Health Tips: ಈ ಹಣ್ಣುಗಳ ಸಿಪ್ಪೆ ತೆಗೆದು ಎಂದಿಗೂ ಸೇವಿಸಬೇಡಿ: ಮಾರಕ ರೋಗ ತಡೆಗೆ ಇದೇ ರಾಮಬಾಣ!

Fruits eaten with peel: ಅಂದಹಾಗೆ, ಈಗಿನ ಕಾಲದಲ್ಲಿ ಹಣ್ಣುಗಳಿಗೆ ಕೆಮಿಕಲ್ ಹಾಕುತ್ತಾರೆ. ಇದರಿಂದಾಗಿ ಅನೇಕರು ಹಣ್ಣುಗಳ ಸಿಪ್ಪೆ ತೆಗೆದು ತಿನ್ನುತ್ತಾರೆ. ಆದರೆ ಇಲ್ಲಿ ನಾವು ಹೇಳಹೊರಟಿರುವುದು, ಒಂದು ವೇಳೆ ಸಿಪ್ಪೆ ತೆಗೆದು ತಿಂದರೆ, ಆರೋಗ್ಯಕ್ಕೆ ಬೇಕಾದ ಪೋಷಕಾಂಶಗಳು ಸಿಗುವುದಿಲ್ಲ ಎಂದು. ವಿಟಮಿನ್ಗಳು, ಖನಿಜಗಳು, ಫೈಬರ್ ಮತ್ತು ಆಂಟಿಆಕ್ಸಿಡೆಂಟ್ಗಳು ಹಣ್ಣುಗಳ ಸಿಪ್ಪೆಯಲ್ಲಿ ಕಂಡುಬರುತ್ತವೆ.

Written by - Bhavishya Shetty | Last Updated : Jan 30, 2023, 05:21 PM IST
    • ಕೇವಲ ಹಣ್ಣುಗಳನ್ನು ತಿನ್ನುವುದು ಉತ್ತಮ ಆರೋಗ್ಯಕ್ಕೆ ಸಾಕಾಗುವುದಿಲ್ಲ.
    • ಅವುಗಳನ್ನು ಸರಿಯಾದ ರೀತಿಯಲ್ಲಿ ತಿನ್ನುವುದು ಬಹಳ ಮುಖ್ಯ.
    • ಇನ್ನು ಅನೇಕ ಹಣ್ಣುಗಳನ್ನು ಸಿಪ್ಪೆಯೊಂದಿಗೆ ತಿಂದರೆ ಉತ್ತಮ ಪೋಷಕಾಂಶಗಳು ಸಿಗುತ್ತವೆ
Health Tips: ಈ ಹಣ್ಣುಗಳ ಸಿಪ್ಪೆ ತೆಗೆದು ಎಂದಿಗೂ ಸೇವಿಸಬೇಡಿ: ಮಾರಕ ರೋಗ ತಡೆಗೆ ಇದೇ ರಾಮಬಾಣ! title=
Fruits

Fruits eaten with peel: ಹಣ್ಣುಗಳನ್ನು ಸೇವಿಸುವ ಜನರ ಆರೋಗ್ಯವು ಹೆಚ್ಚಿನ ಪ್ರಮಾಣದಲ್ಲಿ ಉತ್ತಮವಾಗಿರುತ್ತದೆ. ಹಣ್ಣುಗಳು ನಮ್ಮ ಆಹಾರದ ಪ್ರಮುಖ ಭಾಗವಾಗಿದೆ. ಆದರೆ ಕೇವಲ ಹಣ್ಣುಗಳನ್ನು ತಿನ್ನುವುದು ಉತ್ತಮ ಆರೋಗ್ಯಕ್ಕೆ ಸಾಕಾಗುವುದಿಲ್ಲ. ಅವುಗಳನ್ನು ಸರಿಯಾದ ರೀತಿಯಲ್ಲಿ ತಿನ್ನುವುದು ಬಹಳ ಮುಖ್ಯ. ಇನ್ನು ಅನೇಕ ಹಣ್ಣುಗಳನ್ನು ಸಿಪ್ಪೆಯೊಂದಿಗೆ ತಿಂದರೆ ಉತ್ತಮ ಪೋಷಕಾಂಶಗಳು ಸಿಗುತ್ತವೆ. ಹಣ್ಣುಗಳ ಸಿಪ್ಪೆಯಲ್ಲಿಯೂ ಪೋಷಕಾಂಶಗಳು ಇರುತ್ತವೆ ಅನ್ನೋದು ನಿಮಗೆ ಗೊತ್ತಾ?

ಇದನ್ನೂ ಓದಿ: Smartphone Hacks: ನಿಮ್ಮ ಫೋನ್ ನಲ್ಲಿ ಆಗಾಗ್ಗೆ ಜಾಹೀರಾತುಗಳು ಬರುತ್ತಿವೆಯೇ? ಒಂದೇ ಕ್ಲಿಕ್ ನಲ್ಲಿ ನಿಲ್ಲಿಸಿ

ಅಂದಹಾಗೆ, ಈಗಿನ ಕಾಲದಲ್ಲಿ ಹಣ್ಣುಗಳಿಗೆ ಕೆಮಿಕಲ್ ಹಾಕುತ್ತಾರೆ. ಇದರಿಂದಾಗಿ ಅನೇಕರು ಹಣ್ಣುಗಳ ಸಿಪ್ಪೆ ತೆಗೆದು ತಿನ್ನುತ್ತಾರೆ. ಆದರೆ ಇಲ್ಲಿ ನಾವು ಹೇಳಹೊರಟಿರುವುದು, ಒಂದು ವೇಳೆ ಸಿಪ್ಪೆ ತೆಗೆದು ತಿಂದರೆ, ಆರೋಗ್ಯಕ್ಕೆ ಬೇಕಾದ ಪೋಷಕಾಂಶಗಳು ಸಿಗುವುದಿಲ್ಲ ಎಂದು. ವಿಟಮಿನ್ಗಳು, ಖನಿಜಗಳು, ಫೈಬರ್ ಮತ್ತು ಆಂಟಿಆಕ್ಸಿಡೆಂಟ್ಗಳು ಹಣ್ಣುಗಳ ಸಿಪ್ಪೆಯಲ್ಲಿ ಕಂಡುಬರುತ್ತವೆ.

ಈ ಹಣ್ಣುಗಳನ್ನು ಸಿಪ್ಪೆ ತೆಗೆದು ತಿನ್ನಬೇಡಿ.

ಪಿಯರ್: ಸೇಬು, ಪೇರಳೆಯನ್ನು ಹೋಲುವ ಈ ಸಿಹಿಯಾದ ಹಣ್ಣನ್ನು ಸಿಪ್ಪೆಯೊಂದಿಗೆ ಸೇವಿಸಬೇಕು. ಇದರ ಸಿಪ್ಪೆಯಲ್ಲಿ ಆಂಟಿಆಕ್ಸಿಡೆಂಟ್ ಮತ್ತು ವಿಟಮಿನ್ ಗಳು ಕಂಡುಬರುತ್ತವೆ. ಈ ಹಣ್ಣನ್ನು ಸಿಪ್ಪೆಯೊಂದಿಗೆ ತಿಂದರೆ ದೇಹಕ್ಕೆ ಡಯೆಟರಿ ಫೈಬರ್ ಸಿಗುತ್ತದೆ..

ಪೇರಲ (ಗುವಾ): ಪೇರಲವನ್ನು ಸಿಪ್ಪೆಯೊಂದಿಗೆ ಸೇವಿಸಬಹುದು. ಆಂಟಿಆಕ್ಸಿಡೆಂಟ್‌ಗಳು, ವಿಟಮಿನ್‌ಗಳು, ಫೈಬರ್‌ಗಳು ಮತ್ತು ಖನಿಜಗಳು ಪೇರಲದಲ್ಲಿ ಕಂಡುಬರುತ್ತವೆ. ಅದಕ್ಕಾಗಿಯೇ ಪೇರಲವನ್ನು ಸಿಪ್ಪೆ ಸುಲಿದ ನಂತರ ತಿನ್ನಬಾರದು. ಆದರೆ ಶೀತ ಅಥವಾ ಕೆಮ್ಮಿನ ಸಂದರ್ಭದಲ್ಲಿ ಅದನ್ನು ಸೇವಿಸಬಾರದು ಎಂಬುದನ್ನು ನೆನಪಿನಲ್ಲಿಡಿ.

ಆಪಲ್: ಅನೇಕ ಜನರು ಆಪಲ್ ಹಣ್ಣಿನ ಸಿಪ್ಪೆ ತೆಗೆದು ತಿನ್ನುತ್ತಾರೆ. ಆದರೆ ಆಂಟಿಆಕ್ಸಿಡೆಂಟ್ ಮತ್ತು ಫೈಬರ್ ಸೇಬಿನ ಸಿಪ್ಪೆಯಲ್ಲಿ ಕಂಡುಬರುತ್ತದೆ. ಆದ್ದರಿಂದ ಸೇಬನ್ನು ತೊಳೆದು ನೇರವಾಗಿ ತಿನ್ನಬೇಕು, ಸಿಪ್ಪೆ ತೆಗೆಯಬಾರದು.

ಚಿಕ್ಕು: ಸಿಪ್ಪೆಯೊಂದಿಗೆ ಚಿಕ್ಕು ಸೇವಿಸಲಾಗುತ್ತದೆ. ಇದರ ಸಿಪ್ಪೆಯಲ್ಲಿ ವಿಟಮಿನ್ ಸಿ, ಉತ್ಕರ್ಷಣ ನಿರೋಧಕಗಳು, ಕಬ್ಬಿಣದ ಅಂಶಗಳಿವೆ. ಅದಕ್ಕಾಗಿಯೇ ಸಿಪ್ಪೆಯೊಂದಿಗೆ ಚಿಕ್ಕುವನ್ನು ಸೇವಿಸಬಹುದು.

ಕಿವಿ ಹಣ್ಣು: ಕಿವಿಯ ಸಿಪ್ಪೆಯೊಂದಿಗೆ ಸೇವಿಸಬೇಕು. ಏಕೆಂದರೆ ಕಿವಿಯ ಸಿಪ್ಪೆಯಲ್ಲಿ ನಾರಿನಂಶ, ಫೋಲೇಟ್, ವಿಟಮಿನ್ ಇ ಮುಂತಾದ ಅಂಶಗಳು ಇರುತ್ತವೆ. ಅದಕ್ಕಾಗಿಯೇ ಸಿಪ್ಪೆಯ ಜೊತೆಗೆ ಕಿವಿಯನ್ನು ಸೇವಿಸಬೇಕು.

ಇದನ್ನೂ ಓದಿ: IND vs NZ: ನ್ಯೂಜಿಲೆಂಡ್ ವಿರುದ್ಧ ಸರಣಿ ಗೆಲ್ಲಬೇಕೆಂದರೆ ಹಾರ್ದಿಕ್ ಈ ಆಟಗಾರನನ್ನು ಪಂದ್ಯದಿಂದ ಹೊರಗಿಡಲೇಬೇಕು!!

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News