ಭಾರತೀಯ ಅಥ್ಲೀಟ್‌ಗಳ ಜತೆ ಪ್ರಧಾನಿ ಮೋದಿ ಸಂವಾದ: ದಿನಾಂಕ ನಿಗದಿ

ಬರ್ಮಿಂಗ್‌ಹ್ಯಾಮ್‌ ಕಾಮನ್‌ವೆಲ್ತ್‌ ಗೇಮ್ಸ್‌ ಕ್ರೀಡಾಕೂಟವು ಜುಲೈ 28ರಿಂದ ಆಗಸ್ಟ್‌ 08ರವರೆಗೆ ನಡೆಯಲಿದ್ದು, ಭಾರತೀಯ ಒಲಿಂಪಿಕ್ಸ್‌ ಅಸೋಸಿಯೇಷನ್‌ 322 ಜನರ ಭಾರತ ತಂಡವನ್ನು ಈಗಾಗಲೇ ಹೆಸರಿಸಿದೆ. ಇನ್ನು ಈ ತಂಡದಲ್ಲಿ 215 ಅಥ್ಲೀಟ್‌ಗಳು ಮತ್ತು 107 ಅಧಿಕಾರಿಗಳು, ಸಹಾಯಕ ಸಿಬ್ಬಂದಿಗಳು ಸೇರಿದ್ದಾರೆ. 

Written by - Bhavishya Shetty | Last Updated : Jul 18, 2022, 12:23 PM IST
  • ಜುಲೈ 28ರಂದು ಬರ್ಮಿಂಗ್‌ಹ್ಯಾಮ್‌ ಕಾಮನ್‌ವೆಲ್ತ್‌ ಗೇಮ್ಸ್‌ ಕ್ರೀಡಾಕೂಟ ಪ್ರಾರಂಭ
  • ಕ್ರೀಡಾಪಟುಗಳ ಜೊತೆಗೆ ಜುಲೈ 20 ರಂದು ಪ್ರಧಾನಿ ಮೋದಿ ಮಾತುಕತೆ
  • ಬುಧವಾರ ಬೆಳಗ್ಗೆ 10 ಗಂಟೆಗೆ ವಿಡಿಯೋ ಕಾನ್ಫರೆನ್ಸ್‌ ಮೂಲಕ ಸಂವಾದ
ಭಾರತೀಯ ಅಥ್ಲೀಟ್‌ಗಳ ಜತೆ ಪ್ರಧಾನಿ ಮೋದಿ ಸಂವಾದ: ದಿನಾಂಕ ನಿಗದಿ title=
Birmingham Commonwealth Games

ನವದೆಹಲಿ: ಬರ್ಮಿಂಗ್‌ಹ್ಯಾಮ್‌ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲಿರುವ ಭಾರತೀಯ ಕ್ರೀಡಾಪಟುಗಳ ಜೊತೆ ಪ್ರಧಾನಿ ನರೇಂದ್ರ ಮೋದಿ ಸಂವಾದ ನಡೆಸಲಿದ್ದಾರೆ. ಜುಲೈ 28ರಂದು 2022ರ ಕಾಮನ್‌ವೆಲ್ತ್‌ ಕ್ರೀಡಾಕೂಟ ನಡೆಯಲಿದ್ದು, ಭಾರತದ 322 ಜನರ ತಂಡ ಭಾಗವಹಿಸಲಿದೆ. ಇನ್ನು ಈ ಕ್ರೀಡಾಪಟುಗಳ ಜೊತೆಗೆ ಜುಲೈ 20 ರಂದು ಪ್ರಧಾನಿ ಮಾತುಕತೆ ನಡೆಸಲಿದ್ದಾರೆ. 

ಬುಧವಾರ ಬೆಳಗ್ಗೆ 10 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್‌ ಮೂಲಕ ಸಂವಾದ ನಡೆಸಲಿದ್ದಾರೆ. ಇನ್ನು ಕ್ರೀಡಾಪಟುಗಳು ಈ ಸಂವಾದದಲ್ಲಿ ಭಾಗವಹಿಸುವಂತೆ ಭಾರತೀಯ ಕ್ರೀಡಾ ಪ್ರಾಧಿಕಾರ (SAI) ಇ-ಮೇಲ್‌ ಮೂಲಕ ತಿಳಿಸಿದೆ. 

ಇದನ್ನೂ ಓದಿ: ITR Filing: ಆದಾಯ ತೆರಿಗೆ ರಿಟರ್ನ್‌ನಲ್ಲಿ ಪೂರ್ಣ ಹಣ ಬಂದಿಲ್ಲವೇ?

ಬರ್ಮಿಂಗ್‌ಹ್ಯಾಮ್‌ ಕಾಮನ್‌ವೆಲ್ತ್‌ ಗೇಮ್ಸ್‌ ಕ್ರೀಡಾಕೂಟವು ಜುಲೈ 28ರಿಂದ ಆಗಸ್ಟ್‌ 08ರವರೆಗೆ ನಡೆಯಲಿದ್ದು, ಭಾರತೀಯ ಒಲಿಂಪಿಕ್ಸ್‌ ಅಸೋಸಿಯೇಷನ್‌ 322 ಜನರ ಭಾರತ ತಂಡವನ್ನು ಈಗಾಗಲೇ ಹೆಸರಿಸಿದೆ. ಇನ್ನು ಈ ತಂಡದಲ್ಲಿ 215 ಅಥ್ಲೀಟ್‌ಗಳು ಮತ್ತು 107 ಅಧಿಕಾರಿಗಳು, ಸಹಾಯಕ ಸಿಬ್ಬಂದಿಗಳು ಸೇರಿದ್ದಾರೆ. 

ಈ ಬಾರಿಯ ಬರ್ಮಿಗ್‌ಹ್ಯಾಮ್‌ ಕ್ರೀಡಾಕೂಟದಲ್ಲಿ ಜಾವೆಲಿನ್ ಥ್ರೋ ಚಾಂಪಿಯನ್ ನೀರಜ್ ಚೋಪ್ರಾ, ವೇಟ್‌ಲಿಫ್ಟರ್ ಕನ್ನಡಿಗ ಗುರುರಾಜ್ ಪೂಜಾರಿ, ಒಲಿಂಪಿಕ್ಸ್ ಪದಕ ವಿಜೇತೆಯರಾದ ಮೀರಾಬಾಯಿ ಚನು, ಪಿ ವಿ ಸಿಂಧು, ಲೊವ್ಲೀನಾ ಬೋರ್ಗೊಹೈನ್, ಭಜರಂಗ್ ಪೂನಿಯಾ, ರವಿಕುಮಾರ್ ದಹಿಯಾ ಸೇರಿದಂತೆ ಅನೇಕ ಆಟಗಾರರು ಭಾಗವಹಿಸಲಿದ್ದು, ಪದಕ ಭೇಟೆ ಮಾಡಲಿದ್ದಾರೆ. 

2018ರಲ್ಲಿ ನಡೆದ ಆಸ್ಟ್ರೇಲಿಯಾ ಗೋಲ್ಡ್‌ಕೋಸ್ಟ್‌ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತವು 66 ಪದಕಗಳನ್ನು ಗೆಲ್ಲುವ ಮೂಲಕ ಮೂರನೇ ಸ್ಥಾನ ಪಡೆದಿತ್ತು. ಇನ್ನುಳಿದಂತೆ ಮೊದಲ ಎರಡು ಸ್ಥಾನವನ್ನು ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ ತಂಡ ಪಡೆದುಕೊಂಡಿತ್ತು.  ಈ ಬಾರಿ 15 ಕ್ರೀಡೆಗಳಲ್ಲಿ ಭಾರತ ಭಾಗವಹಿಸಲಿದ್ದು, ಈ ಕ್ರೀಡಾಪಟುಗಳನ್ನು ಹುರಿದುಂಬಿಸುವ ಸಲುವಾಗಿ ಪ್ರಧಾನಿ ಮೋದಿ ಸಂವಾದ ನಡೆಸಲಿದ್ದಾರೆ. 

ಇನ್ನು ಕಳೆದ ದಿನ ಸಿಂಗಾಪುರ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಭಾರತದ ಅಗ್ರ ಶ್ರೇಯಾಂಕಿತ ಪಿ ವಿ ಸಿಂಧು ಗೆದ್ದು ಸಾಧನೆ ತೋರಿದ್ದರು. ಈ ಕುರಿತು ಮೆಚ್ಚುಗೆ ಸೂಚಿಸಿ ಟ್ವೀಟ್‌ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, "ತನ್ನ ಮೊದಲ ಸಿಂಗಾಪುರ ಓಪನ್ ಪ್ರಶಸ್ತಿಯನ್ನು ಗೆದ್ದ ಪಿ.ವಿ ಸಿಂಧುಗೆ ಅಭಿನಂದನೆಗಳು. ಅವರು ಮತ್ತೊಮ್ಮೆ ತಮ್ಮ ಅಸಾಧಾರಣ ಕ್ರೀಡಾ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ ಮತ್ತು ಯಶಸ್ಸನ್ನು ಸಾಧಿಸಿದ್ದಾರೆ. ಇದು ದೇಶಕ್ಕೆ ಹೆಮ್ಮೆಯ ಕ್ಷಣವಾಗಿದೆ ಮತ್ತು ಮುಂಬರುವ ಆಟಗಾರರಿಗೆ ಸ್ಫೂರ್ತಿ ನೀಡುತ್ತದೆ’ ಎಂದಿದ್ದಾರೆ. 

ಇದನ್ನೂ ಓದಿ: "ಇದು ಸ್ವಾತಂತ್ರ್ಯದ ಅಮೃತೋತ್ಸವದ ಯುಗ": ಮುಂಗಾರು ಅಧಿವೇಶನಕ್ಕೂ ಮುನ್ನ ಪ್ರಧಾನಿ ಮೋದಿ ಹೇಳಿಕೆ

ಇನ್ನೊಂದೆಡೆ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಸಹ ಸಿಂಧುಗೆ ಅಭಿನಂದನೆ ಸಲ್ಲಿಸಿದ್ದು, "ವಾಂಗ್ ಝಿ ಯಿ ಅವರನ್ನು ಸೋಲಿಸುವ ಮೂಲಕ ಚೊಚ್ಚಲ ಸಿಂಗಾಪುರ ಓಪನ್ ಪ್ರಶಸ್ತಿಯನ್ನು ಗೆದ್ದಿದ್ದಕ್ಕಾಗಿ ಮತ್ತು 2022ರಲ್ಲಿ ಅವರ ಮೂರನೇ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಕ್ಕಾಗಿ ಅಭಿನಂದನೆಗಳ" ಎಂದು ಹೇಳಿದ್ದಾರೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News