ಮೊಟ್ಟೆಯನ್ನು ಈ ರೀತಿ ತಿಂದರೆ ತೂಕ ಇಳಿಕೆಯಾಗುವುದು ಗ್ಯಾರಂಟಿ

ಬೆಳಗಿನ ಉಪಾಹಾರವಾಗಿ ಮೊಟ್ಟೆಗಳನ್ನು ಸೇವಿಸುವುದು  ಉತ್ತಮ ವಿಧಾನ. ಬೆಳಗಿನ ಉಪಹಾರದಲ್ಲಿ ಇದನ್ನು ಸೇವಿಸಿದರೆ ದಿನವಿಡೀ ಕಡಿಮೆ ಕ್ಯಾಲೊರಿಗಳನ್ನು ಸೇವಿಸಲು ಸಹಾಯ ಮಾಡುತ್ತದೆ.

Written by - Ranjitha R K | Last Updated : Aug 17, 2023, 10:20 AM IST
  • ಮೊಟ್ಟೆ ತಿಂದರೆ ತೂಕ ಇಳಿಸಿಕೊಳ್ಳಬಹುದು.
  • ಮೊಟ್ಟೆಗಳು ದೇಹಕ್ಕೆ ಆರೋಗ್ಯಕರ ಆಹಾರವಾಗಿದೆ.
  • ಮೊಟ್ಟೆಗಳು ಕಡಿಮೆ ಕ್ಯಾಲೋರಿ ಮತ್ತು ಹೆಚ್ಚಿನ ಪ್ರೋಟೀನ್ ಅನ್ನು ಹೊಂದಿರುತ್ತವೆ.
ಮೊಟ್ಟೆಯನ್ನು ಈ ರೀತಿ ತಿಂದರೆ ತೂಕ ಇಳಿಕೆಯಾಗುವುದು ಗ್ಯಾರಂಟಿ  title=

ಬೆಂಗಳೂರು : ಆರೋಗ್ಯಕರ ಮತ್ತು ಅತ್ಯಂತ ಪೌಷ್ಟಿಕ ಆಹಾರಗಳಲ್ಲಿ ಒಂದಾದ ಮೊಟ್ಟೆಗಳನ್ನು ಸೂಪರ್‌ಫುಡ್ ಎಂದು ಕರೆಯಲಾಗುತ್ತದೆ. ಮೊಟ್ಟೆಯು  ನಮ್ಮ ದೇಹಕ್ಕೆ ಅಗತ್ಯವಿರುವ ಎಲ್ಲಾ ಪೋಷಕಾಂಶಗಳನ್ನು ಒದಗಿಸುತ್ತದೆ. ಇದರ ಬಿಳಿ ಭಾಗವು ಪ್ರೋಟೀನ್ ಅನ್ನು ಹೊಂದಿರುತ್ತದೆ ಮತ್ತು ಹಳದಿ ಭಾಗ 90% ಕ್ಯಾಲ್ಸಿಯಂ ಮತ್ತು ಕಬ್ಬಿಣವನ್ನು ಹೊಂದಿರುತ್ತದೆ. ಮೊಟ್ಟೆಗಳು ಹೆಚ್ಚಿನ ಪ್ರೋಟೀನ್, ಕಡಿಮೆ ಕ್ಯಾಲೋರಿ ಹೊಂದಿರುವ ಆಹಾರವಾಗಿದ್ದು, ಇತರ ಪೋಷಕಾಂಶಗಳನ್ನು ಸಹ ಒಳಗೊಂಡಿದೆ. ಮೊಟ್ಟೆ ತಿನ್ನುವುದು ವ್ಯಕ್ತಿಯ ತೂಕವನ್ನು ಕಳೆದುಕೊಳ್ಳಲು ಕೂಡಾ ಸಹಾಯ ಮಾಡುತ್ತದೆ. 

ಬೆಳಗಿನ ಉಪಹಾರಕ್ಕಾಗಿ ಮೊಟ್ಟೆಗಳನ್ನು ತಿನ್ನುವುದು ಉತ್ತಮ ತಂತ್ರವೆಂದೇ  ಹೇಳಲಾಗುತ್ತದೆ. ಏಕೆಂದರೆ ಇದು ದಿನವಿಡೀ ಕಡಿಮೆ ಕ್ಯಾಲೊರಿಗಳನ್ನು ಸೇವಿಸಲು ನಿಮಗೆ ಸಹಾಯ ಮಾಡುತ್ತದೆ. ಮೊಟ್ಟೆಯನ್ನು ಸಾಮಾನ್ಯವಾಗಿ ಬೇಯಿಸಿ ತಿನ್ನಲಾಗುತ್ತದೆ. ಅಥವಾ ಒಮ್ಲೆಟ್ ಮಾಡಿ ಸೇವಿಸಲಾಗುತ್ತದೆ. ಇನ್ನು ಕೆಲವರಿಗೆ ಹಸಿ ಮೊಟ್ಟೆ ಕುಡಿಯುವ ಅಭ್ಯಾಸವೂ ಇದೆ.  

ಇದನ್ನೂ ಓದಿ : ರಕ್ತದಲ್ಲಿನ ಸಕ್ಕರೆ ನಿಯಂತ್ರಣಕ್ಕೆ ಈ 5 ಹಣ್ಣುಗಳ ಸಿಪ್ಪೆಗಳು ರಾಮಬಾಣ!

ತೂಕವನ್ನು ಕಳೆದುಕೊಳ್ಳಲು ಪ್ರಯತ್ನಿಸುವಾಗ, ಕ್ಯಾಲೋರಿ ಕೊರತೆಯನ್ನು ಕಾಪಾಡಿಕೊಳ್ಳುವಾಗ ನಿಮ್ಮ ಹಸಿವನ್ನು ನಿರ್ವಹಿಸುವುದು  ಬಹು ದೊಡ್ಡ ಸವಾಲಾಗಿರುತ್ತದೆ. ಇದರ ಪರಿಹಾರಕ್ಕೆ ಇರುವ ಒಂದು ತಂತ್ರವೆಂದರೆ ಪ್ರೋಟೀನ್ ಸಮೃದ್ಧವಾಗಿರುವ ಆಹಾರವನ್ನು ಸೇವಿಸುವುದು. ನಿಸ್ಸಂದೇಹವಾಗಿ, ಮೊಟ್ಟೆ ಆರೋಗ್ಯಕರ ಆಹಾರ ಮತ್ತು ಪೋಷಕಾಂಶಗಳ ಉತ್ತಮ ಮೂಲವಾಗಿದೆ. ಸಂಶೋಧನೆಯ ಪ್ರಕಾರ, ಮೊಟ್ಟೆ ಚಯಾಪಚಯ ಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ಬೆಳಗಿನ ಉಪಹಾರದಲ್ಲಿ ಮೊಟ್ಟೆಯನ್ನು ಸೇವಿಸುವ ಮೂಲಕ ದಿನದಲ್ಲಿ ಹೆಚ್ಚಿನ ಕ್ಯಾಲೊರಿ ಸೇವನೆಯನ್ನು ತಡೆಯಬಹುದು. ಮೊಟ್ಟೆಗಳು ಕಡಿಮೆ ಕ್ಯಾಲೋರಿ ಮತ್ತು ಹೆಚ್ಚಿನ ಪ್ರೋಟೀನ್ ಅನ್ನು ಹೊಂದಿರುತ್ತವೆ. ಇದನ್ನು ಸಮತೋಲಿತ ಆಹಾರದ ಭಾಗವಾಗಿ ಸೇವಿಸಿದರೆ ತೂಕ ನಷ್ಟಕ್ಕೆ ಸಹಾಯ ಮಾಡಬಹುದು.

ತೂಕ ನಷ್ಟಕ್ಕೆ ಮೊಟ್ಟೆ ಹೇಗೆ ಉಪಯುಕ್ತವಾಗಿವೆ? :
ಮೊಟ್ಟೆಯಲ್ಲಿದೆ ಕಡಿಮೆ ಕ್ಯಾಲೋರಿ : ತೂಕ ನಷ್ಟಕ್ಕೆ  ಪ್ರಯತ್ನಿಸುವಾಗ ಕಡಿಮೆ ಕ್ಯಾಲೋರಿ ಸೇವನೆ ಬಹಳ ಮುಖ್ಯ. ಹಾಗಾಗಿ ತೂಕ ಕಳೆದುಕೊಳ್ಳಲು ಬಯಸುವವರು ಆಹಾರದಲ್ಲಿ ಮೊಟ್ಟೆಗಳನ್ನು ಸೇರಿಸುವುದು ಪ್ರಯೋಜನಕಾರಿಯಾಗಿದೆ.

ಇದನ್ನೂ ಓದಿ : ಖಾಲಿ ಹೊಟ್ಟೆಯಲ್ಲಿ ತುಳಿಸಿ ತಿನ್ನುವುದು ಆರೋಗ್ಯಕರ

ಪ್ರೋಟೀನ್ ನ ಸಮೃದ್ದ ಮೂಲ : ಮೊಟ್ಟೆ ಪ್ರೋಟೀನ್‌ನ ಸಮೃದ್ಧ ಮೂಲವಾಗಿದೆ. ಒಂದು ಮೊಟ್ಟೆಯು ಸುಮಾರು 6 ಗ್ರಾಂ  ಪ್ರೋಟೀನ್ ಅನ್ನು ಪೂರೈಸುತ್ತದೆ. ಹೀಗಾಗಿ ಹೊಟ್ಟೆ ತುಂಬಲು ಇದು ಸಹಾಯ ಮಾಡುತ್ತದೆ. ಮಾತ್ರವಲ್ಲ ಈ ಮೂಲಕ ತೂಕ ನಷ್ಟಕ್ಕೆ ಕೂಡಾ ನೆರವಾಗುತ್ತದೆ. 

ಚಯಾಪಚಯ ಹೆಚ್ಚಿಸಲು ಸಹಾಯ ಮಾಡುತ್ತದೆ: ಹೆಚ್ಚಿನ ಪ್ರೋಟೀನ್ ಆಹಾರವು ಆಹಾರದ ಥರ್ಮಿಕ್ ಪರಿಣಾಮವನ್ನು ಹೆಚ್ಚಿಸುವ ಮೂಲಕ ಚಯಾಪಚಯವನ್ನು ವೇಗಗೊಳಿಸುತ್ತದೆ. ಆಹಾರದಲ್ಲಿನ ಪೋಷಕಾಂಶಗಳನ್ನು ಚಯಾಪಚಯಗೊಳಿಸಲು ಮತ್ತು ಜೀರ್ಣಿಸಿಕೊಳ್ಳಲು ಇದು ಸಹಾಯ ಮಾಡುತ್ತದೆ. 

ತೂಕ ನಷ್ಟವನ್ನು ಉತ್ತೇಜಿಸಲು, ಬೆಣ್ಣೆ ಅಥವಾ ಎಣ್ಣೆಗಳಂತಹ ಹೆಚ್ಚಿನ ಕೊಬ್ಬಿನೊಂದಿಗೆ ಮೊಟ್ಟೆಗಳನ್ನು ಬೇಯಿಸುವುದನ್ನು ತಪ್ಪಿಸಿ. ಹೃದ್ರೋಗದ ಅಪಾಯದಲ್ಲಿರುವ ಜನರು ಮೊಟ್ಟೆಯ ಬಿಳಿಭಾಗವನ್ನು ಮಾತ್ರ ತಿನ್ನಬೇಕು  ಎನ್ನುವುದು ನೆನಪಿರಲಿ. ಕೊಲೆಸ್ಟ್ರಾಲ್ ಅಧಿಕವಾಗಿದ್ದರೂ ಮೊಟ್ಟೆ ಸೇವನೆ ಮೊದಲು  ಸೂಕ್ತ ತಜ್ಞರ ಸಲಹೆ ಪಡೆದುಕೊಳ್ಳಿ. 

ಇದನ್ನೂ ಓದಿ : ದಿನಕ್ಕೊಂದು ಏಲಕ್ಕಿ ತಿಂದರೂ ವೈದ್ಯರಿಂದ ದೂರವಿರಬಹುದು ! ಸಂಜೀವಿನಿ ಈ ಪುಟ್ಟ ಕಾಳು

 ( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಸ್ವೀಕರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಅನುಮೋದಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News