ಹೆಣ್ಣು ಮಗುವಿಗೆ ಜನ್ಮ ನೀಡಿದ 75 ವರ್ಷದ ಮಹಿಳೆ!

ತಾಯಿಯ ವಯಸ್ಸಿನ ಕಾರಣದಿಂದಾಗಿ, ಗರ್ಭಧಾರಣೆಯ 6.5 ತಿಂಗಳ ನಂತರ ಮಗುವನ್ನು ಸಿಸೇರಿಯನ್ ಮೂಲಕ ಅಕಾಲಿಕವಾಗಿ ಜನಿಸಬೇಕಾಗಿತ್ತು, ಏಕೆಂದರೆ ತಾಯಿ ದೈಹಿಕವಾಗಿ ದುರ್ಬಲರಾಗಿದ್ದರು.

Last Updated : Oct 14, 2019, 10:50 AM IST
ಹೆಣ್ಣು ಮಗುವಿಗೆ ಜನ್ಮ ನೀಡಿದ 75 ವರ್ಷದ ಮಹಿಳೆ! title=
Representational image

ಕೋಟಾ: ಜಿಲ್ಲೆಯ 75 ವರ್ಷದ ಮಹಿಳೆ ಐವಿಎಫ್ ಮೂಲಕ ಶನಿವಾರ ತಡರಾತ್ರಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಮಗುವಿನ ತೂಕ ಕೇವಲ 600 ಗ್ರಾಂ ಇದ್ದು, ನವಜಾತ ಶಿಶುವನ್ನು ಮತ್ತೊಂದು ಆಸ್ಪತ್ರೆಯ ನವಜಾತ ತೀವ್ರ ನಿಗಾ ಘಟಕಕ್ಕೆ ಕರೆದೊಯ್ಯಲಾಗಿದೆ. ಮಹಿಳೆಯನ್ನು ಕೋಟಾದ ಕಿಂಕರ್ ಆಸ್ಪತ್ರೆಯಲ್ಲಿ ಇರಿಸಲಾಗಿದೆ ಎಂದು ವೈದ್ಯರು ಭಾನುವಾರ ತಿಳಿಸಿದ್ದಾರೆ. ಶಿಶುವೈದ್ಯರ ತಂಡ ಹೆಣ್ಣು ಮಗುವನ್ನು ನೋಡಿಕೊಳ್ಳುತ್ತಿದೆ.

ಖಾಸಗಿ ಆಸ್ಪತ್ರೆಯ ವೈದ್ಯರಾದ ಅಭಿಲಾಶಾ ಕಿಂಕರ್, ಮಕ್ಕಳಿಲ್ಲದ ಕಾರಣ ಮಹಿಳೆ ಈ ಮೊದಲು ಮಗುವನ್ನು ದತ್ತು ಪಡೆದಿದ್ದಾರೆ. ಆದರೆ ಆಕೆ ತನ್ನ ಸ್ವಂತ ಮಗುವನ್ನು ಬಯಸಿದ್ದರು. ಹಾಗಾಗಿ ಅವರು ತಾಯಿಯಾಗುವ ಸಾಧ್ಯತೆಗಳ ಬಗ್ಗೆ ವೈದ್ಯರನ್ನು ಸಂಪರ್ಕಿಸಿದ್ದರು. . ಅವರು ಐವಿಎಫ್ ಅನ್ನು ಪ್ರಯತ್ನಿಸಲು ಬಯಸಿದ್ದರು.(ಬಂಜೆತನಕ್ಕೆ ಪ್ರಸ್ತುತ ಇರುವ ಆಯ್ಕೆಗಳ ಪೈಕಿ ಐವಿಎಫ್ ಚಿಕಿತ್ಸೆ ಒಂದು. ಐವಿಎಫ್ ಚಿಕಿತ್ಸೆಯ ಮೇಲೆ ಪರಿಣಾಮ ಬೀರುವ ಎರಡು ಪ್ರಮುಖ ಅಂಶಗಳೆಂದರೆ ಅಂಡಾಣುವಿನ ಗುಣಮಟ್ಟ ಮತ್ತು ದೇಹದೊಳಗೆ ಯಶಸ್ವಿಯಾಗಿ ಸೇರಿಸಬಹುದಾದಂತಹ ಭ್ರೂಣದ ಸಾಮರ್ಥ್ಯ.)

ತಾಯಿಯ ವಯಸ್ಸಿನಿಂದಾಗಿ, ಗರ್ಭಧಾರಣೆಯ ನಂತರ 6.5 ತಿಂಗಳ ನಂತರ ಮಗುವನ್ನು ಸಿಸೇರಿಯನ್ ಮೂಲಕ ಅಕಾಲಿಕವಾಗಿ ಜನಿಸಬೇಕಾಗಿತ್ತು. ಏಕೆಂದರೆ ತಾಯಿ ದೈಹಿಕವಾಗಿ ದುರ್ಬಲರಾಗಿದ್ದರು. ದೊಡ್ಡ ಸಮಸ್ಯೆ ಏನೆಂದರೆ, ಮಹಿಳೆಗೆ ಕೇವಲ ಒಂದು ಶ್ವಾಸಕೋಶವಿತ್ತು, ಇದು ವೈದ್ಯಕೀಯ ತಂಡಕ್ಕೆ ಸವಾಲಾಗಿತ್ತು.

ಮಹಿಳೆ ಗ್ರಾಮೀಣ ಹಿನ್ನೆಲೆಯುಳ್ಳ ಕೃಷಿ ಕುಟುಂಬಕ್ಕೆ ಸೇರಿದವರಾಗಿದ್ದು, ಆಕೆ ತನ್ನ ಸ್ವಂತ ಮಗುವನ್ನು ಹೊಂದಲು ಬಯಸಿದ್ದರು. ಇದು ನಮ್ಮೆಲ್ಲರಿಗೂ ಒಂದು ರೀತಿಯ ಆಶ್ಚರ್ಯಕರವಾಗಿತ್ತು ಎಂದು ಡಾ. ಅಭಿಲಾಶಾ ಕಿಂಕರ್ ಹೇಳಿದರು.

Trending News