CBSE 10th, 12th Result 2024 : ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ ಅಥವಾ CBSE 10 ನೇ ಮತ್ತು 12 ನೇ ತರಗತಿಗಳ ಫಲಿತಾಂಶಗಳನ್ನು ಶೀಘ್ರದಲ್ಲೇ ಘೋಷಿಸುವ ನಿರೀಕ್ಷೆಯಿದೆ. ಅಧಿಕೃತ ವೆಬ್ಸೈಟ್ನ ಪ್ರಕಾರ, CBSE ಫಲಿತಾಂಶಗಳು ಮೇ 20 ರ ನಂತರ ಬರಲಿದೆ. "CBSE ಬೋರ್ಡ್ X ಮತ್ತು XII ತರಗತಿಯ ಫಲಿತಾಂಶಗಳು 20 ನೇ ಮೇ 2024ರ ನಂತರ ಪ್ರಕಟವಾಗುವ ಸಾಧ್ಯತೆಯಿದೆ.
ಈ ವೆಬ್ ಸೈಟ್ ಗಳಲ್ಲಿ ಫಲಿತಾಂಶ ಚೆಕ್ ಮಾಡಬಹುದು :
ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು results.cbse.nic.in,cbse.gov.in ಅಥವಾ cbseresults.nic.inನಲ್ಲಿ ಪರಿಶೀಲಿಸಬಹುದು.ಫಲಿತಾಂಶಗಳನ್ನು UMANG ಅಪ್ಲಿಕೇಶನ್, ಡಿಜಿಲಾಕರ್ ಅಪ್ಲಿಕೇಶನ್, ಪರೀಕ್ಷಾ ಸಂಗಮ್ ಪೋರ್ಟಲ್ ಮತ್ತು SMS ಸೌಲಭ್ಯದ ಮೂಲಕವೂ ಲಭ್ಯವಾಗುವಂತೆ ಮಾಡಲಾಗುತ್ತದೆ.
ಇದನ್ನೂ ಓದಿ : ಕಲುಬರಗಿ-ಬೆಂಗಳೂರು ವಂದೇಭಾರತ್ ಎಕ್ಸ್ಪ್ರೆಸ್ ರೈಲು ಟಿಕೆಟ್ ದರ ಎಷ್ಟಿದೆ?
ಟಾಪರ್ಗಳ ಪಟ್ಟಿ ಇಲ್ಲ :
CBSE ಮಂಡಳಿಯು 10ನೇ ಮತ್ತು 12ನೇ ತರಗತಿಯ ಎರಡೂ ಪರೀಕ್ಷೆಗಳಲ್ಲಿ ಉನ್ನತ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಮೆರಿಟ್ ಪಟ್ಟಿಗಳನ್ನು ಬಿಡುಗಡೆ ಮಾಡುವುದನ್ನು ಶಾಶ್ವತವಾಗಿ ನಿಲ್ಲಿಸಲು ನಿರ್ಧರಿಸಿದೆ.ವಿದ್ಯಾರ್ಥಿಗಳ ಮಧ್ಯೆ ನಡೆಯುವ "ಅನಾರೋಗ್ಯಕರ ಸ್ಪರ್ಧೆ"ಯನ್ನು ತಪ್ಪಿಸುವ ಸಲುವಾಗಿ ಮಂಡಳಿ ಈ ನಿರ್ಧಾರ ತೆಗೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ಕಳೆದ ವರ್ಷದಂತೆ, ಮಂಡಳಿಯು ಈ ವರ್ಷವೂ ಯಾವುದೇ ಟಾಪರ್ಗಳ ಪಟ್ಟಿಯನ್ನು ಪ್ರಕಟಿಸುವುದಿಲ್ಲ ಎನ್ನಲಾಗಿದೆ.
ವಿದ್ಯಾರ್ಥಿಗಳು 10 ಮತ್ತು 12 ನೇ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಲು ಕನಿಷ್ಠ 33% ಅಂಕಗಳನ್ನು ಗಳಿಸಬೇಕು.ಕಳೆದ ವರ್ಷ, CBSE ಬೋರ್ಡ್ 10 ನೇ ತರಗತಿ ಮತ್ತು 12ನೇ ಫಲಿತಾಂಶಗಳನ್ನು ಮೇ 12, 2023 ರಂದು ಬಿಡುಗಡೆ ಮಾಡಲಾಗಿತ್ತು. 10 ನೇ ತರಗತಿಯ ಒಟ್ಟಾರೆ ಉತ್ತೀರ್ಣ ಶೇಕಡಾವಾರು ಶೇಕಡಾ 93.12 ರಷ್ಟು ದಾಖಲಾಗಿದ್ದರೆ, 12 ನೇ ತರಗತಿಯ ಶೇಕಡಾವಾರು ಶೇಕಡಾ 87.33 ರಷ್ಟಿತ್ತು.
ಇದನ್ನೂ ಓದಿ : ಮಹಾರಾಷ್ಟ್ರದಲ್ಲಿ ಶಿವಸೇನೆ ನಾಯಕಿ ಕರೆದೊಯ್ಯಲು ಹೊರಟಿದ್ದ ಹೆಲಿಕಾಪ್ಟರ್ ಪತನ
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.