Viral Video: ಟವೆಲ್ ಧರಿಸಿ ಮೆಟ್ರೋ ಹತ್ತಿದ ಭೂಪ, ಎಲ್ಲರ ಎದುರೆ ಏನ್ ಮಾಡ್ತಿದಾನೆ ನೀವೇ ನೋಡಿ

Treinding Video: ವ್ಯಕ್ತಿಯೋರ್ವ ಟವೆಲ್ ಧರಿಸಿ ಮೆಟ್ರೋ ರೈಲು ಹತ್ತಿದ್ದಾನೆ ಮತ್ತು ವಿಚಿತ್ರವಾಗಿ ವರ್ತಿಸಲು ಆರಂಭಿಸಿದ್ದಾನೆ. ವ್ಯಕ್ತಿಯನ್ನು ನೋಡಿದ ಇತರ ಯಾತ್ರಿಗಳು ಆಶ್ಚರ್ಯಚಕಿತರಾಗಿರುವುದರ ಜೊತೆಗೆ ಹೊಟ್ಟೆ ಹಿಡಿದು ನಗುತ್ತಿದ್ದಾರೆ. ಪ್ರಸ್ತುತ ಈ ವಿಡಿಯೋ ಸಾಮಾಜಿಕ ಮಾಧ್ಯಮದ ಮೇಲೆ ಭಾರಿ ವೈರಲ್ ಆಗುತ್ತಿದೆ.   

Written by - Nitin Tabib | Last Updated : Dec 8, 2022, 03:23 PM IST
  • ಆತ ಟವೆಲ್‌ನಲ್ಲಿ ಮೆಟ್ರೋದಲ್ಲಿ ತಿರುಗಾಡಲು ಪ್ರಾರಂಭಿಸುತ್ತಾನೆ
  • ಮತ್ತು ವಿಚಿತ್ರವಾಗಿ ವರ್ತಿಸಲು ಪ್ರಾರಂಭಿಸುತ್ತಾನೆ.
  • ಮಧ್ಯ ಮಧ್ಯದಲ್ಲಿ ಆತ ಇತರ ಪ್ರಯಾಣಿಕರನ್ನು ವಿಚಿತ್ರವಾಗಿ ನೋಡುತ್ತಾನೆ
Viral Video: ಟವೆಲ್ ಧರಿಸಿ ಮೆಟ್ರೋ ಹತ್ತಿದ ಭೂಪ, ಎಲ್ಲರ ಎದುರೆ ಏನ್ ಮಾಡ್ತಿದಾನೆ ನೀವೇ ನೋಡಿ title=
Metro Viral Video

Funny Video: ಸಾಮಾಜಿಕ ಮಾಧ್ಯಮಗಳಲ್ಲಿ ಯಾವಾಗ ಯಾವ ವಿಷಯ ವೈರಲ್ ಆಗುತ್ತದೆ ಯಾರಿಗೂ ಗೊತ್ತಿಲ್ಲ.  ಕೆಲವೊಮ್ಮೆ ಈ ವೈರಲ್ ವಿಷಯಗಳು ಎಷ್ಟೊಂದು ತಮಾಷೆಯಿಂದ ಕೂಡಿರುತ್ತವೆ ಎಂದರೆ, ಜನರು ಅವುಗಳನ್ನು ಪದೇ ಪದೇ ವೀಕ್ಷಿಸುತ್ತಾರೆ ಮತ್ತು ಹಂಚಿಕೊಳ್ಳುತ್ತಾರೆ. ಇನ್ನೊಂದೆಡೆ ಕೆಲ ವಿಷಯಗಳನ್ನು ನೋಡಿ ಜನರು ತಬ್ಬಿಬ್ಬಾಗುತ್ತಾರೆ. ಇತ್ತೀಚಿನ ದಿನಗಳಲ್ಲಿ ಭೂಪನೋಬ್ಬನ ವಿಡಿಯೋ ವೈರಲ್ ಆಗುತ್ತಿದ್ದು, ವಿಡಿಯೋದಲ್ಲಿ ವ್ಯಕ್ತಿ ಮಾಡುತ್ತಿರುವ ಕೃತ್ಯವನ್ನು ನೋಡಿದ ಜನರು ಹೊಟ್ಟೆ ಹಿಡ್ಕೊಂಡು ನಗುತ್ತಿದ್ದಾರೆ. ಈಗ ಪರಿಸ್ಥಿತಿ ಹೇಗಿದೆ ಎಂದರೆ, ವಿಡಿಯೋಗೆ ಸಾಕಷ್ಟು ,ಕಾಮೆಂಟ್ ಮಾಡುತ್ತಿರುವ ಜನರು ಅದನ್ನು ವ್ಯಾಪಕವಾಗಿ  ಹಂಚಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ-Viral Video: ಕೋತಿ ಬಾಲಕನ ಮಧ್ಯೆ ಭಾರಿ ಗುದ್ದಾಟ, ಗೆದ್ದಿದ್ದು ಯಾರು?

ಈ ವಿಡಿಯೋವನ್ನು  ಮೆಟ್ರೋ ರೈಲಿನಲ್ಲಿ ಚಿತ್ರೀಕರಿಸಲಾಗಿದೆ. ಈ ಟ್ರೆಂಡಿಂಗ್ ವೀಡಿಯೋದಲ್ಲಿ ಮೆಟ್ರೋದಲ್ಲಿ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರು ಪ್ರಯಾಣಿಸುತ್ತಿರುವುದನ್ನು ನೀವು ನೋಡಬಹುದು. ಅಷ್ಟ್ಹೋತ್ತಿಗೆ ಒಬ್ಬ ವ್ಯಕ್ತಿ ಟವೆಲ್ ಧರಿಸಿ ಮೆಟ್ರೋ ಒಳಗೆ ಪ್ರವೇಶಿಸುತ್ತಾನೆ ಮತ್ತು ಪ್ರಯಾಣಿಕರು ಆ ವ್ಯಕ್ತಿಯನ್ನೇ ಕಣ್ಣುಪಿಳುಕಿಸದೆ ನೋಡಲಾರಂಭಿಸುತ್ತಾರೆ. ಇಲ್ಲಿ ಆಶ್ಚರ್ಯಕಾರಕ ಸಂಗತಿ ಎಂದರೆ, ಆ ವ್ಯಕ್ತಿಗೆ ತಾನು ಟವೆಲ್ ಧರಿಸಿ ಬಂದಿರುವ ಪರಿವೆ ಇದೆಯೋ ಅಥವಾ ಇಲ್ಲವೋ ಗೊತ್ತಿಲ್ಲ, ಆದರೆ ಆತ ಟವೆಲ್‌ನಲ್ಲಿ ಮೆಟ್ರೋದಲ್ಲಿ ತಿರುಗಾಡಲು ಪ್ರಾರಂಭಿಸುತ್ತಾನೆ ಮತ್ತು ವಿಚಿತ್ರವಾಗಿ ವರ್ತಿಸಲು ಪ್ರಾರಂಭಿಸುತ್ತಾನೆ. ಮಧ್ಯ ಮಧ್ಯದಲ್ಲಿ ಆತ ಇತರ ಪ್ರಯಾಣಿಕರನ್ನು ವಿಚಿತ್ರವಾಗಿ ನೋಡುತ್ತಾನೆ ಮತ್ತು ಮೆಟ್ರೋದ ಕನ್ನಡಿಯಲ್ಲಿ ನೋಡಿ ತನ್ನ ಕೂದಲಿನ ಮೇಲೆ ಸ್ಟೈಲ್ ನಲ್ಲಿ ಕೈಯಾಡಿಸುತ್ತಾನೆ. ಆ ವ್ಯಕ್ತಿ ಈ ರೀತಿ ವಾರ್ತಿಸುತ್ತಿರುವುದನ್ನು ನೋಡಿದ ಇತರ ಪ್ರಯಾಣಿಕರು, ಭಾರಿ ನಗುವುದರ ಜೊತೆಗೆ  ಆಶ್ಚರ್ಯ ಕೂಡ ವ್ಯಕ್ತಪಡಿಸುತ್ತಿದ್ದಾರೆ. ಮೊದಲು ವಿಡಿಯೋ ನೋಡಿ...

ಇದನ್ನೂ ಓದಿ-Javed Akhtar: 'ಪತ್ನಿಯರಿಗೂ ಕೂಡ ಒಂದಕ್ಕಿಂತ ಹೆಚ್ಚು ಪತಿಯರನ್ನು ಹೊಂದುವ ಹಕ್ಕು ಕೊಡಿ'

ವಿಡಿಯೋ ನೋಡಿ ನಿಮಗೂ ಕೂಡ ನಗು ಬಂದಿರಬಹುದು. ಇವನ್ಯಾವ ಭೂಪ ಅಂತ ನೀವೂ ಕೂಡ ತಲೆ ಹಿಡಿದುಕೊಂಡಿರಬಹುದು. ಅದೇನೇ ಇದ್ದರೂ ಪ್ರಸ್ತುತ ಈ ವಿಡಿಯೋ ಮಾತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವೀಡಿಯೊವನ್ನು ಇನ್ಸ್ಟಾಗ್ರಾಮ್ನಲ್ಲಿ 'mohitgauhar' ಹೆಸರಿನ ಖಾತೆಯ ಮೂಲಕ ಹಂಚಿಕೊಳ್ಳಲಾಗಿದೆ. ಇದುವರೆಗೆ ಲಕ್ಷಾಂತರ ಮಂದಿ ವಿಡಿಯೋವನು ವೀಕ್ಷಿಸಿದ್ದಾರೆ ಮತ್ತು ಒಂದು ಲಕ್ಷಕ್ಕೂ ಹೆಚ್ಚು ಮಂದಿ ವಿಡಿಯೋವನ್ನು ಲೈಕ್ ಮಾಡಿದ್ದಾರೆ. ಇದೇ ವೇಳೆ  ಕೆಲ ಜನರು ಭಾರಿ ಮಜಾ ಮಾಡುತ್ತಲೇ ವೀಡಿಯೊಗೆ ಕಾಮೆಂಟ್ ಮಾಡುತ್ತಿದ್ದಾರೆ. ಪ್ರಸಿದ್ಧರಾಗಲು ಜನರು ಏನು ಬೇಕಾದರೂ ಮಾಡಲು ಸಿದ್ಧರಿರುತ್ತಾರೆ ಎಂದು ಕೆಲವರು ಕಾಮೆಂಟ್ ಮಾಡಿದರೆ. ಈ ಬ್ರದರ್ ನ ಹವ್ಯಾಸಕ್ಕೆ ತಮಾಷೆಯಾಗಿ ಹ್ಯಾಟ್ಸ್ ಆಫ್ ಎನ್ನುತ್ತಿದ್ದಾರೆ. ಹಾಗಾದರೆ ನೀವು ಈ ವೀಡಿಯೊವನ್ನು ಇಷ್ಟಪಟ್ಟಿದ್ದರೆ, ಕಾಮೆಂಟ್ ಸೆಕ್ಷನ್ ನಲ್ಲಿ ಕಾಮೆಂಟ್ ಮಾಡುವ ಮೂಲಕ ಅಣ್ಣನಿಗೆ ನಿಮ್ಮ ಅನಿಸಿಕೆ ತಿಳಿಯಪಡಿಸಬಹುದು.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News