ಆಗ್ರಾ: ಕರೋನಾವೈರಸ್ ಸಾಂಕ್ರಾಮಿಕ ಹೆಚ್ಚುತ್ತಿರುವ ಬೆದರಿಕೆಯ ನಡುವೆ ತಾಜ್ ಮಹಲ್ ಅನ್ನು ಇಂದು (ಸೋಮವಾರ) ಪ್ರವಾಸಿಗರಿಗೆ ತೆರೆಯಲಾಗಿದೆ. ಸಾಮಾಜಿಕ ಅಂತರದಂತಹ ನಿಯಮಗಳ ಅಡಿಯಲ್ಲಿ ಪ್ರವಾಸಿಗರಿಗೆ ತಾಜ್‌ಗೆ ಭೇಟಿ ನೀಡಲು ಅವಕಾಶವಿರುತ್ತದೆ. ಇದಲ್ಲದೆ ಪ್ರತಿದಿನ 5000 ಪ್ರವಾಸಿಗರಿಗೆ ಮಾತ್ರ ಪ್ರವೇಶ ಸಿಗಲಿದೆ. ಅಧಿಕಾರಿಗಳ ಪ್ರಕಾರ ಪ್ರವೇಶ ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ ಮಾತ್ರ ಖರೀದಿಸಬಹುದು.
ಕರೋನಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಪ್ರೀತಿಯ ಸಂಕೇತವಾದ ತಾಜ್ ಮಹಲ್ (Taj Mahal) ಅನ್ನು ಮಾರ್ಚ್ನಲ್ಲಿ ಮುಚ್ಚಲಾಯಿತು. ಪ್ರತಿ ವರ್ಷ ಸುಮಾರು ಏಳು ಮಿಲಿಯನ್ ಜನರು ಈ ಪ್ರೇಮ ಸೌಧಕ್ಕೆ ಭೇಟಿ ನೀಡುತ್ತಾರೆ. ಇದು ಸರ್ಕಾರದ ಆದಾಯದ ಮುಖ್ಯ ಮೂಲವಾಗಿದೆ. ಗಮನಾರ್ಹವಾಗಿ ಕರೋನಾ ತಡೆಹಿಡಿಯಲು ಜಾರಿಗೆ ತಂದ ಲಾಕ್‌ಡೌನ್ (Lockdown) ನಿಂದಾಗಿ ಆರ್ಥಿಕತೆಗೆ ಹೆಚ್ಚು ಪೆಟ್ಟು ಬಿದ್ದಿದೆ. ಆದ್ದರಿಂದ ಹೆಚ್ಚುತ್ತಿರುವ ಕರೋನಾ ಅಪಾಯದ ಹೊರತಾಗಿಯೂ ಸರ್ಕಾರವು ಈಗ ಆರ್ಥಿಕ ಚಟುವಟಿಕೆಗಳನ್ನು ಪುನರಾರಂಭಿಸುತ್ತಿದೆ.
ಡೊನಾಲ್ಡ್ ಟ್ರಂಪ್‌ಗಿಂತ ಮೊದಲು ತಾಜ್‌ಮಹಲ್‌ಗೆ ಭೇಟಿ ನೀಡಿದ್ದ ಯುಎಸ್ ಅಧ್ಯಕ್ಷರಿವರು
ಸ್ಥಿರವಾಗಿ ಬೆಳೆಯುತ್ತಿರುವ ಕರೋನಾ ಪ್ರಕರಣ:
ಕಳೆದ ಕೆಲವು ದಿನಗಳಲ್ಲಿ ದೇಶದಲ್ಲಿ ಕರೋನಾವೈರಸ್ (Coronavirus) ಪ್ರಕರಣಗಳು ಸಾಕಷ್ಟು ವೇಗವನ್ನು ಪಡೆದುಕೊಂಡಿದೆ. ಆರೋಗ್ಯ ಸಚಿವಾಲಯ ಭಾನುವಾರ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ ಕರೋನಾ ಸೋಂಕಿತರ ಸಂಖ್ಯೆ 54,00,619 ತಲುಪಿದೆ. ಇದರೊಂದಿಗೆ ಕರೋನಾದ ಸಾವಿನ ಸಂಖ್ಯೆಯೂ ಹೆಚ್ಚುತ್ತಿದೆ. ಇಲ್ಲಿಯವರೆಗೆ 86,000ಕ್ಕೂ ಹೆಚ್ಚು ಜನರು ಕರೋನಾ ರುದ್ರನರ್ತನಕ್ಕೆ ಬಲಿಯಾಗಿದ್ದಾರೆ.
PHOTOS: ವಾಹ್ ತಾಜ್! ಆಕಾಶದಲ್ಲೇ ಸಿಗುತ್ತೆ 5 ಸ್ಟಾರ್ ಹೋಟೆಲ್ ಊಟೋಪಚಾರ
ಏತನ್ಮಧ್ಯೆ ಭಾರತವು ಪ್ರತಿದಿನ ಒಂದು ದಶಲಕ್ಷಕ್ಕೂ ಹೆಚ್ಚು ಜನರನ್ನು ಕರೋನಾ ಪರೀಕ್ಷೆಗೆ ಒಳಪಡಿಸಿದ್ದರೂ ಸಹ ದೇಶದ ಜನಸಂಖ್ಯೆಗೆ ಹೋಲಿಸಿದರೆ ಇದು ಸಾಕಾಗುವುದಿಲ್ಲ ಎಂದು ಅನೇಕ ತಜ್ಞರು ಹೇಳುತ್ತಾರೆ.
ಕರೋನಾದ ನಿಜವಾದ ಪ್ರಕರಣಗಳ ಸಂಖ್ಯೆ ಅಧಿಕೃತವಾಗಿ ವರದಿಯಾಗಿದೆ. ಆದರೆ ಪರೀಕ್ಷೆ ಹೆಚ್ಚಾದರೆ ಅಂಕಿ-ಅಂಶಗಳು ಅದಕ್ಕಿಂತ ಹೆಚ್ಚಿನದಾಗಿರಬಹುದು ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.