ಮಳೆಗಾಲದಲ್ಲಿ ನಿಮ್ಮ ಚರ್ಮವು ಹೆಚ್ಚು ಸಮಸ್ಯೆಗಳಿಗೆ ಒಳಗಾಗಬಹುದು. ಮುಖದ ಮೊಡವೆಗಳು, ಎಣ್ಣೆಯುಕ್ತ ಮುಖದಂತಹ ಸಮಸ್ಯೆಗಳು ಬರುತ್ತವೆ. ಹೀಗಿರುವಾಗ ನಿಮ್ಮ ದೇಹಕ್ಕೆ ಬೇಕಾದ ಅಥವಾ ಚರ್ಮದ ಸುರಕ್ಷತೆಗೆ ಬೇಕಾದ ಪೌಷ್ಠಿಕಾಂಶಯುಕ್ತ ಆಹಾರ ಪದ್ಧತಿಯ ಬಗ್ಗೆ ಇಂದು ನಾವು ನಿಮಗಾಗಿ ತಂದಿದ್ದೇವೆ.
ಪ್ರತಿಯೊಬ್ಬರಿಗೂ ಕೂಡಾ ನಮ್ಮ ಮುಖ(Face) ನೋಡುಗರಿಗೆ ಆಕರ್ಷಕವಾಗಿರಬೇಕು ಎಂಬ ಆಸೆ ಇರುವುದು ಸಹಜ. ಜತೆಗೆ ಮೊಡವೆಗಳೆದ್ದ ಮುಖವನ್ನು ಕನ್ನಡಿಯಲ್ಲಿ ನೋಡಿಕೊಳ್ಳಲು ಹಿಂಸೆ ಅನಿಸುತ್ತದೆ. ಹೀಗಿರುವಾಗ ಮಳೆಗಾಲದಲ್ಲಿ ಬಿಡುವ ಪೌಷ್ಠಿಕಾಂಶಯುಕ್ತ ಹಣ್ಣುಗಳನ್ನು ತಿನ್ನುವ ಮೂಲಕ ನಿಮ್ಮ ಚರ್ಮದ ಕಾಂತಿಯನ್ನು ಹೆಚ್ಚಿಸಿಕೊಳ್ಳಬಹುದು. ಇದಲ್ಲದೇ ಚರ್ಮದ ಸಮಸ್ಯೆಗಳಿಂದ ದೂರವಿರಬಹುದು.
ಇದನ್ನೂ ಓದಿ : Salt Benefits : ಆರೋಗ್ಯಕ್ಕೆ ಅಷ್ಟೇ ಅಲ್ಲ ಸೌಂದರ್ಯಕ್ಕೂ ಪ್ರಯೋಜನಕಾರಿಯಾಗಿದೆ 'ಉಪ್ಪು'
ಮಳೆಗಾಲದ ಸಮಯದಲ್ಲಿ ಅತ್ಯಧಿಕ ಹಣ್ಣುಗಳು ಬಿಡುತ್ತದೆ. ಹೆಚ್ಚು ಉತ್ಕರ್ಷಣ ನಿರೋಧಕ(Immunity) ಗುಣಗಳನ್ನು ಹೊಂದಿರುವ ಹಣ್ಣುಗಳನ್ನು ಆರಿಸಿ ಸೇವಿಸಿ. ಲಿಚ್ಚಿ, ನೇರಳೆ ಹಣ್ಣು ಹೀಗೆ ವಿವಿಧ ತೆರೆನಾದ ಪ್ರೊಟೀನ್ಯುಕ್ತ ಹಣ್ಣುಗಳಲ್ಲಿ ವಿಟಮಿನ್ ಸಿ ಅಂಶಗಳು ತುಂಬಿರುತ್ತದೆ. ಇವು ನಿಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಇದನ್ನೂ ಓದಿ : ಕಟ್ ಮಾಡಿದ ಕಲ್ಲಂಗಡಿ ಹಣ್ಣನ್ನು ಫ್ರಿಜ್ ನಲ್ಲಿ ಏಕೆ ಇಡಬಾರದು ಗೊತ್ತಾ..?
ಮಳೆಗಾಲದ ಸಮಯದಲ್ಲಿ ಆದಷ್ಟು ರಸ್ತೆಯ ಪಕ್ಕದಲ್ಲಿ ಸೇವಿಸುವ ಆಹಾರ ಪದಾರ್ಥದಿಂದ ದೂರವಿರಿ. ಅಂದರೆ, ಸಮೋಸಾ, ಪಾನಿಪುರಿ ಹೀಗೆ ಮುಂತಾದ ತಿನಿಸುಗಳು. ಎಣ್ಣೆಯಲ್ಲಿ ಕರಿದ ಪದಾರ್ಥ(Cholesterol Foods)ಗಳನ್ನು ಹೆಚ್ಚು ಸೇವಿಸುವುದರಿಂದ ನಿಮ್ಮ ಚರ್ಮ ಕಾಂತಿಯನ್ನು ಕಳೆದುಕೊಳ್ಳುತ್ತದೆ. ಮತ್ತು ಮುಖದಲ್ಲಿ ಹೆಚ್ಚು ಮೊಡವೆಗಳು ಏಳಲು ಕಾರಣವಾಗುತ್ತದೆ.
ಇದನ್ನೂ ಓದಿ : Coronasomia: Covid-19 ಮಹಾಮಾರಿಯ ನಡುವೆಯೇ ಹೆಚ್ಚಾಗುತ್ತಿದೆ ಈ ನಿಗೂಢ ಕಾಯಿಲೆಯ ಅಪಾಯ!
ಚರ್ಮದ ಹೊಳಪನ್ನು ಹೆಚ್ಚಿಸಿಕೊಳ್ಳಲು ಸಾಕಷ್ಟು ನೀರನ್ನು ಸೇವಿಸಿ. ಗ್ರೀನ್ ಟೀ(Green Tea), ಸೂಪ್ಗಳನ್ನು ಕುಡಿಯಬಹುದು. ಮಳೆಗಾಲದ ಸಮಯದಲ್ಲಿ ನೀರು ಕಲುಷಿತವಾಗಿರಬಹುದು. ಹಾಗಾಗಿ ಆದಷ್ಟು ಕುದಿಸಿದ ನೀರನ್ನು ಕುಡಿಯಲು ಉಪಯೋಗಿಸಿ. ಇದರಿಂದ ಜ್ವರ, ಶೀತದಂತಹ ಲಕ್ಷಣಗಳಿಂದ ದೂರವಿರಬಹುದು.
ಇದನ್ನೂ ಓದಿ : Vitamin A : 'ವಿಟಮಿನ್-A' ಕೊರತೆಯ ಲಕ್ಷಣಗಳೇನು? ಸಮಸ್ಯೆಗಳು ಯಾವುವು? ನಿಯಂತ್ರಣ ಹೇಗೆ? ಇಲ್ಲಿದೆ ಮಾಹಿತಿ
ಸೂರ್ಯಕಾಂತಿ ಬೀಜ ಹಾಗೂ ಕುಂಬಳಕಾಯಿ ಬೀಜಗಳು ವಿಟಮಿನ್ ಇ(Vitamin E) ಯುಕ್ತ ಅಂಶದಿಂದ ಕೂಡಿದೆ. ನಿಮ್ಮ ಚರ್ಮ ತಾರುಣ್ಯ ಹಾಗೂ ಹೊಳೆಯುವಂತೆ ಮಾಡಲು ಸಹಾಯ ಮಾಡುತ್ತದೆ. ಹಾಗಾಗಿ ಕುಂಬಳಿಕಾಯಿ ಮತ್ತು ಸೂರ್ಯಕಾಂತಿ ಬೀಜಗಳನ್ನು ಎಸೆಯುವ ಬದಲು ನಿಮ್ಮ ಆರೋಗ್ಯದ ದೃಷ್ಟಿಯಿಂದ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು.
ಇದನ್ನೂ ಓದಿ : Calf Serum In Covaxin?: Covaxinನಲ್ಲಿ ಹಸುವಿನ ಕರುವಿನ ಸಿರಮ್ ಬಳಕೆ? ಕೇಂದ್ರ ಸರ್ಕಾರ ಹೇಳಿದ್ದೇನು?
ಚರ್ಮದ ಆರೈಕೆ(Skin Care)ಗಾಗಿ ಸಕ್ಕರೆ ಅಥವಾ ಅತಿಯಾಗಿ ಸಿಹಿತಿಂಡಿಗಳ ಸೇವನೆಯಿಂದ ದೂರವಿರಿ. ಇದು ನಿಮ್ಮ ಮುಖದಲ್ಲಿ ಮೊಡವೆಗಳು ಹುಟ್ಟಿಕೊಳ್ಳಲು ಕಾರಣವಾಗುತ್ತದೆ. ಹಾಗಾಗಿ ಆದಷ್ಟು ಸಕ್ಕರೆ ಪದಾರ್ಥಗಳಿಂದ ದೂರವಿರಿ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.