Drinking Water: ಸ್ನಾನವಾದ ಬಳಿಕ ನೀರು ಕುಡಿಯುವುದರಿಂದ ಎಷ್ಟೆಲ್ಲ ಪ್ರಯೋಜನ ಗೊತ್ತಾ?

Written by - Zee Kannada News Desk | Last Updated : May 1, 2022, 05:10 PM IST
    • ಬೆಳಗ್ಗೆ ಎದ್ದ ತಕ್ಷಣ 1 ಲೋಟ ನೀರು ಕುಡಿಯಿರಿ
    • ಊಟಕ್ಕೂ 30 ನಿಮಿಷ ಮೊದಲು ನೀರು ಕುಡಿಯುವುದು ಉತ್ತಮ
    • ಸ್ನಾನದ ನಂತರ ತಪ್ಪದೇ 1 ಲೋಟ ನೀರನ್ನು ಕುಡಿಯಿರಿ.
Drinking Water: ಸ್ನಾನವಾದ ಬಳಿಕ ನೀರು ಕುಡಿಯುವುದರಿಂದ ಎಷ್ಟೆಲ್ಲ ಪ್ರಯೋಜನ ಗೊತ್ತಾ?  title=
ನೀರು

ನಮ್ಮ ದೇಹಕ್ಕೆ ಎಷ್ಟು ನೀರು ಬೇಕು ಎಂದು ಹೇಳುವ ಅಗತ್ಯವಿಲ್ಲ. ನೀರು ಕೂಡ ರೋಗಗಳನ್ನು ತಡೆಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇನ್ನೂ ಬೇಸಿಗೆ ಗಾಲದಲ್ಲಿ ದೇಹದಲ್ಲಿ ಸಾಕಷ್ಟು ಪ್ರಮಾಣದ ನೀರನ್ನು ಯಾವಾಗಲೂ ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಬಿಸಿಲಿನಿಂದಾಗಿ ದೇಹದಿಂದ ಬೆವರು ವಿಕೆಯಿಂದ ದೇಹದಲ್ಲಿ ನೀರು ವೇಗವಾಗಿ ಕಡಿಮೆಯಾಗುತ್ತದೆ. ನಮ್ಮ ದೇಹದಲ್ಲಿ ನೀರಿನ ಕೊರತೆ ಉಂಟಾದರೆ - ಶಾಖದ ಅಲೆ ಅಂದ್ರೆ ಮೈ ಬಿಸಿಯಾಗಿರುವ ಅನುಭವವಾಗುವ ಸಾಧ್ಯತೆಯೂ ಹೆಚ್ಚುತ್ತದೆ. ಆದ್ದರಿಂದ ನೀರನ್ನು ಕುಡಿಯುವ ಇಡುವುದು ಬಹಳ ಮುಖ್ಯ.

ನಾವು ಯಾವ ಸಮಯದಲ್ಲಿ ನೀರನ್ನು ಕುಡಿಯಬೇಕು ಮತ್ತು ಯಾವ ಸಮಯದಲ್ಲಿ, ಅದರ ಬಗ್ಗೆ ನಿಮಗೆ ತಿಳಿದಿದೆಯೇ? ಸರಿಯಾದ ಸಮಯದಲ್ಲಿ ಮತ್ತು ಸರಿಯಾದ ರೀತಿಯಲ್ಲಿ ನೀರು ಕುಡಿದಾಗ ಅದರ ಪ್ರಯೋಜನಗಳು ಮತ್ತಷ್ಟು ಹೆಚ್ಚಾಗುತ್ತದೆ. ಸರಿಯಾದ ಸಮಯದಲ್ಲಿ ನೀರು ಕುಡಿಯುವುದರಿಂದ ಹೊಟ್ಟೆ ನೋವು, ಹೊಟ್ಟೆ ಉಬ್ಬರ, ಸುಸ್ತು, ಅಧಿಕ ರಕ್ತದೊತ್ತಡ, ಮಲಬದ್ಧತೆ ಯಂತಹ ಕಾಯಿಲೆಗಳಿಂದ ದೂರವಿರಲು ಸಹಾಯವಾಗುತ್ತದೆ ಎಂದು ವಿಜ್ಞಾನ ಸಾಬೀತು ಪಡಿಸಿದೆ. 

ಇದನ್ನೂ ಓದಿ : ಆಮ್ಲೇಟನ್ನು ಇನ್ನಷ್ಟು ಸಾಫ್ಟ್ ಮತ್ತು ಟೇಸ್ಟಿ ಮಾಡುವುದು ಹೇಗೆ..?

ನೀರು ಯಾವಾಗ ಕುಡಿಯಬೇಕು :

ಬೆಳಗ್ಗೆ ಎದ್ದ ತಕ್ಷಣ 1 ಲೋಟ ನೀರು ಕುಡಿಯಿರಿ. ಹೀಗೆ ಮಾಡುವುದರಿಂದ ದೇಹದಲ್ಲಿನ ವಿಷಕಾರಿ ಅಂಶ, ಕೊಳೆ, ದೇಹದ ಎಲ್ಲಾ ಅಂಗಗಳು ಸರಿಯಾಗಿ ಕೆಲಸ ಮಾಡುತ್ತದೆ ಮತ್ತು ನೀವು ದಿನವಿಡೀ ಶಕ್ತಿಯಿಂದ ಕೂಡಿರುವಿರಿ. ಊಟಕ್ಕೂ 30 ನಿಮಿಷ ಮೊದಲು ನೀರು ಕುಡಿಯುವುದು ಉತ್ತಮ, ಹೌದು, ಊಟಕ್ಕೂ 30 ನಿಮಿಷ ಮೊದಲು ನೀರು ಕುಡಿಯುವುದು ತೂಕ ಕಡಿಮೆ ಮಾಡುವುದು ಮಾತ್ರವಲ್ಲ, ನಿಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಊಟಕ್ಕೂ ಮುನ್ನ ನೀರು ಕುಡಿಯುವುದರಿಂದ ಹೊಟ್ಟೆ ತುಂಬಿದಂತೆ ಆಗುತ್ತದೆ ಇದರಿಂದ ನೀವು ಹೆಚ್ಚು ಕ್ಯಾಲರಿ ಸೇವಿಸದೇ ಇರುವುದಲ್ಲದೆ ಜೀರ್ಣಕ್ರಿಯೆಯೂ ಉತ್ತಮಗೊಳ್ಳುತ್ತದೆ.

ಇದನ್ನೂ ಓದಿ : Vitamin K Deficiency Symptoms: ವಿಟಮಿನ್ 'ಕೆ' ಕೊರತೆಯಿದ್ದಾಗ ಕಂಡುಬರುವ ಲಕ್ಷಣಗಳಿವು

ಸ್ನಾನದ ನಂತರ- ಸ್ನಾನದ ನಂತರ ನೀವು 1 ಲೋಟ ನೀರನ್ನು ತಪ್ಪದೇ  ಕುಡಿಯಿರಿ. ಹೀಗೆ ಮಾಡುವುದರಿಂದ ರಕ್ತ ಪರಿಚಲನೆ ಯನ್ನು ಕ್ರಮವಾಗಿಸುತ್ತದೆ ಮತ್ತು ರಕ್ತದೊತ್ತಡದ ಸಮಸ್ಯೆಯನ್ನು ನಿವಾರಿಸುತ್ತದೆ. ಆದರೆ ಸ್ನಾನದ ಬಳಿಕ ತಣ್ಣೀರನ್ನು ಕುಡಿಯಬೇಡಿ. ಆದಷ್ಟು ಸಾಮಾನ್ಯ ಅಥವಾ ಉಗುರುಬೆಚ್ಚಗಿನ ನೀರನ್ನು ಕುಡಿಯಿರಿ.

ಮಲಗುವ ಮುನ್ನ- ರಾತ್ರಿ ಮಲಗುವ ಮುನ್ನ ನೀರು ಕುಡಿಯುವುದರಿಂದ ನಿಮ್ಮ ದೇಹವು ರಾತ್ರಿಯಿಡೀ ಹೈಡ್ರೇಟ್ ಆಗಿ ರುತ್ತಿತ್ತು ಮತ್ತು ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡುತ್ತದೆ. ಆದರೆ, ಹೆಚ್ಚು ನೀರು ಕುಡಿಯಬೇಡಿ ಅಥವಾ ರಾತ್ರಿ ವೇಳೆ ಮತ್ತೆ ಶೌಚಾಲಯಕ್ಕೆ ಹೋಗಬೇಕಾಗುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News