ಪ್ರಣಬ್ ಮುಖರ್ಜಿ ಭಾಷಣದ ಬಳಿಕ RSS ಸೇರುವವರ ಸಂಖ್ಯೆಯಲ್ಲಿ ಹೆಚ್ಚಳ

ಪ್ರಣಬ್ ಮುಖರ್ಜಿ ಭಾಷಣದ ಬಳಿಕ RSS ಸೇರುವವರ ಸಂಖ್ಯೆಯಲ್ಲಿ ಐದು ಪಟ್ಟು ಹೆಚ್ಚಳವಾಗಿದ್ದು, ಇದರಲ್ಲಿ 40% ಅರ್ಜಿಗಳು ಬಂಗಾಳದಿಂದ ಬರುತ್ತಿವೆ ಎಂದು ರಾಷ್ಟ್ರೀಯ ಸ್ವಯಂ ಸೇವಾ ಸಂಘ(RSS)ದ ಹಿರಿಯ ಮುಖಂಡ ಬಿಪ್ಲಬ್ ರಾಯ್ ಹೇಳಿದ್ದಾರೆ.

Last Updated : Jun 26, 2018, 01:37 PM IST
ಪ್ರಣಬ್ ಮುಖರ್ಜಿ ಭಾಷಣದ ಬಳಿಕ RSS ಸೇರುವವರ ಸಂಖ್ಯೆಯಲ್ಲಿ ಹೆಚ್ಚಳ title=

ಕೋಲ್ಕತ: ಜೂನ್ 7 ರಂದು ನಾಗಪುರದಲ್ಲಿ ನಡೆದ ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಸಮಾವೇಶದಲ್ಲಿ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಭಾಗವಹಿಸಿ ಸ್ವಯಂಸೇವಕರನ್ನು ಉದ್ದೇಶಿಸಿ ಮಾತನಾಡಿದರು. ಆ ಬಳಿಕ RSS ಸೇರುವವರ ಸಂಖ್ಯೆ ಸುಮಾರು ಐದು ಪಟ್ಟು ಹೆಚ್ಚಾಗಿದೆ. 

ನಾಗ್ಪುರದಲ್ಲಿ ನಡೆದ ಸಮಾವೇಶದಲ್ಲಿ ಭಾಗವಹಿಸಿದ್ದ ಮಾಜಿ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ, ತಮ್ಮ ಭಾಷಣದಲ್ಲಿ ಭಾರತೀಯ ಸಂಸ್ಕೃತಿ ಬಗ್ಗೆ ಮಾತುಗಳನ್ನಾಡಿದ್ದರು. ಇದರಿಂದ ಅನೇಕರು ಜಾಗೃತಗೊಂಡಿದ್ದು, ಆರ್‌ಎಸ್‌ಎಸ್‌ ಸೇರಿಕೊಳ್ಳ ಬಯಸುವವರ ಸಂಖ್ಯೆ 5 ಪಟ್ಟು ಹೆಚ್ಚಾಗಿದೆ. 

ಜೂನ್ 1 ರಿಂದ ಜೂನ್ 6 ರವರೆಗೆ ಸರಾಸರಿ 378 ವಿನಂತಿಗಳನ್ನು ನಮ್ಮ(RSS) ವೆಬ್ಸೈಟ್ನಲ್ಲಿ ಸಲ್ಲಿಕೆಯಾಗಿದ್ದವು. ಜೂನ್ 7 ರಂದು ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರ RSS ಸಮಾವೇಶದಲ್ಲಿ ಭಾಷಣ ಮಾಡಿದ ಬಳಿಕ ದಿನವೊಂದಕ್ಕೆ 1200-1300 ಅರ್ಜಿಗಳು RSS ಕಚೇರಿಗೆ ಸಲ್ಲಿಕೆಯಾಗುತ್ತಿದ್ದು, ಇದರಲ್ಲಿ 40% ಅರ್ಜಿಗಳು ಬಂಗಾಳದಿಂದ ಬರುತ್ತಿವೆ ಎಂದು ರಾಷ್ಟ್ರೀಯ ಸ್ವಯಂ ಸೇವಾ ಸಂಘ(RSS)ದ ಹಿರಿಯ ಮುಖಂಡ ಬಿಪ್ಲಬ್ ರಾಯ್ ಹೇಳಿದ್ದಾರೆ.

ಮುಖರ್ಜಿ ಅವರು ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ RSS ಜನಪ್ರಿಯತೆ  ಹೆಚ್ಚಾಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಬಿಪ್ಲಬ್ ರಾಯ್, ಮುಖರ್ಜಿ ಕಾರಣದಿಂದ RSS ಅಂಗೀಕಾರ ಹೆಚ್ಚಾಗಿದೆ ಎಂದು ಅರ್ಥೈಸಿಕೊಳ್ಳುವುದು ಸೂಕ್ತವಲ್ಲ. ಸಮಾಜದಲ್ಲಿ ಅದರ ಚಟುವಟಿಕೆಗಳ ಕಾರಣದಿಂದ RSS ಜನರಲ್ಲಿ ಜನಪ್ರಿಯವಾಗಿದೆ. ಆದರೆ ಹೌದು,  ಮುಖರ್ಜಿ ಅವರ ಭಾಷಣ ಜನರಲ್ಲಿ ಆಸಕ್ತಿಯನ್ನು ಹೆಚ್ಚಿಸಿದೆ. ಇದು RSS ಜನಪ್ರಿಯತೆಯ ಕಾರಣಗಳಲ್ಲಿ ಒಂದಾಗಿದೆ ಎಂದು ಅವರು ಹೇಳಿದರು.

Trending News