CoronaVaccine : ಶೀಘ್ರ ಬರಲಿದೆ ಗೇಮ್ ಚೇಂಜರ್ ಸಿಂಗಲ್ ಡೋಸ್ ಕರೋನಾ ವ್ಯಾಕ್ಸಿನ್..! ಏನಿದರ ಸ್ಪೆಷ್ಯಾಲಿಟಿ..?

ಕರೋನಾಗೆ  ಭಾರತದಲ್ಲಿ ಸಿದ್ದವಾಗುತ್ತಿದೆ ವಿಶೇಷ ಲಸಿಕೆ. ಇದು ಗೇಮ್ ಚೇಂಜರ್ ಆಗಲಿದೆ. 

Written by - Zee Kannada News Desk | Last Updated : Jan 10, 2021, 09:27 AM IST
  • ಮೂಗಿನ ಮೂಲಕ ನೀಡುವ ಕ್ಲಿನಿಕಲ್ ಲಸಿಕೆ ಟ್ರಯಲ್ ಗೆ ಸಜ್ಜಾಗುತ್ತಿದೆ.
  • ಇದು ಸಿಂಗಲ್ ಡೋಸ್ ಲಸಿಕೆ. ಕರೋನಾಗೆ ಕಂಟಕವಾಗಲು ಒಂದೇ ಹನಿ ಸಾಕು
  • ವಾಷಿಂಗ್ಟನ್ ವಿವಿ ಜೊತೆ ಸೇರಿ ಭಾರತದಲ್ಲಿ ಇದನ್ನು ತಯಾರಿಸುತ್ತಿದೆ ಭಾರತ್ ಬಯೋಟೆಕ್
CoronaVaccine : ಶೀಘ್ರ ಬರಲಿದೆ  ಗೇಮ್ ಚೇಂಜರ್ ಸಿಂಗಲ್ ಡೋಸ್ ಕರೋನಾ ವ್ಯಾಕ್ಸಿನ್..! ಏನಿದರ ಸ್ಪೆಷ್ಯಾಲಿಟಿ..? title=
ಮೂಗಿನ ಮೂಲಕ ನೀಡುವ ಕ್ಲಿನಿಕಲ್ ಲಸಿಕೆ ಟ್ರಯಲ್ ಗೆ ಸಜ್ಜಾಗುತ್ತಿದೆ. (file photo)

ನವದೆಹಲಿ : ಕೊವಿಶೀಲ್ಡ್ (Covishield) ಮತ್ತು ಕೊವ್ಯಾಕ್ಸಿನ್ (Covaxin) ಎನ್ನುವ ಎರಡು ಮೇಡ್ ಇನ್ ಇಂಡಿಯಾ ಲಸಿಕೆಗಳು ಈಗಾಗಲೇ ಬಂದಿವೆ. ಗೊತ್ತಿರಲಿ, ಇನ್ನೊಂದು ವಿಶೇಷವಾದ ಲಸಿಕೆ ಭಾರತದಲ್ಲಿ ಸಿದ್ದವಾಗಲಿದೆ. ಒಂದು ರೀತಿಯಲ್ಲಿ ಇದು ಗೇಮ್ ಚೇಂಜರ್ ವ್ಯಾಕ್ಸಿನ್.  ಇದನ್ನು  ಇಂಜಕ್ಷನ್ ರೂಪದಲ್ಲಿ ನೀಡಲಾಗುವುದಿಲ್ಲ. ಇದನ್ನು ಮೂಗಿನ ಹೊಳ್ಳೆಗಳ ಮೂಲಕ ಪ್ರಯೋಗಿಸಲಾಗುತ್ತದೆ. ಹಾಗಾಗಿ ಇದನ್ನು ನಾಸಲ್ ವ್ಯಾಕ್ಸಿನ್ (Nasal Vaccine) ಎನ್ನುತ್ತಾರೆ. ಇದರಲ್ಲಿ ಇನ್ನೂ ಒಂದು ವಿಶೇಷವಿದೆ. ಎಲ್ಲಾ ಲಸಿಕೆಗಳನ್ನು ಎರಡು ಡೋಸ್ ಗಳಲ್ಲಿ ಪ್ರಯೋಗಿಸಲಾಗುತ್ತಿದೆ.  ಇದು ಸಿಂಗಲ್ ಡೋಸ್ ಲಸಿಕೆ(Singal Dose Vaccine). ಕರೋನಾಗೆ ಕಂಟಕವಾಗಲು ಒಂದೇ ಹನಿ ಸಾಕು

ನಾಸಲ್ ವ್ಯಾಕ್ಸಿನ್ ಉತ್ಪಾದಕರು ಯಾರು..?
ಕೊವ್ಯಾಕ್ಸಿನ್  (Covaxin)  ತಯಾರಿಸುತ್ತಿರುವ ಭಾರತ್ ಬಯೋಟೆಕ್ (Bharath Biotech) ಈ ನಾಸಲ್ ವ್ಯಾಕ್ಸಿನ್ (Nasal Vaccine) ರೆಡಿ ಮಾಡುತ್ತಿದೆ. ಈ ಸಂಬಂಧ ವಾಷಿಂಗ್ಟನ್ ವಿವಿ ಜೊತೆ ಭಾರತ್ ಬಯೋಟೆಕ್ ಒಪ್ಪಂದವನ್ನು ಮಾಡಿಕೊಂಡಿದೆ. ಇದು ತುಂಬಾ ಸ್ಟ್ರಾಂಗ್ ವ್ಯಾಕ್ಸಿನ್ ಅನ್ನೋದಕ್ಕೆ ಪುರಾವೆ ಇದೆಯಂತೆ. ಹಾಗಾಗಿ,  ಇದು ಸಿಂಗಲ್ ಡೋಸ್ ನಲ್ಲೇ ಕರೋನಾಗೆ (COVID-19) ಕಂಟಕವಾಗಲಿದೆಯೆಂದು ಹೇಳುತ್ತಾರೆ ಭಾರತ್ ಬಯೋಟೆಕ್ ಎಂಡಿ ಡಾ. ಕೃಷ್ಣ ಎಲ್ಲಾ.

ಇದನ್ನೂ ಓದಿ : Corona Vaccine : ಇದು ವೈದ್ಯಲೋಕದ ಅಚ್ಚರಿ, ಭಾರತೀಯರಿಗೆ ಹೆಮ್ಮೆಯ ಸಂಗತಿ.! ನಮ್ಮಲ್ಲಿ ಇನ್ನೆಷ್ಟು ವ್ಯಾಕ್ಸಿನ್ ರೆಡಿಯಾಗುತ್ತಿದೆ ಗೊತ್ತಾ..?

ಕೊವ್ಯಾಕ್ಸಿನ್ ಗಿಂತಲೂ ಪರಿಣಾಮಕಾರಿ. 
ನಾಸಲ್ ಕೊವ್ಯಾಕ್ಸಿನ್ ಲಸಿಕೆ ಕೊವ್ಯಾಕ್ಸಿನ್ ಗಿಂತಲೂ ಪರಿಣಾಮಕಾರಿ.  ಇದರ ಟ್ರಯಲ್ (Trail) ಇನ್ನಷ್ಟೇ ಶುರುವಾಗಬೇಕಿದೆ. ಭಾರತ್ ಬಯೋಟೆಕ್ ಈ ಸಂಬಂಧ ಡಿಸಿಜಿಐಗೆ ಪ್ರಸ್ತಾವ ಇಟ್ಟಿದೆ. ಟ್ರಯಲ್ ಗೆ ಮಂಜೂರಿ ಇನ್ನಷ್ಟೇ ಸಿಗಬೇಕಿದೆ.  ಭುವನೇಶ್ವರ,  ಪುಣೆ, ನಾಗಪುರ, ಹೈದರಾಬಾದಿನಲ್ಲಿ ನಾಸಲ್ ಕೊವ್ಯಾಕ್ಸಿನ್ ಟ್ರಯಲ್ ನಡೆಯಲಿದೆ. 

ಇದು ಗೇಮ್ ಚೇಂಜರ್ ವ್ಯಾಕ್ಸಿನ್ ಹೇಗೆ..?
ನಾಸಲ್ ಕೊವ್ಯಾಕ್ಸಿನ್ ಮೂಗಿನ ಮೂಲಕ ನೀಡುವಂತಹ  ವ್ಯಾಕ್ಸಿನ್(Vaccine). ಏಕೆಂದರೆ, ಕರೋನಾ ವೈರಸ್ (Coronavirus) ಮೊದಲು ದಾಳಿಇಡುವುದು ಮೂಗಿಗೆ. ಮತ್ತು ಅಲ್ಲಿಂದಲೇ ಈ ವೃರಸ್ ಹರಡುತ್ತವೆ. ಹಾಗಾಗಿ ಇದು ಅಧಿಕ ಪರಿಣಾಮಕಾರಿ ಎನ್ನಲಾಗುತ್ತಿದೆ. 

ಇದನ್ನೂ ಓದಿ : Corona Vaccine : ಅಮೆರಿಕಾದಲ್ಲಿ Pfizer ಲಸಿಕೆ ಹಾಕಿಸಿಕೊಂಡ ವೈದ್ಯ ಸಾವು ; ವಾಕ್ಸಿನ್ ನತ್ತ ನೇರ ಬೊಟ್ಟು ಮಾಡಿದ ಮೃತನ ಪತ್ನಿ

ವಾಷಿಂಗ್ಟನ್  ಮೆಡಿಸಿನ್ ಸ್ಕೂಲ್ ಸಂಶೋಧನೆ ಪ್ರಕಾರ ಮೂಗಿನ ಮೂಲಕ ವ್ಯಾಕ್ಸಿನ್ ನೀಡಿದಾಗ ಅದು ರೋಗ ಪ್ರತಿರೋಧಕ ಶಕ್ತಿಯನ್ನು (Immunity) ಪರಿಣಾಮಕಾರಿಯಾಗಿ ಹೆಚ್ಚಿಸುತ್ತದೆ.  ಯಾವುದೇ ವೈರಸ್ (Virus) ಮೂಗಿನ ಮೂಲಕ ಪ್ರವೇಶಿಸುವುದನ್ನು ತಡೆಯುತ್ತದೆ. ಬೇರೆ ವ್ಯಾಕ್ಸಿನ್ ಶ್ವಾಸಕೋಶದ ಕೆಳಭಾಗವನ್ನು ಸುರಕ್ಷಿತವಾಗಿಡುತ್ತದೆ. ಆದರೆ, ನಾಸಲ್ ಕೊವ್ಯಾಕ್ಸಿನ್ ಶ್ವಾಸಕೋಶದ ಮೇಲ್ಭಾಗ ಮತ್ತು ಕೆಳಭಾಗವನ್ನು ಸೇಫ್ ಆಗಿ ಇಡುತ್ತದೆ. ಇದರ  ಸೈಡ್ ಅಫೆಕ್ಟ್ (Side Effects) ಕೂಡಾ ಕಡಿಮೆ. ಜೊತೆಗೆ ಸುಲಭದಲ್ಲಿ ಪ್ರಯೋಗಿಸಬಹುದು. ಇದೊಂದು ಗೇಮ್ ಚೇಂಜರ್ ವ್ಯಾಕ್ಸಿನ್ ಎನ್ನುತ್ತಾರೆ ಪರಿಣಿತರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News