ಗುವಾಹಟಿ: ಅಸ್ಸಾಂ (Assam) ನಲ್ಲಿ ಖಾಸಗಿ ವಾಹನದಲ್ಲಿ ಎಲೆಕ್ಟ್ರಾನಿಕ್ ಮತದಾನ ಯಂತ್ರ (ಇವಿಎಂ) ಸಾಗಿಸಲಾಗುತ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬೆನ್ನಲ್ಲೇ ಭಾರತದ ಚುನಾವಣಾ ಆಯೋಗ ನಾಲ್ವರು ಅಧಿಕಾರಿಗಳನ್ನು ಅಮಾನತುಗೊಳಿಸಿದೆ.
ವಾಸ್ತವವಾಗಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದು ವೈರಲ್ ಆಗುತ್ತಿದ್ದು ಇದರಲ್ಲಿ ಖಾಸಗಿ ವಾಹನದಲ್ಲಿ ಇವಿಎಂ ಪತ್ತೆಯಾಗಿದೆ. ಅಷ್ಟೇ ಅಲ್ಲದೆ ಈ ವಾಹನವನ್ನು ಬಿಜೆಪಿ ನಾಯಕನ ವಾಹನ ಎಂದು ಹೇಳಲಾಗುತ್ತಿದೆ.
Presiding Officer was issued show-cause notice for
violation of transport protocol. PO & 3 other officials placed under suspension. Although EVM's seals were found intact it has been decided to do a re-poll at No 149- Indira MV School of LAC 1 Ratabari(SC): EC on Assam EVM issue pic.twitter.com/wwTbIdooYt— ANI (@ANI) April 2, 2021
ಅಸ್ಸಾಂನಲ್ಲಿ ಖಾಸಗಿ ವಾಹನದಲ್ಲಿ ಇವಿಎಂ (EVM) ದೊರೆತಿರುವುದನ್ನು ಸಾರಿಗೆ ಪ್ರೋಟೋಕಾಲ್ ಉಲ್ಲಂಘನೆ ಎಂದಿರುವ ಚುನಾವಣಾ ಆಯೋಗ, ಪ್ರಧಾನ ಅಧಿಕಾರಿಗೆ ಶೋಕಾಸ್ ನೋಟಿಸ್ ಜಾರಿಗೊಳಿಸಿದ್ದು ಪಿಒ ಮತ್ತು ಇತರ 3 ಅಧಿಕಾರಿಗಳನ್ನು ಅಮಾನತುಗೊಳಿಸಿದೆ. ಇವಿಎಂ ಸೀಲ್ ಹಾಗೇ ಇರುವುದು ಕಂಡುಬಂದರೂ, ಎಲ್‌ಎಸಿ 1 ರತ್‌ಬಾರಿ (ಎಸ್‌ಸಿ) ಯ ಇಂದಿರಾ ಎಂವಿ ಸ್ಕೂಲ್ ನಂ 149 ರಲ್ಲಿ ಮತ್ತೆ ಮತದಾನ ನಡೆಸಲು ನಿರ್ಧರಿಸಲಾಗಿದೆ.
ಇದನ್ನೂ ಓದಿ - "ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಅಸ್ಸಾಂ ಸಂಸ್ಕೃತಿಯ ಮೇಲಿನ ದಾಳಿ"
ಸುದ್ದಿ ಸಂಸ್ಥೆ ಎಎನ್‌ಐ ಪ್ರಕಾರ, ಅಸ್ಸಾಂನ (Assam) ಪಠಾರ್‌ಕಂಡಿ ವಿಧಾನಸಭಾ ಕ್ಷೇತ್ರದಲ್ಲಿ, ಕಳೆದ ರಾತ್ರಿ ಜನಸಮೂಹವು ಇವಿಎಂ ಇದ್ದ ವಾಹನವನ್ನು ನಿಲ್ಲಿಸಿದೆ. ಈ ಜನಸಮೂಹವು ಇದು ಚುನಾವಣಾ ಆಯೋಗದ ವಾಹನವಲ್ಲ ಎಂದು ಹೇಳಿವೆ. ಮೂಲಗಳ ಪ್ರಕಾರ, ಚುನಾವಣಾ ಆಯೋಗದ ವಾಹನವು ರಸ್ತೆಯಲ್ಲಿ ಕೆಟ್ಟಿದ್ದರಿಂದ ಚುನಾವಣಾ ಅಧಿಕಾರಿಗಳು ಅದೇ ರಸ್ತೆಯಲ್ಲಿ ಬರುತ್ತಿದ್ದ ಕಾರನ್ನು ನಿಲ್ಲಿಸಿ ಸಹಾಯ ಕೋರಿದ್ದರು ಎನ್ನಲಾಗಿದೆ. ಆದರೆ ಈ ಕಾರು ಬಿಜೆಪಿ ಅಭ್ಯರ್ಥಿಗೆ ಸೇರಿದ್ದು ಎಂದು ಆರೋಪಿಸಿರುವ ಜನಸಮೂಹವು ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗುತ್ತಿದ್ದು ಪೊಲೀಸರು ದಾಳಿಕೋರರ ವಿರುದ್ಧ ಪ್ರಕರಣ ದಾಖಲಿಸಿ ಇವಿಎಂಗಳನ್ನು ವಶಪಡಿಸಿಕೊಂಡಿದ್ದಾರೆ. ಆದರೆ ಇವಿಎಂಗಳು ಯಾವುದೇ ರೀತಿಯ ಹಾನಿಗೊಳಗಾಗಲಿಲ್ಲ ಮತ್ತು ಇದು ಸುರಕ್ಷಿತವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಎಲ್ಲಾ ರಾಷ್ಟ್ರೀಯ ಪಕ್ಷಗಳು ಇವಿಎಂಗಳ ಬಳಕೆಯನ್ನು ಮರು ಮೌಲ್ಯಮಾಪನ ಮಾಡಬೇಕಾಗಿದೆ: ಪ್ರಿಯಾಂಕಾ ಗಾಂಧಿ
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi Vadra) ಅವರು ಅಸ್ಸಾಂನ ಖಾಸಗಿ ವಾಹನದಲ್ಲಿ ಎಲೆಕ್ಟ್ರಾನಿಕ್ ಮತದಾನ ಯಂತ್ರವನ್ನು (ಇವಿಎಂ) ಸಾಗಿಸಲಾಗುತ್ತಿದೆ ಎಂಬ ಆರೋಪದ ಬಗ್ಗೆ ಶುಕ್ರವಾರ ಚುನಾವಣಾ ಆಯೋಗವು ನಿರ್ಣಾಯಕ ಕ್ರಮಗಳನ್ನು ತೆಗೆದುಕೊಳ್ಳಬೇಕು ಮತ್ತು ಎಲ್ಲಾ ರಾಷ್ಟ್ರೀಯ ಪಕ್ಷಗಳು ಇವಿಎಂಗಳ ಬಳಕೆಯನ್ನು ಗಂಭೀರವಾಗಿ ಮರು ಮೌಲ್ಯಮಾಪನ ಮಾಡುವ ಅಗತ್ಯವಿದೆ ಎಂದಿದ್ದಾರೆ.
Every time there is an election videos of private vehicles caught transporting EVM’s show up. Unsurprisingly they have the following things in common:
1. The vehicles usually belong to BJP candidates or their associates. ....
— Priyanka Gandhi Vadra (@priyankagandhi) April 2, 2021
ಇದನ್ನೂ ಓದಿ - Priyanka Gandhi: ಪ್ರಿಯಾಂಕಾ ಗಾಂಧಿಗೆ ಟೀ ಎಸ್ಟೇಟ್ನಲ್ಲಿ ಕೆಲಸ! ವೈರಲ್ ಆಯ್ತು ವಿಡಿಯೋ
ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗುತ್ತಿರುವ ಸಮಯದಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ, ಇದರಲ್ಲಿ ಇವಿಎಂಗಳನ್ನು ಖಾಸಗಿ ವಾಹನದಲ್ಲಿ ಇರಿಸಲಾಗಿದೆ ಮತ್ತು ಈ ವಾಹನವು ಬಿಜೆಪಿ ನಾಯಕನದ್ದು ಎಂದು ಹೇಳಲಾಗಿದೆ ಎಂದವರು ತಮ್ಮ ಟ್ವೀಟ್ ನಲ್ಲಿ ಉಲ್ಲೇಖಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.