Health Tips: ಜಾತಕ ಪರೀಕ್ಷೆ ಅಷ್ಟೇ ಅಲ್ಲ, ಭಾವೀ ದಂಪತಿಗಳು ಆರೋಗ್ಯ ಪರೀಕ್ಷೆಗೂ ಒಳಗಾಗಬೇಕು, ಕಾರಣ ಇಲ್ಲಿದೆ!

Health Care Tips: ಥಲಸ್ಸೆಮಿಯಾ ಕಾಯಿಲೆಯ ಕಾರಣ, ಮಗುವಿನ ರಕ್ತವನ್ನು ಪ್ರತಿ ತಿಂಗಳು ಬದಲಾಯಿಸಬೇಕಾಗುತ್ತದೆ. ಇದರಿಂದಾಗಿ ಮಗು ಹಲವು ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹೀಗಾಗಿ ಮದುವೆಗೂ ಮುನ್ನ ವಧುವರರು ತಮ್ಮ ಆರೋಗ್ಯ ತಪಾಸಣೆ ಮಾಡಿಕೊಳ್ಳುವುದು ತುಂಬಾ ಮುಖ್ಯವಾಗಿದೆ.   

Written by - Nitin Tabib | Last Updated : May 9, 2023, 05:13 PM IST
  • ನಮ್ಮ ದೇಹದಲ್ಲಿನ ರಕ್ತವು ಎರಡು ಅಂಶಗಳಿಂದ ಕೂಡಿದೆ.
  • ಮೊದಲನೆಯದು- ಹಿಮ ಅಂದರೆ ಕಬ್ಬಿಣದ ಅಂಶ ಮತ್ತು ಎರಡನೆಯದು- ಗ್ಲೋಬಿನ್ ಅಂದರೆ ಒಂದು ರೀತಿಯ ಪ್ರೋಟೀನ್.
  • ಮಗುವಿಗೆ ಥಲಸ್ಸೆಮಿಯಾ ಇದ್ದಾಗ, ಮಗುವಿನ ದೇಹದಲ್ಲಿ ಕಬ್ಬಿಣವು ಉತ್ಪತ್ತಿಯಾಗುವುದಿಲ್ಲ ಮತ್ತು ಅವನ ರಕ್ತ ತೆಳುವಾಗುತ್ತದೆ.
Health Tips: ಜಾತಕ ಪರೀಕ್ಷೆ ಅಷ್ಟೇ ಅಲ್ಲ, ಭಾವೀ ದಂಪತಿಗಳು ಆರೋಗ್ಯ ಪರೀಕ್ಷೆಗೂ ಒಳಗಾಗಬೇಕು, ಕಾರಣ ಇಲ್ಲಿದೆ! title=
ಆರೋಗ್ಯ ಸಲಹೆಗಳು

Health Tips For Couples: ಥಲಸ್ಸೆಮಿಯಾ ಒಂದು ಆನುವಂಶಿಕ ಕಾಯಿಲೆಯಾಗಿದ್ದು, ಇದು ಪೋಷಕರಿಂದ ಮಗುವಿಗೆ ಬರುತ್ತದೆ. ಇದರಿಂದ ಮಕ್ಕಳು ಸಾಕಷ್ಟು ತೊಂದರೆ ಅನುಭವಿಸಬೇಕಾಗುತ್ತದೆ, ತಜ್ಞರ ಪ್ರಕಾರ, ಪೋಷಕರಿಗೆ ಈ ರೋಗವಿಲ್ಲದಿದ್ದರೆ, ಮಗುವಿಗೆ ಸಹ ಈ ರೋಗ ಬರುವುದಿಲ್ಲ ಎಂಬುದು ಅನಿವಾರ್ಯವಲ್ಲ. ಹೀಗಾಗಿ  ಭವಿಷ್ಯದ ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ತಯಾರಿ ಮುಂಚಿತವಾಗಿ ನಡೆಸಬೇಕು. ಮದುವೆಗೆ ಮುನ್ನ ವಧು-ವರದು ಹೇಗೆ ತಮ್ಮ ಜಾತಕವನ್ನು ಪರೀಕ್ಷಿಸಿಕೊಳ್ಳುತ್ತಾರೆಯೋ, ಅದೇ ರೀತಿ ಅವರು ತಮ್ಮ ಆರೋಗ್ಯ ತಪಾಸಣೆಯನ್ನೂ ಕೂಡ ಮಾಡಿಸಿಕೊಳ್ಳಬೇಕು ಎನ್ನುತ್ತಾರೆ ವೈದ್ಯರು. ಇದರಿಂದ ಥಲಸ್ಸೆಮಿಯಾದಂತಹ ಯಾವುದೇ ರೀತಿಯ ಕಾಯಿಲೆ ಅಪಾಯ ಮುಂದಿನ ಪೀಳಿಗೆಗೆ ಬರುವುದಿಲ್ಲ.
 
ಥಲಸ್ಸೆಮಿಯಾ ಕಾಯಿಲೆಯಿಂದ ಉಂಟಾಗುವ ಸಮಸ್ಯೆಗಳೇನು?
ನಮ್ಮ ದೇಹದಲ್ಲಿನ ರಕ್ತವು ಎರಡು ಅಂಶಗಳಿಂದ ಕೂಡಿದೆ. ಮೊದಲನೆಯದು- ಹಿಮ ಅಂದರೆ ಕಬ್ಬಿಣದ ಅಂಶ ಮತ್ತು ಎರಡನೆಯದು- ಗ್ಲೋಬಿನ್ ಅಂದರೆ ಒಂದು ರೀತಿಯ ಪ್ರೋಟೀನ್. ಮಗುವಿಗೆ ಥಲಸ್ಸೆಮಿಯಾ ಇದ್ದಾಗ, ಮಗುವಿನ ದೇಹದಲ್ಲಿ ಕಬ್ಬಿಣವು ಉತ್ಪತ್ತಿಯಾಗುವುದಿಲ್ಲ ಮತ್ತು ಅವನ ರಕ್ತ ತೆಳುವಾಗುತ್ತದೆ. ಈ ಕಾರಣದಿಂದಾಗಿ, ಮಗುವಿನ ಬೆಳವಣಿಗೆಯು ನಿಂತುಹೋಗುತ್ತದೆ ಮತ್ತು ಆಮ್ಲಜನಕವು ದೇಹದ ಉಳಿದ ಭಾಗಗಳನ್ನು ತಲುಪುವುದಿಲ್ಲ. ಇಂತಹ ಸ್ಥಿತಿಯಲ್ಲಿ, ಮಗುವಿಗೆ ಉಸಿರಾಟದ ತೊಂದರೆ, ಆಯಾಸ ಮತ್ತು ನಿರಂತರ ಜ್ವರ ಇರುತ್ತದೆ. ಈ ಸಮಸ್ಯೆಯಿಂದ ಮಗುವನ್ನು ಉಳಿಸಲು, ಅವನಿಗೆ ಪುನರಾವರ್ತಿತ ರಕ್ತ ವರ್ಗಾವಣೆಯ ಅಗತ್ಯವಿದೆ. ಮಗುವಿನ ಜನನದ 5 ತಿಂಗಳ ನಂತರವೇ ಈ ರೋಗದ ಲಕ್ಷಣಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ.
 
ಥಲಸ್ಸೆಮಿಯಾ ಲಕ್ಷಣಗಳು
>> ಮಗುವಿನ ಉಗುರುಗಳು ಮತ್ತು ನಾಲಿಗೆ ಬಣ್ಣ ಹಳದಿಬಣ್ಣಕ್ಕೆ ತಿರುಗುತ್ತವೆ.
>> ಮಗುವಿನ ಅಸಹಜ ಅಥವಾ ಊದಿಕೊಂಡ ದವಡೆ ಮತ್ತು ಕೆನ್ನೆ.
>> ಮಗುವಿನ ಬೆಳವಣಿಗೆ ನಿಂತುಹೋಗುತ್ತದೆ ಮತ್ತು ವಯಸ್ಸಿನ ಹೋಲಿಕೆಗೆ ಮಗು ಚಿಕ್ಕದಾಗಿ ಕಾಣಿಸಲು ಪ್ರಾರಂಭಿಸುತ್ತದೆ.
>> ಮಗುವಿನ ಮುಖವು ಶುಷ್ಕವಾಗಿರುತ್ತದೆ ಮತ್ತು ತೂಕ ಹೆಚ್ಚಾಗುವುದಿಲ್ಲ.
>> ಉಸಿರಾಟದ ತೊಂದರೆ, ಆಗಾಗ್ಗೆ ಜ್ವರ.

ಇದನ್ನೂ ಓದಿ-Health Care Tips: ಮಧುಮೇಹಿಗಳಿಗೆ ಇಲ್ಲಿವೆ ಕೆಲ ಸೂಪರ್ ಡ್ರಿಂಕ್ ಗಳು!
 
ಥಲಸ್ಸೆಮಿಯಾ ಚಿಕಿತ್ಸೆ
ಮಗುವಿಗೆ ಥಲಸ್ಸೆಮಿಯಾ ಇದ್ದರೆ ಮಗುವನ್ನು ನೀವು ಎರಡು ವಿಧದಲ್ಲಿ ನೀವು ಕಾಪಾಡಬಹುದು ಎಂದು ವೈದ್ಯರು ಹೇಳುತ್ತಾರೆ. ಮೊದಲು ಅವನಿಗೆ ನಿಯಮಿತವಾಗಿ ರಕ್ತವನ್ನು ನೀಡುವ ಮೂಲಕ ಮತ್ತು ಎರಡನೆಯದಾಗಿ ಮೂಳೆ ಮಜ್ಜೆಯ ಕಸಿ ಮೂಲಕ ಮಗುವನ್ನು ನೀವು ರಕ್ಷಿಸಬಹುದು. ಮಗುವಿನ ವಯಸ್ಸು ಹೆಚ್ಚಾದಂತೆ, ಮಗುವಿಗೆ ರಕ್ತದ ಅವಶ್ಯಕತೆ ಬೀಳುತ್ತದೆ. ಅಂತಹ ದೊಡ್ಡ ಪ್ರಮಾಣದ ರಕ್ತವನ್ನು ಪೂರೈಸುವುದು ಕಷ್ಟವಾಗಿರುತ್ತದೆ. ಈ ಕಾರಣದಿಂದಾಗಿ, ಮಗು ಹೆಚ್ಚು ಅನಾರೋಗ್ಯಕ್ಕೆ ಒಳಗಾಗಲು ಪ್ರಾರಂಭಿಸುತ್ತದೆ. ಪುನರಾವರ್ತಿತ ರಕ್ತ ವರ್ಗಾವಣೆ ಮತ್ತು ಔಷಧಿಗಳನ್ನು ತೆಗೆದುಕೊಳ್ಳುವುದರಿಂದ, ಅವನ ದೇಹದಲ್ಲಿ ಕಬ್ಬಿಣದ ಅಂಶವು ಹೆಚ್ಚಾಗುತ್ತದೆ, ಇದರಿಂದಾಗಿ ಅವನ ಅನೇಕ ಅಂಗಗಳು ಕೆಲಸ ಮಾಡುವುದನ್ನು ನಿಲ್ಲಿಸಬಹುದು.

ಇದನ್ನೂ ಓದಿ-Study: ಅಧಿಕ ಸೆಕ್ಸ್ ಡ್ರೈವ್ ಹೊಂದಿರುವ ಪುರುಷರು ಹೆಚ್ಚು ಕಾಲ ಬದುಕುತ್ತಾರಂತೆ...ಅಧ್ಯಯನದಲ್ಲಿ ಅಂಶ ಬಹಿರಂಗ!
 
ಗರ್ಭದಲ್ಲಿರುವ ಮಗುವಿನ ಪರೀಕ್ಷೆ ಮಾಡಿಸಿಕೊಳ್ಳಿ
ವೈದ್ಯರ ಪ್ರಕಾರ, ಮದುವೆಯ ನಂತರ ಮಗುವಿಗೆ ಈ ಕಾಯಿಲೆ ಬಂದರೆ, ಇಡೀ ಜೀವನವು ತೊಂದರೆಗೆ ಸಿಲುಕುತ್ತದೆ. ಹೀಗಾಗಿ ಪ್ರತಿಯೊಬ್ಬ ಪೋಷಕರು ಮದುವೆಗೆ ಮೊದಲು ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಇದು ಥಲಸ್ಸೆಮಿಯಾವನ್ನು ತಡೆಯಲು ಸಹಾಯ ಮಾಡುತ್ತದೆ. ಗರ್ಭಾಶಯದಲ್ಲಿ ಬೆಳೆಯುತ್ತಿರುವ ಶಿಶುಗಳನ್ನು ಸಹ ಸರಿಯಾದ ಸಮಯದಲ್ಲಿ ಪರೀಕ್ಷಿಸಬೇಕು ಎಂಬುದು ವೈದ್ಯರ ಅಭಿಪ್ರಾಯ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News