ನವದೆಹಲಿ: ಉತ್ತರ ಪೂರ್ವ ದೆಹಲಿಯ ಭಜನ್ ಪುರಾ ಪ್ರದೇಶದಲಿರುವ ಒಂದು ಮನೆಯಲ್ಲಿ ಒಟ್ಟು ಐದು ಶವಗಳು ಪತ್ತೆಯಾಗಿದ್ದು, ಪ್ರದೇಶದಲ್ಲಿ ಆತಂಕ ಮನೆ ಮಾಡಿದೆ. ಸದ್ಯ ಪೊಲೀಸರು ಘಟನಾ ಸ್ಥಳಕ್ಕೆ ತಲುಪಿದ್ದು, ತನಿಖೆ ನಡೆಸುತ್ತಿದ್ದಾರೆ. ಪ್ರಾಥಮಿಕ ಮಾಹಿತಿಯ ಆಧಾರದ ಮೇಲೆ ಹೇಳಿಕೆ ನೀಡಿರುವ ಪೊಲೀಸರು, ಇದೊಂದು ಆತ್ಮಹತ್ಯೆಯೇ ಅಥವಾ ಹತ್ಯೆಯೇ ಎಂಬುದರ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದಿದ್ದಾರೆ. ಈ ಐದು ಶವಗಳಲ್ಲಿ ಮೂವರು ಮಕ್ಕಳೂ ಕೂಡ ಶಾಮೀಲಾಗಿದ್ದಾರೆ ಎನ್ನಲಾಗಿದೆ. ಕೆಲ ದಿನಗಳ ಹಿಂದೆಯಷ್ಟೇ ಈ ಕುಟುಂಬ ಆ ಮನೆಯಲ್ಲಿ ಬಾಡಿಗೆಯ ಮೇರೆಗೆ ವಾಸಿಸಲು ಬಂದಿತ್ತು ಎನ್ನಲಾಗಿದೆ. ಪತಿ, ಪತ್ನಿ ಹಾಗೂ ಮೂವರು ಮಕ್ಕಳು ಕೆಲ ದಿನಗಳ ಹಿಂದೆಯಷ್ಟೇ ಈ ಮನೆಯಲ್ಲಿ ವಾಸಿಸಲು ಬಂದಿದ್ದರು. ಈ ಮನೆಯಲ್ಲಿ ವಾಸಿರುತ್ತಿರುವವರನ್ನು ಶಂಭುನಾಥ್ (43) ಹಾಗೂ ಅವರ ಪತ್ನಿ ಸುನಿತಾ(38), ಕವಿತಾ(16), ಸಚಿನ್(14) ಹಾಗೂ ಆತನ ಕಿರಿಯ ಸಹೋದರ ಎಂದು ಗುರುತಿಸಲಾಗಿದೆ. ಮನೆಗೆ ಹೊರಗಡೆಯಿಂದ ಬೀಗ ಹಾಕಲಾಗಿದ್ದು, ಮನೆಯಿಂದ ಕೆಟ್ಟ ವಾಸನೆ ಬರಲಾರಂಭಿಸಿದ ಕಾರಣ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳಕ್ಕೆ ಧಾವಿಸಿದ ಪೊಲೀಸರು, ಬೀಗ ಒಡೆದು ಒಳಪ್ರವೇಶಿಸಿದ್ದಾರೆ.
ಆರಂಭಿಕ ತನಿಖೆ ನಡೆಸಿರುವ ಪೊಲೀಸರು ಈ ಶವಗಳು 4-5 ದಿನಗಳಷ್ಟು ಹಳೆಯದಾಗಿವೆ ಎಂದಿದ್ದು, ಘಟನೆ ಭಜನ್ ಪುರಾದ ಗಲ್ಲಿ ನಂಬರ್ 11ರಲ್ಲಿ ಈ ಘಟನೆ ಜರುಗಿದೆ.
(ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ..)