ನವದೆಹಲಿ: ಮೂವರು ಭಾರತೀಯರು ಕೇವಲ 16 ನಿಮಿಷದಲ್ಲಿ ಬಾಹ್ಯಾಕಾಶ ತಲುಪಲಿದ್ದಾರಂತೆ! ಹೀಗೆ ಹೇಳಿದ್ದು ಮತ್ತೆ ಬೇರ್ಯಾರು ಅಲ್ಲ,ಇಸ್ರೋ ಚೇರ್ಮನ್.
ಹೌದು,ಎಲ್ಲವೂ ಅಂದುಕೊಂಡಂತೆ ಆದಲ್ಲಿ ಭಾರತದ ಬಹುನಿರೀಕ್ಷಿತ ಕನಸಿನ ಯೋಜನೆಯಾದ ಅಂತರಿಕ್ಷಕ್ಕೆ ಮಾನವನನ್ನು ಕಳಿಸುವ ಗಗನಯಾನ್- 2022ರಲ್ಲಿ ಇಡೇರಲಿದೆ ಎಂದು ಇಸ್ರೋ ವಿಶ್ವಾಸ ವ್ಯಕ್ತಪಡಿಸಿದೆ.ಈ ಕುರಿತಾಗಿ ಮಾತನಾಡಿದ ಇಸ್ರೋ ಅಧ್ಯಕ್ಷ ಕೆ.ಸಿವನ್ ಇಸ್ರೋ ಖಂಡಿತವಾಗಿ ಪ್ರಧಾನಿ ನರೇಂದ್ರ ಮೋದಿಯವರು ನಿಗದಿ ಪಡಿಸಿದ ಗಗನಯಾನ್ ಯೋಜನೆ 2022ರಲ್ಲಿ ನೆರವೇರಲಿದೆ ಎಂದು ತಿಳಿಸಿದರು.
ಈ ಯೋಜನೆ ಕುರಿತಾಗಿ ವಿವರಿಸಿದ ಅವರು "ರಾಕೆಟ್ ಶ್ರೀಹರಿಕೋಟಾದಿಂದ ಉಡಾವಣೆ ಮಾಡಿದಾಗ ಅದನ್ನು ಭೂಕಕ್ಷೆಯ ಕೇಳಭಾಗದಲ್ಲಿ ಸೇರಿಸಲಾಗುತ್ತದೆ ಅದು ಭೂಮಿಯಿಂದ 300 ರಿಂದ 400 ಕಿಮೀ ದೂರದಲ್ಲಿರುತ್ತದೆ ಇದನ್ನು ತಲುಪಲು ಕೇವಲ 16 ನಿಮಿಷಗಳಷ್ಟೇ ಸಾಕು,ಅದು ಕಕ್ಷೆಯನ್ನು ತಲುಪಿದ ನಂತರ ಅಲ್ಲಿ ಮಾಡ್ಯೂಲ್ ಐದರಿಂದ ಏಳು ದಿನಗಳ ಕಾಲ ಬ್ಯಾಹ್ಯಾಕಾಶ್ಯದಲ್ಲಿ ಕಳೆಯಲಿದೆ.ಅಲ್ಲಿ ಎಲ್ಲ ರೀತಿಯ ವೈಜ್ಞಾನಿಕ ಪರೀಕ್ಷೆಗಳನ್ನು ಮಾಡಲಿದೆ ಎಂದು ಅವರು ತಿಳಿಸಿದ್ದಾರೆ.