Harmful Food for Men: ಪುರುಷರ ಅನಾರೋಗ್ಯಕ್ಕೆ ಕಾರಣವಾಗಬಹುದು ಈ ಆಹಾರ!

 ಉಪ್ಪಿನಕಾಯಿಯ ಮಸಾಲೆಯುಕ್ತ ರುಚಿ ಎಂಥವರನ್ನೂ ಆಕರ್ಷಿಸುತ್ತದೆ. ಆದರೆ ಅದರ ತಯಾರಿಕೆಯಲ್ಲಿ ಬಹಳಷ್ಟು ಎಣ್ಣೆಯನ್ನು ಬಳಸಲಾಗುತ್ತದೆ. ಜೊತೆಗೆ ಅದನ್ನು ಸೂರ್ಯನ ಬೆಳಕಿಗೆ ತೆರೆದಿಡದೆ ಮುಚ್ಚಿಡಲಾಗುತ್ತದೆ. ಹೀಗಾಗಿ ಅದರಲ್ಲಿರುವ ಮಸಾಲೆಗಳು ಕಚ್ಚಾ ಆಗಿ ಉಳಿಯುತ್ತದೆ.   

Written by - Bhavishya Shetty | Last Updated : May 28, 2022, 04:55 PM IST
  • ಹೆಚ್ಚು ಉಪ್ಪಿನಕಾಯಿ ತಿನ್ನುವುದು ಏಕೆ ಹಾನಿಕಾರಕ?
  • ಮನೆಯಲ್ಲಿಯೇ ಉಪ್ಪಿನಕಾಯಿ ತಯಾರಿಸಿ
  • ಪುರುಷರ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು
Harmful Food for Men: ಪುರುಷರ ಅನಾರೋಗ್ಯಕ್ಕೆ ಕಾರಣವಾಗಬಹುದು ಈ ಆಹಾರ!  title=
Pickle Side Effect

ನೀವು ಭಾರತದ ಯಾವುದೇ ಭಾಗಕ್ಕೆ ಹೋದರೂ, ಉಪ್ಪಿನಕಾಯಿ ಡಬ್ಬಗಳು ಬಹುತೇಕ ಪ್ರತಿ ಮನೆಯಲ್ಲೂ ಕಂಡುಬರುತ್ತವೆ. ಈ ದೇಶದಲ್ಲಿ ಉಪ್ಪಿನಕಾಯಿ ಪ್ರಿಯರಿಗೆ ಏನೂ ಕೊರತೆಯಿಲ್ಲ. ಇದು ಆಹಾರದ ರುಚಿಯನ್ನು ಹೆಚ್ಚಿಸುತ್ತದೆ. ಅನೇಕ ಬಾರಿ ಇಷ್ಟವಾಗದ ಅಡುಗೆಗಳನ್ನು ಮನೆಯಲ್ಲಿ ತಯಾರಿಸುತ್ತಾರೆ. ಅಂತಹ ಸನ್ನಿವೇಶಗಳಲ್ಲಿ ಉಪ್ಪಿನಕಾಯಿಯನ್ನು ಕೊಂಚ ಸೇರಿಸಿಕೊಂಡು ಆಹಾರ ಸೇವನೆ ಮಾಡಬಹುದು. ಆದರೆ ಆಹಾರವು ಪುರುಷರ ಆರೋಗ್ಯಕ್ಕೆ ಅಪಾಯ ತಂದೊಡ್ಡುತ್ತದೆ ಎಂದು ಸಾಬೀತಾಗಿದೆ. 

ಇದನ್ನು ಓದಿ: OMG: ಮಾಲೆ ಹಾಕುವ ಬದಲು ವರನ ಕೊರಳಿಗೆ ಅಪಾಯಕಾರಿ ಹಾವನ್ನು ಹಾಕಿದ ವಧು, ವರ ಮಾಡಿದ್ದೇನು ಗೊತ್ತಾ?

ಹೆಚ್ಚು ಉಪ್ಪಿನಕಾಯಿ ತಿನ್ನುವುದು ಏಕೆ ಹಾನಿಕಾರಕ?
ಉಪ್ಪಿನಕಾಯಿಯ ಮಸಾಲೆಯುಕ್ತ ರುಚಿ ಎಂಥವರನ್ನೂ ಆಕರ್ಷಿಸುತ್ತದೆ. ಆದರೆ ಅದರ ತಯಾರಿಕೆಯಲ್ಲಿ ಬಹಳಷ್ಟು ಎಣ್ಣೆಯನ್ನು ಬಳಸಲಾಗುತ್ತದೆ. ಜೊತೆಗೆ ಅದನ್ನು ಸೂರ್ಯನ ಬೆಳಕಿಗೆ ತೆರೆದಿಡದೆ ಮುಚ್ಚಿಡಲಾಗುತ್ತದೆ. ಹೀಗಾಗಿ ಅದರಲ್ಲಿರುವ ಮಸಾಲೆಗಳು ಕಚ್ಚಾ ಆಗಿ ಉಳಿಯುತ್ತದೆ. ಈ ಎರಡು ಕಾರಣಗಳಿಂದಾಗಿ ಉಂಟಾಗುವ ಅಧಿಕ ಕೊಲೆಸ್ಟ್ರಾಲ್ ಮತ್ತು ಜೀರ್ಣಕ್ರಿಯೆಯ ಸಮಸ್ಯೆಯು ಪುರುಷರ ಲೈಂಗಿಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಹುದು.

ಯಾವುದನ್ನಾದರೂ ಅತಿಯಾಗಿ ತಿನ್ನುವುದು ದೇಹಕ್ಕೆ ಹಾನಿಕಾರಕ ಎಂದು ಹೇಳಲಾಗುತ್ತದೆ. ವಿವಾಹಿತ ಪುರುಷರು ಉಪ್ಪಿನಕಾಯಿಯನ್ನು ಹೆಚ್ಚು ಸೇವಿಸಿದರೆ, ಲೈಂಗಿಕ ಸಮಸ್ಯೆ ಉಂಟಾಗುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. 

ಇದನ್ನು ಓದಿ: ಸಚಿವ ಅಶ್ವತ್ಥ್‌ ನಾರಾಯಣ್‌ ವಿರುದ್ಧ ಎಫ್‌ಐಆರ್‌ ದಾಖಲು!

ಮನೆಯಲ್ಲಿಯೇ ಉಪ್ಪಿನಕಾಯಿ ತಯಾರಿಸಿ: 
ಈ ಸಮಸ್ಯೆಗಳನ್ನು ತಪ್ಪಿಸಲು, ನೀವು ಉಪ್ಪಿನಕಾಯಿಯನ್ನು ಸೀಮಿತ ಪ್ರಮಾಣದಲ್ಲಿ ಸೇವಿಸಬೇಕು. ಸಾಧ್ಯವಾದರೆ ಮನೆಯಲ್ಲಿಯೇ ಉಪ್ಪಿನಕಾಯಿ ತಯಾರಿಸಿ. ಅದರಲ್ಲಿ ಕಡಿಮೆ ಎಣ್ಣೆ ಮತ್ತು ಕೆಲವು ಮಸಾಲೆಗಳನ್ನು ಬಳಸಿ ಗಾಜಿನ ಪಾತ್ರೆಯಲ್ಲಿ ಸಂಗ್ರಹಿಸಿಡಲಾಗುತ್ತದೆ. ನೀವು ಉಪ್ಪಿನಕಾಯಿಯನ್ನು ಸೂರ್ಯನ ಬೆಳಕಿಗೆ ಸರಿಯಾಗಿ ತೆರೆದಿಟ್ಟರೆ ಮಾತ್ರ ತಿನ್ನಿರಿ. ಸಾಮಾನ್ಯವಾಗಿ ಜನರು ಉಪ್ಪಿನಕಾಯಿಯನ್ನು ಮಾರುಕಟ್ಟೆಯಿಂದ ಖರೀದಿಸುತ್ತಾರೆ. ಇದರಲ್ಲಿ ಅನೇಕ ಬಾರಿ ನೈರ್ಮಲ್ಯದ ಬಗ್ಗೆ ಕಾಳಜಿ ವಹಿಸುವುದಿಲ್ಲ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News