Government Alert - ಇನ್ಮುಂದೆ ಮಂತ್ರಿಗಳು ಹಾಗೂ ಅಧಿಕಾರಿಗಳ ವಿರುದ್ಧ ಟೀಕೆ ಮಾಡಿದ್ರೆ ಹುಷಾರ್...!

ಸಾಮಾಜಿಕ ಮಾಧ್ಯಮಗಳ ಮೇಲೆ ಮಂತ್ರಿಗಳು, ಸಂಸದರು, ಶಾಸಕರು, ಅಧಿಕಾರಿಗಳು, ನೌಕರರು ಅಥವಾ ಇನ್ನಾವುದೇ ವ್ಯಕ್ತಿಗಳ ವಿರುದ್ಧ ಇಲ್ಲ-ಸಲ್ಲದ ಮಾತುಗಳನ್ನಾಡುವುದು ಹಾಗೂ ಟೀಕೆ ಮಾಡುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು. 

Written by - Nitin Tabib | Last Updated : Jan 22, 2021, 02:36 PM IST
  • ಇನ್ಮುಂದೆ ಸಾಮಾಜಿಕ ಮಾಧ್ಯಮಗಳಲ್ಲಿ ಗಣ್ಯರ ವಿರುದ್ಧ ಇಲ್ಲ ಸಲ್ಲದ ಆರೋಪಗಳು ಮಾಡುವ ಹಾಗಿಲ್ಲ.
  • ಬಿಹಾರ್ ಸೈಬರ್ ಕ್ರೈಂ ವಿಭಾಗದ ಆದೇಶ.
  • ಈ ಕುರಿತು ವಿವಿಧ ಇಲಾಖೆಗಳಿಗೆ ಪತ್ರ ಬರೆದ ಬಿಹಾರದ ನೋಡಲ್ ಏಜೆನ್ಸಿ.
Government Alert - ಇನ್ಮುಂದೆ ಮಂತ್ರಿಗಳು ಹಾಗೂ ಅಧಿಕಾರಿಗಳ ವಿರುದ್ಧ ಟೀಕೆ ಮಾಡಿದ್ರೆ ಹುಷಾರ್...! title=
Government Alert (File Photo-Nitish Kumar)

Government Alert - ಬಿಹಾರ: ಸಾಮಾಜಿಕ ಮಾಧ್ಯಮಗಳ ಮೇಲೆ ಮಂತ್ರಿಗಳು, ಸಂಸದರು, ಶಾಸಕರು, ಅಧಿಕಾರಿಗಳು, ನೌಕರರು ಅಥವಾ ಇನ್ನಾವುದೇ ವ್ಯಕ್ತಿಗಳ ವಿರುದ್ಧ ಇಲ್ಲ-ಸಲ್ಲದ ಮಾತುಗಳನ್ನಾಡುವುದು ಹಾಗೂ ಟೀಕೆ ಮಾಡುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು. ಯಾವುದೇ ಓರ್ವ ವ್ಯಕ್ತಿಯ ಪ್ರತಿಷ್ಠೆಗೆ ಧಕ್ಕೆಯುಂಟುಮಾಡುವುದು ಅಥವಾ ಆ ವ್ಯಕ್ತಿಯ ವ್ಯಕ್ತಿತ್ವಕ್ಕೆ ಧಕ್ಕೆ ತರುವವರ ವಿರುದ್ಧ ಐಟಿ ಕಾಯ್ದೆಯ (IT Act) ಸೆಕ್ಷನ್ ಗಳ ಅಡಿ ಪ್ರಕರಣ ದಾಖಲಿಸಿ, ತನಿಖೆ ನಡೆಸಲಾಗುವುದು. ಬಿಹಾರ ಸರ್ಕಾರದ ಪ್ರಮುಖ ಸಚಿವರುಗಳಿಗೆ ಈ ಕುರಿತು ಪತ್ರ ಬರೆದು ಇಂತಹ ಯಾವುದೇ ಪೋಸ್ಟ್ ಗಳ ವಿರುದ್ಧ ದೂರು ದಾಖಲಿಸುವಂತೆ ಆರ್ಥಿಕ ಅಪರಾಧ ವಿಭಾಗ (EOU) ಹೇಳಿದೆ.

ಯಾವುದೇ ವ್ಯಕ್ತಿಗಳ ವಿರುದ್ಧ ಸಾಮಾಜಿಗ ಮಾಧ್ಯಮಗಳಲ್ಲಿ ಆಧಾರ ರಹಿತ ಹಾಗೂ ಆಕ್ಷೇಪಾರ್ಹ ಸಂಗತಿಗಳನ್ನು ಹಂಚಿಕೊಳ್ಳುವವರ ವಿರುದ್ಧ  ಕ್ರಮಕೈಗೊಳ್ಳಲಾಗುವುದು. ಗುರುವಾರ ಈ ಕುರಿತು ಅಧಿಸೂಚನೆ ಜಾರಿಗೊಳಿಸಿರುವ EOU, ಯಾವುದೇ ಒಂದು ವ್ಯಕ್ತಿ ಅಥವಾ ಸಂಸ್ಥೆಯ ಮಾನಹಾನಿ ಮಾಡಲಾಗುವ ಇಂತಹ ಆಕ್ಷೇಪಾರ್ಹ ಟೀಕೆ ಅಥವಾ ಟಿಪ್ಪಣಿ ಗಳ ಕುರಿತು ಮಾಹಿತಿ ನೀಡುವಂತೆ ಸೂಚಿಸಿದೆ. ಆಕ್ಷೇಪಾರ್ಹ ಟಿಪ್ಪಣಿ, ಭ್ರಾಂತಿ ಹುಟ್ಟಿಸುವ ಟಿಪ್ಪಣಿ. ಅಸಭ್ಯ ಭಾಷೆಯ ಬಳಕೆ ಇದರಲ್ಲಿ ಶಾಮೀಲಾಗಿವೆ.

ಇದನ್ನು ಓದಿ- ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಖಾತೆ ನಿರ್ಬಂಧಿಸಿದ್ದಕ್ಕೆ ಟ್ವಿಟ್ಟರ್ ಮೇಲೆ ಸಂಸದೀಯ ಸಮಿತಿ ಗರಂ

ಈ ಕುರಿತು ಎಲ್ಲ ವಿಭಾಗಗಳ ಪ್ರಮುಖ ಸಚಿವರು ಹಾಗೂ ಸಚಿವರುಗಳಿಗೆ ಪತ್ರ ಬರೆದಿರುವ ADG NH ಖಾನ್, ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಹಾಗೂ ಕಾರ್ಮಿಕರ ವಿರುದ್ಧ ಇಂತಹ ಯಾವುದೇ ಒಂದು ಪೋಸ್ಟ್ ಪ್ರಕಟವಾದರೆ, ತಕ್ಷಣ ಅದರ ಮಾಹಿತಿಯನ್ನು ನೀಡುವಂತೆ ಸೂಚಿಸಿದ್ದಾರೆ. ಇದನ್ನು ಸಾಮಾಜಿಕ ಮಾಧ್ಯಮದ ದುರುಪಯೋಗ ಎಂದು ಪರಿಗಣಿಸಿ ಐಟಿ ಆಕ್ಟ್ ಅಡಿಯಲ್ಲಿ ಪೋಸ್ಟ್ ಹಂಚಿಕೊಳ್ಳುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಇದನ್ನು ಓದಿ-ಮೇರಾ ಭಾರತ್ ಮಹಾನ್ .! ಆರು ರಾಷ್ಟ್ರಗಳಿಗೆ ನಮ್ಮದೇ ವ್ಯಾಕ್ಸಿನ್ ..! ಇಂದೇ ರವಾನೆ.!

EOU ಒಂದು ನೋಡಲ್ ಏಜೆನ್ಸಿಯಾಗಿದೆ
ಸೈಬರ್ ಕ್ರೈಂ ತಡೆಗಟ್ಟಲು ರಾಜ್ಯದಲ್ಲಿ ಸರ್ಕಾರ EOU ನೋಡಲ್ ಏಜೆನ್ಸಿಯನ್ನು ಆರಂಭಿಸಿದೆ. ಸೈಬರ್ ಕ್ರೈಂ ಪ್ರಕರಣಗಳ ತನಿಖೆಯಲ್ಲಿ ಇದು ರಾಜ್ಯದ ಪೊಲೀಸರಿಗೆ (Bihar Police) ಸಹಕರಿಸುತ್ತದೆ. ಭ್ರಾಂತಿ ಹುಟ್ಟಿಸುವ ಹಾಗೂ ಆಕ್ಷೇಪಾರ್ಹ ಪೋಸ್ಟ್ ಗಳು ಸೈಬರ್ ಕ್ರೈಂ ಅಡಿ ಬರುವ ಕಾರಣ, EOU ಈ ಪತ್ರ ಬರೆದಿದೆ.

ಇದನ್ನು ಓದಿ - Fact-Check: ಸ್ಪೀಕರ್ ಓಂ ಬಿರ್ಲಾ ಪುತ್ರಿ ಯುಪಿಎಸ್ಸಿ ಪರೀಕ್ಷೆ ಎದುರಿಸದೇ ಉತ್ತೀರ್ಣರಾದ್ರಾ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News