ನವದೆಹಲಿ : ದೇಶದಲ್ಲಿ ಕರೋನಾ ಲಸಿಕೆ (Corona vaccine) ಅಭಿಯಾನವು ಬಿರುಸಿನಿಂದ ಸಾಗುತ್ತಿದೆ. ಇದುವರೆಗೆ 96 ಕೋಟಿಗೂ ಹೆಚ್ಚು ಡೋಸ್ ಲಸಿಕೆಯನ್ನು ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಬುಧವಾರ ತಿಳಿಸಿದೆ. ಅದರಲ್ಲಿ 32 ಲಕ್ಷ ಡೋಸ್‌ಗಳನ್ನು ಬುಧವಾರವೇ ನೀಡಲಾಗಿದೆ. ಭಾರತ 100 ಕೋಟಿಗೂ ಹೆಚ್ಚಿನ ಲಸಿಕೆ ಪ್ರಮಾಣಗಳನ್ನು (Vaccine Dose) ಶೀಘ್ರವೇ ಮುಗಿಸಲಿದೆ. ಮುಂದಿನ ವಾರದೊಳಗೆ ಈ ಮೈಲಿಗಲ್ಲನ್ನು ಭಾರತ ತಲುಪಲಿದೆ ಎಂದು ಅಂದಾಜಿಸಲಾಗಿದೆ.
ಭರ್ಜರಿ ಸಿದ್ಧತೆ ನಡೆಸಿದ ಸರ್ಕಾರ :
ಈ ಸಂದರ್ಭಕ್ಕಾಗಿ ಕೇಂದ್ರ ಸರ್ಕಾರ ವಿಶೇಷ ಸಿದ್ಧತೆಗಳನ್ನು ಮಾಡಿಕೊಂಡಿದೆ. ಭಾರತದಲ್ಲಿ 100 ಕೋಟಿ ಕರೋನಾ ಲಸಿಕೆ (Corona vaccine) ಡೋಸ್ ಪೂರ್ಣಗೊಳ್ಳುವ ಸಮಯದಲ್ಲಿ, ಎಲ್ಲಾ ರೈಲ್ವೆ ನಿಲ್ದಾಣಗಳು(Railway station), ಎಲ್ಲಾ ವಿಮಾನ ನಿಲ್ದಾಣಗಳು(Flight) , ವಿಮಾನಗಳು, ಬಸ್ ನಿಲ್ದಾಣಗಳನ್ನು ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ಏಕಕಾಲದಲ್ಲಿ ಈ ಬಗ್ಗೆ ಘೋಷಿಸಲಾಗುವುದು. ಅಲ್ಲದೆ, ದೇಶದ ಎಲ್ಲಾ ಕಡಲತೀರಗಳು ಮತ್ತು ಶಿಪ್ ಗಳಲ್ಲಿ ಈ ಸಂಭ್ರಮವನ್ನು ಆಚರಿಸಲಾಗವುದು.
ಇದನ್ನೂ ಓದಿ : PM Awas ಯೋಜನೆ ಅಡಿಯಲ್ಲಿ ಮನೆ ಕಟ್ಟಲು ಸಿಗಲಿದೆ ₹4 ಲಕ್ಷ! ನೀವುಈ ಲಾಭ ಪಡೆಯಬಹುದು ಹೇಗೆ? ಇಲ್ಲಿದೆ
ಎರಡೂ ಡೋಸ್ ಪಡೆದಿದ್ದಾರೆ 30% ಜನರು :
ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 18-44 ವಯಸ್ಸಿನ ಗುಂಪಿನಲ್ಲಿ ಮೂರನೇ ಹಂತದ ವ್ಯಾಕ್ಸಿನೇಷನ್ (Vaccination) ಆರಂಭವಾದಾಗಿನಿಂದ ಮೊದಲ ಡೋಸ್ ಆಗಿ 38,99,42,616 ಡೋಸ್‌ಗಳನ್ನು ನೀಡಲಾಗಿದೆ. ಇದೇ ಗುಂಪಿನಲ್ಲಿ 10,69,40,919 ಡೋಸ್ ಗಳನ್ನೂ ಎರಡನೇ ಡೋಸ್ ಆಗಿ ನೀಡಲಾಗಿದೆ. ಪ್ರಸ್ತುತ ಜನಸಂಖ್ಯೆಯ 30% ದಷ್ಟು ಜನರಿಗೆ ಎರಡೂ ಡೋಸ್‌ಗಳನ್ನು ನೀಡಲಾಗಿದೆ.
ಮಕ್ಕಳಿಗೆ ಲಸಿಕೆ ಹಾಕುವಲ್ಲಿ ಜಾಗರೂಕರಾಗಿರಬೇಕು :
ಇದರ ಹೊರತಾಗಿ, ಮಕ್ಕಳ ಲಸಿಕೆ (Children vaccine) ಬಗ್ಗೆ ತಜ್ಞರ ಅಭಿಪ್ರಾಯವನ್ನು ತೆಗೆದುಕೊಳ್ಳಲಾಗುತ್ತಿದೆ. ಮಕ್ಕಳ ಲಸಿಕೆಯ ಬಗ್ಗೆ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವ ಅವಶ್ಯಕತೆಯಿದೆ ಎಂದು ತಜ್ಞರು ತಿಳಿಸಿದ್ದಾರೆ.
ಇದನ್ನೂ ಓದಿ : ಕ್ವಾರ್ಟರ್ಸ್ ಖಾಲಿ ಮಾಡಲು ಆದೇಶ, ಬಿಕ್ಕಟ್ಟಿನಲ್ಲಿ ಏರ್ ಇಂಡಿಯಾ ಉದ್ಯೋಗಿಗಳು
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ