ಬೆಂಗಳೂರು : ಇತ್ತೀಚಿನ ದಿನಗಳಲ್ಲಿ, ಅನೇಕ ಜನರು ತೂಕ ಹೆಚ್ಚಳದ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಮಧ್ಯವಯಸ್ಕ ಮಾತ್ರವಲ್ಲದೆ ಅನೇಕ ಯುವಕರು ಕೂಡಾ ಹೊಟ್ಟೆ ಮತ್ತು ಸೊಂಟದ ಭಾಗದಲ್ಲಿ ಸೇರಿಕೊಂಡಿರುವ ಕೊಬ್ಬಿನ ಸಮಸ್ಯೆ ಎದುರಿಸುತ್ತಿದ್ದಾರೆ. ಅನುಸರಿಸುತ್ತಿರುವ ತಪ್ಪು ಆಹಾರ ಪದ್ಧತಿ ಮತ್ತು ವಿಭಿನ್ನ ಜೀವನಶೈಲಿ ಇದಕ್ಕೆ ಪ್ರಮುಖ ಕಾರಣವಾಗಿದೆ. ಅಲ್ಲದೆ ಬೊಜ್ಜಿನಿಂದ ಅಧಿಕ ರಕ್ತದೊತ್ತಡ, ಹೃದ್ರೋಗ, ಮಧುಮೇಹದಂತಹ ಕಾಯಿಲೆಗಳು ಬರುವ ಅಪಾಯವಿದೆ. ಈ ಸಮಸ್ಯೆಯನ್ನು ಈ ಹಸಿರು ಎಲೆ ಸುಲಭವಾಗಿ ನಿವಾರಿಸುತ್ತದೆ.
ತೂಕ ಇಳಿಸಲು ಈ ಎಲೆಯನ್ನು ಸೇವಿಸಿ :
ಇಲ್ಲಿ ನಾವು ಮಾತನಾಡುತ್ತಿರುವುದು ಒಂದೆಲಗ ಸೊಪ್ಪಿನ ಬಗ್ಗೆ.. ತೂಕ ಇಳಿಸುವಲ್ಲಿ ತುಂಬಾ ಪರಿಣಾಮಕಾರಿಯಾಗಿದೆ. ಇದನ್ನು ವೈಜ್ಞಾನಿಕವಾಗಿ ಸೆಂಟೆಲ್ಲಾ ಏಷ್ಯಾಟಿಕಾ ಮತ್ತು ಸಂಸ್ಕೃತದಲ್ಲಿ ಮಂಡುಗಪರ್ಣಿ ಎಂದು ಕರೆಯಲಾಗುತ್ತದೆ. ಈ ರೀತಿಯ ಗಿಡಮೂಲಿಕೆಗಳು ನಮ್ಮ ದೇಹಕ್ಕೆ ಹಲವಾರು ರೀತಿಯಲ್ಲಿ ಪ್ರಯೋಜನಕಾರಿಯಾಗಿದೆ. .
ಇದನ್ನೂ ಓದಿ : Home remedies for Constipation: ಮಲಬದ್ಧತೆ ನಿವಾರಣೆಗೆ ಅದ್ಭುತ ಮನೆಮದ್ದುಗಳು
ಒಂದೆಲಗದ ಸಹಾಯದಿಂದ ತೂಕವನ್ನು ಹೇಗೆ ಕಳೆದುಕೊಳ್ಳುವುದು?
ಒಂದೆಲಗ ಯಾವುದೇ ಆಯುರ್ವೇದ ಔಷಧಿಗಿಂತ ಕಡಿಮೆಯಿಲ್ಲ. ಇದನ್ನು ಅನೇಕ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ. ಈ ಸೊಪ್ಪಿನಲ್ಲಿರುವ ಪೋಷಕಾಂಶಗಳು ಮತ್ತು ಗುಣಲಕ್ಷಣಗಳಿಂದಾಗಿ, ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ . ನ್ಯಾಷನಲ್ ಸೆಂಟರ್ ಫಾರ್ ಬಯೋಟೆಕ್ನಾಲಜಿ ಇನ್ಫಾರ್ಮೇಶನ್ ಅಂದರೆ NCBE ಪ್ರಕಾರ, ಒಂದೆಲಗದಲ್ಲಿ ಕಂಡುಬರುವ ಸ್ಥೂಲಕಾಯ ವಿರೋಧಿ ಗುಣಲಕ್ಷಣಗಳು ದೇಹದಲ್ಲಿನ ಹೆಚ್ಚುವರಿ ಕೊಬ್ಬನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.
ಒಂದೆಲಗ ಸೊಪ್ಪು ತಿನ್ನುವುದು ಹೇಗೆ?
ತೂಕ ಇಳಿಸಿಕೊಳ್ಳಲು ಬಯಸಿದರೆ, ಮೊದಲು ಒಂದೆಲಗ ಎಲೆಗಳನ್ನು ಸ್ವಚ್ಛಗೊಳಿಸಿ ಪೇಸ್ಟ್ ಮಾಡಿ ಮಾಡಿಕೊಳ್ಳಿ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬೆಚ್ಚಗಿನ ನೀರು ಅಥವಾ ಹಾಲಿನೊಂದಿಗೆ ಇದನ್ನು ಕುಡಿಯಿರಿ. ನಿಯಮಿತವಾಗಿ ಹೀಗೆ ಮಾಡುತ್ತಾ ಬಂದರೆ ಕೆಲವೇ ದಿನಗಳಲ್ಲಿ ದೇಹದ ಕೊಬ್ಬು ಕಡಿಮೆಯಾಗಲು ಪ್ರಾರಂಭವಾಗುತ್ತದೆ.
ಇದನ್ನೂ ಓದಿ : ಡೈ, ಹೇರ್ ಕಲರ್, ದುಬಾರಿ ಪ್ರಾಡಕ್ಟ್ ಬೇಡವೇ ಬೇಡ ! ಹಿತ್ತಲಲ್ಲೇ ಬೆಳೆಯುವ ಈ ಎಲೆ ನೀಡುವುದು ಬಿಳಿ ಕೂದಲಿಗೆ ಶಾಶ್ವತ ಪರಿಹಾರ
ಒಂದೆಲಗ ಸೊಪ್ಪಿನ ಗಂಜಿಯನ್ನು ಕೂಡಾ ಸೇವಿಸಬಹುದು. ಇದು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಈ ಎಲೆಯನ್ನು ತರಿ ತರಿಯಾಗಿ ರುಬ್ಬಿಕೊಳ್ಳಿ. ನಂತರ ಕುಕ್ಕರ್‌ನಲ್ಲಿ ಅಕ್ಕಿ, ಸಣ್ಣ ಈರುಳ್ಳಿ, ಬೆಳ್ಳುಳ್ಳಿ ಎಸಳು, ಜೀರಿಗೆ, ಉಪ್ಪು ಹಾಕಿ, 4 ಸೀಟಿ ಕೂಗಿಸಿಕೊಳ್ಳಿ. ನಂತರ, ಒಲೆಯನ್ನು ಆಫ್ ಮಾಡಿ. ಈಗ ಒಗ್ಗರಣೆಗೆ ಎಣ್ಣೆ ಇಟ್ಟು ಅದಕ್ಕೆ ಈರುಳ್ಳಿ ಮತ್ತು ಕರಿಬೇವಿನ ಎಲೆಗಳನ್ನು ಹಾಕಿ ಚೆನ್ನಾಗಿ ಹುರಿಯಿರಿ. ನಂತರ ಅದಕ್ಕೆ ತರಿತರಿಯಾಗಿ ರುಬ್ಬಿಟ್ಟುಕೊಂಡ ಒಂದೆಲಗ ಸೊಪ್ಪಿನ ಪೇಸ್ಟ್ ಹಾಕಿ. ಚೆನ್ನಾಗಿ ಹುರಿದ ನಂತರ, ಅದನ್ನು ಗಂಜಿಗೆ ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ದಯವಿಟ್ಟು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee NEWS ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.)