ದೆಹಲಿಯಲ್ಲಿ ನಿರಂತರವಾಗಿ ಹೆಚ್ಚಾಗುತ್ತಿರುವ ಮಾಲಿನ್ಯ, ರಾಹುಲ್ ಗಾಂಧಿ ಏನಂದ್ರು?

ಸೋಮವಾರ ದೆಹಲಿಯ ಲೋಧಿ ರಸ್ತೆಯ ವಾಯು ಮಾಲಿನ್ಯಕಾರಕ PM10 ಮಟ್ಟ 237 ತಲುಪಿದೆ.

Last Updated : Oct 22, 2018, 09:41 AM IST
ದೆಹಲಿಯಲ್ಲಿ ನಿರಂತರವಾಗಿ ಹೆಚ್ಚಾಗುತ್ತಿರುವ ಮಾಲಿನ್ಯ, ರಾಹುಲ್ ಗಾಂಧಿ ಏನಂದ್ರು? title=

ನವದೆಹಲಿ: ದೆಹಲಿಯಲ್ಲಿ ನಿರಂತರವಾಗಿ ವಾಯುಮಾಲಿನ್ಯ ಹೆಚ್ಚಾಗುತ್ತಿದೆ. ಹರಿಯಾಣ ಮತ್ತು ಪಂಜಾಬ್ ನಲ್ಲಿ ರೈತರು ಈ ಸಮಯದಲ್ಲಿ ಕೂಳೆಗೆ ಬೆಂಕಿ ಹಚ್ಚುವ ಕಾರಣದಿಂದ ವಾಯುಮಾಲಿನ್ಯ ಹೆಚ್ಚಾಗುತ್ತಿದೆ ಎನ್ನಲಾಗುತ್ತದೆ. ಸೋಮವಾರ ದೆಹಲಿಯ ಲೋಧಿ ರಸ್ತೆಯ ವಾಯು ಮಾಲಿನ್ಯಕಾರಕ PM10 ಮಟ್ಟ 237 ತಲುಪಿತು. ಜೊತೆಗೆ ವಾಯುಮಾಲಿನ್ಯವು PM 2.5 ಮಟ್ಟವು 219 ರಷ್ಟಿದೆ. ಇದರರ್ಥ ದೆಹಲಿಯಲ್ಲಿ ಗಾಳಿಯು 'ಅಪಾಯದ' ಮಟ್ಟವನ್ನು ತಲುಪಿದೆ. ದೆಹಲಿಯಲ್ಲಿ ಹೆಚ್ಚಾಗುತ್ತಿರುವ ಮಾಲಿನ್ಯದ ಬಗ್ಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸಹ ಕಳವಳ ವ್ಯಕ್ತಪಡಿಸಿದ್ದಾರೆ.

ವಾಯುಮಾಲಿನ್ಯದ ಬಗ್ಗೆ ಆತಂಕ ವ್ಯಕ್ತಪಡಿಸಿರುವ ರಾಹುಲ್ ಗಾಂಧಿ, ದೆಹಲಿಯಲ್ಲಿ ಕಳಪೆ ಗಾಳಿಯ ಮಟ್ಟವನ್ನು ಒಂದು 'ಗಂಭೀರ ಸಮಸ್ಯೆ' ಎಂದು ಹೇಳಿದರು. ಅಲ್ಲದೆ ರಾಷ್ಟ್ರ ರಾಜಧಾನಿಯಲ್ಲಿ ಮಾಲಿನ್ಯದ ಮಟ್ಟವನ್ನು ಕಡಿಮೆಗೊಳಿಸಲು ಒಂದು ಸಾಮೂಹಿಕ ಕ್ರಮ ತೆಗೆದುಕೊಳ್ಳುವ ಅಗತ್ಯವಿದೆ. ಜನಸಾಮಾನ್ಯರ ಸಹಕಾರವಿಲ್ಲದೆ, ಶುದ್ಧ ಗಾಳಿಯನ್ನು ಯಾವುದೇ ಸರ್ಕಾರ ನೀಡಲು ಸಾಧ್ಯವಿಲ್ಲ ಎಂದವರು ಅಭಿಪ್ರಾಯಪಟ್ಟಿದ್ದಾರೆ.

ಈ ಬಗ್ಗೆ ತಮ್ಮ ಫೇಸ್ ಬುಕ್ ಮೂಲಕ ತಿಳಿಸಿರುವ ರಾಹುಲ್, "ದೆಹಲಿಯಲ್ಲಿ ವಾಯು ಮಾಲಿನ್ಯವು ಗಂಭೀರ ಸಮಸ್ಯೆಯಾಗಿದೆ. ನಮ್ಮ ಸುತ್ತಲಿನ ಮಾಲಿನ್ಯವನ್ನು ತಗ್ಗಿಸಲು ನಾವು ಎಲ್ಲಾ ಸಾಧ್ಯ ಹೆಜ್ಜೆಯನ್ನು ತೆಗೆದುಕೊಳ್ಳುತ್ತೇವೆ. ಜನತೆಯ ಸಹಕಾರವಿಲ್ಲದೆ ಯಾವುದೇ ಸರ್ಕಾರವು ವಾಯು ಮಾಲಿನ್ಯವನ್ನು ತೊಡೆದುಹಾಕಲು ಸಾಧ್ಯವಿಲ್ಲ"  ಎಂದು ರಾಹುಲ್ ಹಿಂದಿಯಲ್ಲಿ ಬರೆದಿದ್ದಾರೆ.

"ಕೆಲ ದಿನಗಳ ಹಿಂದೆ ಪಂಜಾಬ್ನ ರೈತ ಗುರ್ಬಚನ್ ಸಿಂಗ್ ಅವರ ಫೇಸ್ಬುಕ್ ಪುಟದಲ್ಲಿ ವಾಯು ಮಾಲಿನ್ಯವನ್ನು ತಡೆಗಟ್ಟುವ ಬಗ್ಗೆ ನಾನು ಹೇಳಿದ್ದೇನೆ. ಅಂತಹ ಹಲವಾರು ಗುರುಭಚನರು ನಮ್ಮ ಸುತ್ತಲಿದ್ದಾರೆ. ನಾವು ಅವರಿಂದ ಸ್ಫೂರ್ತಿ ಪಡೆದುಕೊಳ್ಳಬೇಕು ಮತ್ತು ನಮ್ಮೊಳಗೆ ಅಂತಹ ಭಾವನೆಗಳನ್ನು ಸೃಷ್ಟಿಸಬೇಕು. ಇದು ಈ ಪೀಳಿಗೆಯ ಸಂತೋಷ ಅಥವಾ ದುಃಖವನ್ನು ಮಾತ್ರ ನಿರ್ಧರಿಸುವುದಿಲ್ಲ. ಜೊತೆಗೆ ಮುಂಬರುವ ಪೀಳಿಗೆಯನ್ನೂ ಸಹ ನಿರ್ಧರಿಸುತ್ತದೆ. ಇದೀಗ ಎಚ್ಚರಗೊಳ್ಳುವ ಸಮಯ" ಎಂದು ಅವರು ಬರೆದಿದ್ದಾರೆ.

ಗಮನಾರ್ಹವಾಗಿ, ದೆಹಲಿಯ ಗಾಳಿಯ ಗುಣಮಟ್ಟವು ಭಾನುವಾರ 'ಕೆಟ್ಟ' ಮತ್ತು 'ಅತ್ಯಂತ ಅಪಾಯದ' ಮಟ್ಟವನ್ನು ತಲುಪಿದೆ. ಇದರ ಜೊತೆಗೆ, ಮುಂಬರುವ ದಿನಗಳಲ್ಲಿ ಮಾಲಿನ್ಯದ ಪರಿಸ್ಥಿತಿ ಇನ್ನೂ ಹದಗೆಡಬಹುದು ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.

Trending News