ಬ್ಲಡ್ ಶುಗರ್ ಕಂಟ್ರೋಲ್ ಮಾಡಲು ಮೂಲಂಗಿಯನ್ನು ಈ ರೀತಿ ಬಳಸಿ

ಡಯಾಬಿಟಿಸ್ ರೋಗಿಗಳು ಯಾವುದೇ ಆಹಾರವನ್ನು ತೆಗೆದುಕೊಳ್ಳುವಾಗ ವಿಶೇಷ ಕಾಳಜಿ ವಹಿಸಬೇಕು. ಆರೋಗ್ಯ ತಜ್ಞರ ಪ್ರಕಾರ, ಮೂಲಂಗಿ ಸೇವನೆಯು ಮಧುಮೆಹಿಗಳಿಗೆ ವರದಾನವಿದ್ದಂತೆ ಎಂದು ಹೇಳಲಾಗುತ್ತದೆ.   

Written by - Yashaswini V | Last Updated : Sep 21, 2023, 02:20 PM IST
  • ಆರೋಗ್ಯ ತಜ್ಞರ ಪ್ರಕಾರ, ಮೂಲಂಗಿಯನ್ನು ಮಧುಮೇಹ ರೋಗಿಗಳಿಗೆ ಅತ್ಯುತ್ತಮ ತರಕಾರಿ ಎಂದು ಪರಿಗಣಿಸಲಾಗಿದೆ.
  • ಮೂಲಂಗಿಯನ್ನು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಬಹಳ ಸುಲಭವಾಗಿ ನಿಯಂತ್ರಿಸಬಹುದು ಎಂದು ಹೇಳಲಾಗುತ್ತದೆ.
  • ಆದರೆ, ಇದಕ್ಕಾಗಿ ಮೂಲಂಗಿಯನ್ನು ಯಾವ ರೀತಿ ಸೇವಿಸಬೇಕು ಎಂಬುದನ್ನೂ ತಿಳಿದಿರುವುದು ಅಗತ್ಯ.
ಬ್ಲಡ್ ಶುಗರ್ ಕಂಟ್ರೋಲ್ ಮಾಡಲು ಮೂಲಂಗಿಯನ್ನು ಈ ರೀತಿ ಬಳಸಿ  title=

Diabetes Diet: ಮೂಲಂಗಿ ಎಂದರೆ ಮೂಗು ಮುರಿಯುವವರೇ ಹೆಚ್ಚು. ಆದರೆ, ಮೂಲಂಗಿ ಪೋಷಕಾಂಶಗಳ ಗಣಿ. ಮೂಲಂಗಿ ಎಲೆಗಳು ವಿಟಮಿನ್ ಸಿ ಯ ಉಗ್ರಾಣವಾಗಿದೆ. ಮೂಲಂಗಿಯಲ್ಲಿ ವಿಟಮಿನ್ ಸಿ, ವಿಟಮಿನ್ ಬಿ 6, ಮೆಗ್ನಿಸಿಯಮ್, ರಂಜಕ, ಕಬ್ಬಿಣ, ಕ್ಯಾಲ್ಸಿಯಮ್ನಂತಹ ಹಲವು ಪೋಷಕಾಂಶಗಳಿವೆ. ಕಡಿಮೆ ಕ್ಯಾಲೋರಿಗಳನ್ನು ಹೊಂದಿರುವ ಮೂಲಂಗಿಯು ಜೀರ್ಣಕ್ರಿಯೆಗೂ ಕೂಡ ತುಂಬಾ ಪ್ರಯೋಜನಕಾರಿ. ಇಂತಹ ಮೂಲಂಗಿಯನ್ನು ಡಯಾಬಿಟಿಸ್ ರೋಗಿಗಳಿಗೆ ವರದಾನ ಎಂದು ಬಣ್ಣಿಸಲಾಗುತ್ತದೆ. 

ಹೌದು, ಆರೋಗ್ಯ ತಜ್ಞರ ಪ್ರಕಾರ, ಮೂಲಂಗಿಯನ್ನು ಮಧುಮೇಹ ರೋಗಿಗಳಿಗೆ ಅತ್ಯುತ್ತಮ ತರಕಾರಿ ಎಂದು ಪರಿಗಣಿಸಲಾಗಿದೆ. ಮೂಲಂಗಿಯನ್ನು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಬಹಳ ಸುಲಭವಾಗಿ ನಿಯಂತ್ರಿಸಬಹುದು ಎಂದು ಹೇಳಲಾಗುತ್ತದೆ. ಆದರೆ, ಇದಕ್ಕಾಗಿ ಮೂಲಂಗಿಯನ್ನು ಯಾವ ರೀತಿ ಸೇವಿಸಬೇಕು ಎಂಬುದನ್ನೂ ತಿಳಿದಿರುವುದು ಅಗತ್ಯ. 

ಇದನ್ನೂ ಓದಿ- ತೂಕ ಇಳಿಕೆಗೆ ತುಂಬಾ ಪ್ರಯೋಜನಕಾರಿ ಟಾಪ್ 5 ಮಾರ್ನಿಂಗ್ ಡ್ರಿಂಕ್ಸ್

ನಿಮಗೆಲ್ಲರಿಗೂ ತಿಳಿದಿರುವಂತೆ ಮೂಲಂಗಿ ಸೇವನೆಯಿಂದ ಆರೋಗ್ಯಕ್ಕೆ ಹಲವು ಪ್ರಯೋಜನಗಳಿವೆ. ಮೂಲಂಗಿ ಮಾತ್ರವಲ್ಲದೆ ಮೂಲಂಗಿಯ ಸೊಪ್ಪು ಕೂಡ ಆರೋಗ್ಯಕ್ಕೆ ಹಲವು ಪ್ರಯೋಜನಕಾರಿಯಾದ ಹಲವು ಪೋಷಕಾಂಶಗಳನ್ನು ಒಳಗೊಂಡಿದೆ. ಭಾರತದಲ್ಲಿ ಮೂಲಂಗಿಯನ್ನು ಸಲಾಡ್, ಉಪ್ಪಿನಕಾಯಿ, ಸಾಂಬಾರ್ ಮಾತ್ರವಲ್ಲದೆ ಇನ್ನೂ ಹಲವು ಖಾದ್ಯಗಳಲ್ಲೂ ಬಳಸುತ್ತಾರೆ. 

ಮಧುಮೇಹಿಗಳಿಗೆ ಮೂಲಂಗಿ ಹೇಗೆ ಪ್ರಯೋಜನಕಾರಿ? 
ಮೂಲಂಗಿಯು ಪ್ರಬಲ ಮಧುಮೇಹ-ವಿರೋಧಿ ಗುಣಲಕ್ಷಣಗಳನ್ನು ಹೊಂದಿದೆ. ಇದು ಪ್ರತಿರಕ್ಷಣಾ ಪ್ರಕ್ರಿಯೆಯನ್ನು ಪ್ರಚೋದಿಸುತ್ತದೆ. ಇದರೊಂದಿಗೆ ಗ್ಲೂಕೋಸ್ ಹೀರಿಕೊಳ್ಳುವಿಕೆಯನ್ನು ಹೆಚ್ಚಿಸುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ. ಮೂಲಂಗಿಯು ಅಡಿಪೋನೆಕ್ಟಿನ್ ಅನ್ನು ನಿಯಂತ್ರಿಸುವ ಜೈವಿಕ ಸಕ್ರಿಯ ಸಂಯುಕ್ತಗಳನ್ನು ಹೊಂದಿರುತ್ತದೆ ಮತ್ತು ಗ್ಲೂಕೋಸ್ ಹೋಮಿಯೋಸ್ಟಾಸಿಸ್ ಅನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.

ಇದನ್ನೂ ಓದಿ- ಮಧುಮೇಹ ಕಾಯಿಲೆಯ ಶತ್ರು ಈ ಹಸಿರು ತರಕಾರಿ, ಸೇವಿಸುತ್ತಲೇ ನಿಯಂತ್ರಣಕ್ಕೆ ಬರುತ್ತೆ, ಡ್ಯೆಬಿಟೀಸ್!

ಮಧುಮೇಹಿಗಳು ಮೂಲಂಗಿಯನ್ನು ಯಾವ ರೀತಿ ಸೇವಿಸಿದರೆ ಒಳಿತು: 
ಮಧುಮೇಹ ಇರುವವರು ಮೂಲಂಗಿಯನ್ನು ಸಲಾಡ್, ಇಲ್ಲವೇ ಭುರ್ಜಿ ರೂಪದಲ್ಲಿ ಸೇವಿಸುವುದರಿಂದ ಹೆಚ್ಚಿನ ಪ್ರಯೋಜನವನ್ನು ಪಡೆಯುತ್ತಾರೆ ಎಂದು ಹೇಳಲಾಗುತ್ತದೆ. ಇದಲ್ಲದೆ, ಮೂಲಂಗಿ ಸೊಪ್ಪಿನ ಪಲ್ಯ ತಯಾರಿಸಿ ಸೇವಿಸುವುದು ಕೂಡ ಬ್ಲಡ್ ಶುಗರ್ ಮಟ್ಟವನ್ನು ನಿಯಂತ್ರಿಸುವಲ್ಲಿ ತುಂಬಾ ಪ್ರಯೋಜನಕಾರಿ ಆಗಿದೆ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಕೆಲವು ಸಂಶೋಧನೆ ಹಾಗೂ ಸಾಮಾನ್ಯ ಮಾಹಿತಿಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.

Trending News