ಥಾಣೆಯಲ್ಲಿ ರಿಕ್ಟರ್ 3.2-ಪ್ರಮಾಣದ ಭೂಕಂಪ

     

Updated: Jan 2, 2018 , 03:48 PM IST
ಥಾಣೆಯಲ್ಲಿ  ರಿಕ್ಟರ್ 3.2-ಪ್ರಮಾಣದ ಭೂಕಂಪ

ಥಾಣೆ: ಮಂಗಳವಾರ ಬೆಳಿಗ್ಗೆ ಮಹಾರಾಷ್ಟ್ರದ ಥಾಣೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭೂಕಂಪ ಸಂಭವಿಸಿದ್ಧು  ರಿಕ್ಟರ್ ಮಾಪಕದಲ್ಲಿ 3.2 ಅಳತೆಯಿದೆ ಎಂದು ಐಎಂಡಿ ತಿಳಿಸಿದೆ.

ಭಾರತೀಯ ಹವಾಮಾನ ಇಲಾಖೆಯ ಪ್ರಾಥಮಿಕ ವರದಿಯ ಪ್ರಕಾರ, ಮೇಲ್ಮೈನ 10 ಕಿಲೋಮೀಟರ್ ಆಳದಲ್ಲಿನ ಭೂಕಂಪ ಬೆಳಗ್ಗೆ  2.21 ಕ್ಕೆ ದಾಖಲಾಗಿದೆ. ಥಾಣೆ ಪ್ರದೇಶವು ಉತ್ತರದಲ್ಲಿ 19.8 ಡಿಗ್ರೀ ಹಾಗೂ ಪೂರ್ವದ 73.1 ಡಿಗ್ರಿ  ಅಕ್ಷಾಂಶದ ಅಡಿಯಲ್ಲಿ ಬರುತ್ತದೆ ಈ ಭಾಗದಲ್ಲಿ ಭೂಕಂಪನವು ಅಧಿಕವಾಗಿದೆ ಎಂದು ಹೇಳಲಾಗಿದೆ.

ಭೂಕಂಪದಲ್ಲಿ ಯಾವುದೇ ರೀತಿಯ ಸಾವು ನೋವುಗಳು ಸಂಭವಿಸಿಲ್ಲ ಅಧಿಕಾರಿಗಳು ತಿಳಿಸಿದ್ದಾರೆ.