Congress ED : ಪವರ್ ಶೋಗೆ ಕಾಂಗ್ರೆಸ್ ತಯಾರಿ, ದೇಶದ ED ಕಚೇರಿಗಳ ಮುಂದೆ ಕೈ ಪ್ರತಿಭಟನೆಗೆ ಪ್ಲಾನ್!

ಈ ದಿನ, ದೇಶದ ಎಲ್ಲಾ ರಾಜ್ಯಗಳ ಇಡಿ ಕಚೇರಿಗಳ ಮುಂದೆ ಕಾಂಗ್ರೆಸ್ ಸತ್ಯಾಗ್ರಹ ನಡೆಸಲಿದೆ. ದೆಹಲಿಯಲ್ಲಿ ಎಲ್ಲಾ ಸಂಸದರು ಮತ್ತು CWC ಸದಸ್ಯರು ಇಡಿ ಕಚೇರಿಗಳಿಗೆ ಮೆರವಣಿಗೆ ನಡೆಸಲಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ. 

Written by - Channabasava A Kashinakunti | Last Updated : Jun 9, 2022, 07:10 PM IST
  • 'ಮೋದಿ-ಶಾ ಇಡಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ'
  • ಕಾಂಗ್ರೆಸ್ ಶಕ್ತಿ ಪ್ರದರ್ಶನ ಮಾಡಲಿದೆ
  • ಮುಚ್ಚಿಡಲು ಏನೂ ಇಲ್ಲ: ಕಾಂಗ್ರೆಸ್
Congress ED : ಪವರ್ ಶೋಗೆ ಕಾಂಗ್ರೆಸ್ ತಯಾರಿ, ದೇಶದ ED ಕಚೇರಿಗಳ ಮುಂದೆ ಕೈ ಪ್ರತಿಭಟನೆಗೆ ಪ್ಲಾನ್! title=

Congress ED Satyagraha : ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಜೂನ್ 13 ರಂದು ಇಡಿ ಮುಂದೆ ಹಾಜರಾಗಬಹುದು. ಈ ದಿನ, ದೇಶದ ಎಲ್ಲಾ ರಾಜ್ಯಗಳ ಇಡಿ ಕಚೇರಿಗಳ ಮುಂದೆ ಕಾಂಗ್ರೆಸ್ ಸತ್ಯಾಗ್ರಹ ನಡೆಸಲಿದೆ. ದೆಹಲಿಯಲ್ಲಿ ಎಲ್ಲಾ ಸಂಸದರು ಮತ್ತು CWC ಸದಸ್ಯರು ಇಡಿ ಕಚೇರಿಗಳಿಗೆ ಮೆರವಣಿಗೆ ನಡೆಸಲಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ. 

'ಮೋದಿ-ಶಾ ಇಡಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ'

ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಇಡಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ. ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಹಾಜರಾಗುವಂತೆ ರಾಹುಲ್ ಗಾಂಧಿ ಅವರಿಗೆ ಇಡಿ ಸಮನ್ಸ್ ನೀಡಿತ್ತು. ಇದಕ್ಕೂ ಮುನ್ನ ರಾಹುಲ್ ಗಾಂಧಿ ಜೂನ್ 2 ರಂದು ಇಡಿ ಮುಂದೆ ಹಾಜರಾಗಬೇಕಿತ್ತು. ಆದರೆ ಆಗ ಅವರು ವಿದೇಶದಲ್ಲಿದ್ದ ಕಾರಣ ಸಮಯಾವಕಾಶ ಕೇಳಿದ್ದರು. ಈಗ ಜೂನ್ 13 ರಂದು ರಾಹುಲ್ ಇಡಿ ಮುಂದೆ ಹಾಜರಾಗಲಿದ್ದಾರೆ. ಸೋನಿಯಾ ಗಾಂಧಿಗೆ ಜೂನ್ 8 ರಂದು ಹಾಜರಾಗಲು ಇಡಿ ನೋಟಿಸ್ ನೀಡಿತು, ಆದರೆ ಅವರು ಕೋರೋಣ ಪಾಸಿಟಿವ್ ಬಂದ ಕಾರಣ ಇನ್ನೂ ಚೇತರಿಸಿಕೊಂಡಿಲ್ಲ, ಹಾಗಾಗಿ ಹಾಜರಾಗಲು ಇಡಿ ಬಳಿ ಹೆಚ್ಚಿನ ಸಮಯಾವಕಾಶ ಕೇಳಿದ್ದಾರೆ. 

ಇದನ್ನೂ ಓದಿ : President Election 2022 : ಜು.18 ರಂದು ರಾಷ್ಟ್ರಪತಿ ಚುನಾವಣೆಗೆ ಮತದಾನ, ಜು. 21 ರಂದು ಫಲಿತಾಂಶ!

ಕಾಂಗ್ರೆಸ್ ಶಕ್ತಿ ಪ್ರದರ್ಶನ ಮಾಡಲಿದೆ

ಇದೀಗ ಕಾಂಗ್ರೆಸ್ ನಾಯಕರು ಶಕ್ತಿ ಪ್ರದರ್ಶನಕ್ಕೆ ಸಿದ್ಧತೆ ನಡೆಸಿದ್ದಾರೆ. ಈ ಕುರಿತು ಪಕ್ಷದ ಮುಖಂಡರ ಸಭೆಯೂ ನಡೆದಿದ್ದು, ಭಾರತದಾದ್ಯಂತ ಎಲ್ಲಾ ರಾಜ್ಯಗಳ ಇಡಿ ಕಚೇರಿಗಳ ಮುಂದೆ ಪಕ್ಷವು ಸತ್ಯಾಗ್ರಹ ನಡೆಸಲಿದೆ ಎಂದು ನಿರ್ಧರಿಸಲಾಗಿದೆ. ಮೂಲಗಳ ಪ್ರಕಾರ, ಜೂನ್ 13 ರ ಬೆಳಿಗ್ಗೆ ದೆಹಲಿಯಲ್ಲಿ ಉಳಿಯಲು ಕಾಂಗ್ರೆಸ್ ತನ್ನ ಸಂಸದರನ್ನು ಕೇಳಿದೆ. ಇಡಿ ಮುಂದೆ ರಾಹುಲ್ ಗಾಂಧಿ ಹಾಜರಾತಿಗೆ ಪಕ್ಷದ ಹಿರಿಯ ನಾಯಕರು, ಸಂಸದರು ಮತ್ತು ಹೆಚ್ಚಿನ ಸಂಖ್ಯೆಯ ಕಾರ್ಯಕರ್ತರು ಹಾಜರಾಗುವ ಸಾಧ್ಯತೆಯಿದೆ.

ಮುಚ್ಚಿಡಲು ಏನೂ ಇಲ್ಲ: ಕಾಂಗ್ರೆಸ್

ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರು ಮುಚ್ಚಿಡಲು ಏನೂ ಇಲ್ಲದ ಕಾರಣ ಜಾರಿ ನಿರ್ದೇಶನಾಲಯದ (ಇಡಿ) ಮುಂದೆ ಹಾಜರಾಗಲಿದ್ದಾರೆ ಎಂದು ಕಾಂಗ್ರೆಸ್ ಬುಧವಾರ ತಿಳಿಸಿದೆ. 

ಈ ಕುರಿತು  ಮಾತನಾಡಿದ ಪಕ್ಷದ ವಕ್ತಾರ ಪವನ್ ಖೇರಾ, 'ನಮ್ಮದು ಕಾನೂನು ಪಾಲಿಸುವ ಪಕ್ಷ. ನಾವು ನಿಯಮಗಳನ್ನು ಅನುಸರಿಸುತ್ತೇವೆ. ಕರೆದರೆ ಖಂಡಿತ ಹೋಗುತ್ತಾರೆ. ನಾವು ಮುಚ್ಚಿಡಲು ಏನೂ ಇಲ್ಲ. ನಾವು ಬಿಜೆಪಿಯಂತಲ್ಲ. 2002 ರಿಂದ 2013 ರ ವರೆಗೆ ಅಮಿತ್ ಶಾ ಅವರು ಓಡಿಹೋದಾಗ ನಮಗೆ ನೆನಪಿದೆ ಎಂದು ಹೇಳಿದ್ದರು.

ಇದನ್ನೂ ಓದಿ : President Election 2022 : ರಾಷ್ಟ್ರಪತಿ ಚುನಾವಣೆ ಹೇಗಿರುತ್ತೆ? MLA, MP ಗಳ ಮತದ ಮೌಲ್ಯ ಎಷ್ಟು; ಸಂಪೂರ್ಣ ಮಾಹಿತಿ ಇಲ್ಲಿದೆ

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News