬಗ್ಗೆ ‘ತುಪ್ಪ ತಿಂದರೆ ದಪ್ಪಗಾಗುತ್ತೀರಿ’ ಎಂಬ ಪರಿಕಲ್ಪನೆಯನ್ನು ನೀವೆಲ್ಲರೂ ಕೇಳಿರಲೇಬೇಕು ಆದರೆ, ಬೆಳಗ್ಗೆ ಮತ್ತು ಸಂಜೆ ಒಂದು ಚಮಚ ತುಪ್ಪವನ್ನು ಸೇವಿಸಿದರೆ ದೇಹಕ್ಕೆ ಒಳ್ಳೆಯದು ಎಂಬುದು ಮಾತ್ರ ಸತ್ಯ. ಆದಾಗ್ಯೂ, ಒಬ್ಬ ವ್ಯಕ್ತಿಯು ಯಾವುದೇ ಆರೋಗ್ಯ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿದ್ದರೆ, ತುಪ್ಪವು ಖಂಡಿತವಾಗಿಯೂ ಅವನಿಗೆ ಹಾನಿಕಾರಕವಾಗಿದೆ. ಆದರೆ, ಆರೋಗ್ಯವಂತ ವ್ಯಕ್ತಿಗೆ ತುಪ್ಪ ಪ್ರಯೋಜನಕಾರಿಯಾಗಿದೆ. ವಿಶೇಷವಾಗಿ ಹವಾಮಾನವು ತಂಪಾಗಿರುವಾಗ ತುಪ್ಪ ನಮ್ಮ ದೇಹಕ್ಕೆ ಸಾಕಷ್ಟು ಲಾಭಗಳನ್ನು ನೀಡುತ್ತದೆ.

ಚಳಿಗಾಲ ಬಂತೆಂದರೆ, ಜನರು ಸ್ವೆಟರ್, ಕ್ವಿಲ್ಟ್, ಬ್ಲಾಂಕೆಟ್ ಇತ್ಯಾದಿಗಳನ್ನು ತೆಗೆಯಲು ಪ್ರಾರಂಭಿಸುತ್ತಾರೆ. ಶೀತವನ್ನು ತಪ್ಪಿಸಲು, ದೇಹದ ಬಾಹ್ಯ ಭಾಗಗಳಿಗೆ ಎಷ್ಟು ಕಾಳಜಿ ಅವಶ್ಯವೋ, ಆಂತರಿಕ ದೇಹದ ಬಗ್ಗೆ ಅಷ್ಟೇ ಕಾಳಜಿ ವಹಿಸುವುದು ತುಂಬಾ ಮುಖ್ಯವಾದ ಸಂಗತಿ. ಚಳಿಗಾಲದಲ್ಲಿ ನಾವು ನಮ್ಮ ಆಹಾರದಲ್ಲಿ ಕೋಲ್ಡ್ ಎಫೆಕ್ಟ್ ವಸ್ತುಗಳ ಬದಲಿಗೆ ಮೆಂತ್ಯ, ಪಾಲಕ್ ಮುಂತಾದ ಬಿಸಿ ಗುಣಧರ್ಮವಿರುವ ಆಹಾರಗಳನ್ನು ಸೇರಿಸಿಕೊಳ್ಳಬೇಕು.

ಇದರೊಂದಿಗೆ ಜನರು ಚಳಿಯಲ್ಲಿ ಮುಕ್ತವಾಗಿ ಬಳಸಬೇಕಾದ ಆಹಾರ ಪದಾರ್ಥವೆಂದರೆ ಅದು ತುಪ್ಪ. ಚಳಿಗಾಲದ ಋತುವಿನಲ್ಲಿ ಮಾಡುವ ಎಲ್ಲಾ ಪಾಕವಿಧಾನಗಳಲ್ಲಿ ನೀವು ತುಪ್ಪವನ್ನು ಬಳಸಬಹುದು. ಆಯುರ್ವೇದದಲ್ಲಿಯೂ ಸಹ, ಶೀತ ಹವಾಮಾನಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸಲು ಆಹಾರದಲ್ಲಿ ತುಪ್ಪವನ್ನು ಸಮತೋಲಿತವಾಗಿ ಬಳಸುವುದನ್ನು ಸೂಚಿಸಲಾಗುತ್ತದೆ.

ಚಳಿಗಾಲದಲ್ಲಿ ತುಪ್ಪ ತಿನ್ನುವುದರಿಂದ ಆಗುವ ಲಾಭಗಳೇನು? 
>> ತುಪ್ಪ ನಮ್ಮ ಚರ್ಮಕ್ಕೆ ಪ್ರಯೋಜನಕಾರಿಯಾಗಿದೆ. ವಾಸ್ತವದಲ್ಲಿ ತುಪ್ಪದಲ್ಲಿ ಕೊಬ್ಬಿನಾಮ್ಲಗಳು ತುಪ್ಪದಲ್ಲಿ ಸಾಕಷ್ಟು ಕಂಡುಬರುತ್ತವೆ, ಇದು ನಿರ್ಜೀವ ಮತ್ತು ಶುಷ್ಕ ಚರ್ಮಕ್ಕೆ ಜೀವವನ್ನು ತುಂಬುವ ಕೆಲಸ ಮಾಡುತ್ತದೆ.

>> ತುಪ್ಪದ ಸೇವನೆಯಿಂದ ಚಳಿಗಾಲದಲ್ಲಿ ಅಜೀರ್ಣ ಸಮಸ್ಯೆ ದೂರಾಗುತ್ತದೆ. ಕೊಬ್ಬಿನ ಹೊರತಾಗಿ ವಿಟಮಿನ್ ಎ, ವಿಟಮಿನ್ ಬಿ, ವಿಟಮಿನ್ ಡಿ ಮುಂತಾದ ಪೋಷಕಾಂಶಗಳು ಇದರಲ್ಲಿ ಕಂಡುಬರುತ್ತವೆ. ತುಪ್ಪದಲ್ಲಿ ಕಂಡುಬರುವ ಒಮೆಗಾ 3 ಕೊಬ್ಬಿನಾಮ್ಲಗಳು ನಮ್ಮ ಮೆದುಳು ಮತ್ತು ಹೃದಯದ ಆರೋಗ್ಯಕ್ಕೆ ಪ್ರಯೋಜನಕಾರಿ.

>> ಚಳಿಗಾಲದ ಋತುವಿನಲ್ಲಿ, ಜನರು ಹೆಚ್ಚಾಗಿ ಕಫದ ಸಮಸ್ಯೆಯನ್ನು ಎದುರಿಸುತ್ತಾರೆ. ಕಫದ ಸಮಸ್ಯೆಯನ್ನು ಹೋಗಲಾಡಿಸುವಲ್ಲಿಯೂ ತುಪ್ಪ ಪರಿಣಾಮಕಾರಿಯಾಗಿದೆ. ಇದು ಉರಿಯೂತ ನಿವಾರಕ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದ್ದು, ಇದು ಕಫ ಮತ್ತು ಶೀತವನ್ನು ಗುಣಪಡಿಸಲು ಸಹಾಯ ಮಾಡುತ್ತದೆ. ಕಫ ಹೋಗಲಾಡಿಸಲು ಒಂದು ಚಮಚ ತುಪ್ಪವನ್ನು ಬಿಸಿ ಮಾಡಿ ನೇರವಾಗಿ ಸೇವಿಸಿ. ನೀವು ಬಯಸಿದರೆ, ಅದನ್ನು ಶುಂಠಿ ಪುಡಿಯೊಂದಿಗೆ ಸಹ ತೆಗೆದುಕೊಳ್ಳಬಹುದು.

>> ತುಪ್ಪದ ಸೇವನೆಯಿಂದ ದೃಷ್ಟಿ ಚುರುಕಾಗುತ್ತದೆ. ಆಯುರ್ವೇದದಲ್ಲಿ ಕೂಡ, ಚಳಿಗಾಲದಲ್ಲಿ ತುಪ್ಪದ ಸೇವನೆಯು ಕಣ್ಣುಗಳಿಗೆ ಪ್ರಯೋಜನಕಾರಿ ಎಂದು ಹೇಳಲಾಗಿದೆ.

>> ದೇಹವನ್ನು ಬೆಚ್ಚಗಿಡಲು ತುಪ್ಪವು ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಹೆಚ್ಚಿನ ಹೊಗೆ ಬಿಂದುವಿನಿಂದಾಗಿ ತುಪ್ಪವನ್ನು ಅಡುಗೆಗೆ ಪರಿಪೂರ್ಣವೆಂದು ಪರಿಗಣಿಸಲಾಗಿದೆ.

ಇದನ್ನೂ ಓದಿ-Viral Video: ಹಾವು ಕಚ್ಚಿದಾಗ ಮನುಷ್ಯನ ರಕ್ತದ ಮೇಲೆ ಅದರ ಪ್ರಭಾವ ಏನಾಗುತ್ತದೆ ಗೊತ್ತಾ? ವಿಡಿಯೋ ನೋಡಿ

>> ತುಪ್ಪದಲ್ಲಿ ಕ್ಯಾಲ್ಸಿಯಂ ಮತ್ತು ವಿಟಮಿನ್ ಇ ಸಮೃದ್ಧವಾಗಿದೆ, ಇದು ನಮ್ಮ ಮೂಳೆಗಳನ್ನು ಬಲಪಡಿಸುತ್ತದೆ.

ಇದನ್ನೂ ಓದಿ-Health Tips : ಖಾಲಿ ಹೊಟ್ಟೆಯಲ್ಲಿ ತುಳುಸಿ ಎಲೆ ಸೇವಿಸಿದರೆ, ಆರೋಗ್ಯಕ್ಕಿದೆ ಅನೇಕ ಲಾಭಗಳು!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News