ಕೊರೊನಾ-ಮಂಕಿಪಾಕ್ಸ್ ನಡುವೆ ಪ್ರಾಣಿಗಳಿಗೂ ತಟ್ಟಿದ ವಿಚಿತ್ರ ಸೋಂಕು: 999 ಜಾನುವಾರು ಸಾವು!

ಗುಜರಾತ್ ಸರ್ಕಾರ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ, ಕೃಷಿ ಮತ್ತು ಪಶುಸಂಗೋಪನೆ ಸಚಿವ ರಾಘವ್‌ ಪಟೇಲ್ ಅವರು ರಾಜ್ಯದ 14 ಜಿಲ್ಲೆಗಳಲ್ಲಿ ವೈರಸ್ ಹರಡುವ ಪ್ರಕರಣಗಳು ಕಂಡುಬಂದಿವೆ. 37 ಸಾವಿರಕ್ಕೂ ಹೆಚ್ಚು ಸೋಂಕಿತ ಪ್ರಾಣಿಗಳಿಗೆ ಚಿಕಿತ್ಸೆ ನೀಡಲಾಗಿದೆ ಎಂದು ತಿಳಿಸಿದ್ದಾರೆ. 

Written by - Bhavishya Shetty | Last Updated : Jul 25, 2022, 01:20 PM IST
  • ಕೊರೊನಾ-ಮಂಕಿಪಾಕ್ಸ್ ನಡುವೆ ಪ್ರಾಣಿಗಳಿಗೂ ತಟ್ಟಿದ ಲಂಪಿ ಸ್ಕಿನ್ ಡಿಸೀಸ್‌
  • ಗುಜರಾತ್ ಸರ್ಕಾರ ಬಿಡುಗಡೆ ಮಾಡಿದ ಪ್ರಕಟಣೆ
  • 37 ಸಾವಿರಕ್ಕೂ ಹೆಚ್ಚು ಸೋಂಕಿತ ಪ್ರಾಣಿಗಳಿಗೆ ಚಿಕಿತ್ಸೆ ನೀಡಲಾಗಿದೆ
ಕೊರೊನಾ-ಮಂಕಿಪಾಕ್ಸ್ ನಡುವೆ ಪ್ರಾಣಿಗಳಿಗೂ ತಟ್ಟಿದ ವಿಚಿತ್ರ ಸೋಂಕು:  999 ಜಾನುವಾರು ಸಾವು! title=
Lumpy Skin Disease

Lumpy Skin Disease in Gujarat: ದೇಶದಲ್ಲಿ ಕೊರೊನಾ ವೈರಸ್ ಮತ್ತು ಮಂಕಿಪಾಕ್ಸ್ ಭೀತಿಯ ನಡುವೆ, ಗುಜರಾತ್‌ನಲ್ಲಿ ಹೊಸ ವೈರಸ್ ವಕ್ಕರಿಸಿಕೊಂಡಿದೆ. ಈ ರೋಗ ಪ್ರಾಣಿಗಳಲ್ಲಿ ಕಂಡುಬರುತ್ತಿದ್ದು, ವೇಗವಾಗಿ ಹರಡುತ್ತಿದೆ. ಗುಜರಾತ್‌ನ ಕೃಷಿ ಮತ್ತು ಪಶುಸಂಗೋಪನೆ ಸಚಿವ ರಾಘವ್‌ ಪಟೇಲ್ ಮಾಹಿತಿ ನೀಡಿದ್ದು, ರಾಜ್ಯದಲ್ಲಿ ಇದುವರೆಗೆ ಒಟ್ಟು 999 ಜಾನುವಾರುಗಳು ಲಂಪಿ ಸ್ಕಿನ್ ಡಿಸೀಸ್‌ನಿಂದ ಸಾವನ್ನಪ್ಪಿವೆ. ಅವುಗಳಲ್ಲಿ ಹೆಚ್ಚಿನವು ಹಸುಗಳು ಮತ್ತು ಎಮ್ಮೆಗಳಾಗಿವೆ ಎಂದರು. 

ಇದನ್ನೂ ಓದಿ: ತಲ್ವಾರ್‌ನಿಂದ ಕೇಕ್ ಕತ್ತರಿಸಿ ಅದ್ಧೂರಿ ಜನ್ಮದಿನ ಆಚರಣೆ

ಗುಜರಾತ್‌ನ 14 ಜಿಲ್ಲೆಗಳಲ್ಲಿ ವೈರಸ್: 
ಗುಜರಾತ್ ಸರ್ಕಾರ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ, ಕೃಷಿ ಮತ್ತು ಪಶುಸಂಗೋಪನೆ ಸಚಿವ ರಾಘವ್‌ ಪಟೇಲ್ ಅವರು ರಾಜ್ಯದ 14 ಜಿಲ್ಲೆಗಳಲ್ಲಿ ವೈರಸ್ ಹರಡುವ ಪ್ರಕರಣಗಳು ಕಂಡುಬಂದಿವೆ. 37 ಸಾವಿರಕ್ಕೂ ಹೆಚ್ಚು ಸೋಂಕಿತ ಪ್ರಾಣಿಗಳಿಗೆ ಚಿಕಿತ್ಸೆ ನೀಡಲಾಗಿದೆ ಎಂದು ತಿಳಿಸಿದ್ದಾರೆ. ಈ ರೋಗ ಹರಡುವುದನ್ನು ತಡೆಯಲು ಇದುವರೆಗೆ 2.68 ಲಕ್ಷ ಜಾನುವಾರುಗಳಿಗೆ ಲಸಿಕೆ ಹಾಕಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ರಾಜ್ಯದಲ್ಲಿ ಮೊದಲ ಸೋಂಕಿನ ಪ್ರಕರಣ ವರದಿಯಾದ ನಂತರ, ಅದನ್ನು ನಿಯಂತ್ರಿಸಲು ಸೂಕ್ತ ವ್ಯವಸ್ಥೆ ಕೈಗೊಳ್ಳುವಂತೆ ಉನ್ನತ ಮಟ್ಟದ ಸಭೆ ನಡೆಸಲಾಗಿದೆ ಎಂದು ಗುಜರಾತ್ ಸರ್ಕಾರದ ಸಚಿವ ರಾಘವ್‌ ಪಟೇಲ್ ಹೇಳಿದ್ದಾರೆ.

ಲಂಪಿ ಸ್ಕಿನ್ ಡಿಸೀಸ್ ಎಂಬ ಈ ರೋಗ ಸೊಳ್ಳೆಗಳು, ನೊಣಗಳು, ಪರೋಪಜೀವಿಗಳು ಮತ್ತು ಕಣಜಗಳಿಂದ ಹರಡುವ ರೋಗವಾಗಿದೆ. ಇದು ಜಾನುವಾರುಗಳ ನೇರ ಸಂಪರ್ಕದಿಂದ, ಕಲುಷಿತ ಆಹಾರ ಮತ್ತು ನೀರಿನ ಮೂಲಕ ಹರಡುತ್ತದೆ.

ಲಂಪಿ ಸ್ಕಿನ್ ಡಿಸೀಸ್‌ನ ಲಕ್ಷಣಗಳು: 
ಪ್ರಾಣಿಗಳಲ್ಲಿ ಜ್ವರ, ಕಣ್ಣು ಮತ್ತು ಮೂಗಿನಿಂದ ಸ್ರವಿಸುವಿಕೆ, ಬಾಯಿಯಿಂದ ಜೊಲ್ಲು ಸುರಿಸುವುದು, ದೇಹದಾದ್ಯಂತ ಗಡ್ಡೆಗಳಂತಹ ಮೃದುವಾದ ಗುಳ್ಳೆಗಳು, ಹಾಲು ಉತ್ಪಾದನೆಯಲ್ಲಿ ಇಳಿಕೆ ಮತ್ತು ಆಹಾರದಲ್ಲಿ ತೊಂದರೆಗಳು ಕಂಡುಬಂದರೆ ಅದು ಈ ರೋಗದ ಲಕ್ಷಣಗಳಾಗಿವೆ.

ಗುಜರಾತಿನ 14 ಜಿಲ್ಲೆಗಳಾದ ಕಚ್, ಜಾಮ್‌ನಗರ್, ದೇವಭೂಮಿ ದ್ವಾರಕಾ, ರಾಜ್‌ಕೋಟ್, ಪೋರಬಂದರ್, ಮೊರ್ಬಿ, ಸುರೇಂದ್ರನಗರ, ಅಮ್ರೇಲಿ, ಭಾವನಗರ, ಬೊಟಾಡ್, ಜುನಾಗಢ್, ಗಿರ್ ಸೋಮನಾಥ್, ಬನಸ್ಕಾಂತ ಮತ್ತು ಸೂರತ್‌ನಲ್ಲಿ ಈ ಚರ್ಮದ ಕಾಯಿಲೆಯ ಪ್ರಕರಣಗಳು ಕಂಡುಬಂದಿವೆ.

ಇದನ್ನೂ ಓದಿ: ವಿರಾಟ್ ಕೊಹ್ಲಿ ಸ್ಥಾನಕ್ಕೆ ಮುಳುವಾಗುತ್ತಿದ್ದಾನೆ ಟೀಂ ಇಂಡಿಯಾದ ಈ ಆಟಗಾರ!

ರಾಘವ್‌ ಪಟೇಲ್ ಮಾಹಿತಿ ನೀಡಿದ್ದು, '880 ಹಳ್ಳಿಗಳಲ್ಲಿ ಈ ರೋಗದ ಪ್ರಕರಣಗಳು ಕಂಡುಬಂದಿವೆ. 37,121 ಪ್ರಾಣಿಗಳಿಗೆ ಚಿಕಿತ್ಸೆ ನೀಡಲಾಗಿದೆ. ತಾಲೂಕು ಮಟ್ಟದ ಸಾಂಕ್ರಾಮಿಕ ರೋಗ ವರದಿಯಂತೆ ಇದುವರೆಗೆ 999 ಜಾನುವಾರುಗಳು ಈ ರೋಗದಿಂದ ಮೃತಪಟ್ಟಿವೆ’ ಎಂದು ಸಚಿವರು ತಿಳಿಸಿದ್ದಾರೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News