ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಬೆರಳಚ್ಚಿನ ದಾಖಲೆಗಳನ್ನು ಸಲ್ಲಿಸುವಂತೆ ಬೆಂಗಳೂರು ಕಾರಾಗೃಹ ಅಧಿಕಾರಿಗೆ ಕೋರ್ಟ್ ಆದೇಶ

   

Last Updated : Nov 25, 2017, 12:34 PM IST
ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಬೆರಳಚ್ಚಿನ ದಾಖಲೆಗಳನ್ನು ಸಲ್ಲಿಸುವಂತೆ   ಬೆಂಗಳೂರು ಕಾರಾಗೃಹ ಅಧಿಕಾರಿಗೆ ಕೋರ್ಟ್ ಆದೇಶ  title=

ಚೆನ್ನೈ: ಮತದಾನದ ದಾಖಲೆಗಳಲ್ಲಿ ಬೆರಳಚ್ಚನ್ನು ಅನುಷ್ಠಾನಗೊಳಿಸುವುದಕ್ಕೆ ಸಂಬಂಧಿಸಿದಂತೆ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಬೆರಳಚ್ಚಿನ ದಾಖಲೆಗಳೊಂದಿಗೆ ನ್ಯಾಯಾಲಯಕ್ಕೆ ಹಾಜರಾಗುವಂತೆ ಬೆಂಗಳೂರಿನ ಪರಪ್ಪನ ಅಗ್ರಹಾರ ಕಾರಾಗೃಹದ ಅಧೀಕ್ಷಕರಿಗೆ ಮದ್ರಾಸ್ ಹೈಕೋರ್ಟ್ ಆದೇಶ ನೀಡಿದೆ. 

ಕಳೆದ ವರ್ಷ ತಿರುಪರಾಂಕುಂದ್ರಮ್ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಸ್ಪರ್ಧಿಸಿದ್ದ ಡಿಎಂಕೆ ಅಭ್ಯರ್ಥಿ ಪಿ.ಸರಾವಣನ್ ಅವರ ವಕೀಲ ವಿ. ಅರುಣ್ ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಡಿಸೆಂಬರ್ 8 ರಂದು ಕಾರಾಗೃಹದ ಅಧೀಕ್ಷಕರು ನ್ಯಾಯಾಲಯಕ್ಕೆ ಹಾಜರಾಗಬೇಕಿದೆ ಎಂದು ತಿಳಿಸಿದ್ದಾರೆ. 

ಜಯಲಲಿತಾ ಅವರ ಆಧಾರ್ ಕಾರ್ಡ್ ವಿವರಗಳನ್ನೂ ಒದಗಿಸುವಂತೆ ಕೇಂದ್ರ ಸರ್ಕಾರಕ್ಕೆ ನ್ಯಾಯಾಲಯ ಆದೇಶ ನೀಡಿದ್ದು, ಬೆಂಗಳೂರಿನ ಜೈಲಿನಲ್ಲಿ ನೀಡಿರುವ ದಾಖಲೆಗಳಲ್ಲಿನ ಜಯಲಲಿತಾ ಅವರ ಬೆರಳಚ್ಚುಗಳನ್ನು ಕೇಂದ್ರ ಸರ್ಕಾರ ಒದಗಿಸುವ ಆಧಾರ್ ಕಾರ್ಡ್ ವಿವರಗಳೊಂದಿಗೆ ಪರಿಶೀಲಿಸಲಿದೆ ಎಂದು ಅವರು ಹೇಳಿದ್ದಾರೆ. 

ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ 2014 ರಲ್ಲಿ ಜಯಲಲಿತಾ ಅವರು ವಿಚಾರಣಾ ನ್ಯಾಯಾಲಯ ವಿಧಿಸಿದ ಶಿಕ್ಷೆಗೊಳಗಾದ ಜಯಲಲಿತಾ ಅವರು ಪರಾಪ್ಪನ ಅಗ್ರಹಾರ ಜೈಲಿನಲ್ಲಿ ಕೆಲ ದಿನಗಳಿದ್ದು, ನಂತರ ಜಾಮೀನಿನ ಮೇಲೆ ಹೊರಬಂದಿದ್ದರು. 

Trending News